Vegetable Price : ಗಗನಕ್ಕೇರುತ್ತಿರುವ ತರಕಾರಿ ಬೆಲೆ, ಆತಂಕಕ್ಕೀಡಾದ ಜನ ; ಈಗ ಸಿಗಲಿದೆ ರಿಲೀಫ್!

ನವಿ ಮುಂಬೈನ ಸಗಟು ಮಾರುಕಟ್ಟೆಗೆ ತರಕಾರಿ ಬಂದ ನಂತರ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ ಬೆಲೆಯಲ್ಲಿ ಶೇ.25ರಷ್ಟು ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

Written by - Channabasava A Kashinakunti | Last Updated : Nov 18, 2021, 07:06 PM IST
  • ಸಗಟು ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಆಗಮನ ಹೆಚ್ಚಾಗಿದೆ.
  • ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗುತ್ತಿದೆ.
  • ಅಕಾಲಿಕ ಮಳೆಯಿಂದಾಗಿ ಬೆಲೆ ಏರಿಕೆಯಾಗಿತ್ತು
Vegetable Price : ಗಗನಕ್ಕೇರುತ್ತಿರುವ ತರಕಾರಿ ಬೆಲೆ, ಆತಂಕಕ್ಕೀಡಾದ ಜನ ; ಈಗ ಸಿಗಲಿದೆ ರಿಲೀಫ್! title=

ಮುಂಬೈ: ಗಗನಕ್ಕೇರುತ್ತಿರುವ ತರಕಾರಿ ಬೆಲೆಯಿಂದ ಕಂಗೆಟ್ಟಿರುವ ಮುಂಬೈ ಜನತೆಗೆ ಕೊಂಚ ನೆಮ್ಮದಿ ಸುದ್ದಿ ಸಿಕ್ಕಿದೆ. ನವಿ ಮುಂಬೈನ ಸಗಟು ಮಾರುಕಟ್ಟೆಗೆ ತರಕಾರಿ ಬಂದ ನಂತರ ಬೆಲೆಯಲ್ಲಿ ಇಳಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ ಬೆಲೆಯಲ್ಲಿ ಶೇ.25ರಷ್ಟು ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ನವಿ ಮುಂಬೈನ ಸಗಟು ಮಾರುಕಟ್ಟೆಗೆ ತರಕಾರಿ(Vegetable) ತುಂಬಿದ 510 ವಾಹನಗಳು ಆಗಮಿಸಿವೆ. ಮಾರುಕಟ್ಟೆಗೆ ತರಕಾರಿ ಹೆಚ್ಚಾಗಿರುವುದರಿಂದ ಬೆಲೆ ಶೇ.25ರಷ್ಟು ಕುಸಿದಿದೆ.

ಇದನ್ನೂ ಓದಿ : ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿಗೆ ಪ್ರತಿ ತಿಂಗಳು ಸಿಗಲಿದೆ 10 ಸಾವಿರ ರೂಪಾಯಿ ಪಿಂಚಣಿ..!

ನವಿ ಮುಂಬೈ ಸಗಟು ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು (ಕೆಜಿಗೆ ರೂ.)

- ಎಲೆಕೋಸು - 16 ರೂ.
- ಹೂಕೋಸು - 40 ರೂ.
- ಚವಳಿ ಕಾಯಿ - 35 ರೂ.
- ಫ್ರೆಂಚ್ ಬೀನ್ - 40 ರೂ.
- ಟೊಮೆಟೊ - 35 ರೂ.
- ಬೆಂಡಿ ಕಾಯಿ - 35 ರೂ.
- ಅವರೆಕಾಳು - ಕೆಜಿಗೆ 80 ರೂ.

ಮಾರುಕಟ್ಟೆಯಲ್ಲೂ ಎಲೆ ತರಕಾರಿ ಬೆಲೆ ಇಳಿಕೆ(Vegetable Price Dwon)ಯಾಗಿದೆ. ಕೊತ್ತಂಬರಿ ಸೊಪ್ಪು ಕಟ್ಟು 18 ರಿಂದ 20 ರೂ., ಮೆಂತ್ಯ 20 ರೂ., ಪಾಲಕ್ ಸೊಪ್ಪು 8 ರಿಂದ 10 ರೂ., ಹಸಿರು ಈರುಳ್ಳಿ 8 ರಿಂದ 10 ರೂ.ಗೆ ಮಾರಾಟವಾಗುತ್ತಿದೆ.

ಸಗಟು ಮಾರುಕಟ್ಟೆಗೆ ತರಕಾರಿಗಳ ಆಗಮನ ಹೆಚ್ಚಳ

ನವಿ ಮುಂಬೈ ತರಕಾರಿ ಮಾರುಕಟ್ಟೆ(Mumbai Vegetable Market) ಸಂಘದ ಅಧ್ಯಕ್ಷ ಕೈಲಾಶ್ ತಾಜ್ನೆ ಮಾತನಾಡಿ, ಮಂಡಿಯಲ್ಲಿ ತರಕಾರಿ ಗಾಡಿಗಳ ಸಂಖ್ಯೆ 500 ಕ್ಕೆ ಏರಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ತರಕಾರಿ ಬೆಲೆ ಶೇ.30-40ರಷ್ಟು ಕಡಿಮೆಯಾಗಬಹುದು. ಸಗಟು ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದ ನಂತರ ಇದೀಗ ಚಿಲ್ಲರೆ ಮಾರುಕಟ್ಟೆಯಲ್ಲೂ ತರಕಾರಿ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ : 7th Pay Commission : ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ? ಬಾಕಿ ಉಳಿದಿರುವ DA ಬಾಕಿ ಬಗ್ಗೆ ಬಿಗ್ ನ್ಯೂಸ್!

ಅಕಾಲಿಕ ಮಳೆಯಿಂದ ಹಾನಿ

ಇತ್ತೀಚೆಗಷ್ಟೇ ಅಕಾಲಿಕ ಮಳೆ(Rain)ಯಿಂದಾಗಿ ತರಕಾರಿ ಬೆಳೆ ಹಾನಿಯಾಗಿದೆ ಎಂದು ಹೇಳೋಣ. ಇದರಿಂದ ಮಾರುಕಟ್ಟೆಗೆ ತರಕಾರಿ ಬರುವುದು ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ತರಕಾರಿ ದುಬಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News