Multibagger Return: ವರ್ಷಕ್ಕೆ 200% ರಿಟರ್ನ್ ನೀಡಿದ ರೈಲ್ವೆ ಷೇರು!

IRFC Share Price: ಆಗಸ್ಟ್ 7ರಂದು IRFC ಷೇರುಗಳು 46.20 ರೂ.ನ ಮಟ್ಟದಲ್ಲಿತ್ತು. ಸತತ ಏರಿಕೆ ಕಾಣುವ ಮೂಲಕ ಹೂಡಿಕೆದಾರರ ಕೈ ಹಿಡಿದ ಈ ಷೇರು ಕಳೆದ 5 ದಿನಗಳಲ್ಲಿ 44.64%, ಕಳೆದ 1 ತಿಂಗಳಿನಲ್ಲಿ ಶೇ. 45.23% ಮತ್ತು ಕಳೆದ 1 ವರ್ಷದಲ್ಲಿ ಶೇ.222.54% ಲಾಭವನ್ನು ನೀಡಿದೆ.

Written by - Puttaraj K Alur | Last Updated : Sep 5, 2023, 09:23 PM IST
  • ಕೇವಲ ಒಂದೇ ವರ್ಷದಲ್ಲಿ ರೈಲ್ವೆ ಷೇರು ಬರೋಬ್ಬರಿ 200% ರಿಟರ್ನ್ ನೀಡಿದೆ
  • ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿದ ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ ಷೇರು
  • 5 ದಿನಕ್ಕೆ 44.64%, 1 ತಿಂಗಳಿಗೆ ಶೇ.45.23% ಮತ್ತು 1 ವರ್ಷದಲ್ಲಿ ಶೇ.222.54% ಲಾಭ
Multibagger Return: ವರ್ಷಕ್ಕೆ 200% ರಿಟರ್ನ್ ನೀಡಿದ ರೈಲ್ವೆ ಷೇರು!  title=
IRFC ಷೇರಿನ ರಿಟರ್ನ್

IRFC ಷೇರಿನ ರಿಟರ್ನ್: ಸರಿಯಾದ ಸ್ಟಾಕ್ ಆಯ್ಕೆ ಮಾಡುವ ಸಾಮರ್ಥ್ಯ ಮತ್ತು ಉತ್ತಮ ಅವಧಿಗೆ ತಮ್ಮ ಹೂಡಿಕೆಯನ್ನು ಹಿಡಿದಿಟ್ಟುಕೊಳ್ಳುವ ತಾಳ್ಮೆ ಇದ್ದರೆ ಷೇರು ಮಾರುಕಟ್ಟೆಯು ಯಾರನ್ನಾದರೂ ಶ್ರೀಮಂತರನ್ನಾಗಿ ಮಾಡುತ್ತದೆ. ಕಳೆದ 1 ವರ್ಷದಲ್ಲಿ ಕೆಲವು ಸ್ಟಾಕ್‌ಗಳು ಹೂಡಿಕೆದಾರರ ಹಣವನ್ನು ಡಬಲ್ ಮಾಡಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿವೆ. ಅತ್ಯಂತ ಕಡಿಮೆ ಸಮಯದಲ್ಲಿ ಈ ಷೇರುಗಳು ಮ್ಯಾಜಿಕ್ ಮಾಡಿದ್ದು, ಭರ್ಜರಿ ರಿಟರ್ನ್ ನೀಡಿವೆ. ಕೇವಲ ಒಂದೇ ಒಂದು ವರ್ಷದಲ್ಲಿ ರೈಲ್ವೆ ಷೇರೊಂದು ಬರೋಬ್ಬರಿ 200% ರಿಟರ್ನ್ ನೀಡಿದೆ.

ಹೌದು, ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್ (IRFC) ಷೇರು ಕಳೆದ 12 ತಿಂಗಳುಗಳಿಂದ ಏರುಮುಖ ಪ್ರವೃತ್ತಿಯನ್ನು ತೋರಿಸುತ್ತಿದೆ. ಇದು ಕಳೆದ 1 ತಿಂಗಳಲ್ಲಿಯೇ ಸುಮಾರು ಶೇ.50ರಷ್ಟು ಲಾಭ ನೀಡಿದೆ. ಈ ಷೇರು 52 week high ದಾಟಿದ್ದು, ಬಹುತೇಕ ಪ್ರತಿ ತಿಂಗಳು ಅಪ್ಪರ್ ಸರ್ಕ್ಯೂಟ್‌ಗಳಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಜೀವನದಲ್ಲಿ ಹಣಕಾಸಿಗೆ ಸಂಬಂಧಿಸಿದ ಈ 5 ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಒಂದೇ ದಿನದಲ್ಲಿ 19.64% ರಿಟರ್ನ್

ಸೋಮವಾರ ಐಆರ್‌ಎಫ್‌ಸಿ ಷೇರುಗಳು ಒಂದೇ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡಿದೆ. ಇದು ಶೇ.19.64ರಷ್ಟು ಏರಿಕೆ ಕಂಡು ವಹಿವಾಟು ಅಂತ್ಯಗೊಳಿಸಿತು. ಸೋಮವಾರ 57.70 ರೂ.ನಲ್ಲಿ ಪ್ರಾರಂಭವಾದ ಈ ಸ್ಟಾಕ್ ದಿನದಾದ್ಯಂತದ ವೇಳೆಗೆ 66.90 ರೂ.ಗೆ ಏರಿತು. ಅಂದರೆ 19.64% ಲಾಭ ನೀಡುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿತು. ಮಂಗಳವಾರ ಸಹ IRFC ಷೇರು ಶೇ.8.32ರಷ್ಟು ಏರಿಕೆ ಕಂಡು ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿತು. ಇಂದು ಬೆಳಗ್ಗೆ 69.75 ರೂ.ನಿಂದ ಆರಂಭವಾದ ಈ ಷೇರು ವಹಿವಾಟಿನ ಅಂತ್ಯಕ್ಕೆ 72.25 ರೂ.ಗೆ ತಲುಪಿದೆ.

ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯ ಪ್ರಭಾವ : ಭಾರೀ ಇಳಿಕೆ ಕಂಡ ಚಿನ್ನದ ಬೆಲೆ !

1 ತಿಂಗಳಲ್ಲಿ 45.23% ಆದಾಯ

ಆಗಸ್ಟ್ 7ರಂದು IRFC ಷೇರುಗಳು 46.20 ರೂ.ನ ಮಟ್ಟದಲ್ಲಿತ್ತು. ಸತತ ಏರಿಕೆ ಕಾಣುವ ಮೂಲಕ ಹೂಡಿಕೆದಾರರ ಕೈ ಹಿಡಿದ ಈ ಷೇರು ಕಳೆದ 5 ದಿನಗಳಲ್ಲಿ 44.64%, ಕಳೆದ 1 ತಿಂಗಳಿನಲ್ಲಿ ಶೇ. 45.23% ಮತ್ತು ಕಳೆದ 1 ವರ್ಷದಲ್ಲಿ ಶೇ.222.54% ಲಾಭವನ್ನು ನೀಡಿದೆ.  IRFC ಷೇರಿನ ಪ್ರಸ್ತುತ 52 ವಾರದ ಗರಿಷ್ಠ 75.70 ರೂ. ಇದ್ದರೆ, ಅದರ ಪ್ರಸ್ತುತ 52 ವಾರದ ಕನಿಷ್ಠ 20.80 ರೂ. ಆಗಿದೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News