ಗ್ಯಾಸ್ ಕನೆಕ್ಷನ್ ನಿಯಮದಲ್ಲಿ ಬದಲಾವಣೆ, ಸಬ್ಸಿಡಿಗೆ ಸಂಬಂಧಿಸಿದ ಹೊಸ ರೂಲ್ಸ್ ತಿಳಿಯಿರಿ

ಮೂಲಗಳ ಪ್ರಕಾರ, ಯೋಜನೆಯಡಿಯಲ್ಲಿ ಹೊಸ ಸಂಪರ್ಕಗಳಿಗೆ ಸಬ್ಸಿಡಿಯ ಅಸ್ತಿತ್ವದಲ್ಲಿರುವ ರಚನೆಯಲ್ಲಿ ಬದಲಾವಣೆಯಾಗಬಹುದು. ಪೆಟ್ರೋಲಿಯಂ ಸಚಿವಾಲಯವು ಎರಡು ಹೊಸ ಸ್ಟ್ರಕ್ಚರ್ ನ ಕೆಲಸವನ್ನು ಪ್ರಾರಂಭಿಸಿದೆ ಮತ್ತು ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Written by - Ranjitha R K | Last Updated : Nov 20, 2021, 05:34 PM IST
  • ಎಲ್ ಪಿಜಿ ಸಂಪರ್ಕದ ಸಬ್ಸಿಡಿ ಸ್ಟ್ರಕ್ಚರ್ ನಲ್ಲಿ ಬದಲಾವಣೆ
  • ಮುಂಗಡ ಪಾವತಿಯ ವಿಧಾನ ಬದಲಾಗಬಹುದು
  • ಸರ್ಕಾರ ನೀಡುತ್ತಿದೆ ಫ್ರೀ ಎಲ್ ಪಿಜಿ ಸಿಲಿಂಡರ್
 ಗ್ಯಾಸ್ ಕನೆಕ್ಷನ್ ನಿಯಮದಲ್ಲಿ ಬದಲಾವಣೆ, ಸಬ್ಸಿಡಿಗೆ ಸಂಬಂಧಿಸಿದ ಹೊಸ ರೂಲ್ಸ್ ತಿಳಿಯಿರಿ  title=
ಎಲ್ ಪಿಜಿ ಸಂಪರ್ಕದ ಸಬ್ಸಿಡಿ ಸ್ಟ್ರಕ್ಚರ್ ನಲ್ಲಿ ಬದಲಾವಣೆ (file photo)

ನವದೆಹಲಿ : ಎಲ್‌ಪಿಜಿ ಸಬ್ಸಿಡಿ (LPG Subsidy) ಪಡೆಯುವ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಉಜ್ವಲ ಯೋಜನೆಯಡಿ, ಉಚಿತ ಎಲ್‌ಪಿಜಿ ಗ್ಯಾಸ್ (LPG Gas connection) ಸಂಪರ್ಕದಲ್ಲಿ ಲಭ್ಯವಿರುವ ಸಬ್ಸಿಡಿಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡುವ ಸಾಧ್ಯತೆ ಇದೆ. ನೀವು ಕೂಡಾ, ಉಜ್ವಲ ಯೋಜನೆಯಡಿ ಉಚಿತ LPG ಸಂಪರ್ಕವನ್ನು ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಮೊದಲು ಈ ಸುದ್ದಿಯನ್ನು ಓದಿಕೊಳ್ಳಿ.

LPG ಸಂಪರ್ಕಗಳ ಮೇಲಿನ ಸಬ್ಸಿಡಿ ರಚನೆಯು ಬದಲಾಗುತ್ತದೆಯೇ?
ಮೂಲಗಳ ಪ್ರಕಾರ, ಯೋಜನೆಯಡಿಯಲ್ಲಿ ಹೊಸ ಸಂಪರ್ಕಗಳಿಗೆ ಸಬ್ಸಿಡಿಯ ಅಸ್ತಿತ್ವದಲ್ಲಿರುವ ರಚನೆಯಲ್ಲಿ ಬದಲಾವಣೆಯಾಗಬಹುದು. ಪೆಟ್ರೋಲಿಯಂ ಸಚಿವಾಲಯವು ಎರಡು ಹೊಸ ಸ್ಟ್ರಕ್ಚರ್ ನ ಕೆಲಸವನ್ನು ಪ್ರಾರಂಭಿಸಿದೆ ಮತ್ತು ಅದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಒಂದು ಕೋಟಿ ಹೊಸ ಸಂಪರ್ಕಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.  ಆದರೆ ಸರ್ಕಾರ ಈಗ OMC ಗಳ ಪರವಾಗಿ ಮುಂಗಡ ಪಾವತಿ ಮಾದರಿಯನ್ನು ಬದಲಾಯಿಸಬಹುದು.

ಇದನ್ನೂ ಓದಿ : GST Hike: Fashion ಪ್ರಿಯರಿಗೊಂದು ಕಹಿ ಸುದ್ದಿ

ಮುಂಗಡ ಪಾವತಿಯ ವಿಧಾನವು ಬದಲಾಗುತ್ತದೆಯೇ? 
ಮಾಹಿತಿಯ ಪ್ರಕಾರ, ಮುಂಗಡ ಪಾವತಿ 1600 ರೂ. ಆಗಿರುತ್ತದೆ. ಈ ಮೊತ್ತವನ್ನು ಒಟ್ಟಿಗೆ ಪಾವತಿಸಬೇಕಾಗಬಹುದು. ಪ್ರಸ್ತುತ, OMC ಗಳು ಮುಂಗಡ ಮೊತ್ತವನ್ನು EMI ರೂಪದಲ್ಲಿ ವಿಧಿಸುತ್ತವೆ. ಮೂಲಗಳ ಪ್ರಕಾರ, ಯೋಜನೆಯಲ್ಲಿ ಉಳಿದ 1600 ರ ಸಹಾಯಧನವನ್ನು ನೀಡುವುದನ್ನು ಸರ್ಕಾರ ಮುಂದುವರಿಸುತ್ತದೆ.

ಸರ್ಕಾರ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುತ್ತದೆ :
ಸರ್ಕಾರದ ಉಜ್ವಲ ಯೋಜನೆಯಡಿ (Ujwala scheme) ಗ್ರಾಹಕರಿಗೆ 14.2 ಕೆಜಿಯ ಸಿಲಿಂಡರ್ ಮತ್ತು ಸ್ಟೌ ನೀಡಲಾಗುತ್ತದೆ. ಇದರ ಬೆಲೆ ಸುಮಾರು 3,200 ರೂಪಾಯಿಗಳು. ಇದರಲ್ಲಿ  ಸರ್ಕಾರದಿಂದ 1600 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ. ತೈಲ ಮಾರ್ಕೆಟಿಂಗ್ ಕಂಪನಿಗಳು (OMC ಗಳು) ಮುಂಗಡವಾಗಿ 1600 ರೂಪಾಯಿಗಳನ್ನು ನೀಡುತ್ತವೆ. ಆದರೂ, OMC ಗಳು ಸಬ್ಸಿಡಿ ಮೊತ್ತವನ್ನು ರೀಫಿಲ್‌ಗಳಲ್ಲಿ EMI ಆಗಿ ವಿಧಿಸುತ್ತವೆ.

ಇದನ್ನೂ ಓದಿ : SBI Alert : ತಪ್ಪಿ ನೀವೇನಾದರೂ ಮಾಡಿಬಿಟ್ಟರೆ ಈ ಕೆಲಸ, ಖಾಲಿಯಾಗಿ ಬಿಡುತ್ತದೆ ನಿಮ್ಮ ಅಕೌಂಟ್

ಉಜ್ವಲಾ ಯೋಜನೆಯಲ್ಲಿ ನೋಂದಾಯಿಸುವುದು ಹೇಗೆ ?:
ಉಜ್ವಲ ಯೋಜನೆಗೆ ನೋಂದಾಯಿಸುವುದು ತುಂಬಾ ಸುಲಭ.
1.ಉಜ್ವಲಾ ಯೋಜನೆಯಡಿ, ಬಿಪಿಎಲ್ (BPL) ಕುಟುಂಬದ ಮಹಿಳೆಯು ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದು.
2.pmujjwalayojana.com ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
3.ನೋಂದಾಯಿಸಲು, ನೀವು ಮೊದಲು ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ಅದನ್ನು ಹತ್ತಿರದ ಎಲ್‌ಪಿಜಿ ವಿತರಕರಿಗೆ ನೀಡಬೇಕು. 
4.ಈ ಫಾರ್ಮ್ ನಲ್ಲಿ, ಅರ್ಜಿ ಸಲ್ಲಿಸಿದ ಮಹಿಳೆ ತನ್ನ ಸಂಪೂರ್ಣ ವಿಳಾಸ, ಜನ್ ಧನ್ ಬ್ಯಾಂಕ್ ಖಾತೆ (Jandhan account) ಮತ್ತು ಎಲ್ಲಾ ಕುಟುಂಬ ಸದಸ್ಯರ ಆಧಾರ್ ಸಂಖ್ಯೆಯನ್ನು ನೀಡಬೇಕು.
5.ಇಷ್ಟಾದ ನಂತರ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಅರ್ಹ ಫಲಾನುಭವಿಗೆ LPG ಸಂಪರ್ಕವನ್ನು ನೀಡುತ್ತವೆ.
ಗ್ರಾಹಕರು EMI ಅನ್ನು ಆರಿಸಿಕೊಂಡರೆ, EMI ಮೊತ್ತವನ್ನು ಸಿಲಿಂಡರ್‌ನಲ್ಲಿ ಸ್ವೀಕರಿಸಿದ ಸಬ್ಸಿಡಿಗೆ ಅನುಗುಣವಾಗಿ ಹೊಂದಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News