LIC ಗ್ರಾಹಕರೇ ಎಚ್ಚರ..! ಕೈ ತಪ್ಪಿ ಹೋಗಬಹುದು ಜೀವಮಾನದ ಸಂಪಾದನೆ, ತಿಳಿದಿರಲಿ ಈ ವಿಚಾರ

 ವಂಚಕರು ಎಲ್‌ಐಸಿಯ  ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಂದ ಮಾಹಿತಿ ಪಡೆಯುತ್ತಾರೆ. ನಂತರ ಅವರ ಖಾತೆಯಿಂದ ಹಣವನ್ನು ಪಡೆಯುತ್ತಾರೆ.

Written by - Ranjitha R K | Last Updated : Aug 23, 2021, 04:00 PM IST
  • ಎಲ್ಐಸಿ ಗ್ರಾಹಕರಿಗೆ ಆನ್‌ಲೈನ್ ವಂಚನೆ
  • ಪಾಲಿಸಿ ಮೊತ್ತ ಪಡೆಯುವ ಹೆಸರಿನಲ್ಲಿ ವಂಚನೆ
  • ನಕಲಿ ಕರೆಗಳ ಬಗ್ಗೆ ದೂರು ನೀಡುವುದು ಹೇಗೆ ಗೊತ್ತಾ?

Trending Photos

LIC  ಗ್ರಾಹಕರೇ ಎಚ್ಚರ..! ಕೈ ತಪ್ಪಿ ಹೋಗಬಹುದು ಜೀವಮಾನದ ಸಂಪಾದನೆ, ತಿಳಿದಿರಲಿ ಈ ವಿಚಾರ   title=
ಎಲ್ಐಸಿ ಗ್ರಾಹಕರಿಗೆ ಆನ್‌ಲೈನ್ ವಂಚನೆ (file photo)

ನವದೆಹಲಿ: LIC Fraud Alert : ಆನ್‌ಲೈನ್ ವಂಚನೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.  LIC ಗ್ರಾಹಕರಿಗೂ   ಆನ್‌ಲೈನ್ ವಂಚನೆಯ ಬಿಸಿ ತಟ್ಟುತ್ತಿದೆ.   ವಿಮಾ ನಿಯಂತ್ರಕ  (IRDAI)  ಅಧಿಕಾರಿ ಅಥವಾ ಎಲ್‌ಐಸಿಯ ಉದ್ಯೋಗಿ ಎಂದು ಹೇಳಿ ವಂಚಕರು ಎಲ್‌ಐಸಿಯ ಪಾಲಿಸಿದಾರರಿಗೆ ಫೋನ್ ಮಾಡುವ ಬಗ್ಗೆ ವರದಿಯಾಗಿದೆ. 

ಎಲ್ಐಸಿ ಗ್ರಾಹಕರೊಂದಿಗೆ ವಂಚನೆ :
ಈ ವಂಚಕರು ಎಲ್‌ಐಸಿಯ (LIC) ಗ್ರಾಹಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಂದ ಮಾಹಿತಿ ಪಡೆಯುತ್ತಾರೆ. ನಂತರ ಅವರ ಖಾತೆಯಿಂದ ಹಣವನ್ನು ಪಡೆಯುತ್ತಾರೆ. ಪದೇ ಪದೇ ನಡೆಯುತ್ತಿರುವ ಇಂತಹ ವಂಚನೆ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ದೇಶದ ಅತಿದೊಡ್ಡ ವಿಮಾ ಕಂಪನಿ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಇಂಥಹ ವಂಚಕರಿಂದ ಹುಷಾರಾಗಿರುವಂತೆ ಸೂಚಿಸಿದೆ. 

ಇದನ್ನೂ ಓದಿ :  Gold Price Today : 9000 ರೂ. ಯಷ್ಟು ಅಗ್ಗವಾಯಿತು ಚಿನ್ನ , ಇಂದಿನ ಬೆಲೆ ತಿಳಿಯಿರಿ

ಎಚ್ಚರಿಕೆ ನೀಡಿದ ಎಲ್ಐಸಿ :
 ತನ್ನ ಗ್ರಾಹಕರಿಗೆ ಯಾವುದೇ ಪಾಲಿಸಿಯನ್ನು (LIC Policy) ಸರೆಂಡರ್ ಮಾಡುವಂತೆ ಸೂಚಿಸುವುದಿಲ್ಲ ಎಂದು ಎಲ್ಐಸಿ ಹೇಳಿದೆ. ಗ್ರಾಹಕರು ಯಾವುದೇ ರೀತಿಯ ಅನುಮಾನಾಸ್ಪದ ಕರೆಗಳನ್ನು ಸ್ವೀಕರಿಸದಂತೆ ಕಂಪನಿ ಮನವಿ ಮಾಡಿದೆ. ಗ್ರಾಹಕರು ತಮ್ಮ ಪಾಲಿಸಿಯನ್ನು ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಎಲ್ಲಾ ಮಾಹಿತಿಯನ್ನು ಅಲ್ಲಿಂದ ಪಡೆದುಕೊಳ್ಳುವಂತೆ ಎಲ್‌ಐಸಿ ಹೇಳಿದೆ.

ಪಾಲಿಸಿ ಮೊತ್ತ ಪಡೆಯುವ ಹೆಸರಿನಲ್ಲಿ ವಂಚನೆ : ಎಲ್ಐಸಿ
ಟ್ವೀಟ್ (Tweet) ಮಾಡುವ ಮೂಲಕ ಕಂಪನಿ ಗ್ರಾಹಕರನ್ನು ಎಚ್ಚರಿಸಿದೆ. ತಪ್ಪು ಮಾಹಿತಿ ನೀಡಿ, ಗ್ರಾಹಕರನ್ನು ವಂಚಿಸುವ ಫೋನ್ ಕರೆಗಳ ಬಗ್ಗೆ ಎಲ್ಲಾ ಗ್ರಾಹಕರು ಎಚ್ಚರದಿಂದಿರಬೇಕು ಎಂದು ಎಲ್ಐಸಿ ಹೇಳಿದೆ. ಕಳೆದ ಕೆಲವು ದಿನಗಳಿಂದ ಪಾಲಿಸಿ ಮೊತ್ತವನ್ನು ತಕ್ಷಣವೇ ಪಡೆಯುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ್ನು ವಂಚಿಸಲಾಗುತ್ತಿದೆ ಎಂದು, ಕಂಪನಿ ಹೇಳಿದೆ.  

ಇದನ್ನೂ ಓದಿ :  RBI New Guidelines On Locker: ಬ್ಯಾಂಕ್ ನಲ್ಲಿ ನೀವೂ ಲಾಕರ್ ಹೊಂದಿದ್ದೀರಾ? RBI ನ ಈ ಹೊಸ ನಿಯಮ ನೀವೂ ತಿಳಿದುಕೊಳ್ಳಿ

ನಕಲಿ ಕರೆಗಳ ಬಗ್ಗೆ ದೂರು ನೀಡುವುದು ಹೇಗೆ ?
ಪಾಲಿಸಿಯ ಬಗ್ಗೆ ನಿಮಗೆ ಯಾವುದೇ ಮಾಹಿತಿ ಬೇಕಾದರೆ, ಅಧಿಕೃತ ವೆಬ್‌ಸೈಟ್ www.licindia.in ಗೆ ಭೇಟಿ ನೀಡುವ ಮೂಲಕವೇ  ಮಾಹಿತಿ ಪಡೆಯಬೇಕು. ಯಾವುದೇ ಸಂಖ್ಯೆಗೆ ಕರೆ ಮಾಡಿ, ಪಾಲಿಸಿಯ ಬಗ್ಗೆ ಮಾಹಿತಿ ಪಡೆಯಬಾರದು. ಪಾಲಿಸಿಗೆ ಸಂಬಂಧಪಟ್ಟಂತೆ, ಯಾರಾದರೂ ಫೋನ್ ಮಾಡಿ, ಆ ಕರೆಯಲ್ಲಿ ಸಂದೇಹ ಕಂಡು ಬಂದರೆ,  ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ. ಇದಲ್ಲದೇ, ನೀವು  spuriouscalls@licindia.com ಈ ಲಿಂಕ್ ಗೆ ಕಳುಹಿಸುವ ಮೂಲಕ ವರದಿ ಮಾಡಬಹುದು.  co_crm_fb@licindia ಗೆ ಇಮೇಲ್ ಮಾಡುವ ಮೂಲಕವೂ ದೂರು ಸಲ್ಲಿಸಬಹುದು. ಎಲ್‌ಐಸಿಯ ವೆಬ್‌ಸೈಟ್‌ಗೆ ಹೋಗುವ ಮೂಲಕವೂ ದೂರು ನೀಡಬಹುದು.

ಫೇಕ್ ಕಾಲ್ಸ್  ತಪ್ಪಿಸುವುದು ಹೇಗೆ ?
1.  ಯಾವುದೇ ಕರೆಯಲ್ಲಿ ಹೆಚ್ಚು ಮಾತನಾಡಬೇಡಿ.
2. ಗ್ರಾಹಕರು ತಮ್ಮ ಯಾವುದೇ ವಿವರಗಳನ್ನು ಹಂಚಿಕೊಳ್ಳಬಾರದು 
3. ಪಾಲಿಸಿಯ ಸರೆಂಡರ್ ಬಗ್ಗೆ ಯಾವುದೇ ಮಾಹಿತಿಯನ್ನು ಯಾರಿಗೂ ನೀಡಬೇಡಿ. ಇದನ್ನು ಹೊರತುಪಡಿಸಿ, ಯಾರಾದರೂ ಹೆಚ್ಚಿನ ಪ್ರಯೋಜನಗಳ ಬಗ್ಗೆ ಮಾತನಾಡಿದರೆ, ಯಾವುದೇ ಮಾಹಿತಿಯನ್ನು ನೀಡಬೇಡಿ.
4. ಪಾಲಿಸಿ ವಿವರಗಳನ್ನು ಅಥವಾ ಇತರ ಯಾವುದೇ ಮಾಹಿತಿಯನ್ನು ಕರೆ ಮಾಡಿದವರೊಂದಿಗೆ ಎಂದಿಗೂ ಹಂಚಿಕೊಳ್ಳಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News