ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್.! ಪೇಟಿಎಂ ಜೊತೆ ಏರ್ಪಟ್ಟ ಒಪ್ಪಂದ ಏನು..?

ಮೂಲಗಳ ಪ್ರಕಾರ ಎಲ್ಐಸಿ  ಡಿಜಿಟಲ್ ಪೆಮೆಂಟ್ ಗೇಟ್ ವೇ ಗಾಗಿ ಹರಾಜು ನಡೆದಿತ್ತು.  ಈ ಹರಾಜು ಪೆಟಿಎಂ ಪಾಲಾಗಿದೆ. ಪೇಟಿಎಂ ಮಲ್ಟಿಪಲ್ ಪೇ ಮೆಂಟ್ ಸರ್ವಿಸಸ್ ನ ಹಲವು ವಿಶೇಷತೆಗಳ ಕಾರಣದಿಂದ   ಈ ಹರಾಜಿನಲ್ಲಿ ಪೇಟಿಎಂ ಗೆದ್ದಿದೆ. 

Written by - Ranjitha R K | Last Updated : Apr 19, 2021, 04:06 PM IST
  • ಎಲ್ಐಸಿ ಮತ್ತು ಪೆಟಿಎಂ ನಡುವೆ ಒಪ್ಪಂದ ಏರ್ಪಟ್ಟಿದೆ.
  • ಇನ್ನು ಎಲ್ಐಸಿ ಪ್ರೀಮಿಯಂ ಪೇಟಿಎಂ ಮೂಲಕ ಕಟ್ಟಬಹುದು
  • ಎಲ್ಲಾ ಪೇಮೆಂಟ್ ಡಿಜಿಟಲ್ ಮೋಡ್ ಗೆ ಶಿಫ್ಟ್ ಮಾಡಲು ಎಲ್ಐಸಿ ಚಿಂತನೆ
ಎಲ್ಐಸಿ ಗ್ರಾಹಕರಿಗೆ ಗುಡ್ ನ್ಯೂಸ್.! ಪೇಟಿಎಂ ಜೊತೆ ಏರ್ಪಟ್ಟ ಒಪ್ಪಂದ ಏನು..? title=
ಎಲ್ಐಸಿ ಮತ್ತು ಪೆಟಿಎಂ ನಡುವೆ ಒಪ್ಪಂದ ಏರ್ಪಟ್ಟಿದೆ. (photo zee news)

ನವದೆಹಲಿ : ಎಲ್ಐಸಿ (LIC) ಗ್ರಾಹಕರಿಗೆ ಗುಡ್ ನ್ಯೂಸ್. ನೀವು  ಇನ್ನು ಪೇಟಿಎಮ್ ಮೂಲಕ ಎಲ್ಐಸಿ ಪ್ರೀಮಿಯಂ ಕಟ್ಟಬಹುದು. ಈ ಸಂಬಂಧ ಎಲ್ಐಸಿ ಮತ್ತು ಪೆಟಿಎಂ (Paytm) ನಡುವೆ ಒಪ್ಪಂದ ಏರ್ಪಟ್ಟಿದೆ. 

ಎಲ್ಐಸಿ ಮತ್ತು ಪೆಟಿಎಂ ನಡುವೆ ಒಪ್ಪಂದ :
ಮೂಲಗಳ ಪ್ರಕಾರ ಎಲ್ಐಸಿ (LIC) ಡಿಜಿಟಲ್ ಪೆಮೆಂಟ್ ಗೇಟ್ ವೇ ಗಾಗಿ ಹರಾಜು ನಡೆದಿತ್ತು.  ಈ ಹರಾಜು ಪೆಟಿಎಂ (Paytm) ಪಾಲಾಗಿದೆ. ಪೇಟಿಎಂ ಮಲ್ಟಿಪಲ್ ಪೇ ಮೆಂಟ್ ಸರ್ವಿಸಸ್ ನ ಹಲವು ವಿಶೇಷತೆಗಳ ಕಾರಣದಿಂದ   ಈ ಹರಾಜಿನಲ್ಲಿ ಪೇಟಿಎಂ ಗೆದ್ದಿದೆ. 

ಇದನ್ನೂ ಓದಿ : SBI Alert :ತಪ್ಪಿಯೂ ಈ ತಪ್ಪು ಮಾಡಬೇಡಿ, ಅಕೌಂಟ್ Zero Balance ಆಗಿಬಿಡುತ್ತದೆ

ಕರೋನಾ ಕಾಲದಲ್ಲಿ (Coronavirus)ಎಲ್ಐಸಿ ಡಿಜಿಟಲ್ ವ್ಯವಹಾರದಲ್ಲಿ ಅತಿ ದೊಡ್ಡ ಏರಿಕೆ ದಾಖಲಾಗಿತ್ತು. ಸುಮಾರು 60000 ಕೋಟಿ ಪ್ರೀಮಿಯಂ ಡಿಜಿಟಲ್ ಮೋಡ್ ನಲ್ಲಿಯೇ ನಡೆದಿತ್ತು.  ಇದರಲ್ಲಿ ಬ್ಯಾಂಕ್ ಪೇಮೆಂಟ್ (Bank payment) ವ್ಯವಹಾರ ಸೇರಿಲ್ಲ ಅನ್ನೋದು ಕೂಡಾ ವಿಶೇಷ.  ಈ ಡಿಜಿಟಲ್ ಪೇಮೆಂಟ್ (Digital Payment) ವ್ಯವಹಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿಯೇ ಪೇಟಿಎಂ (paytm) ಮತ್ತು ಎಲ್ಐಸಿ ನಡುವೆ ಒಪ್ಪಂದ ಏರ್ಪಟ್ಟಿದೆ. ಪ್ರೀಮಿಯಂ ಪೇಮೆಂಟ್ ಅಷ್ಟೇ ಅಲ್ಲ, ಎಲ್ಲಾ ರೀತಿಯ ಕಲೆಕ್ಷನ್ ಗಳನ್ನು ಡಿಜಿಟಲ್ ಮೋಡ್ ನಲ್ಲಿಯೇ ಸಂಗ್ರಹಿಸಲು ಎಲ್ಐಸಿ ನಿರ್ಧರಿಸಿದೆ. 

ಪೆಟಿಎಂನಲ್ಲಿ ಪ್ರೀಮಿಯಂ ಪೇಮೆಂಟ್ ಹೇಗೆ..?
ಪೇಟಿಎಂಗೆ ಹೋಗಿ ಎಲ್ಐಸಿ ಸರ್ಚ್ ಮಾಡಿ. ಅಲ್ಲಿ ನೀವು ನಿಮ್ಮ ಪಾಲಿಸಿ ನಂಬರ್ (Policy Number) ಹಾಕಬೇಕು. ಪಾಲಿಸಿ ನಂಬರ್ ಹಾಕಿದ ತಕ್ಷಣ ನಿಮ್ಮ ಪ್ರಿಮಿಯಂ ಕಾಣಿಸುತ್ತದೆ. ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಪ್ರೀಮಿಯಂ ಪೇ ಆಗಿರುತ್ತದೆ.

ಇದನ್ನೂ ಓದಿ : 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News