Viral Video: ಜೀವಂತ ಹಾವನ್ನು ಬೆಂಕಿ ಹಚ್ಚಿ ಸುಟ್ಟ ಪಾಪಿಗಳು! ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಸರ್ಪ.. ವಿಡಿಯೋ ನೋಡಿ ಕರುಳು ಕಿತ್ತು ಬರುತ್ತೆ!!

Snake Viral Video: ಹೆಚ್ಚುತ್ತಿರುವ ನಗರೀಕರಣದಿಂದ ಹಾವುಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿವೆ. ಇದರಿಂದ ನಾವು ಅವುಗಳ ಶತ್ರುಗಳಾಗುತ್ತಿದ್ದೇವೆ. ಇದೀಗ ವೈರಲ್‌ ಆಗಿರುವ ವಿಡಿಯೋ ಕಂಡು ಎಲ್ಲರು ಬೆಚ್ಚಿಬಿದ್ದಿದ್ದಾರೆ..   

Written by - Savita M B | Last Updated : Jan 6, 2025, 09:59 AM IST
  • ಕೃಷಿ ಭೂಮಿಯಲ್ಲಿ ಹಾವು ಕೀಟಗಳನ್ನು ಮಟ್ಟಹಾಕುವ ಕೆಲಸ ಮಾಡುತ್ತದೆ
  • ಆದರೆ ಕೆಲವರು ಹಾವುಗಳನ್ನು ಕಂಡರೆ ಸಾಯಿಸುತ್ತಾರೆ.
Viral Video: ಜೀವಂತ ಹಾವನ್ನು ಬೆಂಕಿ ಹಚ್ಚಿ ಸುಟ್ಟ ಪಾಪಿಗಳು! ವಿಲವಿಲ ಒದ್ದಾಡಿ ಪ್ರಾಣ ಬಿಟ್ಟ ಸರ್ಪ.. ವಿಡಿಯೋ ನೋಡಿ ಕರುಳು ಕಿತ್ತು ಬರುತ್ತೆ!!  title=

Snake Video: ಕೃಷಿ ಭೂಮಿಯಲ್ಲಿ ಹಾವು ಕೀಟಗಳನ್ನು ಮಟ್ಟಹಾಕುವ ಕೆಲಸ ಮಾಡುತ್ತದೆ. ಇದು ಅವುಗಳನ್ನು ನಿಯಂತ್ರಿಸಿ ಪರಿಸರ ಸಮತೋಲನವನ್ನು ಕಾಪಾಡುತ್ತದೆ. ಆದರೆ ಕೆಲವರು ಹಾವುಗಳನ್ನು ಕಂಡರೆ ಸಾಯಿಸುತ್ತಾರೆ. ಇತ್ತೀಚಿಗೆ ನಡೆದ ಘಟನೆಯಿಂದ ಪ್ರಾಣಿ ಪ್ರಿಯರು ಆತಂಕಗೊಂಡಿದ್ದಾರೆ.

ಇದನ್ನೂ ಒದಿ-ಮಧ್ಯರಾತ್ರಿ ಐಶ್ವರ್ಯ ರೈ ಮನೆ ಮುಂದೆ ಸಲ್ಮಾನ್‌ ಖಾನ್‌ ಗಲಾಟೆ ಮಾಡಿದ್ರಾ! FIR ಕೂಡ ದಾಖಲಾಗಿತ್ತಾ!? ಸೋಮಿ ಅಲಿ ಬಿಚ್ಚಿಟ್ಟ ಸತ್ಯವೇನು?

ಹಾವುಗಳು ಭಯಾನಕ.. ಆದರೆ ಮನುಷ್ಯನಷ್ಟು ಅಪಾಯಕಾರಿ ಅಲ್ಲ. ಅವು ತಮಗೆ ಅಪಾಯವಿದೆ ಎಂದೆನಿಸದರೆ ಮಾತ್ರ ಕಚ್ಚುತ್ತವೆ. ವಾಸ್ತವವಾಗಿ, ಅವು ಮನುಷ್ಯನನ್ನು ಕಂಡರೆ ಸಾಧ್ಯವಾದಷ್ಟು ಬೇಗ ಆ ಪ್ರದೇಶದಿಂದ ಓಡಿಹೋಗಲು ಪ್ರಯತ್ನಿಸುವೆ.. ಹಾವುಗಳು ನಮ್ಮ ಪರಿಸರಕ್ಕೆ ಬಹಳಷ್ಟು ಒಳ್ಳೆಯದನ್ನು ಮಾಡುತ್ತವೆ. ಇದನ್ನು ಅರ್ಥಮಾಡಿಕೊಳ್ಳದ ಮನುಷ್ಯರು ಹಾವು ಕಂಡರೆ ಹೊಡೆದು ಸಾಯಿಸುತ್ತಾರೆ. ಈ ಭೂಮಿ ಎಲ್ಲರಿಗೂ ಸೇರಿದ್ದು. ಪ್ರತಿಯೊಂದು ಜೀವಿಗೂ ಬದುಕುವ ಸಮಾನ ಹಕ್ಕಿದೆ. ನಮ್ಮ ದೇಶದಲ್ಲಿ 351 ಜಾತಿಯ ಹಾವುಗಳನ್ನು ಗುರುತಿಸಲಾಗಿದೆ. ಆದರೆ 62 ಜಾತಿಗಳು ಮಾತ್ರ ವಿಷಕಾರಿ. ಉಳಿದವು ವಿಷಕಾರಿಯಲ್ಲ. ಈ ವಿಚಾರ ತಿಳಿದುಕೊಂಡು ಸಿಕ್ಕ ಹಾವುಗಳನ್ನು ಕೊಲ್ಲದಿರುವುದು ಉತ್ತಮ.

ಇದನ್ನೂ ಒದಿ-ನಟಿ ಮೀನಾರ ಮಗಳು ಕೂಡ ಪ್ರಖ್ಯಾತ ಬಾಲನಟಿ! ಅಂದದಲ್ಲಿ ಅಮ್ಮನ ಪಡಿಯಚ್ಚು... 6ರ ಹರೆಯದಲ್ಲೇ ಸ್ಟಾರ್‌ ಆಗಿ ಮಿಂಚುತ್ತಿರುವ ಈ ʼಬೊಂಬೆʼ ಹೇಗಿದ್ದಾಳೆ ನೋಡಿ

ಹಾವು ಎಂಬ ಪದವನ್ನು ಉಚ್ಚರಿಸಿದರೂ ಕೆಲವರಿಗೆ ಭಯವಾಗುತ್ತದೆ. ಹಾವುಗಳು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಅಥವಾ ಅರಣ್ಯದ ಸುತ್ತಮುತ್ತಲಿನ ಜನವಸತಿಗಳಲ್ಲಿ ಕಂಡುಬರುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಹಾವು ಎಂದರೆ ಭಯ. ಹಾವುಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋಗೆ ನೆಟಿಜನ್‌ಗಳು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣ ಹಾವು ಬದುಕಿರುವಾಗಲೇ ಅದನ್ನು ಹೊಡೆದು ಬೆಂಕಿಯಲ್ಲಿ ಸುಟ್ಟಿರುವುದು. ಮರಾಠಿಹಬ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. "ಪ್ರತಿ ಪಾಪಕ್ಕೂ ಶಿಕ್ಷೆಯಾಗಬೇಕು" ಎಂದು ಕ್ಯಾಪ್ಟನ್ ಕೂಡಾ ಬರೆದುಕೊಂಡಿದ್ದಾರೆ.. ಈ ಬಗ್ಗೆ ನೆಟಿಜನ್‌ಗಳು ಕೂಡ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಯಿಂದ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News