Jobs Without Degree: ಈ ನೌಕರಿಗಳನ್ನು ಮಾಡಲು ನಿಮಗೆ ಯಾವುದೇ ಡಿಗ್ರೀ ಅವಶ್ಯಕತೆ ಇಲ್ಲ, ಗಳಿಕೆಯೂ ಜಬರ್ದಸ್ತ್

No need of Degree for Jobs: ಯಾವುದೇ ರೀತಿಯ ಪದವಿ ಇಲ್ಲದೆಯೇ ನಿಮಗೆ ಕೈತುಂಬಾ ವೇತನ ನೀಡುವ ಹಲವು ನೌಕರಿಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಇಲ್ಲ ಎಂದಾದರೆ ಈ ವರದಿಯನ್ನೊಮ್ಮೆ ಓದಿ.   

Written by - Nitin Tabib | Last Updated : Jul 26, 2022, 05:06 PM IST
  • ಯಾವುದೇ ಪದವಿ ಇಲ್ಲದೆ ಲಕ್ಷಾಂತರ ರೂ.ಗಳಿಸಿ
  • ಲಕ್ಷಾಂತರ ವೇತನ ನೀಡುವ ನೌಕರಿಗಳು ಇಲ್ಲಿವೆ
  • ಈ ನೌಕರಿಗಳ ಮೂಲಕ ನೀವು ತಿಂಗಳಿಗೆ ಲಕ್ಷಾಂತರ ಸಂಪಾದಿಸಬಹುದು
Jobs Without Degree: ಈ ನೌಕರಿಗಳನ್ನು ಮಾಡಲು ನಿಮಗೆ ಯಾವುದೇ ಡಿಗ್ರೀ ಅವಶ್ಯಕತೆ ಇಲ್ಲ, ಗಳಿಕೆಯೂ ಜಬರ್ದಸ್ತ್ title=
Jobs Without Degree

Jobs without Degree: ಒಳ್ಳೆಯ ಉದ್ಯೋಗ ಮಾಡಿ ಕೈತುಂಬಾ ಸಂಪಾದನೆ ಮಾಡುವ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ. ಇದಕ್ಕಾಗಿ, ಜನರು ಹಲವಾರು ವರ್ಷಗಳವರೆಗೆ ಅಧ್ಯಯನ ಕೂಡ ಮಾಡುತ್ತಾರೆ ಮತ್ತು ಇದಕ್ಕಾಗಿ ಅವರು ದೊಡ್ಡ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪ್ರವೇಶವನ್ನು ತೆಗೆದುಕೊಳ್ಳುತ್ತಾರೆ. ಎಷ್ಟೋ ಜನ ಅಡ್ಮಿಷನ್ ತೆಗೆದುಕೊಂಡರೂ ಓದು ಮುಗಿಸಲಾಗದೆ ಅಥವಾ ಓದು ಮುಗಿದರೂ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆದಾಡಬೇಕಾಗುತ್ತದೆ. ಆದರೆ, ಯಾವುದೇ ರೀತಿಯ ಪದವಿ ಇಲ್ಲದೆ ದೊಡ್ಡ ಮೊತ್ತದ ವೇತನ ನೀಡುವ ಹಲವು ಉದ್ಯೋಗಗಳಿವೆ ಎಂಬ ಮಾಹಿತಿ ನಿಮಗೆ ತಿಳಿದಿದೆಯೇ? ಬನ್ನಿ ಅವುಗಳ ಕುರಿತು ವಿಸ್ತಾರವಾಗಿ ತಿಳಿದುಕೊಳ್ಳೋಣ,

ಕಮರ್ಷಿಯಲ್ ಪೈಲಟ್‌ಗೆ ಯಾವುದೇ ಪದವಿ ಅಗತ್ಯವಿಲ್ಲ
ಕಮರ್ಷಿಯಲ್ ಪೈಲಟ್ ಆಗಲು, ಯಾವುದೇ ಪದವಿ ಅಗತ್ಯವಿಲ್ಲ ಮತ್ತು ಪೈಲಟ್ ಆಗಲು ಡಿಪ್ಲೊಮಾ ಮುಗಿಸುವ ಮೂಲಕ ನೀವು ಕಮರ್ಷಿಯಲ್ ಪೈಲಟ್ ಆಗಬಹುದು. ಆದರೂ ಕೂಡ ಇದಕ್ಕಾಗಿ ನೀವು 12 ನೇ ತೇರ್ಗಡೆಯಾಗಿರಬೇಕು ಮತ್ತು ನೀವು ಪೈಲಟ್ ತರಬೇತಿಯನ್ನು ಪಡೆದುಕೊಳ್ಳಬೇಕು. ಕಮರ್ಷಿಯಲ್ ಪೈಲಟ್ ಆದ ನಂತರ, ನೀವು ಪ್ರತಿ ತಿಂಗಳು 5 ರಿಂದ 6 ಲಕ್ಷ ರೂಪಾಯಿಗಳವರೆಗೆ ಹಣಗಳಿಕೆ ಮಾಡಬಹುದು.

ವೆಬ್ ಡೆವಲಪರ್ ರೂ 1 ಲಕ್ಷದವರೆಗೆ ಗಳಿಕೆ ಮಾಡುತ್ತಾರೆ
ಪ್ರಸ್ತುತ, ಎಲ್ಲಾ ಕೆಲಸಬಕು ಆನ್‌ಲೈನ್‌ನಲ್ಲಿ ನಡೆಯುತ್ತಿದ್ದು, ಪ್ರತಿಯೊಬ್ಬರೂ ತನ್ನದೇ ಆದ ವೆಬ್‌ಸೈಟ್ ತೆರೆಯಲು ಬಯಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವೆಬ್ ಡೆವಲಪರ್ಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ  ಹೆಚ್ಚುತ್ತಿದೆ. ವೆಬ್ ಡೆವಲಪರ್ ಆಗಲು ನಿಮಗೆ ಯಾವುದೇ ಪದವಿ ಕೂಡ ಅಗತ್ಯವಿರುವುದಿಲ್ಲ. ಆದರೂ ಕೂಡ ಇದಕ್ಕಾಗಿ ನಿಮಗೆ ವೆಬ್‌ಸೈಟ್‌ಗಳು ಮತ್ತು ಇಂಟರ್ನೆಟ್‌ನ ಜ್ಞಾನ ಇರಬೇಕು. ಯಾವುದೇ ಸಂಸ್ಥೆಯಿಂದ ವೆಬ್ ಡೆವಲಪರ್ ಕೋರ್ಸ್ ಮಾಡುವ ಮೂಲಕ ನೀವು ದೊಡ್ಡ ಹಣವನ್ನು ಗಳಿಸಬಹುದು. ಉತ್ತಮ ಮತ್ತು ಅನುಭವಿ ವೆಬ್ ಡೆವಲಪರ್‌ನ ವೇತನವು 80 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.

ಕ್ಯಾಸಿನೊ ಮ್ಯಾನೇಜರ್ ಆಗುವ ಮೂಲಕ ನೀವು ಲಕ್ಷಾಂತರ ಗಳಿಕೆ ಮಾಡಬಹುದು
ಭಾರತದಲ್ಲಿ ಕ್ಯಾಸಿನೊ ಮ್ಯಾನೇಜರ್‌ಗೆ ಬೇಡಿಕೆ ಕಡಿಮೆಯಾಗಿದೆ, ಆದರೆ ಇದು ವಿದೇಶದಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ ಮತ್ತು ಕ್ಯಾಸಿನೊ ವ್ಯವಸ್ಥಾಪಕರ ವಾರ್ಷಿಕ ಆದಾಯವು 32 ಸಾವಿರದಿಂದ 58 ಸಾವಿರ ಡಾಲರ್‌ಗಳವರೆಗೆ ಅಂದರೆ 25 ಲಕ್ಷದಿಂದ 41 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಕ್ಯಾಸಿನೊ ಮ್ಯಾನೇಜರ್ ಆಗಲು, ಯಾವುದೇ ಪದವಿ ಅಗತ್ಯವಿಲ್ಲ, ಆದರೆ ಇದಕ್ಕಾಗಿ ನೀವು ಉತ್ತಮ ಸಂವಹನ ಕೌಶಲ್ಯ ಮತ್ತು ಕ್ಯಾಸಿನೊದಲ್ಲಿ ಆಡುವ ಆಟಗಳ ಜ್ಞಾನವನ್ನು ಹೊಂದಿರಬೇಕು.

ಇದನ್ನೂ ಓದಿ-Good News: ಹಸುವಿನ ಸಗಣಿಯಿಂದ ರೈತರ ಆದಾಯ ಹೆಚ್ಚಳಕ್ಕೆ ಮಹತ್ವದ ಹೆಜ್ಜೆ ಇಟ್ಟ ಮೋದಿ ಸರ್ಕಾರ

ಸಾಮಾಜಿಕ ಮಾಧ್ಯಮ ತಜ್ಞರಾಗಿ ಕೈತುಂಬಾ ಸಂಪಾದಿಸಿ
ಪ್ರಸ್ತುತ, ಸಾಮಾಜಿಕ ಮಾಧ್ಯಮದ ಪ್ರವೃತ್ತಿ ನಿರಂತರವಾಗಿ ಹೆಚ್ಚಾಗುತ್ತಿದೆ ಮತ್ತು ದೊಡ್ಡ ಕಂಪನಿಗಳು ತಮ್ಮ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸಲು ಸೋಸಿಯಲ್ ಮೀಡಿಯಾ ತಜ್ಞರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿವೆ. ಸಾಮಾಜಿಕ ಮಾಧ್ಯಮ ತಜ್ಞರಾಗಲು, ಯಾವುದೇ ಪದವಿ ಅಗತ್ಯವಿಲ್ಲ, ಆದರೆ ನೀವು ಇಂಟರ್ನೆಟ್ ಮತ್ತು ಮಾರುಕಟ್ಟೆಯ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು. ಸಾಮಾಜಿಕ ಮಾಧ್ಯಮ ತಜ್ಞರು ಪ್ರತಿ ತಿಂಗಳು 60 ಸಾವಿರ ರೂಪಾಯಿಗಳವರೆಗೆ ಗಳಿಕೆ ಮಾಡುತ್ತಾರೆ.

ಇದನ್ನೂ ಓದಿ-Free Ration ಲಾಭಾರ್ಥಿಗಳಿಗೊಂದು ಸಂತಸದ ಸುದ್ದಿ, ಸರ್ಕಾರದ ಹೊಸ ಆದೇಶದಿಂದ ಲಾಭವೋ ಲಾಭ

ರಿಯಲ್ ಎಸ್ಟೇಟ್ ಬ್ರೋಕರ್ ಆಗುವ ಮೂಲಕ ನೀವು ಲಕ್ಷಾಂತರ ಗಳಿಸಬಹುದು
ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಯಾವುದೇ ಪದವಿ ಅವಶ್ಯಕತೆ ಇಲ್ಲ. ಇದಕ್ಕಾಗಿ ರಿಯಲ್ ಎಸ್ಟೇಟ್ ಜ್ಞಾನ ಹೊಂದಿರುವುದು ಮತ್ತು ನಿಮ್ಮ ವಿಷಯಗಳನ್ನು ಜನರಿಗೆ ಚೆನ್ನಾಗಿ ವಿವರಿಸುವ ಸಾಮರ್ಥ್ಯ ನೀವು ಹೊಂದಿರುವುದು ಅವಶ್ಯಕ. ರಿಯಲ್ ಎಸ್ಟೇಟ್ ದಲ್ಲಾಳಿಗಳ ಗಳಿಕೆಯು ಸ್ಥಿರವಾಗಿಲ್ಲ ಮತ್ತು ನೀವು ಅದರಲ್ಲಿ ಒಪ್ಪಂದದ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News