Train Ticket Booking Tips: ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಈ ಕೆಲಸ ಮಾಡಿದರೆ ಸಿಗುತ್ತೆ ಕನ್ಫರ್ಮ್ ಟಿಕೆಟ್

Train Ticket Booking Tips: ಹಲವು ಬಾರಿ ಆತುರಾತುರವಾಗಿ ನಾವು ಪ್ರಯಾಣದ ಯೋಜನೆ ರೂಪಿಸುತ್ತೇವೆ. ದೂರರ ಊರುಗಳಿಗೆ ಪ್ರಯಾಣಿಸಲು ಬಹುತೇಕ ಜನರು ರೈಲು ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ಆತುರದಲ್ಲಿ ಪ್ರಯಾಣದ ಯೋಜನೆ ರೂಪಿಸಿದಾಗ ಅಂತಹ ಸಂದರ್ಭದಲ್ಲಿ ಕಾಡುವ ಬಹಳ ಮುಖ್ಯ ಸಮಸ್ಯೆ ಎಂದರೆ ಕನ್ಫರ್ಮ್ ಟಿಕೆಟ್ ಪಡೆಯುವುದು ಹೇಗೆ?  ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನೀವು ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದರಿಂದ ನಿಮ್ಮ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.

Written by - Yashaswini V | Last Updated : Jul 5, 2022, 12:53 PM IST
  • ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು, ಸರಿಯಾದ ಸಮಯದಲ್ಲಿ ಆನ್‌ಲೈನ್‌ನಲ್ಲಿರುವುದು ಅವಶ್ಯಕ.
  • ಸ್ಲೀಪರ್ ಕ್ಲಾಸ್‌ನಲ್ಲಿ ತತ್ಕಾಲ್ ಟಿಕೆಟ್‌ಗಳ ಬುಕಿಂಗ್ ಸಮಯ ಬೆಳಿಗ್ಗೆ 11 ಗಂಟೆ ಆಗಿದೆ.
  • ಇಂತಹ ಸಂದರ್ಭದಲ್ಲಿ ನೀವು ತತ್ಕಾಲ್ ಟಿಕೆಟ್ ಬುಕ್ ಮಾಡಲು ಒಂದೆರಡು ನಿಮಿಷ ಮೊದಲೇ ಲಾಗಿನ್ ಆಗಿ.
Train Ticket Booking Tips: ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಈ ಕೆಲಸ ಮಾಡಿದರೆ ಸಿಗುತ್ತೆ ಕನ್ಫರ್ಮ್ ಟಿಕೆಟ್  title=
Train Tatkal Ticket Booking

ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಕನ್ಫರ್ಮ್ ಟಿಕೆಟ್ ಪಡೆಯುವ ಸರಳ ಉಪಾಯ :  ಭಾರತೀಯ ರೈಲ್ವೆಯಲ್ಲಿ ಹಲವು ಸಂದರ್ಭಗಳಲ್ಲಿ ವಾರಕ್ಕೂ ಮೊದಲೇ ಟಿಕೆಟ್ ಬುಕ್ ಮಾಡಿದರೂ ಕನ್ಫರ್ಮ್ ಟಿಕೆಟ್ ಪಡೆಯುವುದು ಕಷ್ಟವಾಗುತ್ತದೆ. ಅಂತಹ ಸನ್ನಿವೇಶದಲ್ಲಿ ನಾವು ಕೊನೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡದರೆ ಕನ್ಫರ್ಮ್ ಟಿಕೆಟ್ ಸಿಗುತ್ತಾ...? ಖಂಡಿತ ಸಿಗುತ್ತೆ. ನೀವು ಟಿಕೆಟ್‌ಗಳನ್ನು ಕಾಯ್ದಿರಿಸುವಾಗ ಕೆಲವು ವಿಶೇಷ ವಿಷಯಗಳ ಬಗ್ಗೆ ಗಮನ ಹರಿಸುವುದರಿಂದ ಕನ್ಫರ್ಮ್ ಟಿಕೆಟ್ ಪಡೆಯಬಹುದು. ನೀವು ರೈಲಿನ ಟಿಕೆಟ್ ಬುಕ್ ಮಾಡುವಾಗ ಐಆರ್ಸಿಟಿಸಿಯಲ್ಲಿ ಲಭ್ಯವಿರುವ ಒಂದು ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ದೃಢೀಕರಿಸಿದ ಟಿಕೆಟ್ ಪಡೆಯಬಹುದು. ಹೇಗೆ ಎಂದು ತಿಳಿಯೋಣ...

ಹಲವು ಬಾರಿ ಬೇಗ ಟಿಕೆಟ್ ಬುಕ್ ಮಾಡಬೇಕು ಎಂಬ ಆತುರದಲ್ಲಿ ನಾವಿರುವ ಜಾಗದಲ್ಲಿ ಇಂಟರ್ನೆಟ್ ಇದೆಯೋ ? ಇಲ್ಲವೋ? ಇದ್ದರೂ ಸಹ ಅದರ ವೇಗ ಹೇಗಿದೆ ಎಂಬುದನ್ನು ನಾವು ಪರೀಕ್ಷಿಸುವುದೇ ಇಲ್ಲ. ಇದು ನಿಮ್ಮ ಟಿಕೆಟ್ ಬುಕಿಂಗ್ ಗೆ ತೊಡಕುಂಟು ಮಾಡಬಹುದು. ಹಾಗಾಗಿ ಯಾವಗಾಲಾದರೂ ಸರಿ ನೀವು ರೈಲಿನ ಟಿಕೆಟ್ ಬುಕ್ ಮಾಡುವಾಗ ಮೊಟ್ಟ ಮೊದಲಿಗೆ ನಿಮ್ಮ ಇಂಟರ್ನೆಟ್ ಸರ್ವಿಸ್ ಬಗ್ಗೆ ಗಮನಹರಿಸಿ.

ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಸಮಯದ ಬಗ್ಗೆ ನಿಗಾವಹಿಸಿ:
ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು, ಸರಿಯಾದ ಸಮಯದಲ್ಲಿ ಆನ್‌ಲೈನ್‌ನಲ್ಲಿರುವುದು ಅವಶ್ಯಕ. ಎಸಿ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬೆಳಿಗ್ಗೆ 10 ಗಂಟೆ, ಹೀಗಾಗಿ ನೀವು ಎಸಿ ತತ್ಕಾಲ್ ಟಿಕೆಟ್ ಪಡೆಯಲು ಯೋಚಿಸುತ್ತಿದ್ದರೆ ಬೆಳಿಗ್ಗೆ 9.58 ರೊಳಗೆ ಲಾಗಿನ್ ಆಗಬೇಕು ಎಂಬುದನ್ನು ನೆನಪಿನಲ್ಲಿಡಿ. ಸ್ಲೀಪರ್ ಕ್ಲಾಸ್‌ನಲ್ಲಿ ತತ್ಕಾಲ್ ಟಿಕೆಟ್‌ಗಳ ಬುಕಿಂಗ್ ಸಮಯ ಬೆಳಿಗ್ಗೆ 11 ಗಂಟೆ ಆಗಿದೆ. ಅಂತಹ ಪರಿಸ್ಥಿತಿಯಲ್ಲಿ, 10.58 ಕ್ಕೆ ಲಾಗಿನ್ ಮಾಡಿ. ಲಾಗಿನ್ ಆದ ತಕ್ಷಣ ಕೌಂಟರ್ ತೆರೆಯುವ ಮೊದಲು ನೀವು ಮಾಸ್ಟರ್ ಪಟ್ಟಿಯನ್ನು ಸಿದ್ಧಪಡಿಸಬೇಕು.

ಇದನ್ನೂ ಓದಿ- Indian Railways: ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲಿ ಪ್ರಮುಖ ಬದಲಾವಣೆ

ಏನಿದು ಮಾಸ್ಟರ್ ಪಟ್ಟಿ?
ತತ್ಕಾಲ್ ಟಿಕೆಟ್‌ಗಳಲ್ಲಿ ಸೀಮಿತ ಸೀಟುಗಳ ಮಾತ್ರ ಲಭ್ಯವಿರುತ್ತದೆ. ಹಾಗಾಗಿ, ನೀವು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸಿದರೆ ನಮ್ಮ ಕೆಲವು ವೈಯಕ್ತಿಕ ವಿವರಗಳನ್ನು ನಮೂದಿಸಬೇಕು. ಅದರಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಸಹ ನಮೂದಿಸಬೇಕು. ಈ ಸಂದರ್ಭದಲ್ಲಿ ಎಲ್ಲವನ್ನೂ ಭರ್ತಿ ಮಾಡಲು ಬಹಳ ಸಮಯ ವ್ಯರ್ಥವಾಗುತ್ತದೆ. ಅದಕ್ಕಾಗಿಯೇ ಮಾಸ್ಟರ್ ಪಟ್ಟಿ ತಯಾರಿಸಿ ಇಡುವುದು ಬಹಳ ಮುಖ್ಯ. ನೀವು ಮೊದಲೇ ಮಾಸ್ಟರ್ ಪಟ್ಟಿಯಲ್ಲಿ ನಿಮ್ಮ ಅಗತ್ಯ ವಿವರಗಳನ್ನು ನಮೂದಿಸಿದ್ದರೆ, ಟಿಕೆಟ್ ಬುಕ್ ಮಾಡುವಾಗ ಸಮಯ ಉಳಿತಾಯವಾಗುತ್ತದೆ. ನೀವು ಹೆಸರಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ, ನೀವು ನೀಡಿದ ವಿವರಗಳು ಕೆಳಗೆ ಬರುತ್ತವೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ, ವಿವರಗಳು ಸ್ವಯಂ ತುಂಬುತ್ತವೆ. ಇದರಿಂದ ಬೇಗ ಟಿಕೆಟ್ ಬುಕ್ ಮಾಡಲು ಅನುಕೂಲವಾಗುತ್ತದೆ.

ಮಾಸ್ಟರ್ ಪಟ್ಟಿಯಲ್ಲಿ ವಿವರಗಳನ್ನು ಸೇರಿಸುವುದು ಹೇಗೆ?
ಐಆರ್ಸಿಟಿಸಿ ವೆಬ್‌ಸೈಟ್‌ನಲ್ಲಿ 'ನನ್ನ ಪ್ರೊಫೈಲ್' ವಿಭಾಗದಲ್ಲಿ ಮಾಸ್ಟರ್ ಪಟ್ಟಿಯನ್ನು ರಚಿಸಿ. ಹೆಸರು, ವಯಸ್ಸು, ಐಡಿ ಕಾರ್ಡ್ ಪ್ರಕಾರ, ಆಹಾರ ಮತ್ತು ಬರ್ತ್ ಆದ್ಯತೆಯಂತಹ ವಿವರಗಳನ್ನು ಒಳಗೊಂಡಂತೆ ಎಲ್ಲಾ ಪ್ರಯಾಣಿಕರ ವಿವರಗಳೊಂದಿಗೆ ಪಟ್ಟಿಯನ್ನು ಸಿದ್ಧಪಡಿಸಿ.

ಇದನ್ನೂ ಓದಿ- Bullet Train Ticket Price: ದೇಶದಲ್ಲಿ ಶೀಘ್ರವೇ ಆರಂಭವಾಗಲಿರುವ ಬುಲೆಟ್ ಟ್ರೈನ್ ನಲ್ಲಿ ಎಷ್ಟಿರಲಿದೆ ಟಿಕೆಟ್ ದರ ?

ನೀವು ತತ್ಕಾಲ್ ಕೌಂಟರ್ ತೆರೆಯುವ ಮುನ್ನವೇ ಈ ಮಾಸ್ಟರ್ ಪಟ್ಟಿಯನ್ನು ಸಿದ್ಧಪಡಿಸಿದರೆ ಯುಪಿಐ, ಐಆರ್ಸಿಟಿಸಿ ವಾಲೆಟ್ ಅಥವಾ ಯಾವುದೇ  ಇತರ ಪಾವತಿ ವಿಧಾನವನ್ನು ಬಳಸಿ ತ್ವರಿತವಾಗಿ ಹಣವನ್ನು ವರ್ಗಾಯಿಸಲು ಮತ್ತು ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ ದೃಢೀಕರಿಸಿದ ಟಿಕೆಟ್ ಅನ್ನು ಸಹ ಪಡೆಯಲು ಅನುಕೂಲವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News