ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಸಿಗಲಿದೆ ಬ್ಯಾಂಕ್ ಗಿಂತಲೂ ಅಧಿಕಬಡ್ಡಿ , ಬಡ್ಡಿ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಅಂಚೆ ಕಚೇರಿಯಲ್ಲಿ ಎಫ್‌ಡಿ ಮಾಡಿಸುವ ಪ್ರಕ್ರಿಯೆ ಕೂಡ ತುಂಬಾ ಸುಲಭವಾಗಿರಲಿದೆ. ಇಂಡಿಯಾ ಪೋಸ್ಟ್ ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ  ಮಾಹಿತಿಯನ್ನು ನೀಡಿದೆ. 

Written by - Ranjitha R K | Last Updated : Aug 31, 2021, 03:09 PM IST
  • ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ
  • ಒಂದು ವರ್ಷದಲ್ಲಿ, ಬ್ಯಾಂಕ್ ಗಿಂತ ಅಧಿಕ ಲಾಭವನ್ನು ಪಡೆಯಬಹದು
  • ಅಂಚೆ ಕಚೇರಿಯಲ್ಲಿ ಎಫ್‌ಡಿ ಮಾಡಿಸುವುದು ಸುಲಭ
ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ  ಸಿಗಲಿದೆ ಬ್ಯಾಂಕ್ ಗಿಂತಲೂ ಅಧಿಕಬಡ್ಡಿ , ಬಡ್ಡಿ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ   title=
Post office scheme (File photo)

ನವದೆಹಲಿ : ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆಯನ್ನು ಮಾಡಬೇಕೆಂದಿದ್ದರೆ, ಈ ಯೋಜನೆ ಉತ್ತಮ ಆಯ್ಕೆಯಾಗಬಹುದು. ಅಂಚೆ ಕಚೇರಿಯಲ್ಲಿ (Post office scheme) ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡಿದರೆ, ಉತ್ತಮ ಬಡ್ಡಿಯ ಜೊತೆಗೆ ಇನ್ನೂ ಹೆಚ್ಚಿನ ಸೌಲಭ್ಯಗಳು ಸಿಗಲಿದೆ. ಇದರಲ್ಲಿ ಲಾಭದೊಂದಿಗೆ ಸರ್ಕಾರದ ಗ್ಯಾರಂಟಿ ಕೂಡ ಸಿಗಲಿದೆ. ಈ ಯೋಜನೆಯಲ್ಲಿ  ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ಪಡೆಯಬಹುದು. 

ಅಂಚೆ ಕಚೇರಿಯಲ್ಲಿ ಎಫ್‌ಡಿ ಮಾಡಿಸುವುದು ಸುಲಭ :
ಅಂಚೆ ಕಚೇರಿಯಲ್ಲಿ ಎಫ್‌ಡಿ (Post office fixed deposit) ಮಾಡಿಸುವ ಪ್ರಕ್ರಿಯೆ ಕೂಡ ತುಂಬಾ ಸುಲಭವಾಗಿರಲಿದೆ. ಇಂಡಿಯಾ ಪೋಸ್ಟ್ ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ  ಮಾಹಿತಿಯನ್ನು ನೀಡಿದೆ. ಈ ಮಾಹಿತಿಯ ಪ್ರಕಾರ, ಅಂಚೆ ಕಚೇರಿಯಲ್ಲಿ (Post office) ವಿವಿಧ ಅವಧಿಗೆ ಅಂದರೆ  1,2, 3, 5 ವರ್ಷಗಳವರೆಗೆ ಎಫ್‌ಡಿ ಮಾಡಿಸಬಹುದು. 

ಇದನ್ನೂ  ಓದಿ : ಬ್ಯಾನ್ ಆಗಿರುವ 500 ರೂ. ನೋಟಿನಿಂದ 10 ಸಾವಿರ ರೂ. ಗಳಿಸಿ: ಇಲ್ಲಿದೆ ನೋಡಿ ಮಾಹಿತಿ…

1.  ಪೋಸ್ಟ್ ಆಫೀಸ್‌ನಲ್ಲಿ ಮಾಡಿಸುವ ಎಫ್‌ಡಿ (FD) ಮೇಲೆ ಭಾರತ ಸರ್ಕಾರ ಗ್ಯಾರಂಟಿ ನೀಡುತ್ತದೆ.
2. ಇದರಲ್ಲಿ, ಹೂಡಿಕೆದಾರರ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
3. ಇದರಲ್ಲಿ FD ಅನ್ನು ಆಫ್‌ಲೈನ್ ಅಥವಾ ಆನ್‌ಲೈನ್ ಮೂಲಕ ಮಾಡಿಸಬಹುದು 
4. 1 FD ಗಿಂತ ಹೆಚ್ಚು ಮಾಡಬಹುದು.
5.  FD ಖಾತೆಯು ಜಂಟಿಯಾಗಿರಬಹುದು.
6. 5 ವರ್ಷಗಳವರೆಗೆ ಫಿಕ್ಸೆಡ್ ಡೆಪಾಸಿಟ್ (Fixed deposit) ಮಾಡುವ ಮೂಲಕ, ಐಟಿಆರ್ ಸಲ್ಲಿಸುವ ವೇಳೆ ತೆರಿಗೆ ವಿನಾಯಿತಿ ಪಡೆಯಬಹುದು .
7. ಒಬ್ಬರು ಸುಲಭವಾಗಿ ಒಂದು ಅಂಚೆ ಕಚೇರಿಯಿಂದ ಇನ್ನೊಂದು ಅಂಚೆ ಕಚೇರಿಗೆ ಎಫ್‌ಡಿ ವರ್ಗಾಯಿಸಬಹುದು.

ಈ ರೀತಿ ಎಫ್‌ಡಿ ತೆರೆಯಿರಿ : 
ಚೆಕ್ (Cheque) ಅಥವಾ ನಗದು ಪಾವತಿಸುವ ಮೂಲಕ ಅಂಚೆ ಕಚೇರಿಯಲ್ಲಿ ಎಫ್ ಡಿ ಖಾತೆ ತೆರೆಯಬಹುದು. ಇದರಲ್ಲಿ, ಕನಿಷ್ಠ 1000 ರೂ.ಗಳೊಂದಿಗೆ ಖಾತೆಗಳನ್ನು ತೆರೆಯಬಹುದು ಮತ್ತು ಗರಿಷ್ಠ ಮೊತ್ತವನ್ನು ಜಮಾ ಮಾಡಲು ಯಾವುದೇ ಮಿತಿಯಿರುವುದಿಲ್ಲ.

FD ಯ ಮೇಲೆ ಹೆಚ್ಚಿನ ಬಡ್ಡಿ ಸಿಗಲಿದೆ : 
ಇದರ ಅಡಿಯಲ್ಲಿ,  7 ದಿನಗಳಿಂದ ಒಂದು ವರ್ಷದ ಅವಧಿಗೆ ಎಫ್‌ಡಿ ಲಭ್ಯವಿದೆ. ಈ ಅವಧಿಗೆ 5.50 ಶೇಕಡಾ ಬಡ್ಡಿ (Interest) ಸಿಗಲಿದೆ. ಇನ್ನು  1 ವರ್ಷ 1 ದಿನದಿಂದ 2 ವರ್ಷಗಳ  ಅವಧಿಗೂ  ಎಫ್‌ಡಿ ಲಭ್ಯವಿದೆ.  3 ವರ್ಷಗಳವರೆಗೆ  FD ಯ ಮೇಲೆ 5.50 ಶೇ ಬಡ್ಡಿ ಪಡೆಯಬಹುದು.  3 ವರ್ಷ ಒಂದು ದಿನದಿಂದ 5 ವರ್ಷಗಳವರೆಗೆ ಎಫ್‌ಡಿ ಮಾಡಿಸುವುದಾದರೆ 6.70 ಪ್ರತಿಶತದಷ್ಟು ಬಡ್ಡಿ ಪಡೆಯಬಹುದು. ಅಂದರೆ, ಪೋಸ್ಟ್ ಆಫೀಸ್ FD  ಮೇಲೆ ಉತ್ತಮ ಲಾಭ ಗಳಿಸಬಹುದು. 

ಇದನ್ನೂ  ಓದಿ : SBI Exchange Torn Notes : ನೀವು ATM ನಿಂದ ಹಾಳಾದ ನೋಟುಗಳನ್ನು ಪಡೆದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News