International Women's Day 2021: ಈ ದಿನ ನಿಮ್ಮ ಮನೆಯ ಮಹಿಳೆಯರಿಗೂ ಈ ಉಡುಗೊರೆ ನೀಡಿ

Bank Of Baroda Mahila Shakti Account -  ಒಂದು ವೇಳೆ ನೀವೂ ಕೂಡ ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ  (International Women's Day 2021 ) ಅಂಗವಾಗಿ ಮನೆಯಲ್ಲಿರುವ ನಿಮ್ಮ ತಾಯಿ, ಸಹೋದರಿ, ಮಡದಿ, ಮಗಳು ಅಥವಾ ಗೆಳತಿಗೆ ಗಿಫ್ಟ್ ನೀಡಲು ಯೋಚಿಸುತಿದ್ದರೆ, ನೀವು ಅವರ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ತೆರೆಯಬಹುದು.   

Written by - Nitin Tabib | Last Updated : Mar 7, 2021, 04:41 PM IST
  • ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನ.
  • ಈ ವಿಶೇಷ ದಿನದಂದು ನಿಮ್ಮ ಮನೆಯಲ್ಲಿರುವ ಮಹಿಳೆಯರಿಗೆ ಈ ವಿಶೇಷ ಉಡುಗೊರೆ ನೀಡಿ.
  • BOB ಮಹಿಳಾ ಶಕ್ತಿ ಅಕೌಂಟ್ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿ.
International Women's Day 2021: ಈ ದಿನ ನಿಮ್ಮ ಮನೆಯ ಮಹಿಳೆಯರಿಗೂ ಈ ಉಡುಗೊರೆ ನೀಡಿ title=
International Women's Day (Bank Of Baroda File Photo)

ನವದೆಹಲಿ: Bank Of Baroda Mahila Shakti Account -  ಒಂದು ವೇಳೆ ನೀವೂ ಕೂಡ ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ  (International Women's Day 2021 ) ಅಂಗವಾಗಿ ಮನೆಯಲ್ಲಿರುವ ನಿಮ್ಮ ತಾಯಿ, ಸಹೋದರಿ, ಮಡದಿ, ಮಗಳು ಅಥವಾ ಗೆಳತಿಗೆ ಗಿಫ್ಟ್ ನೀಡಲು ಯೋಚಿಸುತಿದ್ದರೆ, ನೀವು ಅವರ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ತೆರೆಯಬಹುದು. ನೀವು ಅವರಿಗೆ ನೀಡುವ ಈ ಕೊಡುಗೆ ಚಿರಕಾಲ ಅವಿಸ್ಮರಣೀಯವಾಗಿರಲಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ (Bank Of Baroda) ಮಹಿಳಾ ಗ್ರಾಹಕರಿಗಾಗಿ ವಿಶೇಷ ಆಫರ್ ವೊಂದನ್ನು ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾ (BoB Offer) ಈ ಖಾತೆಗೆ ಬ್ಯಾಂಕ್ ಆಫ್ ಬರೋಡಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ಎಂದು ಹೆಸರಿಡಲಾಗಿದೆ. BOB ಅಧಿಕೃತ ವೆಬ್ಸೈಟ್ ಮೇಲೆ ನೀಡಲಾಗಿರುವ ಮಾಹಿತಿ ಪ್ರಕಾರ, ಮಹಿಳಾ ಗ್ರಾಹಕರು ಒಂದು ವೇಳೆ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ (BOB Mahila Shakti Account) ತೆರೆದರೆ, ಅವರಿಗೆ ಖಾತೆ ತೆರೆಯುವ ವೇಳೆ ಪ್ಲಾಟಿನಂ ಕಾರ್ಡ್ ಜೊತೆಗೆ 2 ಲಕ್ಷ ರೂ.ಗಳ ವೈಯಕ್ತಿಕ ಇನ್ಸೂರೆನ್ಸ್ ಲಾಭ ಸಿಗಲಿದೆ. ಈ ಖಾತೆ ತೆರೆದ ಬಳಿಕ ತಮ್ಮ ಖಾತೆಯ ಮೂಲಕ ಮಹಿಳೆಯರು ಪಡೆಯುವ ವೈಯಕ್ತಿಕ ಸಾಲಕ್ಕೆ ಬ್ಯಾಂಕ್ ಯಾವುದೇ ರೀತಿಯ ನಿರ್ವಹಣಾ ವೆಚ್ಚ ತೆಗೆದುಕೊಳ್ಳುವುದಿಲ್ಲ.

ಇತರ ಯಾವ ಯಾವ ರಿಯಾಯಿತಿಗಳು ಸಿಗುತ್ತವೆ?
BOB
ಮಹಿಳಾ ಗ್ರಾಹಕರು ಒಂದು ವೇಳೆ ತಮ್ಮ ಖಾತೆಗೆ ಲಾಕರ್ ಸೌಲಭ್ಯ ಪಡೆದರೆ, ಅವರಿಗೆ ವಾರ್ಷಿಕ ರೆಂಟ್ ಕೂಡ ಕಡಿಮೆ ಬೀಳಲಿದೆ. ಈ ಖಾತೆಯ ಮತ್ತೊಂದು ವಿಶೇಷತೆ ಎಂದರೆ ಮಹಿಳೆಯರಿಗೆ ಅತಿ ಕಮ್ಮಿ ಬಡ್ಡಿ ದರದಲ್ಲಿ ದ್ವಿಚಕ್ರ ವಾಹನ ಸಾಲ ಹಾಗೂ ಶೈಕ್ಷಣಿಕ ಸಾಲ ಕೂಡ ಲಭಿಸುತ್ತದೆ. ಇದಲ್ಲದೆ ಬ್ಯೂಟಿ, ಲೈಫ್ ಸ್ಟೈಲ್ ಹಾಗೂ ಗ್ರಾಸರಿಗಳ ಮೇಲೆ ಆಕರ್ಷಕ ಕೊಡುಗೆಗಳು ಕೂಡ ಲಭ್ಯ ಇರಲಿವೆ.

ಆದರೆ ಮಹಿಳೆಯರಿಗಾಗಿಯೇ ಇರುವ ಈ ವಿಶೇಷ ಖಾತೆಯಲ್ಲಿ ಮಹಿಳೆಯರು (ನಗರ/ಮೆಟ್ರೋ) ಪ್ರತಿ ತಿಂಗಳು ಖಾತೆಯಲ್ಲಿ 300 ರೂ.ಕನಿಷ್ಠ ಹಣ ಕಾಯುವುದು ಅವಶ್ಯವಾಗಿದೆ. ಇದೇ ವೇಳೆ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರು ಪ್ರತಿ ತಿಂಗಳು ರೂ.150 ಕಾಯುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ- Bank Merger : ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಬ್ಯಾಂಕ್ ವ್ಯವಹಾರ ನಡೆಯುವುದಿಲ್ಲ

ಮಹಿಳಾ ಶಕ್ತಿ ಸೇವಿಂಗ್ ಖಾತೆಯಲ್ಲಿ ಸಿಗುವ ವಿಶೇಷ ಸೌಲಭ್ಯಗಳು ಇಲ್ಲಿವೆ
- ವಾರ್ಷಿಕ ಲಾಕರ್ ಶುಲ್ಕದಲ್ಲಿ ಶೇ.25ರಷ್ಟು ರಿಯಾಯಿತಿ.
- 70 ವರ್ಷ ವಯಸ್ಸಿನವರೆಗೆ ಉಚಿತ 2 ಲಕ್ಷ ರೂ.ಗಳ ಆಕ್ಸಿಡೆಂಟಲ್  ವಿಮೆ ಸಿಗಲಿದೆ. 
- ಖಾತೆ ತೆರೆದ ಮೇಲೆ ಒಂದು ವರ್ಷದ ಅವಧಿಯವರೆಗೆ ಉಚಿತ SMS ಸೇವೆ.
- ದ್ವಿಚಕ್ರ ವಾಹನ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ.0.25 ರಷ್ಟು ರಿಯಾಯಿತಿ.  ಆಟೋ ಹಾಗೂ ಮಾರ್ಗೆಜ್ ಸಾಲ ಪಡೆಯುವಾಗ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.25ರಷ್ಟು ಕಡಿತ.
- ಪರ್ಸನಲ್ ಲೋನ್ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.100ರಷ್ಟು ವಿನಾಯಿತಿ.

ಇದನ್ನೂ ಓದಿ- SBI YONO ಅಪ್ಲಿಕೇಶನ್‌ನಲ್ಲಿ ಬಂಪರ್ ರಿಯಾಯಿತಿ, ಯಾವ ಬ್ರಾಂಡ್‌ನಲ್ಲಿ ಎಷ್ಟು ಆಫರ್‌ ಲಭ್ಯ

- ಸ್ವೀಪ್ ಸೌಕರ್ಯ ಸಿಗಲಿದೆ. 50 ಸಾವಿರಕ್ಕಿಂತ ಅಧಿಕ ಮೊತ್ತದ ಠೇವಣಿ ಮೇಲೆ ರೂ.10,000 ಗುಣಕದಲ್ಲಿ 181 ದಿನಗಳಿಗಾಗಿ ಸ್ವೀಪ್ ಸೌಕರ್ಯ ಸಿಗಲಿದೆ. 
- ಟ್ರಾವೆಲ್ ಹಾಗೂ ಗಿಫ್ಟ್ ಕಾರ್ಡ್ ಶುಲ್ಕದಲ್ಲಿ ಶೇ.25ರಷ್ಟು ವಿನಾಯಿತಿ.
- ಮೊದಲ ವರ್ಷದಲ್ಲಿ ತಗಳುತ್ತಿದ್ದ ಡಿಮ್ಯಾಟ್ ಖಾತೆಯ ನಿರ್ವಹಣಾ ವೆಚ್ಚ ಅಂದರೆ AMC ಶುಲ್ಕವನ್ನು ತೆಗೆದುಹಾಕಲಾಗಿದೆ. 
- ಬ್ಯಾಂಕ್ ಆಫ್ ಬರೋಡಾ ಇಜೀ ಕ್ರೆಡಿಟ್ ಕಾರ್ಡ್ ಗೆ ಯಾವುದೇ ರೀತಿಯ ಜಾಯಿನಿಂಗ್ ಶುಲ್ಕ ಇಲ್ಲ.

ಇದನ್ನೂ ಓದಿ- ಇನ್ಮುಂದೆ Android ಫೋನೇ ನಿಮ್ಮ POS ! SBI Payments-NPCIನಿಂದ ಹೊಸ ಸೇವೆ ಆರಂಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News