Health Insurance : ಪಾಲಿಸಿ ಬಗ್ಗೆ ಪಾಲಿಸಿದಾರನಿಗೆ ಅಪ್ ಡೇಟ್ ಮಾಡುವುದು ವಿಮಾ ಕಂಪನಿಯ ಜವಾಬ್ದಾರಿ

ಆರೋಗ್ಯ ವಿಮೆಯ  ಬಗ್ಗೆ ಪಾಲಿಸಿದಾರರಿಗೆ ಕಾಲಕಾಲಕ್ಕೆ ಎಲ್ಲಾ ಮಾಹಿತಿಗಳನ್ನು ನೀಡುವ ಸಲುವಾಗಿ, ವಿಮಾ ನಿಯಂತ್ರಕ ಐಆರ್‌ಡಿಎಐ ವಿಮಾ ಕಂಪನಿಗಳಿಗೆ ಅನ್ವಯವಾಗುವಂತೆ ಕೆಲ  ನಿಯಮಗಳನ್ನು ಜಾರಿಗೆ ತಂದಿದೆ. 

Written by - Ranjitha R K | Last Updated : Mar 2, 2021, 05:49 PM IST
  • ಪಾಲಿಸಿದಾರರಿಗೆ ಕಾಲಕಾಲಕ್ಕೆ ಮಾಹಿತಿಗಳನ್ನು ನೀಡುವ ಸಲುವಾಗಿ ನಿಯಮ ಜಾರಿ
  • ಹೊಸ ನಿಯಮಗಳನ್ನು ಶೀಘ್ರ ಅನುಷ್ಟಾನಕ್ಕೆ ತರುವಂತೆ ಸೂಚನೆ
  • ವರ್ಷಕ್ಕೆ ಎರಡು ಬಾರಿ ಪಾಲಿಸಿದಾರರಿಗೆ ವಿಮಾ ಕಂಪನಿ ಮಾಹಿತಿಯನ್ನು ನೀಡಬೇಕು
Health Insurance : ಪಾಲಿಸಿ ಬಗ್ಗೆ ಪಾಲಿಸಿದಾರನಿಗೆ ಅಪ್ ಡೇಟ್ ಮಾಡುವುದು ವಿಮಾ ಕಂಪನಿಯ  ಜವಾಬ್ದಾರಿ  title=
ಪಾಲಿಸಿದಾರರಿಗೆ ಕಾಲಕಾಲಕ್ಕೆ ಮಾಹಿತಿಗಳನ್ನು ನೀಡುವ ಸಲುವಾಗಿ ನಿಯಮ ಜಾರಿ (file photo)

ನವದೆಹಲಿ: ನಿಮ್ಮ ಆರೋಗ್ಯ ಪಾಲಿಸಿಯ ಹೆಸರು ನಿಮಗೆ ಗೊತ್ತಿದೆಯಾ? ನಿಮ್ಮ ಪಾಲಿಸಿಯು ಯಾವಾಗ ಮುಗಿಯುತ್ತದೆ?  ಅಥವಾ ನಿಮ್ಮ ಪಾಲಿಸಿಯಲ್ಲಿ ಎಷ್ಟು ಕ್ಲೈಮ್ ಬೋನಸ್ ಇವೆ ಎಂಬ ಪ್ರಶ್ನೆಗಳನ್ನು ಕೇಳಿದರೆ ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಆರೋಗ್ಯ ವಿಮೆಯ (Health Insurance) ಬಗ್ಗೆ ಪಾಲಿಸಿದಾರರಿಗೆ ಕಾಲಕಾಲಕ್ಕೆ ಎಲ್ಲಾ ಮಾಹಿತಿಗಳನ್ನು ನೀಡುವ ಸಲುವಾಗಿ, ವಿಮಾ ನಿಯಂತ್ರಕ ಐಆರ್‌ಡಿಎಐ (IRDAI)ವಿಮಾ ಕಂಪನಿಗಳಿಗೆ ಅನ್ವಯವಾಗುವಂತೆ ಕೆಲ  ನಿಯಮಗಳನ್ನು ಜಾರಿಗೆ ತಂದಿದೆ. 

ವಿಮಾ ಕಂಪನಿಗಳಿಗೆ ಐಆರ್‌ಡಿಎಐ ನಿರ್ದೇಶನ : 
ಸಾಮಾನ್ಯವಾಗಿ ಪಾಲಿಸಿ ಏಜೆಂಟ್ ಪಾಲಿಸಿಯನ್ನು ವಿಮಾದಾರರಿಗೆ ಮಾರುತ್ತಾರೆ. ಆದರೆ ಕಾಲಕಾಲಕ್ಕೆ ಅದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಎಷ್ಟೋ ಬಾರಿ ವಿಮೆ ಅವಧಿ ಮೀರಿರುವ ಬಗ್ಗೆಯೂ ಪಾಲಿಸಿದಾರನಿಗೆ (Policy holder) ತಿಳಿದಿರುವುದಿಲ್ಲ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಪಾಲಿಸಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಪಾಲಿಸಿ ಹೊಂದಿರುವವರಿಗೆ ಸೂಚನೆ ನೀಡುವಂತೆ  ಐಆರ್‌ಡಿಎಐ (IRDAI) ಎಲ್ಲಾ ಸಾಮಾನ್ಯ ವಿಮೆ ಮತ್ತು ಆರೋಗ್ಯ ವಿಮಾ ಕಂಪನಿಗಳಿಗೆ ಸೂಚಿಸಿದೆ. ಕಂಪೆನಿಗಳು ಹೊಸ ನಿಯಮಗಳನ್ನು ಆದಷ್ಟು ಶೀಘ್ರ ಅನುಷ್ಟಾನಕ್ಕೆ ತರುವಂತೆ ಹೇಳಿದೆ. 

ಇದನ್ನೂ ಓದಿ : WhatsApp ಮೂಲಕ SIP ಹೂಡಿಕೆ, UTI MFನಿಂದ ಹೊಸ ಸೇವೆ ಬಿಡುಗಡೆ

ವರ್ಷಕ್ಕೆ ಎರಡು ಬಾರಿ ಪಾಲಿಸಿದಾರರಿಗೆ ಮಾಹಿತಿಯನ್ನು ನೀಡಬೇಕು : 
ವಿಮೆಯ (Insurance)ಬಗ್ಗೆ ವರ್ಷಕ್ಕೆ ಎರಡು ಬಾರಿ ವಿಮಾದಾರನಿಗೆ ಕಂಪನಿಯು ಮಾಹಿತಿ ನೀಡಬೇಕು. ಮೊದಲ ಬಾರಿಗೆ, ಪಾಲಿಸಿ ನವೀಕರಿಸುವ ಸಮಯ ಹತ್ತಿರವಾದಾಗ ವಿಮಾ ಕಂಪನಿಯು ಪಾಲಿಸಿದಾರನಿಗೆ ಮಾಹಿತಿ ನೀಡಬೇಕು. ಇದರಿಂದ ವಿಮೆಯ ನವೀಕರಣಕ್ಕೆ ಬೇಕಾದ ಹಣವನ್ನು ಹೊಂದಿಸಲು ವಿಮಾದಾರನಿಗೆ ಅನುಕೂಲವಾಗಲಿದೆ. ಎರಡನೇಯದ್ದು, ವರ್ಷದ ಯಾವುದೇ ಸಮಯದಲ್ಲಿ ವಿಮಾದಾರರನ್ನು ಸಂಪರ್ಕಿಸುವ ಮೂಲಕ ವಿಮೆಯ ಮಾಹಿತಿಯನ್ನು ಹಂಚಿಕೊಳ್ಳಬಹುದು.

ಸಮ್ ಅಶೂರ್ಡ್ ಬಗ್ಗೆಯೂ ಮಾಹಿತಿ ನೀಡಬೇಕು : 
ಐಆರ್‌ಡಿಎಐ ನ ಆದೇಶದ ಪ್ರಕಾರ, ವಿಮಾ ಕಂಪನಿಗಳು ಆರೋಗ್ಯ ವಿಮೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವಿಮಾದಾರರಿಗೆ ಬಹಿರಂಗಪಡಿಸಬೇಕು.  ಉದಾಹರಣೆಗೆ ಕ್ಲೈಮ್ (Claim) ನಂತರ ಉಳಿದ ಮೊತ್ತದ ಬಗ್ಗೆ ವಿಮಾದಾರನಿಗೆ ಮಾಹಿತಿ ನಿಡಬೇಕು. ಅಂದರೆ,  ಪಾಲಿಸಿಯು  5 ಲಕ್ಷ ಸಮ್ ಅಶೂರ್ಡ್ (Sum assured) ಹೊಂದಿದ್ದು,  ವಿಮಾದಾರನು ಅದರಲ್ಲಿ 3 ಲಕ್ಷಗಳನ್ನು ಬಳಸಿದ್ದರೆ, ಉಳಿದಿರುವ  2 ಲಕ್ಷ ಮೊತ್ತದ ಬಗ್ಗೆ ಪಾಲಿಸಿದಾರನಿಗೆ ತಿಳಿಸಬೇಕು. ಈ ಉಳಿದಿರುವ ಮೊತ್ತವನ್ನು ಅಗತ್ಯ ಸಂದರ್ಭದಲ್ಲಿ ಬಳಸಲು ಇದು ಸಹಕಾರಿಯಾಗುತ್ತದೆ. ಈ ಎಲ್ಲಾ ಮಾಹಿತಿಯನ್ನು ವಿಮೆದಾರರಿಗೆ ಮೆಸೇಜ್ (Message), ಇ-ಮೇಲ್ ಅಥವಾ ಇನ್ನಾವುದೇ ಮಾರ್ಗದ ಮೂಲಕ ನೀಡಬಹುದು.

ಇದನ್ನೂ ಓದಿ : Gold Price: ಹಳದಿ ಲೋಹದ ದರ ಇಳಿಕೆ: ಇಂದು ಚಿನ್ನ-ಬೆಳ್ಳಿ ದರ ಎಷ್ಟಿದೆ ನೋಡಿ!

ಪ್ರೀಮಿಯಂ ನವೀಕರಣ ಮಾಹಿತಿಯನ್ನು ಹಂಚಿಕೊಳ್ಳಬೇಕು:
ಅಗತ್ಯ ಸಮಯದಲ್ಲಿ ಪಾಲಿಸಿದಾರನು ವಿಮಾ ಕಂಪನಿಯನ್ನು ಹೇಗೆ ಸಂಪರ್ಕಿಸಬೇಕಾಗುತ್ತದೆ. ಇದಕ್ಕೆ ಅನುಕೂಲವಾಗುವಂತೆ ಪಾಲಿಸಿದಾರನಿಗೆ ಕಸ್ಟಮರ್ ಕೇರ್ ನಂಬರ್ (customer care),  ಇಮೇಲ್ ಮುಂತಾದ ಮಾಹಿತಿಯನ್ನು ನೀಡಬೇಕು. ಅಲ್ಲದೆ ವಿಮೆ ನವೀಕರಿಸುವ ಸಂದರ್ಭದಲ್ಲಿ ಪ್ರೀಮಿಯಂ ಕಟ್ಟಬೇಕಾದ ಮೊತ್ತವನ್ನು ಕೂಡಾ ತಿಳಿಸಬೇಕು. ಗ್ರೇಸ್ ಪೀರಿಯೆಡ್ ಬಗ್ಗೆಯೂ ಕಂಪನಿ ಮಾಹಿತಿ ನೀಡಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News