ಜಾರಿಗೆ ಬರುತ್ತಿದೆ Golden Hour Treatment : ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಸಿಗುವುದು ಉಚಿತ ಚಿಕಿತ್ಸೆ

Golden Hour Treatment:ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ನೀಡಲು ಹೊಸ ಯೋಜನೆಯನ್ನು ತರಲು ಯೋಜಿಸುತ್ತಿದೆ. ಈ ಯೋಜನೆಗೆ 'ಗೋಲ್ಡನ್ ಅವರ್ ಟ್ರೀಟ್ಮೆಂಟ್' ಎಂದು ಹೆಸರಿಸಲಾಗಿದೆ.

Written by - Ranjitha R K | Last Updated : Mar 13, 2024, 12:18 PM IST
  • ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ನೀಡಲು ಹೊಸ ಯೋಜನೆ
  • ಏನಿದು ಗೋಲ್ಡನ್ ಅವರ್ ಯೋಜನೆ ?
  • 100 ಕೋಟಿ ರೂಪಾಯಿಗಳ ನಿಧಿಯನ್ನು ರಚನೆ
 ಜಾರಿಗೆ ಬರುತ್ತಿದೆ Golden Hour Treatment : ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ   ಸಿಗುವುದು ಉಚಿತ ಚಿಕಿತ್ಸೆ  title=

What is Golden Hour Treatment : ಕಳೆದ ಕೆಲವು ದಿನಗಳಿಂದ ದೇಶದಲ್ಲಿ ರಸ್ತೆ ಅಪಘಾತಗಳಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದರೆ ರಸ್ತೆ ಅಪಘಾತದ ವೇಳೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಇನ್ನು ಕೂಡಾ ಜನ ಸಾವನ್ನಪ್ಪುತ್ತಿದ್ದಾರೆ. ಇದೀಗ ರಸ್ತೆ ಸಾರಿಗೆ ಸಚಿವಾಲಯ (MoRTH) ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ನೀಡಲು ಹೊಸ ಯೋಜನೆಯನ್ನು ತರಲು ಯೋಜಿಸುತ್ತಿದೆ. ಈ ಯೋಜನೆಗೆ 'ಗೋಲ್ಡನ್ ಅವರ್ ಟ್ರೀಟ್ಮೆಂಟ್' ಎಂದು ಹೆಸರಿಸಲಾಗಿದೆ.

ಏನಿದು ಗೋಲ್ಡನ್ ಅವರ್ ಯೋಜನೆ ? : 
 ಮೂಲಗಳ ಪ್ರಕಾರ, ಈ ಯೋಜನೆಯಡಿಯಲ್ಲಿ, ಅಪಘಾತದ ನಂತರದ ಮೊದಲ ಗಂಟೆಯೊಳಗೆ, ಗಾಯಾಳುಗಳು 1.5 ಲಕ್ಷದವರೆಗೆ ಅಥವಾ 7 ದಿನಗಳವರೆಗೆ ಉಚಿತ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಾರೆ. ಈ ಎರಡರಲ್ಲಿ ಯಾವುದು ಕಡಿಮೆ ವೆಚ್ಚವಾಗುತ್ತದೆಯೋ ಅದು ಮಾನ್ಯವಾಗಿರುತ್ತದೆ. ಈ ಯೋಜನೆಯು ತಿದ್ದುಪಡಿ ಮಾಡಲಾದ ಮೋಟಾರು ವಾಹನಗಳ ಕಾಯಿದೆ 2019 (MAV2019)ರ ಭಾಗವಾಗಿದ್ದು, ದೇಶಾದ್ಯಂತ ಜಾರಿಗೆ ಬರಲಿದೆ.'ಗೋಲ್ಡನ್ ಅವರ್' ಎಂದರೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುವ ಮೊದಲ 60 ನಿಮಿಷಗಳು.

ಇದನ್ನೂ ಓದಿ : ಈ ಬ್ಯಾಂಕ್ ಗಳಿಂದ ಮಾತ್ರ ಖರೀದಿಸಬೇಕು Fastag : ಇಲ್ಲಿದೆ ನೋಡಿ NHAI ಬಿಡುಗಡೆ ಮಾಡಿದ ಲಿಸ್ಟ್

100 ಕೋಟಿ ರೂಪಾಯಿಗಳ ನಿಧಿಯನ್ನು ರಚನೆ : 
ಸಾಮಾನ್ಯ ವಿಮಾ ಕಂಪನಿಗಳು ಯೋಜನೆಗಾಗಿ  ಥರ್ಡ್ ಪಾರ್ಟಿ ಪ್ರೀಮಿಯಂನ 0.5 ಪ್ರತಿಶತವನ್ನು ಠೇವಣಿ ಮಾಡುತ್ತವೆ. ಇದರೊಂದಿಗೆ ಸುಮಾರು 100 ಕೋಟಿ ರೂ.ಗಳ ನಿಧಿಯನ್ನು ರಚಿಸಬಹುದು. ಕೇಂದ್ರದ 'ಗೋಲ್ಡನ್ ಅವರ್' ಯೋಜನೆಯನ್ನು  ಮೊದಲು ಹರಿಯಾಣ ಮತ್ತು ಚಂಡೀಗಢದಲ್ಲಿ ಪ್ರಾಯೋಗಿಕ ಯೋಜನೆಯಾಗಿ ಜಾರಿಗೆ ತರಲಾಗುತ್ತದೆ. ‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ನೀಡುವ ಮೂಲಕ ರಸ್ತೆ ಅಪಘಾತಗಳಲ್ಲಿ ಸಾವಿನ ಸಂಖ್ಯೆಯನ್ನು 50% ರಷ್ಟು ಕಡಿಮೆ ಮಾಡುವುದು ಈ ಯೋಜನೆಯನ್ನು ಪ್ರಾರಂಭಿಸುವ ಹಿಂದಿನ ಉದ್ದೇಶವಾಗಿದೆ. 

ಹೆದ್ದಾರಿಯಲ್ಲಿ ಪ್ರಯಾಣಿಸುವ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ವಾಹನಗಳ ಸುರಕ್ಷತಾ ವೈಶಿಷ್ಟ್ಯಗಳನ್ನು ಹೆಚ್ಚಿಸಲು ದೇಶದಲ್ಲಿ ಈಗಾಗಲೇ ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರ ಅಡಿಯಲ್ಲಿ ವಾಹನ ತಯಾರಿಕಾ ಕಂಪನಿಗಳು ವಾಹನಗಳಿಗೆ ಎಬಿಎಸ್ ಬ್ರೇಕ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ಇದಲ್ಲದೆ, ವಾಹನದ ವೇಗವು ತುಂಬಾ ಹೆಚ್ಚಿದ್ದರೆ ಚಾಲಕನಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ, ಸೀಟ್ ಬೆಲ್ಟ್ ರಿಮೈಂಡಿಂಗ್ ಸಿಸ್ಟಮ್ ಮತ್ತು ಭಾರತ್ ಎನ್‌ಸಿಎಪಿ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಪರೀಕ್ಷೆಯನ್ನು ಸಹ ಅಳವಡಿಸಲಾಗಿದೆ. 

ಇದನ್ನೂ ಓದಿ : Karnataka Govt DA Hike: ರಾಜ್ಯ ಸರ್ಕಾರಿ ನೌಕರರಿಗೂ ಸಿಕ್ತು ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News