Infosys: ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ

Narayana Murthy Share Gift To Grandson: ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ 240 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.(Business News In Kannada)  

Written by - Nitin Tabib | Last Updated : Mar 18, 2024, 08:49 PM IST
  • 77 ವರ್ಷ ವಯಸ್ಸಿನ ಇನ್ಫೋಸಿಸ್ ಸಂಸ್ಥಾಪಕರು (Infosys Founder Narayana Murthy) ತಮ್ಮ ಮೊಮ್ಮಗನಿಗೆ
  • ಮಾರುಕಟ್ಟೆಯ ವಹಿವಾಟಿನಲ್ಲಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
  • ಇದರ ಬಳಿಕ, ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿ ಅವರ ಪಾಲು ಶೇಕಡಾ 0.36 ಅಥವಾ 1.51 ಕೋಟಿಗೂ ಹೆಚ್ಚು ಷೇರುಗಳಿಗೆ ಇಳಿಕೆಯಾದಂತಾಗಿದೆ.
Infosys: ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ನಾರಾಯಣ ಮೂರ್ತಿ title=

Inforys Founder Narayana Murthy Share Gift To Grandson: ಭಾರತದ ಐಟಿ ವಲಯದ ದೈತ್ಯ ಕಂಪನಿಯಾಗಿರುವ ಇನ್ಫೋಸಿಸ್ ನ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಯನ್ನು  ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಕೋಟ್ಯಾಧಿಪತಿಯನ್ನಾಗಿ ಮಾಡಿದ್ದಾರೆ. ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗನಿಗೆ 240 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕಂಪನಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.(Business News In Kannada)

ಕಂಪನಿಯಲ್ಲಿ ಏಕಾಗ್ರ ರೋಹನ್ ಪಾಲುದಾರಿಕೆ ಎಷ್ಟು? 
ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ, ನಾರಾಯಣ ಮೂರ್ತಿ ಅವರು ತಮ್ಮ 4 ತಿಂಗಳ ಮೊಮ್ಮಗ ಏಕಾಗ್ರ ಮೂರ್ತಿಗೆ (Youngest Crorepati) ಇನ್ಫೋಸಿಸ್‌ನಲ್ಲಿ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರೊಂದಿಗೆ ಕಂಪನಿಯಲ್ಲಿ ಏಕಗ್ರನಿಗೆ ಶೇ.0.04ರಷ್ಟು ಪಾಲು ನೀಡಿದಂತಾಗಿದೆ.

ನಾರಾಯಣಮೂರ್ತಿರ ಬಳಿ ಎಷ್ಟು ಪಾಲು ಉಳಿದಿದೆ?
77 ವರ್ಷ ವಯಸ್ಸಿನ ಇನ್ಫೋಸಿಸ್ ಸಂಸ್ಥಾಪಕರು (Infosys Founder Narayana Murthy) ತಮ್ಮ ಮೊಮ್ಮಗನಿಗೆ ಮಾರುಕಟ್ಟೆಯ ವಹಿವಾಟಿನಲ್ಲಿ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬಳಿಕ, ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿ ಅವರ ಪಾಲು ಶೇಕಡಾ 0.36 ಅಥವಾ 1.51 ಕೋಟಿಗೂ ಹೆಚ್ಚು ಷೇರುಗಳಿಗೆ ಇಳಿಕೆಯಾದಂತಾಗಿದೆ.

ಇದನ್ನೂ ಓದಿ-Modi Government ಅದ್ಭುತ ಯೋಜನೆ, ಮಹಿಳೆಯರ ಖಾತೆಗೆ ಬರುತ್ತವೆ 5 ಲಕ್ಷ ರೂ!

ಇನ್ಫೋಸಿಸ್ ಷೇರುಗಳ ಸ್ಥಿತಿ ಹೇಗಿದೆ? (Infosys share value)
ಸೋಮವಾರ ಇನ್ಫೋಸಿಸ್ ಷೇರುಗಳು ಬೆಲೆ 1601 ರೂ.ಗಳಾಗಿತ್ತು.  ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳು ಸುಮಾರು ಶೇ. 14 ರಷ್ಟುಲಾಭವನ್ನು ನೀಡಿವೆ.

ಇದನ್ನೂ ಓದಿ-Business Concept: ಸ್ವಂತ ವ್ಯಾಪಾರ ಆರಂಭಿಸಲು ಈ ಯೋಜನೆಯಲ್ಲಿ 10 ಲಕ್ಷ ರೂ. ಸಾಲ ನೀಡುತ್ತೇ ಸರ್ಕಾರ!

ರಾಜ್ಯಸಭಾ ಸಂಸದೆಯಾಗಿ ಸುಧಾಮೂರ್ತಿ ಪ್ರಮಾಣವಚನ ಸ್ವೀಕಾರ
ನಾರಾಯಣ ಮೂರ್ತಿ ಮತ್ತು ಅವರ ಪತ್ನಿ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ (Sudha Murthy) ಕಳೆದ ವರ್ಷ ನವೆಂಬರ್‌ನಲ್ಲಿ ಅಜ್ಜ-ಅಜ್ಜಿಯಾಗಿದ್ದಾರೆ, ಅವರ ಮಗ ರೋಹನ್ ಮೂರ್ತಿ (Rohan Mruthy) ಮತ್ತು ಪತ್ನಿ ಅಪರ್ಣಾ ಕೃಷ್ಣನ್ (Aparna Krishnan) ಅವರು ತಮ್ಮ ಮನೆಗೆ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಸುಧಾ ಮೂರ್ತಿ ಅವರು ಕಳೆದ ವಾರವಷ್ಟೇ ಪತಿ ಸಮ್ಮುಖದಲ್ಲಿ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

Trending News