ವೇತನ ನಿಯಮಗಳಲ್ಲಿ ಬದಲಾವಣೆ : ಈ ತಿಂಗಳಿನಿಂದಲೇ ಕೈ ಸೇರುವುದು ಅಧಿಕ ವೇತನ

ಉದ್ಯೋಗಿಗಳ ವೇತನ ನಿಯಮಗಳಲ್ಲಿ ಬದಲಾವಣೆಯಾಗಿದೆ. ಇದರ ಪರಿಣಾಮ ಈ ತಿಂಗಳ ವೇತನದಲ್ಲಿಯೇ ಗೋಚರಿಸಲಿದೆ. ಅಂದರೆ ಈ ತಿಂಗಳಿಂದ ಅಧಿಕ ವೇತನ ಖಾತೆ ಸೇರಲಿದೆ. 

Written by - Ranjitha R K | Last Updated : Sep 4, 2023, 08:51 AM IST
  • ಕೇಂದ್ರೀಯ ನೇರ ತೆರಿಗೆ ಮಂಡಳಿ ಹೊಸ ನಿಯಮವನ್ನು ಜಾರಿಗೆ ತಂದಿದೆ.
  • ಮಂಡಳಿಯು ಪರ್ಕ್ವಿಸಿಟ್ ಮೌಲ್ಯಮಾಪನದ ಮಿತಿಯನ್ನು ನಿಗದಿಪಡಿಸಿದೆ.
  • ಈ ಮಿತಿಯನ್ನು ಮೊದಲಿಗಿಂತ ಕಡಿಮೆ ಮಾಡಲಾಗಿದೆ.
ವೇತನ ನಿಯಮಗಳಲ್ಲಿ ಬದಲಾವಣೆ : ಈ ತಿಂಗಳಿನಿಂದಲೇ ಕೈ ಸೇರುವುದು ಅಧಿಕ ವೇತನ  title=

ಬೆಂಗಳೂರು :  ಹೊಸ ತಿಂಗಳು ಪ್ರಾರಂಭವಾಗಿದೆ. ಸೆಪ್ಟೆಂಬರ್ 1 ರಿಂದ ಅನೇಕ ವಿಷಯಗಳು ಬದಲಾಗಿವೆ. ಆದರೆ,  ಈ ತಿಂಗಳಿನಿಂದ ಉದ್ಯೋಗಿಗಳ  ಜೀವನದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಸೆಪ್ಟಂಬರ್ 1 ರಿಂದ ಉದ್ಯೋಗಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಉದ್ಯೋಗಿಗಳ ವೇತನ ನಿಯಮಗಳಲ್ಲಿ ಬದಲಾವಣೆಯಾಗಿದೆ. ಈ ಬದಲಾವಣೆಯ ನಂತರ ನೌಕರರು ಹೆಚ್ಚಿನ ವೇತನವನ್ನಪಡೆಯುವುದು ಸಾಧ್ಯವಾಗುತ್ತದೆ. ಇದು ಉದ್ಯೋಗದಾತ / ನಿರ್ವಹಣೆಯ ಪರವಾಗಿ ವಸತಿ ಪಡೆಯುವ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.  

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೊಸ ನಿಯಮವನ್ನು ಜಾರಿಗೆ ತಂದಿದೆ. ಮಂಡಳಿಯು ಪರ್ಕ್ವಿಸಿಟ್ ಮೌಲ್ಯಮಾಪನದ ಮಿತಿಯನ್ನು ನಿಗದಿಪಡಿಸಿದೆ. ಈ ಮಿತಿಯನ್ನು ಮೊದಲಿಗಿಂತ ಕಡಿಮೆ ಮಾಡಲಾಗಿದೆ. ಪರ್ಕ್ವಿಸೈಟ್ ಮೌಲ್ಯಮಾಪನವನ್ನು ಸರಳ ಪದಗಳಲ್ಲಿ ಹೇಳುವುದಾದರೆ  ಕಚೇರಿಯಿಂದ ಮನೆಗೆ ಬರುವ ಉದ್ಯೋಗಿಗಳ ವೇತನದ ಮೇಲೆ ವಿಧಿಸಲಾಗುವ ತೆರಿಗೆ. CBDT ಮೌಲ್ಯಮಾಪನಕ್ಕೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸಿದೆ.

ಇದನ್ನೂ ಓದಿ : Success Story: ಕೇವಲ 70 ಸಾವಿರ ಹೂಡಿಕೆ ಮಾಡಿ, 20 ಲಕ್ಷ ರೂ.ಗಳಿಸಿದ ಈ ಯುವ ರೈತನ ಸಕ್ಸೆಸ್ ಸ್ಟೋರಿ ನೀವೂ ಓದಿ!

CBDT ಅಧಿಸೂಚನೆಯ ಪ್ರಕಾರ, ಈಗ ಕಚೇರಿಯಿಂದ ಪಡೆದ ಮನೆಗೆ  ವೇತನದ ಮೇಲೆ ವಿಧಿಸಲಾಗುವ ತೆರಿಗೆ ದರ ಕಡಿಮೆ ಇರುತ್ತದೆ. ಇದರ ನೇರ ಪರಿಣಾಮ ಉದ್ಯೋಗಿಗಳ ವೇತನದಲ್ಲಿ ಗೋಚರಿಸುತ್ತದೆ. ತೆರಿಗೆ ಕಡಿಮೆ ಮಾಡಿರುವುದರಿಂದ ಟೇಕ್ ಹೋಮ್ ಸ್ಯಾಲರಿ ಹೆಚ್ಚಾಗುತ್ತದೆ. ಈ ನಿಯಮವನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ತರಲಾಗಿದೆ. ಅಂದರೆ ಈ ತಿಂಗಳ ವೆತನದಲ್ಲಿಅಧಿಕ ಮೊತ್ತ ಕೈ ಸೇರಲಿದೆ. 

ತೆರಿಗೆ ಸಂಬಂಧಿತ ನಿಯಮಗಳು ಯಾವುವು? :
ಕಂಪನಿಯು ಉದ್ಯೋಗಿಗೆ ವಸತಿ ಸೌಕರ್ಯವನ್ನು ಒದಗಿಸಿದರೆ ಪರ್ಕ್ವಿಸೈಟ್ ನಿಯಮ ಅನ್ವಯಿಸುತ್ತದೆ. ಕಂಪನಿಯು ತನ್ನ ಉದ್ಯೋಗಿಗೆ ಬಾಡಿಗೆ ರಹಿತವಾಗಿ ವಾಸಿಸಲು ಈ ಮನೆಯನ್ನು ಒದಗಿಸುತ್ತದೆ. ಆದರೆ, ಇದನ್ನು ಆದಾಯ ತೆರಿಗೆ ನಿಯಮಗಳ ಅಡಿಯಲ್ಲಿ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ಬಾಡಿಗೆಯನ್ನು ಪಾವತಿಸುವುದಿಲ್ಲ ಆದರೆ ತೆರಿಗೆಯ ಒಂದು ಭಾಗವನ್ನು ನೌಕರರ ವೇತನದಿಂದ ಕಡಿತಗೊಳಿಸಲಾಗುತ್ತದೆ. ಈಗ ಪರ್ಕ್ವಿಸಿಟ್ ಮೌಲ್ಯಮಾಪನದ ಮಿತಿಯನ್ನು ನಿಗದಿಪಡಿಸಲಾಗಿದೆ. 

ಇದನ್ನೂ ಓದಿ : Car Sales In August 2023: ಆಗಸ್ಟ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 5 ಕಾರುಗಳು

ಪ್ರಸ್ತುತ ಬದಲಾವಣೆಗಳೇನು? : 
ನಗರಗಳು ಮತ್ತು ಜನಸಂಖ್ಯೆಯ ವರ್ಗೀಕರಣ 2001 ರ ಜನಗಣತಿಯ ಬದಲಿಗೆ 2011 ರ ಜನಗಣತಿಯನ್ನು ಆಧರಿಸಿವೆ. ಪರಿಷ್ಕೃತ ಜನಸಂಖ್ಯೆಯ ಮಿತಿಯನ್ನು 25 ಲಕ್ಷದಿಂದ 40 ಲಕ್ಷಕ್ಕೆ ಮತ್ತು 10 ಲಕ್ಷದಿಂದ 15 ಲಕ್ಷಕ್ಕೆ ಬದಲಾಯಿಸಲಾಗಿದೆ. ಪರಿಷ್ಕೃತ ನಿಯಮಗಳು ಹಿಂದಿನ 15%, 10% ಮತ್ತು 7.5% ವೇತನದಿಂದ 10%, 7.5% ಮತ್ತು 5% ರಷ್ಟು ವೇತನದ ದರಗಳನ್ನು ಕಡಿಮೆ ಮಾಡಿದೆ.

ಇದು ಕೇಂದ್ರ ಮತ್ತು ರಾಜ್ಯ ನೌಕರರಿಗೂ ಅನ್ವಯಿಸುತ್ತದೆ :
ಹಿಂದಿನದಕ್ಕೆ ಹೋಲಿಸಿದರೆ CBDT ಪರ್ಕಿಸೈಟ್ ಮೌಲ್ಯಮಾಪನದ ಮಿತಿಯನ್ನು ಪರಿಷ್ಕರಿಸಿದೆ. ಇದರರ್ಥ ಪರ್ಕ್ವಿಸೈಟ್ ಮೌಲ್ಯಮಾಪನವನ್ನು ಈಗ ಮನೆಯ ಬದಲಿಗೆ ಉದ್ಯೋಗಿಯ ವೇತನದಿಂದ ಕಡಿತಗೊಳಿಸಲಾಗುತ್ತದೆ. ಅಧಿಸೂಚನೆಯ ಪ್ರಕಾರ, ಇದರಲ್ಲಿ ಕೇಂದ್ರ ಮತ್ತು ರಾಜ್ಯ ನೌಕರರು ಸೇರಿದ್ದಾರೆ. ಯಾವ ಉದ್ಯೋಗಿಗೆ ಕಂಪನಿ ವಸತಿ ಆಸ್ತಿಯನ್ನು ಒದಗಿಸುತ್ತದೆಯೋ ಅವರಿಗೆ ಈ ನಿಯಮ ಅನ್ವಯಿಸುತ್ತದೆ.   ಈ ಆಸ್ತಿಯ ಮಾಲೀಕತ್ವವು ಕಂಪನಿಯದ್ದಾಗಿರುತ್ತದೆ.  

ಉದ್ಯೋಗಿಗಳು ಹೇಗೆ ಪ್ರಯೋಜನ ಪಡೆಯುತ್ತಾರೆ? : 
ನೀವು ಸಹ ಕಂಪನಿ ನೀಡಿದ ಮನೆಯಲ್ಲಿ ವಾಸಿಸುತ್ತಿದ್ದು, ಅದಕಾಗಿ  ಬಾಡಿಗೆಯನ್ನು ಪಾವತಿಸದಿದ್ದರೆ, ಈ ನಿಯಮವು ನಿಮಗೆ  ಅನುಕೂಲಕರವಾಗಿರಲಿದೆ. ಪರ್ಕ್ವಿಸೈಟ್ ಮೌಲ್ಯಮಾಪನದ ಮಿತಿಯನ್ನು ಕಡಿಮೆಗೊಳಿಸಿರುವುದರಿಂದ ತೆರಿಗೆ ಕಡಿತ ಕೂಡಾ ಕಡಿಮೆಯಾಗುತ್ತದೆ. ಮೊದಲಿಗಿಂತ ಕಡಿಮೆ ತೆರಿಗೆಯನ್ನು ಸಂಬಳದಿಂದ ಕಡಿತಗೊಳಿಸಲಾಗುತ್ತದೆ. ಈ ಮೂಲಕ ಕೈ ಸೇರುವ ವೇತನದಲ್ಲಿ ಹೆಚ್ಚಳವಾಗಲಿದೆ.

ಇದನ್ನೂ ಓದಿ :  Uday Kotak resigns: ಕೊಟಕ್ ಮಹೀಂದ್ರಾ ಬ್ಯಾಂಕ್ ಎಂಡಿ, ಸಿಇಒ ಹುದ್ದೆಗೆ ಉದಯ್ ಕೋಟಕ್ ರಾಜೀನಾಮೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News