Ujjwala Yojana: ಈ ದಾಖಲೆ ಇದ್ದರೆ ಸಾಕು ಉಚಿತವಾಗಿ ಪಡೆಯಬಹುದು LPG ಸಿಲಿಂಡರ್

ಉಜ್ವಲ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2016 ರಲ್ಲಿ ಆರಂಭಿಸಿದರು. ಇದರ ಅಡಿಯಲ್ಲಿ, ದೇಶದ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ನೀಡಲಾಗುತ್ತದೆ.  

Written by - Ranjitha R K | Last Updated : Sep 6, 2021, 05:42 PM IST
  • ಈ ಯೋಜನೆಗೆ ಅರ್ಜಿ ಸಲ್ಲಿಸದೆ ಹೋದರೆ ಉಚಿತ ಸಿಲಿಂಡರ್‌ನ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ
  • ದೇಶಾದ್ಯಂತ 1 ಕೋಟಿ ಉಚಿತ ಗ್ಯಾಸ್ ಸಂಪರ್ಕಗಳನ್ನು ವಿತರಿಸುವ ಗುರಿ
  • ಅರ್ಜಿ ಸಲ್ಲಿಸಲು ಯಾವ ದಾಖಲೆಗಳ ಅವಶ್ಯಕತೆಗಳಿವೆ ನೋಡೋಣ.
Ujjwala Yojana:  ಈ ದಾಖಲೆ ಇದ್ದರೆ ಸಾಕು ಉಚಿತವಾಗಿ ಪಡೆಯಬಹುದು LPG ಸಿಲಿಂಡರ್ title=
Ujjwala Yojana (file photo)

ನವದೆಹಲಿ : Ujjawala Yojana: ನೀವು ಕೂಡ ಉಜ್ವಲ ಯೋಜನೆಯ ಲಾಭ ಪಡೆಯಲು ಬಯಸುವುದಾದರೆ,  ನೀವು ಕೆಲವು ದಾಖಲೆಗಳನ್ನು ಹೊಂದಿರಬೇಕು. ಇವುಗಳಿಲ್ಲದೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದಾದರೆ ಉಚಿತ ಸಿಲಿಂಡರ್‌ನ (Free Cylinder) ಲಾಭವನ್ನು ಕೂಡಾ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳ ಅವಶ್ಯಕತೆಗಳಿವೆ ನೋಡೋಣ. 

1 ಕೋಟಿ ಉಚಿತ ಗ್ಯಾಸ್ ಸಂಪರ್ಕ : 
ಉಜ್ವಲ ಯೋಜನೆಯನ್ನು (Ujjwala Yojana) ಪ್ರಧಾನಿ ನರೇಂದ್ರ ಮೋದಿ ಅವರು 2016 ರಲ್ಲಿ ಆರಂಭಿಸಿದರು. ಇದರ ಅಡಿಯಲ್ಲಿ, ದೇಶದ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು (Free gas Connection) ನೀಡಲಾಗುತ್ತದೆ.  ಅದೇ ಸಮಯದಲ್ಲಿ, ಉಜ್ವಲ ಯೋಜನೆಯನ್ನು  ಆಗಸ್ಟ್ 25 ರಿಂದ ಉತ್ತರ ಪ್ರದೇಶದಲ್ಲಿ ಆರಂಭಿಸಲಾಯಿತು. ಮೊದಲ ಹಂತದಲ್ಲಿ, ದೇಶದ ಸುಮಾರು 8 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ. ಎರಡನೇ ಹಂತದಲ್ಲಿ, ರಾಜ್ಯದ ಸುಮಾರು 20 ಲಕ್ಷ ಮಹಿಳೆಯರಿಗೆ ಅನುಕೂಲವಾಗಿಸುವ ಗುರಿ ಹೊಂದಲಾಗಿದೆ. ಅದೇ ಸಮಯದಲ್ಲಿ, ದೇಶಾದ್ಯಂತ 1 ಕೋಟಿ ಉಚಿತ ಗ್ಯಾಸ್ ಸಂಪರ್ಕಗಳನ್ನು ವಿತರಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. 

ಇದನ್ನೂ ಓದಿ : Aadhaar card update: ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋಟೋ ಅಪ್‌ಡೇಟ್ ಮಾಡುವುದು ಹೇಗೆ..?

ಈ ದಾಖಲೆಗಳು ಅಗತ್ಯ :
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸಹಯೋಗದೊಂದಿಗೆ ನಡೆಯುತ್ತಿರುವ ಉಜ್ವಲ ಯೋಜನೆಯ ಲಾಭ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ವರ್ಷಗಳಿಗಿಂತ ಹೆಚ್ಚು ಇರಬೇಕು.  ಬಿಪಿಎಲ್ ಕಾರ್ಡ್, ಸಬ್ಸಿಡಿ ಪಡೆಯಲು ಬ್ಯಾಂಕ್‌ ಉಳಿತಾಯ ಖಾತೆ (Bank saving account) , ಗುರುತಿನ ಚೀಟಿ (ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ) ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಗಳನ್ನು ಹೊಂದಿರಬೇಕು.ಮುಖ್ಯ ವಿಚಾರ ಎಂದರೆ ಮಹಿಳೆಯ ಕುಟುಂಬದಲ್ಲಿ ಈಗಾಗಲೇ ಎಲ್‌ಪಿಜಿ ಸಂಪರ್ಕ (LPG Connection) ಇರಬಾರದು.

ಈ ರೀತಿ ಅರ್ಜಿ ಸಲ್ಲಿಸಿ : 
ಅರ್ಜಿ ಸಲ್ಲಿಸಲು, ಮೊದಲು pmuy.gov.in ಗೆ ಹೋಗಿ. ನಂತರ ಹೊಸ ಉಜ್ವಲಾ 2.0 ಕನೆಕ್ಷನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಇಂಡೇನ್, ಭಾರತ್ ಪೆಟ್ರೋಲಿಯಂ ಮತ್ತು HP ಗ್ಯಾಸ್ ಕಂಪನಿಯ ಆಯ್ಕೆಗಳನ್ನು ಕಾಣಬಹುದು. ಇವುಗಳಲ್ಲಿ ಒಂದನ್ನು ಆರಿಸಿ. ಅದರ ನಂತರ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ದಾಖಲೆಗಳ ಪರಿಶೀಲನೆಯ ನಂತರ, ನಿಮ್ಮ ಹೆಸರಿನಲ್ಲಿ LPG ಗ್ಯಾಸ್ ಸಂಪರ್ಕವನ್ನು ನೀಡಲಾಗುವುದು. ಎರಡನೇ ಹಂತದಲ್ಲಿ ಎಲ್‌ಪಿಜಿ ಸಂಪರ್ಕದ ಜೊತೆಗೆ, ಮೊದಲ ಸಿಲಿಂಡರ್‌ನ ರೆ ಫಿಲ್ಲಿಂಗ್ ಕೂಡಾ ಉಚಿತವಾಗಿರುತ್ತದೆ.  ಇದರೊಂದಿಗೆ ಗ್ಯಾಸ್ ಸ್ಟೌ ಕೂಡ ನೀಡಲಾಗುವುದು.

ಇದನ್ನೂ ಓದಿ : ಈ ಸುಲಭ ವಿಧಾನದ ಮೂಲಕ Ration Card ನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News