20 ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ಸಿಗುತ್ತೆ ಭರ್ಜರಿ ಝಣ ಝಣ ಕಾಂಚಾಣ..!

20 ರೂಪಾಯಿ ನೋಟಿನ  ಬದಲು ನೀವು ಸಾವಿರಾರು ರೂಪಾಯಿಗಳನ್ನು ಗಳಿಸಬಹುದು ಅನ್ನೋದು ನಿಮಗೆ ಗೊತ್ತಿದ್ಯಾ? ಹೌದು ನಿಮ್ಮ ಬಳಿ  20 ರೂಪಾಯಿ ಒಂದು ವಿಶೇಷ  ನೋಟು ಇದ್ದರೆ, ನೀವು ಮನೆಯಲ್ಲಿ ಕುಳಿತು ಸಾವಿರಾರು ರೂಪಾಯಿ ಸಂಪಾದಿಸಬಹುದು. 

Written by - Ranjitha R K | Last Updated : Jul 4, 2021, 05:30 PM IST
  • ನಿಮ್ಮಲ್ಲಿ ದಿನಾಂಕ, ವರ್ಷ ಇಲ್ಲದ ಯಾವುದಾದರೂ 20 ರೂ. ನೋಟು ಇದೆಯಾ..?
  • ಅಂಥಹ ನೋಟು ನಿಮ್ಮಲ್ಲಿದ್ದರೆ ನಿಮಗೆ ಸಿಗಲಿದೆ ಸಾವಿರಾರು ರೂಪಾಯಿ.
  • 20 ರೂಪಾಯಿ ಬದಲಿಗೆ ನಿಮಗೆ ದುಡ್ಡು ಹೇಗೆ ಸಿಗಲಿದೆ ಎನ್ನುವ ಮಾಹಿತಿ ಇಲ್ಲಿದೆ.
20 ರೂಪಾಯಿ ನೋಟು ನಿಮ್ಮ  ಬಳಿ ಇದ್ದರೆ ಸಿಗುತ್ತೆ ಭರ್ಜರಿ ಝಣ ಝಣ ಕಾಂಚಾಣ..! title=
20 ರೂಪಾಯಿ ಬದಲಿಗೆ ನಿಮಗೆ ದುಡ್ಡು ಹೇಗೆ ಸಿಗಲಿದೆ ಎನ್ನುವ ಮಾಹಿತಿ ಇಲ್ಲಿದೆ. (photo india.com)

ನವದೆಹಲಿ : 20 ರೂಪಾಯಿ ನೋಟಿನ (20 rupee note) ಬದಲು ನೀವು ಸಾವಿರಾರು ರೂಪಾಯಿಗಳನ್ನು ಗಳಿಸಬಹುದು ಅನ್ನೋದು ನಿಮಗೆ ಗೊತ್ತಿದ್ಯಾ? ಹೌದು ನಿಮ್ಮ ಬಳಿ  20 ರೂಪಾಯಿ ಒಂದು ವಿಶೇಷ  ನೋಟು ಇದ್ದರೆ, ನೀವು ಮನೆಯಲ್ಲಿ ಕುಳಿತು ಸಾವಿರಾರು ರೂಪಾಯಿ ಸಂಪಾದಿಸಬಹುದು.  ಇದಕ್ಕಾಗಿ ನೀವು ಆ 20 ರೂಪಾಯಿ ನೋಟನ್ನು ರಿಸರ್ವ್ ಬ್ಯಾಂಕ್‌ಗೆ (RBI) ಹಿಂದಿರುಗಿಸಬೇಕಾಗುತ್ತದೆ ಮತ್ತು ಪ್ರತಿಯಾಗಿ ನಿಮಗೆ ಸಾವಿರಾರು ರೂಪಾಯಿಗಳು ಸಿಗುತ್ತವೆ. 

ಆರ್ ಬಿಐನ  ಈ 20 ರೂಪಾಯಿ ನೋಟಿನ ವಿಶೇಷತೆ ಏನು..?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 12 ವಿವಿಧ ಮುಖಬೆಲೆಯ ಕರೆನ್ಸಿ ನೋಟುಗಳನ್ನು (currency note) ಬಿಡುಗಡೆ ಮಾಡಿತ್ತು. ಇವುಗಳಲ್ಲಿ 20 ರೂ. ಮುಖಬೆಲೆಯ ನೋಟು ಕೂಡಾ ಸೇರಿತ್ತು.  ನಿಯಮಗಳ ಪ್ರಕಾರ, ಪ್ರತಿ ನೋಟಿನಲ್ಲಿ ಮುದ್ರಣ ದಿನಾಂಕ ಮತ್ತು ಅದರ ಮಾನ್ಯತೆಯ ವರ್ಷವನ್ನು ಬರೆಯಬೇಕು.  ಆದರೆ, ಈ ನೋಟುಗಳಲ್ಲಿ ಅದನ್ನು ಮುದ್ರಿಸದೇ ಹಾಗೇ ಬಿಡುಗಡೆ ಮಾಡಲಾಗಿತ್ತು. 

ಇದನ್ನೂ ಓದಿ : Earn Money : ಹಣಗಳಿಸುವ ಬಂಪರ್ ಅವಕಾಶ : 828 ಮತ್ತು 880 ರೂ. ಹೂಡಿಕೆ ಮಾಡುವ ಮೂಲಕ ನೀವು ಮಿಲಿಯನೇರ್ ಆಗಬಹುದು!

ತಪ್ಪು ಗೊತ್ತಾದಾಗ, ನೋಟು ವಾಪಸ್ ಪಡೆಯಲಾಯಿತು.
ಈ ಬೆಳವಣಿಗೆ ಆಗಿದ್ದು 2005ರಲ್ಲಿ. ತಪ್ಪು ಗೊತ್ತಾದಾಗ ಎಲ್ಲಾ ನೋಟುಗಳನ್ನು ವಾಪಸ್ ಪಡೆಯಲಾಯಿತು. ಆದರ ಬದಲಿಗೆ ಹೊಸ 20 ರೂಪಾಯಿ ನೋಟುಗಳನ್ನು ನೀಡಲಾಯಿತು. ಆದರೆ, ಆರ್ ಬಿಐ (Reserve Bank of India) ಪ್ರಕಾರ ಬಿಡುಗಡೆಯಾದ ಎಲ್ಲಾ 20 ರೂಪಾಯಿ ನೋಟುಗಳು ಇನ್ನೂ ಆರ್ ಬಿಐ ಬಳಿ ಸೇರಿಲ್ಲ.  ಇನ್ನೂ ಬಹು ಸಂಖ್ಯೆಯ ಈ ನೋಟುಗಳು ಜನರ ಬಳಿ ಇವೆ. ಅಂಥಹ ನೋಟುಗಳನ್ನು ವಾಪಾಸ್ ಕೊಟ್ಟರೆ, ಸಾವಿರಾರು ರೂಪಾಯಿ ಸಿಗಲಿದೆ. 

ಈ ರೀತಿಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಸಹಸ್ರಾರು ರೂಪಾಯಿಗಳನ್ನು ಗಳಿಸಬಹುದು.
ಹಾಗಾದರೆ ಇದನ್ನು ಹಿಂದಿರುಗಿಸುವುದು ಹೇಗೆ..?
ನಿಮ್ಮ ಬಳಿ  ದಿನಾಂಕ ವರ್ಷ  ಇಲ್ಲದ 20 ರೂಪಾಯಿ ನೋಟು ಇದ್ದರೆ ನೀವು ಅ ದನ್ನು ಆರ್ ಬಿಐಗೆ ಹಿಂತಿರುಗಿಸಬಹುದು.  ಅದಕ್ಕಾಗಿ ನೀವು Leftovercurreny.comಗೆ ಹೋಗಿ ಲಿಂಕ್ ಓಪನ್ ಮಾಡಬೇಕು. ನಂತರ  ‘Add to Wallet’  ಕ್ಲಿಕ್ ಮಾಡಬೇಕು.  ನೀವು ಎಷ್ಟು ಸಂಖ್ಯೆಯ ನೋಟುಗಳನ್ನು ವಿನಿಮಯ ಮಾಡಲಿದ್ದೀರಿ ಎನ್ನುವುದನ್ನು ನಮೂದಿಸಬೇಕು. ಅಲ್ಲಿ ಎಷ್ಟು ನೋಟುಗಳನ್ನು ವಿನಿಮಯ (Note exchange) ಮಾಡುತ್ತೀರೋ  ಅಷ್ಟೊಂದು ಸಂಖ್ಯೆಯ ದುಡ್ಡು ನಿಮ್ಮ  ವ್ಯಾಲೆಟಿಗೆ ಸೇರುತ್ತಾ ಹೋಗುತ್ತದೆ.  ಈ ವಹಿವಾಟಿನ 5 ದಿನಗಳ ಒಳಗೆ ನಿಮ್ಮ ವ್ಯಾಲೆಟಿಗೆ ದುಡ್ಡು ಸೇರಲಿದೆ. 

ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News