ನವದೆಹಲಿ : ಈ ತಿಂಗಳು ಹಲವು ಕಂಪನಿಗಳು ತಮ್ಮ ವಾಹನಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿವೆ (Car Discount Offers). ಹುಂಡೈ ಕಾರುಗಳಲ್ಲಿ ಅನೇಕ ಉತ್ತಮ ಕೊಡುಗೆಗಳು ಲಭ್ಯವಿದೆ. ಕಂಪನಿಯು ತನ್ನ Centro, Neos, Xcent Prime, Xcent Prime ಮತ್ತು i20 ಮೇಲೆ ರಿಯಾಯಿತಿಯ ಜೊತೆಗೆ ಎಕ್ಸ್ಚೇಂಜ್ ಬೋನಸ್‌ಗಳನ್ನು ಕೂಡಾ ನೀಡುತ್ತಿದೆ (Hyundai Discount Offers).
Hyundai Santro :
ಈ ಕಾರಿನ ಮೇಲೆ ಕಂಪನಿಯು ಅನೇಕ ಕೊಡುಗೆಗಳನ್ನು ನೀಡುತ್ತಿದೆ. ವಿವಿಧ ರೂಪಾಂತರಗಳ ಮೇಲೆ ರಿಯಾಯಿತಿಗಳನ್ನು (Discount)ನೀಡಲಾಗುತ್ತಿದೆ. ಉದಾಹರಣೆಗೆ, Era ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ, 10,000 ರೂ ನಗದು ರಿಯಾಯಿತಿ, 10,000 ರೂ. ವರೆಗೆ ವಿನಿಮಯ ಬೋನಸ್ (Exchange Bonus), 5000 ರೂ. ಕಾರ್ಪೊರೇಟ್ ರಿಯಾಯಿತಿ ಇರುತ್ತದೆ. ಇವೆಲ್ಲವೂ ಸೇರಿದರೆ ಕಾರಿನ ಮೇಲೆ ಸಿಗುವ ರಿಯಾಯಿತಿ 25,000 ರೂ. ವರೆಗೆ ತಲುಪಬಹುದು. CNG ರೂಪಾಂತರದ ಮೇಲೆಯೂ 10,000 ರೂ. ವಿನಿಮಯ ಬೋನಸ್ ಮತ್ತು 5000 ರೂ. ಕಾರ್ಪೊರೇಟ್ ಬೋನಸ್ ಸಿಗುತ್ತಿದೆ. ಅಂದರೆ CNG ರೂಪಾಂತರದ ಮೇಲೆ ಸಿಗುವ ರಿಯಾಯಿತಿ 15,000 ರೂಪಾಯಿಗಳು. ಆಗಿದೆ.
ಇದನ್ನೂ ಓದಿ : Bank Special Offer: ಗೃಹಸಾಲ ತೆಗೆದುಕೊಳ್ಳುವಾಗ EMI ಪಾವತಿಸಬೇಕಾಗಿಲ್ಲ, ಕೊಡುಗೆ ಏನೆಂದು ತಿಳಿಯಿರಿ
Hyundai Grand i10 NIOS :
ಹ್ಯುಂಡೈ ನಿಯೋಸ್‌ನ ರೂಪಾಂತರಗಳ ಬಗ್ಗೆ ಹೇಳುವುದಾದರೆ, ಟರ್ಬೊ ಮೇಲೆ 35000 ರೂ. ನಗದು ರಿಯಾಯಿತಿ, 10,000 ರೂ. ವರೆಗೆ ವಿನಿಮಯ ಬೋನಸ್, 5000 ರೂ. ಕಾರ್ಪೊರೇಟ್ ರಿಯಾಯಿತಿಯನ್ನು (Corporate discount) ಪಡೆಯಬಹುದು. ಈ ರೀತಿಯಲ್ಲಿ ಈ ಕಾರು ಖರೀದಿ ಮೇಲೆ ಸಿಗುವ ಒಟ್ಟು ರಿಯಾಯಿತಿ 50,000 ವರೆಗೆ ತಲುಪಬಹುದು. CNG ಮಾದರಿಯಲ್ಲಿ ಯಾವುದೇ ನಗದು ರಿಯಾಯಿತಿ ಇರುವುದಿಲ್ಲ. ಆದರೆ 10,000 ರೂಪಾಯಿಗಳ ವಿನಿಮಯ ಬೋನಸ್ (Exchange bonus) ಮತ್ತು 5000 ರೂಪಾಯಿಗಳ ಕಾರ್ಪೊರೇಟ್ ಬೋನಸ್ ಲಭ್ಯವಿರಲಿದೆ. ಇತರ ರೂಪಾಂತರಗಳಲ್ಲಿ, ಕಂಪನಿಯು 10,000 ನಗದು ರಿಯಾಯಿತಿ, 10,000 ರೂ. ವರೆಗೆ ವಿನಿಮಯ ಬೋನಸ್, 5000 ರೂ ಕಾರ್ಪೊರೇಟ್ ಬೋನಸ್ ಅನ್ನು ನೀಡುತ್ತಿದೆ.
Hyundai Aura :
ಟರ್ಬೊ ರೂಪಾಂತರದ ಮೇಲೆ 35,000 ರೂ ನಗದು ರಿಯಾಯಿತಿ, 10,000 ರೂ. ವರೆಗೆ ವಿನಿಮಯ ಬೋನಸ್ ಮತ್ತು 5,000 ರೂ ಕಾರ್ಪೊರೇಟ್ ಬೋನಸ್ ಸಿಗುತ್ತಿದೆ (Hyundai Discount Offers). ಅಂದರೆ, ಈ ಕಾರು ಖರೀದಿಸಿದರೆ ಒಟ್ಟು 50,000 ರೂ ಲಾಭವಾಗಲಿದೆ. CNG ರೂಪಾಂತರದಲ್ಲಿ, ಕಂಪನಿಯು 10,000 ರೂಪಾಯಿಗಳ ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ಕಾರ್ಪೊರೇಟ್ ರಿಯಾಯಿತಿಯು 5000 ರೂ ಆಗಿರಲಿದೆ. ಇತರ ರೂಪಾಂತರಗಳ ಮೇಲೆ 10,000 ರೂ. ನಗದು ರಿಯಾಯಿತಿಯನ್ನು ನೀಡಲಾಗುತ್ತಿದ್ದು, 10,000 ರೂ. ವರೆಗೆ ವಿನಿಮಯ ಬೋನಸ್, 5000 ರೂ. ಕಾರ್ಪೊರೇಟ್ ರಿಯಾಯಿತಿಗಳು ಸಿಗಲಿವೆ (Car offers).
ಇದನ್ನೂ ಓದಿ : SBI Offer: SBIತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿದೆ 2 ಲಕ್ಷ ರೂ., ಲಾಭ ಪಡೆಯುವುದು ಹೇಗೆ?
Hyundai i20 Hyundai Xcent Prime :
ಈ ಕಾರಿನ iMT ಟರ್ಬೋ ರೂಪಾಂತರಗಳ ಮೇಲೆ 25,000 ರೂ. ನಗದು ರಿಯಾಯಿತಿ, 10,000 ರೂ ವರೆಗೆ ವಿನಿಮಯ ಬೋನಸ್, ಐಎಂಟಿ ಟರ್ಬೊ ರೂಪಾಂತರದಲ್ಲಿ 5,000 ರೂ ಕಾರ್ಪೊರೇಟ್ ಬೋನಸ್ ನೀಡಲಾಗುತ್ತಿದೆ. ಡೀಸೆಲ್ ರೂಪಾಂತರದ ಮೇಲೆ ಯಾವುದೇ ನಗದು ರಿಯಾಯಿತಿ ಇರುವುದಿಲ್ಲ. ಆದರೆ 10,000 ರೂ.ವರೆಗೆ ವಿನಿಮಯ ಬೋನಸ್, 5,000 ರೂ. ಕಾರ್ಪೊರೇಟ್ ಬೋನಸ್ ಲಭ್ಯವಿದೆ. ಇನ್ನು, ಕಂಪನಿಯು ಹ್ಯುಂಡೈ ಎಕ್ಸ್‌ಸೆಂಟ್ ಪ್ರೈಮ್‌ನ ಟರ್ಬೊ ರೂಪಾಂತರದ ಮೇಲೆ ರಿಯಾಯಿತಿಗಳನ್ನು (Car Discount sale) ನೀಡುತ್ತಿದೆ. ಈ ಕಾರನ್ನು ಖರೀದಿಸುವಾಗ 50,000 ರೂ. ಗಳ ವಿನಿಮಯ ಬೋನಸ್ ಸಿಗಲಿದೆ. ಆದರೆ ಇದರಲ್ಲಿ ನಗದು ರಿಯಾಯಿತಿ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಇರುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.