ಧನತ್ರಯೋದಶಿಗೆ ಚಿನ್ನ ಖರೀದಿಸಬೇಕೆ ? ಇಲ್ಲಿ ಸಿಗುತ್ತದೆ ಬಂಗಾರ ಮತ್ತು ವಜ್ರದ ಆಭರಣಗಳ ಮೇಲೆ ರಿಯಾಯಿತಿ

Gold Diamond Jewellery Offer :ಧನ ತ್ರಯೋದಶಿ ಸಂದರ್ಭದಲ್ಲಿ ಬೆಳ್ಳಿ, ಚಿನ್ನ ಮತ್ತು ವಜ್ರದ ಆಭರಣಗಳ ಖರೀದಿಗೆ ವಿವಿಧ ಆಭರಣ ವ್ಯಾಪಾರಿಗಳು ವಿಶೇಷ  ಆಫರ್ ಗಳನ್ನು ನೀಡುತ್ತಿದ್ದಾರೆ.  

Written by - Ranjitha R K | Last Updated : Nov 10, 2023, 11:52 AM IST
  • ಧನತ್ರಯೋದಶಿಯೊಂದಿಗೆ ದೀಪಾವಳಿ ಹಬ್ಬ ಆರಂಭವಾಗಿದೆ.
  • ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ವಿಶೇಷ ಮಹತ್ವ ಪಡೆದುಕೊಂಡಿದೆ.
  • ಧನತ್ರಯೋದಶಿ ಆಭರಣ ಕೊಡುಗೆಗಳು

Trending Photos

ಧನತ್ರಯೋದಶಿಗೆ ಚಿನ್ನ ಖರೀದಿಸಬೇಕೆ ? ಇಲ್ಲಿ ಸಿಗುತ್ತದೆ ಬಂಗಾರ ಮತ್ತು ವಜ್ರದ ಆಭರಣಗಳ ಮೇಲೆ ರಿಯಾಯಿತಿ title=

Gold Diamond Jewellery Offer : ಧನತ್ರಯೋದಶಿಯೊಂದಿಗೆ ದೀಪಾವಳಿ ಹಬ್ಬ ಆರಂಭವಾಗಿದೆ. ಧನತ್ರಯೋದಶಿ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಈ ಹಬ್ಬವನ್ನು ಲಕ್ಷ್ಮಿ ದೇವಿಯ ಸ್ವಾಗತಕ್ಕಾಗಿ ಆಚರಿಸಲಾಗುತ್ತದೆ. ಈ ದಿನ ಚಿನ್ನ ಅಥವಾ ಬೆಳ್ಳಿ ಆಭರಣಗಳನ್ನು ಖರೀದಿಸುವ ಬಗ್ಗೆ ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಈ ಸಂದರ್ಭದಲ್ಲಿ ಬೆಳ್ಳಿ, ಚಿನ್ನ ಮತ್ತು ವಜ್ರದ ಆಭರಣಗಳ ಖರೀದಿಗೆ ವಿವಿಧ ಆಭರಣ ವ್ಯಾಪಾರಿಗಳು ವಿಶೇಷ  ಆಫರ್ ಗಳನ್ನು ನೀಡುತ್ತಿದ್ದಾರೆ. 

ಧನತ್ರಯೋದಶಿ ಆಭರಣ ಕೊಡುಗೆಗಳು :
ಕಲ್ಯಾಣ್ ಜ್ಯುವೆಲರ್ಸ್:
ಕಲ್ಯಾಣ್ ಜ್ಯುವೆಲ್ಲರ್ಸ್‌ನಿಂದ ವಜ್ರದ ಕಲ್ಲುಗಳ ಮೇಲೆ 20% ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ಎಲ್ಲಾ ಪ್ರಮುಖ ಬ್ಯಾಂಕ್‌ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡುವುದಾದರೆ ಗೆ 3% ತ್ವರಿತ ರಿಯಾಯಿತಿ ನೀಡಲಾಗುತ್ತಿದೆ. 

ಇದನ್ನೂ ಓದಿ : ಈ ಏಳು ಕಾರ್ಡ್ ಬಳಸಿ ಶಾಪಿಂಗ್ ಮಾಡಿದರೆ ಆನ್ಲೈನ್ ಆಫ್ ಲೈನ್ ಎರಡರಲ್ಲೂ ಸಿಗುವುದು ಭರ್ಜರಿ ಕ್ಯಾಶ್ ಬ್ಯಾಕ್

ತ್ರಿಭುವನ್ ದಾಸ್ ಭೀಮ್‌ಜಿ ಜವೇರಿ (TBZ): ಇಲ್ಲಿ ಚಿನ್ನದ ಆಭರಣಗಳ  ಮೇಕಿಂಗ್ ಚಾರ್ಜ್ ನಲ್ಲಿ 50% ರಿಯಾಯಿತಿ ನೀಡಲಾಗುತ್ತಿದೆ. ವಜ್ರದ ಆಭರಣಗಳ ಮೇಲೆ ಯಾವುದೇ ರೀತಿಯ ಮೇಕಿಂಗ್ ಚಾರ್ಜ್ ಇರುವುದಿಲ್ಲ. 

Senco: Senco ಧನತ್ರಯೋದಶಿ ಹಿನ್ನೆಲೆಯಲ್ಲಿ ಶಗುನ್ ಸೇಲ್ ಆಯೋಜಿಸಲಾಗಿದೆ. ಇಲ್ಲಿ ಚಿನ್ನದ ಆಭರಣಗಳ ಮೇಲೆ 30% ವರೆಗೆ ರಿಯಾಯಿತಿ, ಪ್ಲಾಟಿನಂ ಆಭರಣಗಳ ಮೇಲೆ 20% ರಿಯಾಯಿತಿ, 15% ರಿಯಾಯಿತಿ (MRP ಮೇಲೆ) ಮತ್ತು  ಬೆಳ್ಳಿಯ ವಸ್ತುಗಳ ಮೇಲೆ ಹೆಚ್ಚುವರಿ 5% ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ 1 ಗ್ರಾಂ ಚಿನ್ನದ ನಾಣ್ಯವನ್ನು ಗೆಲ್ಲುವ ಅವಕಾಶವೂ ಇದೆ.

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!

ಮೆಲೋರಾ (Melorra): ಇಲ್ಲಿ, ಚಿನ್ನದ ಆಭರಣಗಳ  ಮೇಕಿಂಗ್ ಚಾರ್ಜ್ ಮೇಲೆ ಶೇಕಡಾ 25 ರಷ್ಟು ರಿಯಾಯಿತಿ ಲಭ್ಯವಿದೆ. ಇದಲ್ಲದೇ ವಜ್ರದ ಆಭರಣಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ನೀಡಲಾಗಿದೆ. ಐಸಿಐಸಿಐ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಒನ್‌ಕಾರ್ಡ್‌ನ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡುವುದಾದರೆ 7.5% ಹೆಚ್ಚುವರಿ ರಿಯಾಯಿತಿಯನ್ನು  ಕೂಡಾ  ನೀಡಲಾಗುತ್ತಿದೆ. 

ತನಿಷ್ಕ್: ದೀಪಾವಳಿಯ ಸಂದರ್ಭದಲ್ಲಿ, ಚಿನ್ನ ಮತ್ತು ವಜ್ರದ ಆಭರಣಗಳ  ಮೇಕಿಂಗ್ ಚಾರ್ಜ್ ಮೇಲೆ  ಶೇಕಡಾ 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಇದಲ್ಲದೆ, ಯಾವುದೇ ಆಭರಣಕಾರರಿಂದ ಖರೀದಿಸಿದ ಚಿನ್ನದ ಎಕ್ಸ್ಚೇಂಜ್ ಮೇಲೆ 100 ಪ್ರತಿಶತ ಮೌಲ್ಯ ನೀಡಲಾಗುವುದು. ಎಸ್‌ಬಿಐ ಕಾರ್ಡ್‌ದಾರರು ಕನಿಷ್ಠ 80,000 ರೂ.ಗಳ ಖರೀದಿಗೆ 4,000 ರೂ.ಗಳ ರಿಯಾಯಿತಿಯನ್ನು ಪಡೆಯುತ್ತಾರೆ.

ಇದನ್ನೂ ಓದಿ : ಧನತ್ರಯೋದಶಿಯಂದೇ ಭರ್ಜರಿ ಇಳಿಕೆಯಾಯಿತು ಚಿನ್ನದ ದರ ! ಬೆಳ್ಳಿ ಕೂಡಾ ಬಲು ಅಗ್ಗ

ಕ್ಯಾರೆಟ್ ಲೇನ್ :4,000 ಅಥವಾ ಅದಕ್ಕಿಂತ ಹೆಚ್ಚಿನ ಡೈಮಂಡ್ ಶಾಪಿಂಗ್‌ನಲ್ಲಿ 25% ಉಳಿಸಬಹುದು. SBI ಕಾರ್ಡ್ ಹೊಂದಿರುವವರು ಹೆಚ್ಚುವರಿ 5 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯುತ್ತಾರೆ. ಈ ಕೊಡುಗೆಯು ನವೆಂಬರ್ 12,  2023 ರವರೆಗೆ ಮಾನ್ಯವಾಗಿರುತ್ತದೆ.

ಜೋಯಾಲುಕ್ಕಾಸ್: ವಜ್ರಗಳ ಖರೀದಿಯ ಮೇಲೆ  25 ಪ್ರತಿಶತದಷ್ಟು  ಆಫರ್ ನೀಡಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News