ಈ ರೀತಿ ಸುಲಭವಾಗಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿ, ಅದ್ಭುತ ಪ್ರಯೋಜನಗಳನ್ನು ಪಡೆಯಿರಿ

Aadhaar-Ration Link: ಪಡಿತರ ಚೀಟಿಯಿದ್ದರೆ ಕಡಿಮೆ ಬೆಲೆಗೆ ಪಡಿತರ ಪಡೆಯುವುದು ಸಾಧ್ಯವಾಗುತ್ತದೆ.  ಅಲ್ಲದೆ ಸರ್ಕಾರದ ವತಿಯಿಂದ ನೀಡಲಾಗುವ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Written by - Ranjitha R K | Last Updated : Feb 7, 2022, 01:12 PM IST
  • ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ
  • ಇದು 'ಒನ್ ನೇಷನ್ ಒನ್ ರೇಶನ್ ಕಾರ್ಡ್ ಯೋಜನೆಯ ಲಾಭವನ್ನು ನೀಡುತ್ತದೆ.
  • ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ತಿಳಿಯಿರಿ
ಈ ರೀತಿ ಸುಲಭವಾಗಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡಿ, ಅದ್ಭುತ ಪ್ರಯೋಜನಗಳನ್ನು ಪಡೆಯಿರಿ title=
ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ (file photo)

ನವದೆಹಲಿ :  Aadhaar-Ration Link: ಪಡಿತರ ಚೀಟಿಯಿದ್ದರೆ ಕಡಿಮೆ ಬೆಲೆಗೆ ಪಡಿತರ ಪಡೆಯುವುದು ಸಾಧ್ಯವಾಗುತ್ತದೆ.  ಅಲ್ಲದೆ ಸರ್ಕಾರದ ವತಿಯಿಂದ ನೀಡಲಾಗುವ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಕೇಂದ್ರ ಸರ್ಕಾರ 'ಒನ್ ನೇಷನ್ ಒನ್ ರೇಶನ್ ಕಾರ್ಡ್ ' (one nationa one ration card)ಯೋಜನೆ ಆರಂಭಿಸಿದೆ.  ಈ ಯೋಜನೆ ಅಡಿಯಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಪಡಿತರ ಚೀಟಿ ಇದ್ದರೆ ಸಿಗಲಿದೆ ಅನೇಕ ಪ್ರಯೋಜನ : 
ಈ ಯೋಜನೆಯಡಿ ದೇಶದ ಲಕ್ಷಾಂತರ ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಪಡಿತರ ಚೀಟಿಯಡಿ (Ration Card) ಆಹಾರ ಧಾನ್ಯಗಳ ಜತೆಗೆ ಇನ್ನೂ ಹಲವು ಸೌಲಭ್ಯಗಳು ಸಿಗುತ್ತವೆ.  ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ (Aadhaar-Ration Link) ಮಾಡುವ ಮೂಲಕ ನೀವು 'ಒನ್ ನೇಷನ್ ಒನ್ ರೇಷನ್ ಕಾರ್ಡ್' (one nationa one ration card) ಯೋಜನೆಯ ಲಾಭವನ್ನು ಪಡೆಯಬಹುದು. ಇದರೊಂದಿಗೆ ದೇಶದ ಯಾವುದೇ ರಾಜ್ಯದ ಪಡಿತರ ಚೀಟಿ ಅಂಗಡಿಯಿಂದ ಪಡಿತರವನ್ನು ಪಡೆಯಬಹುದು. 

ಇದನ್ನೂ ಓದಿ : ಫೆಬ್ರವರಿ ಅಂತ್ಯದೊಳಗೆ ಈ ಕೆಲಸ ಮಾಡಿ ಮುಗಿಸದಿದ್ದರೆ ನಿಂತೇ ಹೋಗುತ್ತದೆ ಪಿಂಚಣಿ

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅನ್ನು ಈ ರೀತಿ ಲಿಂಕ್ ಮಾಡಿ :
1. ಇದಕ್ಕಾಗಿ, ಮೊದಲು ಅಧಿಕೃತ ವೆಬ್‌ಸೈಟ್ uidai.gov.in ಗೆ ಹೋಗಿ.
2. ಈಗ ನೀವು 'Start Now' ಮೇಲೆ ಕ್ಲಿಕ್ ಮಾಡಿ.
3. ಈಗ ಇಲ್ಲಿ  ಜಿಲ್ಲೆಯ ರಾಜ್ಯದೊಂದಿಗೆ  ವಿಳಾಸವನ್ನು ಭಾರ್ತಿ ಮಾಡಬೇಕು .
4. ಇದರ ನಂತರ 'Ration Card Benefit'ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
5. ಈಗ ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ (Aadhaara card number), ರೇಷನ್ ಕಾರ್ಡ್ ಸಂಖ್ಯೆ, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಭರ್ತಿ ಮಾಡಿ. 
6. ಅದನ್ನು ಭರ್ತಿ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
7. ಇಲ್ಲಿ OTP ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ಸ್ಕ್ರೀನ್ ಮೇಲೆ ಪ್ರಕ್ರಿಯೆ ಪೂರ್ಣಗೊಂಡ ಸಂದೇಶವನ್ನು ಕಾಣಬಹುದು. 
8. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ, ನಿಮ್ಮ ಆಧಾರ್ (Aadhaar) ಅನ್ನು ಪರಿಶೀಲಿಸಲಾಗುತ್ತದೆ ಮತ್ತು ನಿಮ್ಮ ಆಧಾರ್ ಅನ್ನು ನಿಮ್ಮ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲಾಗುತ್ತದೆ.

ಇದನ್ನೂ ಓದಿ :  PAN Card: 18 ವರ್ಷದೊಳಗಿನವರೂ ಪ್ಯಾನ್ ಕಾರ್ಡ್ ಪಡೆಯಬಹುದು! ಇಲ್ಲಿದೆ ಸುಲಭವಾದ ಪ್ರಕ್ರಿಯೆ

ಆಫ್‌ಲೈನ್‌ನಲ್ಲಿಯೂ ಲಿಂಕ್ ಮಾಡಬಹುದು  :
ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು, ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಬೇಕು. ಆಧಾರ್ ಕಾರ್ಡ್‌ನ ನಕಲು, ಪಡಿತರ ಚೀಟಿಯ ಪ್ರತಿ ಮತ್ತು ಪಡಿತರ ಚೀಟಿದಾರರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಪಡಿತರ ಕೇಂದ್ರದಲ್ಲಿ ಸಲ್ಲಿಸಬೇಕು. ಇದಲ್ಲದೆ, ನಿಮ್ಮ ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಡೇಟಾ ಪರಿಶೀಲನೆಯನ್ನು ಸಹ ಪಡಿತರ ಕೇಂದ್ರದಲ್ಲಿ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News