LPG Subsidy: ನಿಮಗೂ ಎಲ್‌ಪಿಜಿ ಸಬ್ಸಿಡಿ ಸಿಗುತ್ತಿಲ್ಲವೇ? ಖಾತೆಯಲ್ಲಿ ಹಣ ಪಡೆಯಲು ಇಂದೇ ಈ ಕೆಲಸ ಮಾಡಿ

LPG Subsidy: ಎಲ್‌ಪಿಜಿ ಸಿಲಿಂಡರ್ ಖರೀದಿಯ ಮೇಲೆ ಸರ್ಕಾರವು ಸಬ್ಸಿಡಿಯನ್ನು ಜನರ ಖಾತೆಗೆ ವರ್ಗಾಯಿಸುತ್ತದೆ. ನಿಮ್ಮ ಖಾತೆಗೆ ಸರ್ಕಾರದ ಸಬ್ಸಿಡಿ ಬರದಿದ್ದರೆ, ಸಬ್ಸಿಡಿ ಹೇಗೆ ಪಡೆಯುವುದು ಎಂದು ತಿಳಿಯಿರಿ.   

Written by - Yashaswini V | Last Updated : Dec 21, 2021, 10:05 AM IST
  • ಎಲ್‌ಪಿಜಿ ಸಿಲಿಂಡರ್ ಖರೀದಿಯ ಖಾತೆಯಲ್ಲಿ ಸಬ್ಸಿಡಿ ಲಭ್ಯವಿದೆ
  • ಸಬ್ಸಿಡಿ ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಸುಲಭವಾಗಿ ಪರಿಶೀಲಿಸಬಹುದು
  • 10 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಸಬ್ಸಿಡಿ ಸಿಗುವುದಿಲ್ಲ
LPG Subsidy: ನಿಮಗೂ ಎಲ್‌ಪಿಜಿ ಸಬ್ಸಿಡಿ ಸಿಗುತ್ತಿಲ್ಲವೇ? ಖಾತೆಯಲ್ಲಿ ಹಣ ಪಡೆಯಲು ಇಂದೇ ಈ ಕೆಲಸ ಮಾಡಿ  title=
How to get LPG Subsidy

LPG Subsidy: ಎಲ್‌ಪಿಜಿ ಸಿಲಿಂಡರ್‌ಗಳು ಹೆಚ್ಚು ದುಬಾರಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಬ್ಸಿಡಿಯಿಂದಾಗಿ ಜನ ಸಾಮಾನ್ಯರಿಗೆ ಸಿಲಿಂಡರ್ ಹಣದುಬ್ಬರದಿಂದ ಕೊಂಚ ನಿರಾಳವಾಗಿದೆ.  ನೀವೂ  ಸಹ ಎಲ್‌ಪಿಜಿ ಸಿಲಿಂಡರ್ ಖರೀದಿಸಿ ನಿಮ್ಮ ಖಾತೆಗೆ ಸಬ್ಸಿಡಿ ಬಂದಿಲ್ಲ ಎಂದಾದಲ್ಲಿ ನಿಮಗೊಂದು ಮಹತ್ವದ ಸುದ್ದಿಯಿದೆ. ನೀವು ಸಬ್ಸಿಡಿ ಪಡೆಯುತ್ತಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. 

ನೀವು ಸಬ್ಸಿಡಿ ಪಡೆಯದಿದ್ದರೆ, ನೀವು ಈ ವ್ಯಾಪ್ತಿಗೆ ಬರದಿರುವುದು ಕಾರಣವಾಗಿರಬಹುದು. ಸರಿ, ಎಲ್‌ಪಿಜಿ ಸಿಲಿಂಡರ್‌ನ  ಸಬ್ಸಿಡಿ (LPG Cylinder Subsidy) ನಿಮ್ಮ ಖಾತೆಗೆ ಹೋಗುತ್ತಿದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಕಂಡುಹಿಡಿಯುವ ಮಾರ್ಗವೇನು? ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ ಅಥವಾ ಯಾರನ್ನೂ ಕೇಳಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ನೀವು ಕುಳಿತಲ್ಲಿಯೇ ಈ ಕೆಲಸವನ್ನು ಮಾಡಬಹುದು. ಈ ವಿಧಾನವು ತುಂಬಾ ಸುಲಭ.

ಇದನ್ನೂ ಓದಿ- Electricity: ವಿದ್ಯುತ್ ಬಿಲ್ ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಟಿಪ್ಸ್

ಸಬ್ಸಿಡಿ ಪರಿಶೀಲಿಸಲು ಇಲ್ಲಿದೆ ಸಂಪೂರ್ಣ ಪ್ರಕ್ರಿಯೆ: 
1- ಮೊದಲನೆಯದಾಗಿ www.mylpg.in ವೆಬ್‌ಸೈಟ್‌ಗೆ ಭೇಟಿ ನೀಡಿ
2. ಇದರ ನಂತರ ನೀವು ಬಲಭಾಗದಲ್ಲಿ ಮೂರು ಕಂಪನಿಗಳ ಗ್ಯಾಸ್ ಸಿಲಿಂಡರ್‌ನ ಫೋಟೋವನ್ನು ನೋಡುತ್ತೀರಿ.
3- ನಿಮ್ಮ ಸೇವಾ ಪೂರೈಕೆದಾರರ ಗ್ಯಾಸ್ ಸಿಲಿಂಡರ್‌ನ (Gas Cylinder) ಫೋಟೋವನ್ನು ಕ್ಲಿಕ್ ಮಾಡಿ.
4. ಇದರ ನಂತರ ಹೊಸ ವಿಂಡೋ ತೆರೆದುಕೊಳ್ಳುತ್ತದೆ ಅದರಲ್ಲಿ ನಿಮ್ಮ ಗ್ಯಾಸ್ ಸರ್ವೀಸ್ ಪ್ರೊವೈಡರ್ ನ ಮಾಹಿತಿ ಇರುತ್ತದೆ.
5- ಮೇಲಿನ ಬಲಭಾಗದಲ್ಲಿ ಸೈನ್-ಇನ್ ಮತ್ತು ಹೊಸ ಬಳಕೆದಾರರ ಆಯ್ಕೆ ಇರುತ್ತದೆ, ಅದನ್ನು ಆಯ್ಕೆಮಾಡಿ.
6. ನಿಮ್ಮ ಐಡಿಯನ್ನು ಈಗಾಗಲೇ ರಚಿಸಿದ್ದರೆ ನೀವು ಸೈನ್-ಇನ್ ಮಾಡಬೇಕು.
7-ಐಡಿ ಇಲ್ಲದಿದ್ದರೆ ನೀವು ಹೊಸ ಬಳಕೆದಾರರ ಆಯ್ಕೆಯನ್ನು ಆಯ್ಕೆ ಮಾಡಬೇಕು.
8. ಇದರ ನಂತರ, ತೆರೆಯುವ ವಿಂಡೋದಲ್ಲಿ, ಸಿಲಿಂಡರ್ ಬುಕಿಂಗ್ ಇತಿಹಾಸವನ್ನು ವೀಕ್ಷಿಸಿ ಎಂಬ ಆಯ್ಕೆಯು ಬಲಭಾಗದಲ್ಲಿ ಇರುತ್ತದೆ, ಅದನ್ನು ಆಯ್ಕೆಮಾಡಿ.
9- ನೀವು ಸಬ್ಸಿಡಿ ಪಡೆಯುತ್ತಿದ್ದೀರಾ ಅಥವಾ ಇಲ್ಲವೇ ಎಂಬುದು ನಿಮಗೆ ತಿಳಿಯುತ್ತದೆ.
10- ಸಬ್ಸಿಡಿ ಸಿಗದಿದ್ದರೆ 18002333555 ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು. 

ಇದನ್ನೂ ಓದಿ-  Free Seat, Free Food Offer: ಉಚಿತ ವಿಮಾನ ಪ್ರಯಾಣಕ್ಕೆ ಇಲ್ಲಿದೆ ಸುವರ್ಣಾವಕಾಶ, ಉಚಿತ ಪ್ರವಾಸದ ಜೊತೆಗೆ ಉಚಿತ ಊಟ !

ಈ ಕಾರಣಗಳಿಂದಾಗಿ ಸಬ್ಸಿಡಿ ನಿಲ್ಲಬಹುದು:
LPG ಸಿಲಿಂಡರ್‌ಗಳ ಮೇಲೆ ಸರ್ಕಾರವು ಅನೇಕ ಜನರಿಗೆ ಸಬ್ಸಿಡಿ ನೀಡುವುದಿಲ್ಲ, ಇದಕ್ಕೆ ಕಾರಣ ನಿಮ್ಮ ಆಧಾರ್ ಲಿಂಕ್ ಆಗಿರಬಹುದು. ಎರಡನೆಯ ವಿಷಯ ಏನೆಂದರೆ, ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಇದ್ದರೆ, ಸರ್ಕಾರವು ಅವರನ್ನು ಸಬ್ಸಿಡಿ ವ್ಯಾಪ್ತಿಯಿಂದ ಹೊರಗಿಡುತ್ತದೆ, ಅಂದರೆ ಸಬ್ಸಿಡಿ ನೀಡಲಾಗುವುದಿಲ್ಲ, ಆದ್ದರಿಂದ ನಿಮ್ಮ ಆದಾಯ 10 ಲಕ್ಷಕ್ಕಿಂತ ಕಡಿಮೆಯಿದ್ದರೆ ನೀವು ಅರ್ಜಿ ಸಲ್ಲಿಸಬಹುದು.ಆದರೆ ನೆನಪಿಡಿ, ನಿಮ್ಮ ಆದಾಯ 10 ಲಕ್ಷಕ್ಕಿಂತ ಕಡಿಮೆಯಿದ್ದರೂ ನಿಮ್ಮ ಹೆಂಡತಿ ಅಥವಾ ಪತಿ ಕೂಡ ಸಂಪಾದಿಸುತ್ತಿದ್ದು ಇಬ್ಬರ ಆದಾಯವೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿದ್ದರೂ ಸಹ ಸಬ್ಸಿಡಿ ಲಭ್ಯವಿರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News