ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಉಳಿಸಿಕೊಂಡಿರಬಹುದು ? ನೀವು ತಿಳಿದುಕೊಳ್ಳಲೇ ಬೇಕಾಗಿರುವ ಮಾಹಿತಿ

ಉಳಿತಾಯ ಖಾತೆಯಲ್ಲಿ ಜನರು ತಮ್ಮ ಉಳಿತಾಯದ ಹಣವನ್ನು ಇರಿಸಬಹುದು. ಆದರೆ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡಬಹುದು ಎನ್ನುವ ಪ್ರಶ್ನೆ ಎದುರಾಗುವುದು ಸಹಜ. 

Written by - Ranjitha R K | Last Updated : Jul 5, 2023, 03:15 PM IST
  • ಬ್ಯಾಂಕ್ ಖಾತೆಯ ಮೂಲಕ ಹಣಕಾಸಿನ ವಹಿವಾಟು ಮಾಡುವುದು ಸುಲಭ.
  • ಬ್ಯಾಂಕ್ ಖಾತೆಯಲ್ಲಿಯೂ ಅನೇಕ ವಿಧಗಳಿವೆ.
  • ಈ ವಿಚಾರದ ಬಗ್ಗೆ ಕಾಳಜಿ ಅಗತ್ಯ
ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಉಳಿಸಿಕೊಂಡಿರಬಹುದು ? ನೀವು ತಿಳಿದುಕೊಳ್ಳಲೇ ಬೇಕಾಗಿರುವ ಮಾಹಿತಿ   title=

ಬೆಂಗಳೂರು : ಇಂದಿನ ಯುಗದಲ್ಲಿ ಬ್ಯಾಂಕ್ ಖಾತೆ ಹೊಂದುವುದು ಬಹಳ ಮುಖ್ಯ. ಬ್ಯಾಂಕ್ ಖಾತೆಯ ಮೂಲಕ ಹಣಕಾಸಿನ ವಹಿವಾಟು ಮಾಡುವುದು ಸುಲಭ. ಬ್ಯಾಂಕ್ ಖಾತೆಯಲ್ಲಿಯೂ ಅನೇಕ ವಿಧಗಳಿವೆ.  ಉಳಿತಾಯ ಖಾತೆ, ಚಾಲ್ತಿ ಖಾತೆ ಮತ್ತು ವೇತನ  ಖಾತೆಯನ್ನು ಜನ ಸಾಮಾನ್ಯರು ತೆರೆಯಬಹುದು. ಬೇರೆ ಬೇರೆ ಖಾತೆಗಳು ಬೇರೆ ಬೇರೆ   ಪ್ರಯೋಜನಗಳನ್ನು ಹೊಂದಿವೆ. ಆದರೆ, ಉಳಿತಾಯ ಖಾತೆಯಲ್ಲಿ ಜನರು ಎಷ್ಟು ಹಣವನ್ನು ಉಳಿಸಿಕೊಂಡಿರಬಹುದು ಎನ್ನುವ ಮಾಹಿತಿ ನಿಮಗಿದೆಯೇ? ಇಡಬಹುದು ಎಂದು ನಿಮಗೆ ತಿಳಿದಿದೆಯೇ?

ಈ ವಿಚಾರದ ಬಗ್ಗೆ ಕಾಳಜಿ ಅಗತ್ಯ : 
ಸಾಮಾನ್ಯವಾಗಿ ಜನರು ಬಹಳಷ್ಟು ವಹಿವಾಟುಗಳನ್ನು ನಡೆಸುತ್ತಾರೆ. ಈ ವಹಿವಾಟುಗಳನ್ನು ಉಳಿತಾಯ ಖಾತೆ ಮೂಲಕವೇ ಮಾಡಲಾಗುತ್ತದೆ. ಉಳಿತಾಯ ಖಾತೆಯಲ್ಲಿ ಜನರು ತಮ್ಮ ಉಳಿತಾಯದ ಹಣವನ್ನು  ಇರಿಸಬಹುದು. ಆದರೆ, ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡಬಹುದು ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಉಳಿತಾಯ ಖಾತೆಯಲ್ಲಿ ಇಷ್ಟೇ ಹಣ ಇಡಬೇಕು ಎನ್ನುವ ಮಿತಿ ಇಲ್ಲ. ಉಳಿತಾಯ ಖಾತೆಯಲ್ಲಿ ಎಷ್ಟು ಬೇಕಾದರೂ ಹಣ ಇಟ್ಟುಕೊಳ್ಳಬಹುದು. ಆದರೆ ಇಲ್ಲಿ ಕಾಳಜಿ ವಹಿಸಬೇಕಾದ ಒಂದು ವಿಷಯವಿದೆ. ಅದೇನೆಂದರೆ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಿದ ಹಣವು ಐಟಿಆರ್ ವ್ಯಾಪ್ತಿಯಲ್ಲಿ ಬಂದರೆ,  ಅದರ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ : ಹಿಂದೆಂದೂ ಕಾಣದ ಇಳಿಕೆ ಕಂಡ ಚಿನ್ನದ ಬೆಲೆ ! ಬಂಗಾರ - 3,500, ಬೆಳ್ಳಿ 8 ಸಾವಿರದಷ್ಟು ಕುಸಿತ

ನಿಯಮಿತ ಮಿತಿಯನ್ನು ತಿಳಿದುಕೊಳ್ಳುವುದು ಮುಖ್ಯ :
ಆದಾಯ ತೆರಿಗೆ ಇಲಾಖೆಯ ವ್ಯಾಪ್ತಿಗೆ ಬರುವುದನ್ನು ತಡೆಯಲು ಎಲ್ಲರೂ ಸಾಮಾನ್ಯವಾಗಿ ಬಯಸುತ್ತಾರೆ. ಐಟಿ ಇಲಾಖೆಯ ಮೂಲಕ ನಗದು ಠೇವಣಿಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಅನಗತ್ಯ ತೊಂದರೆಗಳನ್ನು ತಪ್ಪಿಸಲು ನಿಯಮಿತ ಮಿತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಯಾವುದೇ ಬ್ಯಾಂಕ್ ಹಣಕಾಸು ವರ್ಷದಲ್ಲಿ 10 ಲಕ್ಷ ರೂ.ಗಿಂತ ಹೆಚ್ಚಿನ ನಗದು ಠೇವಣಿಗಳ ಬಗ್ಗೆ ವರದಿ ಮಾಡುವುದನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಕಡ್ಡಾಯಗೊಳಿಸಿದೆ. ಎಫ್‌ಡಿಗಳಲ್ಲಿ ನಗದು ಠೇವಣಿ, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮತ್ತು ಟ್ರಾವೆಲರ್ಸ್ ಚೆಕ್‌ಗಳು, ಫಾರೆಕ್ಸ್ ಕಾರ್ಡ್‌ಗಳಂತಹ ವಿದೇಶಿ ಕರೆನ್ಸಿಗಳ ಖರೀದಿಗೆ 10 ಲಕ್ಷ ರೂಪಾಯಿಗಳ ಅದೇ ಮಿತಿ ಅನ್ವಯಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡುವಾಗಲೂ ಇದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯಕ.

ಉಳಿತಾಯ ಖಾತೆಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ : 
ಮತ್ತೊಂದೆಡೆ, ಉಳಿತಾಯ ಖಾತೆಗಳಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ತೆರಿಗೆಯು ಹೆಚ್ಚಿನ ಆದಾಯದ ಮೇಲೂ ಆಗಿರಬಹುದು ಮತ್ತು ನೀವು ಬ್ಯಾಂಕಿನಿಂದ ಪಡೆಯುವ ಬಡ್ಡಿಯ ಮೇಲೂ ಆಗಿರಬಹುದು. ಬ್ಯಾಂಕ್ ನಿಗದಿತ ಅವಧಿಯಲ್ಲಿ ಹಣವನ್ನು ಠೇವಣಿ ಮಾಡಲು ನಿಗದಿತ ಶೇಕಡಾವಾರು ಬಡ್ಡಿಯನ್ನು ನೀಡುತ್ತದೆ. 

ಇದನ್ನೂ ಓದಿ : ಇನ್ವಿಕ್ಟೊ ಕಾರ ಬಿಡುಗಡೆ ಮಾಡಿದ ಮಾರುತಿ ಸುಜುಕಿ 

ಬ್ಯಾಂಕ್‌ನಿಂದ ನೀವು ಪಡೆಯುವ ಬಡ್ಡಿಯನ್ನು ನಿಮ್ಮ ಐಟಿಆರ್‌ಗೆ ಡಿವಿಡೆಂಡ್‌ಗಳು ಮತ್ತು ಲಾಭಗಳ ಆದಾಯದ ಅಡಿಯಲ್ಲಿ ಸೇರಿಸಲಾಗುತ್ತದೆ. ಹೀಗಾಗಿ ತೆರಿಗೆ ವಿಧಿಸಲಾಗುತ್ತದೆ. ಆದರೆ, ಇದಕ್ಕೆ 10,000 ರೂ.ಗಳ ಮಿತಿ ಇದೆ. ಯಾವುದೇ ತೆರಿಗೆಗೆ ಅರ್ಹತೆ ಪಡೆಯಲು ಹಣಕಾಸು ವರ್ಷದಲ್ಲಿ ಬ್ಯಾಂಕ್ ಠೇವಣಿಗಳಿಂದ ಗಳಿಸಿದ ಬಡ್ಡಿಯು 10,000 ರೂ. ಮೀರಿರಬೇಕು. ನೀವು ಪಡೆಯುವ ಬಡ್ಡಿಯು 10000 ರೂ.ಗಿಂತ ಹೆಚ್ಚಿದ್ದರೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80TTA ಅಡಿಯಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News