Honda 2-Wheelers: ಹಲವು ಅಗ್ಗದ ಬೆಲೆಯ ದ್ವಿಚಕ್ರ ವಾಹನಗಳ ಬಿಡುಗಡೆಗೆ Honda ಸಿದ್ಧತೆ, Hero ಪ್ರಾಬಲ್ಯಕ್ಕೆ ತೀವ್ರ ಪೈಪೋಟಿಗೆ ಸಿದ್ಧತೆ

Low Budget Bikes - ಕೈಗೆಟುಕುವ ಬೆಲೆಯ ಬೈಕ್ ವಿಭಾಗದಲ್ಲಿ ಹೀರೋ ಪ್ರಾಬಲ್ಯವನ್ನು ಕಡಿಮೆ ಮಾಡಲು, Honda Two-Wheelers  ಮಾರುಕಟ್ಟೆಯಲ್ಲಿ ಅನೇಕ ಕೈಗೆಟುಕುವ ಬೆಲೆಯ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಪ್ರಸ್ತುತ CD110 ನೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.  

Written by - Nitin Tabib | Last Updated : Feb 19, 2022, 02:47 PM IST
  • ಕೈಗೆಟಗುವ ದರದಲ್ಲಿ ಬೈಕ್ ಗಳ ಬಿಡುಗಡೆಗೆ ಹೊಂಡಾ ಸಿದ್ಧತೆ.
  • Hero MotoCorpಗೆ ತೀವ್ರ ಪೈಪೋಟಿ ನೀಡಲು ಸಿದ್ಧತೆ.
  • 75-110 ಸಿಸಿ ಸೆಗ್ಮೆಂಟ್ ನಲ್ಲಿ ಈ ಬೈಕ್ ಗಳು ಇರಲಿವೆ.
Honda 2-Wheelers: ಹಲವು ಅಗ್ಗದ ಬೆಲೆಯ ದ್ವಿಚಕ್ರ ವಾಹನಗಳ ಬಿಡುಗಡೆಗೆ Honda ಸಿದ್ಧತೆ, Hero ಪ್ರಾಬಲ್ಯಕ್ಕೆ ತೀವ್ರ ಪೈಪೋಟಿಗೆ ಸಿದ್ಧತೆ title=
Low Budget Bikes (File Photo)

ನವದೆಹಲಿ: Affordable Bikes - ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಭಾರತೀಯ ಮಾರುಕಟ್ಟೆಯ ಸ್ಕೂಟರ್ ವಿಭಾಗದಲ್ಲಿ ಹೋಂಡಾ ಆಕ್ಟಿವಾದೊಂದಿಗೆ ಪ್ರಬಲವಾದ ಹೆಜ್ಜೆ ಇಟ್ಟ ನಂತರ ಮೋಟಾರ್‌ಸೈಕಲ್ ವಿಭಾಗದಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಹೀರೊ ಮೋಟೊಕಾರ್ಪ್‌ಗೆ ಪೈಪೋಟಿ ನೀಡಲು ಈ ಹೊಸ ಬೈಕ್‌ಗಳನ್ನು ವಿಶೇಷವಾಗಿ ಬಿಡುಗಡೆ ಮಾಡಲಾಗುತ್ತಿದೆ. ಕಂಪನಿಯು ಹೊಸ ಪ್ರವೇಶ ಮಟ್ಟದ ವಾಹನಗಳನ್ನು ಹೊರತರಲು ಅಧ್ಯಯನವನ್ನು ನಡೆಸಿದೆ. ಇದುವರೆಗೆ ಕಂಪನಿಯು CD110 ನೊಂದಿಗೆ ಮಾತ್ರ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಹೊಂದಿದೆ. ಕಂಪನಿಯು 150 ಸಿಸಿ ವಿಭಾಗದಲ್ಲಿಯೂ ಕೂಡ ಬೈಕ್‌ಗಳನ್ನು ಬಿಡುಗಡೆ ಮಾಡಲು ಚಿಂತಿಸುತ್ತಿದೆ, ಏಕೆಂದರೆ ಈ ಸೆಗ್ಮೆಂಟ್ ನಲ್ಲಿ ಗ್ರಾಹಕರು ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-Petrol Price Today : ಗರಿಷ್ಠ ಮಟ್ಟದಲ್ಲಿ ತೈಲ ಬೆಲೆ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ!

ಕಂಪನಿಯು ಅಗ್ಗದ ಬೈಕ್‌ಗಳನ್ನು ತರಲಿದೆ (Automobile News In Kannada)
ಈ ಕುರಿತು ಮಾತನಾತಿರುವ HMSI ಅಧ್ಯಕ್ಷ ಅಸುಶಿ ಒಗಾಟಾ, “ನಿಸ್ಸಂಶಯವಾಗಿ ನಾವು CD110 ನಂತಹ ಅಗ್ಗದ ಮೋಟಾರ್‌ಸೈಕಲ್ ಅನ್ನು ಹೊಂದಿದ್ದೇವೆ, ಆದರೆ ನಮಗಿರುವ ಸ್ಪರ್ಧೆಗೆ ನಾವು ಅದನ್ನು ಹೋಲಿಸಿದರೆ ನಾವು ತುಂಬಾ ದುರ್ಬಲರಾಗಿದ್ದೇವೆ. ಇದರರ್ಥ ನಾವು ಈ ರೀತಿಯ ಗ್ರಾಹಕರ ಬೇಡಿಕೆಯನ್ನು ಎಂದಿಗೂ ಪೂರೈಸಿಲ್ಲ. ಹಾಗಾಗಿ ಕೈಗೆಟುಕುವ ಬೈಕ್‌ಗಳ ವಿಭಾಗವು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸಿದ್ದೇವೆ. ಈ ನಿಟ್ಟಿನಲ್ಲಿ ಅಧ್ಯಯನ ಪೂರ್ಣಗೊಂಡಿದ್ದು, ಈಗ ನಾವು ಕೈಗೆಟುಕುವ ವಿಭಾಗದಲ್ಲಿ ಹೊಸ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಿದ್ದೇವೆ" ಎಂದಿದ್ದಾರೆ.

ಇದನ್ನೂ ಓದಿ-SBI Scheme : SBI ಖಾತೆದಾರರಿಗೆ ಸಿಹಿಸುದ್ದಿ! ಬರೀ ₹342 ಹೂಡಿಕೆ ಮಾಡಿ, ₹4 ಲಕ್ಷ ಲಾಭ ಪಡೆಯಿರಿ!

ಹೀರೋ ಮೋಟೋಕಾರ್ಪ್‌ನ ಪ್ರಬಲ ಹಿಡಿತ
ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಒಟ್ಟು 42 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಈ ಪೈಕಿ ಶೇ.56 ರಷ್ಟು 75-110 ಸಿಸಿ ವಿಭಾಗದಲ್ಲಿವೆ. ಈ ವಿಭಾಗದಲ್ಲಿ Hero MotoCorp ನ ಭಾಗವಹಿಸುವಿಕೆ ಅದ್ಭುತವಾಗಿದೆ ಮತ್ತು ಪ್ರತಿ ನಾಲ್ಕು ಮೋಟಾರ್‌ಸೈಕಲ್‌ಗಳಲ್ಲಿ ಮೂರು ಹೀರೋ ಒಡೆತನದಲ್ಲಿದೆ. HMSI ಪ್ರಸ್ತುತ ಈ ವಿಭಾಗದಲ್ಲಿ ಕೇವಲ ಶೇ. 3.6 ರಷ್ಟು ಪಾಲನ್ನು ಹೊಂದಿದೆ. ಆದರೆ, ಜಪಾನ್‌ನ ಈ ದ್ವಿಚಕ್ರ ವಾಹನ ತಯಾರಕ ಕಂಪನಿ 110-125 ಸಿಸಿ ವಿಭಾಗದಲ್ಲಿ ಉತ್ತಮ ಹಿಡಿತವನ್ನು ಹೊಂದಿದೆ, 2022 ರ ಹಣಕಾಸು ವರ್ಷದಲ್ಲಿ ಏಪ್ರಿಲ್ ಮತ್ತು ಜನವರಿ ನಡುವೆ ಕಂಪನಿಯು ಈ ವಿಭಾಗದಲ್ಲಿ ಸುಮಾರು 9.25 ಲಕ್ಷ ಬೈಕ್‌ಗಳನ್ನು ಮಾರಾಟ ಮಾಡಿದೆ. ಈ ವಿಭಾಗದಲ್ಲಿಯೂ ಕೂಡ Hero MotoCorp ಪ್ರಾಬಲ್ಯ ಹೊಂದಿದ್ದು, ಕಂಪನಿಯು ಶೇ.48 ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿದೆ.

ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಹೋಳಿಗೆ ಡಬಲ್ ಧಮಾಕ : 18 ತಿಂಗಳ DA ಬಾಕಿ ಬಿಗ್ ಅಪ್‌ಡೇಟ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News