ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ

Ration Card Rules: ಹೊಸದಾಗಿ ಮದುವೆಯಾದ ಪುರುಷರು ತಮ್ಮ ಹೆಂಡತಿಯ ಹೆಸರನ್ನು ಮತ್ತು ಭವಿಷ್ಯದಲ್ಲಿ ತಮ್ಮ ಮಕ್ಕಳ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ, ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳಿಂದ ನೀವು ವಂಚಿತರಾಗಬಹುದು. ಇದನ್ನು ತಪ್ಪಿಸಲು ಪಡಿತರ ಚೀಟಿಯಲ್ಲಿ ಮನೆಯ ಹೊಸ ಸದಸ್ಯರ ಹೆಸರನ್ನು ನೋಂದಾಯಿಸುವುದು ಹೇಗೆ ಎಂದು ತಿಳಿಯಿರಿ.

Written by - Yashaswini V | Last Updated : Jan 24, 2023, 09:00 AM IST
  • ನವ ವಿವಾಹಿತರು ತಮ್ಮ ಕುಟುಂಬಕ್ಕೆ ಬರುವ ಹೊಸ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವುದು ಅತ್ಯಗತ್ಯ.
  • ಮಾತ್ರವಲ್ಲ, ಮಗು ಜನಿಸಿದ ಬಳಿಕ ಮಗುವಿನ ಹೆಸರನ್ನೂ ಕೂಡ ಪಡಿತರ ಚೀಟಿಯಲ್ಲಿ ನೋಂದಾಯಿಸುವುದು ಬಹಳ ಮುಖ್ಯವಾಗಿದೆ.
  • ಇದರಿಂದ ಯಾವುದೇ ಅಡೆತಡೆ ಇಲ್ಲದೆಯೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.
ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ  title=
Ration Card Rules

Ration Card Rules: ರೇಷನ್ ಕಾರ್ಡ್ ಒಂದು ಪ್ರಮುಖ ದಾಖಲೆ. ಇದರಲ್ಲಿ ಮನೆಯ ಹೊಸ ಸದಸ್ಯರ ಹೆಸರನ್ನು ಸೇರಿವುದು ಬಹಳ ಅಗತ್ಯ. ಉದಾಹರಣೆಗೆ ನವ ವಿವಾಹಿತರು ತಮ್ಮ ಕುಟುಂಬಕ್ಕೆ ಬರುವ ಹೊಸ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವುದು ಅತ್ಯಗತ್ಯ. ಮಾತ್ರವಲ್ಲ, ಮಗು ಜನಿಸಿದ ಬಳಿಕ ಮಗುವಿನ ಹೆಸರನ್ನೂ ಕೂಡ ಪಡಿತರ ಚೀಟಿಯಲ್ಲಿ ನೋಂದಾಯಿಸುವುದು ಬಹಳ ಮುಖ್ಯವಾಗಿದೆ. ಇದರಿಂದ ಯಾವುದೇ ಅಡೆತಡೆ ಇಲ್ಲದೆಯೇ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪಡಿತರ ಚೀಟಿಯಲ್ಲಿ ಕುಟುಂಬದ ಯಾವುದೇ ಸದಸ್ಯರ ಹೆಸರನ್ನು ನವೀಕರಿಸುವ ಬಗ್ಗೆ ನೀವು ಮಾಹಿತಿಯನ್ನು ಹೊಂದಿರಬೇಕು. 

ರೇಷನ್ ಕಾರ್ಡ್‌ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸುವ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ:
ನೀವು ನವ ವಿವಾಹಿತರಾಗಿದ್ದರೆ ನಿಮ್ಮ ಮಡದಿಯ ಹೆಸರನ್ನು ಪಡಿತರ ಚೀಟಿಯಲ್ಲಿ ಸೇರಿಸುವುದು ಹೇಗೆ ಎಂದು ತಿಳಿಯಿರಿ...
* ನೀವು ನವ ವಿವಾಹಿತರಾಗಿದ್ದರೆ, ಮೊದಲು ನಿಮ್ಮ ಹೆಂಡತಿಯ ಆಧಾರ್ ಕಾರ್ಡ್‌ನ್ನು ಅಪ್ಡೇಟ್ ಮಾಡಿ.
* ಮಹಿಳಾ ಸದಸ್ಯರ ಆಧಾರ್ ಕಾರ್ಡ್‌ನಲ್ಲಿ ತಂದೆಯ ಬದಲಿಗೆ ಗಂಡನ ಹೆಸರನ್ನು ಬರೆಯುವುದು ಅವಶ್ಯಕ.
* ಇದರೊಂದಿಗೆ, ವಿಳಾಸ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ಬದಲಾಯಿಸಬೇಕಾಗುತ್ತದೆ.
* ಆಧಾರ್ ನವೀಕರಣಗೊಂಡ ನಂತರ, ಪರಿಷ್ಕೃತ ಆಧಾರ್ ಕಾರ್ಡ್‌ನ ಪ್ರತಿಯೊಂದಿಗೆ, ಪಡಿತರ ಚೀಟಿಗೆ ಹೆಸರು ಸೇರಿಸಲು ಆಹಾರ ಇಲಾಖೆ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಿ.
* ಅಂತೆಯೇ ಕುಟುಂಬದಲ್ಲಿ ಮಗು ಜನಿಸಿದರೆ, ಮಗುವಿನ ಹೆಸರನ್ನು ಸೇರಿಸಲು ಪೋಷಕರ ಹೆಸರು ಅವಶ್ಯಕ.

ಇದನ್ನೂ ಓದಿ- Zomatoದಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಎಚ್ಚರ! ಎಚ್ಚರ!

ರೇಷನ್ ಕಾರ್ಡ್‌ನಲ್ಲಿ ಆನ್‌ಲೈನ್‌ನಲ್ಲಿ ಸಹ ಹೆಸರನ್ನು ಸೇರಿಸಬಹುದು:
>> ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಸಂಬಂಧಿಸಿದ ಅರ್ಜಿಯನ್ನು ಕಚೇರಿಗೆ ಸಲ್ಲಿಸಿ. ಇದಕ್ಕಾಗಿ ನೀವು ಎಲ್ಲಿಗೂ ಹೋಗುವ ಅಗತ್ಯವಿಲ್ಲ.
>> ನೀವು ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಹೊಸ ಸದಸ್ಯರ ಹೆಸರನ್ನು ಸೇರಿಸಲು ವಿನಂತಿಸಬಹುದು.
>> ಮೊದಲನೆಯದಾಗಿ, ನೀವು ನಿಮ್ಮ ರಾಜ್ಯದ ಆಹಾರ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.
>> ನಿಮ್ಮ ರಾಜ್ಯವು ಆನ್‌ಲೈನ್‌ನಲ್ಲಿ ಸದಸ್ಯರ ಹೆಸರನ್ನು ಸೇರಿಸುವ ಸೌಲಭ್ಯವನ್ನು ಹೊಂದಿದ್ದರೆ, ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು.

ಇದನ್ನೂ ಓದಿ- Pension Scheme: ಪ್ರಧಾನಿ ಮೋದಿ ಸರ್ಕಾರದ ಉತ್ತಮ ಯೋಜನೆ, ನಿಮಗೆ ಉಪಯುಕ್ತವಾಗಬಹುದು

ಮಕ್ಕಳ ಹೆಸರನ್ನು ಪಡಿತರ ಚೀಟಿಯಲ್ಲಿ ನೋಂದಾಯಿಸಲು ಈ ಹಂತಗಳನ್ನು ಅನುಸರಿಸಿ:
- ನೀವು ಪಡಿತರ ಚೀಟಿಗೆ ಮಗುವಿನ ಹೆಸರನ್ನು ಸೇರಿಸಲು ಬಯಸಿದರೆ, ಮೊದಲು ನೀವು ಅವರ ಆಧಾರ್ ಕಾರ್ಡ್ ಅನ್ನು ಮಾಡಿಸಬೇಕು.
- ಆಧಾರ್ ಕಾರ್ಡ್ ಹೊರತುಪಡಿಸಿ, ಮಗುವಿನ ಬರ್ತ್ ಸರ್ಟಿಫಿಕೇಟ್ ಕೂಡ ಅಗತ್ಯ.
- ಆಧಾರ್ ಕಾರ್ಡ್, ಬರ್ತ್ ಸರ್ಟಿಫಿಕೇಟ್ ಪಡೆದ ಬಳಿಕ ನೀವು ಆನ್‌ಲೈನ್‌ನ ಮೂಲಕವೂ ಕೂಡ ರೇಷನ್ ಕಾರ್ಡ್‌ನಲ್ಲಿ ಹೆಸರನ್ನು ನೋಂದಾಯಿಸಲು ಅರ್ಜಿ ಸಲ್ಲಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News