Health Insurance: ಏಪ್ರಿಲ್ 1 ರಿಂದ ದುಬಾರಿಯಾಗಲಿದೆ ಆರೋಗ್ಯ ವಿಮೆ

Health Insurance Costly: ಎಲ್ಲಾ ಕ್ಷೇತ್ರಗಳಲ್ಲೂ ದಿನೇ ದಿನೇ ಹಣದುಬ್ಬರ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೀಗ ಎಪ್ರಿಲ್ 1ರಿಂದ ಆರೋಗ್ಯ ವಿಮಾ ಪ್ರೀಮಿಯಂ ಕೂಡ ದುಬಾರಿಯಾಗುವ ಸಾಧ್ಯತೆ ಇದೆ.

Written by - Yashaswini V | Last Updated : Mar 16, 2021, 02:38 PM IST
  • ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂ ಅನ್ನು 1 ಏಪ್ರಿಲ್ 2021 ರಿಂದ ಹೆಚ್ಚಿಸಬಹುದು
  • ಕರೋನಾ ಹಿನ್ನಲೆಯಲ್ಲಿ ಇನ್ಶೂರೆನ್ಸ್ ಕಂಪನಿಗಳು ಪ್ರೀಮಿಯಂ ಹೆಚ್ಚಳವನ್ನು ತಡೆಹಿಡಿದಿತ್ತು
  • ಅರೋಗ್ಯ ವಿಮಾ ಪಾಲಿಸಿ ಪ್ರೀಮಿಯಂ ಹೆಚ್ಚಳಕ್ಕೆ ಪ್ರಮುಖ ಕಾರಣಗಳು ಇವು
Health Insurance: ಏಪ್ರಿಲ್ 1 ರಿಂದ ದುಬಾರಿಯಾಗಲಿದೆ ಆರೋಗ್ಯ ವಿಮೆ title=
Health Insurance Costly

ನವದೆಹಲಿ : Health Insurance Costly- ಎಲ್ಲಾ ಕ್ಷೇತ್ರಗಳಲ್ಲೂ ದಿನೇ ದಿನೇ ಹೆಚ್ಚಾಗುತ್ತಿರುವ ಹಣದುಬ್ಬರ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೀಗ ಎಪ್ರಿಲ್ 1ರಿಂದ ಆರೋಗ್ಯ ವಿಮಾ ಪ್ರೀಮಿಯಂ ಕೂಡ ದುಬಾರಿಯಾಗುವ ಸಾಧ್ಯತೆ ಇದೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪ್ರೀಮಿಯಂ ದರ 10 ಪ್ರತಿಶತದಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 

ವಾಸ್ತವವಾಗಿ, ಕರೋನಾ ಹಿನ್ನಲೆಯಲ್ಲಿ ಇನ್ಶೂರೆನ್ಸ್  ಕಂಪನಿಗಳು ಪ್ರೀಮಿಯಂ ಹೆಚ್ಚಳವನ್ನು ತಡೆಹಿಡಿದಿತ್ತು. ಆದರೆ ಇದೀಗ ಸಾವಿರಾರು ಕೋಟಿ ಕರೋನಾ ಕ್ಲೈಂ ಮತ್ತು IRDAI  ಸ್ಟ್ಯಾಂಡರ್ಡ್ ನಿಯಮ ಜಾರಿಯಾದ ಹಿನ್ನಲೆಯಲ್ಲಿ ಪ್ರೀಮಿಯಂ ಹೆಚ್ಚಿಸುವುದು ಅನಿವಾರ್ಯವಾಗಿದೆ ಎನ್ನಲಾಗಿದೆ.

ವಿಮಾ ಕಂಪನಿಗಳು ಹೊಸ ವಿತ್ತೀಯ ವರ್ಷದ ಆರಂಭದಿಂದ ತಮ್ಮ ಪ್ರೀಮಿಯಂಗಳನ್ನು ಪರಿಷ್ಕರಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕಂಪನಿಗಳು ಆರೋಗ್ಯ ವಿಮಾ ಪಾಲಿಸಿಯ ಪ್ರೀಮಿಯಂ ಅನ್ನು 1 ಏಪ್ರಿಲ್ 2021 ರಿಂದ ಹೆಚ್ಚಿಸಬಹುದು. 

ಇದನ್ನೂ ಓದಿ - 

ಆರೋಗ್ಯ ವಿಮೆಯ ಪ್ರೀಮಿಯಂ ಹೆಚ್ಚಳಕ್ಕೆ ಪ್ರಮುಖ ಕಾರಣಗಳನ್ನು ತಿಳಿಯೋಣ:
ಪಾಲಿಸಿಯಲ್ಲಿ ಹಲವು ರೋಗಗಳಿಗೆ ವಿಮಾ ಸೌಲಭ್ಯ:

ಆರೋಗ್ಯ ವಿಮೆಯ (Health Insurance) ಪ್ರೀಮಿಯಂ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ವಿಮಾ ನಿಯಂತ್ರಕ ಐಆರ್‌ಡಿಎಐ ವೈದ್ಯಕೀಯ ವಿಮಾ ಪಾಲಿಸಿಯಲ್ಲಿ ಅನೇಕ ಗಂಭೀರ ಕಾಯಿಲೆಗಳನ್ನು ಸೇರಿಸಿದೆ, ಅಂತಹ ಅನೇಕ ರೋಗಗಳನ್ನು ಈಗ ಪಾಲಿಸಿಯಲ್ಲಿ ಸೇರಿಸಲಾಗಿದೆ. ವಿಮಾ ಪಾಲಿಸಿಯಲ್ಲಿ ಮಾನಸಿಕ ತೊಂದರೆಗಳು, ಆನುವಂಶಿಕ ಕಾಯಿಲೆಗಳು, ನರ ಸಂಬಂಧಿತ ಕಾಯಿಲೆಗಳು ಮತ್ತು ಮಾನಸಿಕ ಕಾಯಿಲೆಗಳನ್ನು ಸೇರಿಸಲಾಗಿದೆ. 

ವಿಮಾ ಕಂಪನಿಗಳಿಗೆ ಹೊರೆಯಾದ ಕರೋನಾ ಕ್ಲೈಂ :
ಎರಡನೆಯ ದೊಡ್ಡ ಕಾರಣವೆಂದರೆ ಸಾವಿರಾರು ಕೋಟಿ ರೂಪಾಯಿಗಳ ಕರೋನಾ ಕ್ಲೈಂ. ವಿಮಾ ಕಂಪೆನಿಗಳು ಕರೋನಾ (Coronavirus) ಚಿಕಿತ್ಸೆಗಾಗಿ 14 ಸಾವಿರ ಕೋಟಿ ರೂ. ವಿಮೆ ಸೌಲಭ್ಯ ಒದಗಿಸಿರುವುದಾಗಿ ತಿಳಿಸಿವೆ. ಅದರಲ್ಲಿ 9 ಸಾವಿರ ಕೋಟಿ ರೂ.ಗಳ ಮೌಲ್ಯದ ಹಕ್ಕುಗಳನ್ನು ಕಂಪನಿಗಳು ಇತ್ಯರ್ಥಪಡಿಸಿವೆ, ಉಳಿದವುಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ವಿಮಾ ಕಂಪನಿಗಳ ಮೇಲೆ ಇದು ದೊಡ್ಡ ಹೊರೆಯಾಗಿದೆ. ಪ್ರೀಮಿಯಂ ಅನ್ನು ಹೆಚ್ಚಿಸುವ ಮೂಲಕ ಅದರ ಚೇತರಿಕೆ ಮಾಡಲಾಗುತ್ತದೆ.

ಇದನ್ನೂ ಓದಿ - 

ವೈದ್ಯಕೀಯ ಹಣದುಬ್ಬರ:
ವಿಮಾ ಪ್ರೀಮಿಯಂ ಹೆಚ್ಚಳಕ್ಕೆ ಮೆಡಿಕಮ್ ಹಣದುಬ್ಬರ ಒಂದು ಪ್ರಮುಖ ಕಾರಣ. ವೈದ್ಯಕೀಯ (Medical) ಕ್ಷೇತ್ರದಲ್ಲಿ, ವೆಚ್ಚವು 18-20 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಕಾರಣಗಳಿಂದಾಗಿ ಕಂಪನಿಗಳ ಮೇಲೆ ಹೊರೆ ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರೀಮಿಯಂ ಅನ್ನು ಹೆಚ್ಚಿಸುವುದು ವಿಮಾ ಕಂಪನಿಗಳಿಗೆ ಅನಿವಾರ್ಯವಾಗಿದೆ.
 

Trending News