500 ರೂಪಾಯಿ ನೋಟ್ ಬಗ್ಗೆ ಸರ್ಕಾರ ನೀಡಿದೆ ಮಹತ್ವದ ಮಾಹಿತಿ .!

500 ರೂಪಾಯಿ ನೋಟಿಗೆ ಸಂಬಂಧಪಟ್ಟಂತೆ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿ  500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನೋಟು ಯಾಕೆ ನಕಲಿ ಎನ್ನುವುದನ್ನು ಕೂಡಾ ವಿಡಿಯೋದಲ್ಲಿ ವಿವರಿಸಲಾಗಿದೆ.   

Written by - Ranjitha R K | Last Updated : Dec 15, 2022, 12:17 PM IST
  • 500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ
  • ಹರಿದಾಡುತ್ತಿದೆ ವಿಡಿಯೋ
  • ಏನಿದು ಈ ವಿಡಿಯೋದ ಅಸಲಿಯತ್ತು ?
500 ರೂಪಾಯಿ ನೋಟ್ ಬಗ್ಗೆ ಸರ್ಕಾರ ನೀಡಿದೆ ಮಹತ್ವದ ಮಾಹಿತಿ .!  title=

ಬೆಂಗಳೂರು : ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟರೂ ಕಳ್ಳ ನೋಟು ದಂಧೆ ಮಾತ್ರ ಇನ್ನು ಕೂಡಾ ನಿಂತಿಲ್ಲ. ವಂಚಕರು ತಮ್ಮ ಹೊಸ ಹೊಸ ಮಾರ್ಗಗಳನ್ನು ಅನುಸರಿಸಿಕೊಂಡು ತಮ್ಮ ಕೈ ಚಳಕ ತೋರಿಸುತ್ತಲೇ ಇದ್ದಾರೆ. ಈ ನಡುವೆ, 500 ರೂಪಾಯಿ ನೋಟಿಗೆ ಸಂಬಂಧಪಟ್ಟಂತೆ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿ  500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನೋಟು ಯಾಕೆ ನಕಲಿ ಎನ್ನುವುದನ್ನು ಕೂಡಾ ವಿಡಿಯೋದಲ್ಲಿ ವಿವರಿಸಲಾಗಿದೆ. ಈ ಸಂದೇಶ ಸ್ವೀಕರಿಸಿದ ಬಹಳಷ್ಟು ಮಂದಿ ತಮ್ಮ ಬಳಿ ಇರುವ ನೋಟನ್ನು ಪರೀಕ್ಷಿಸಿ ನೋಡುವಂತೆ ಮಾಡಿದೆ ಆ ವಿಡಿಯೋ. 

ಏನಿದು ಈ ವಿಡಿಯೋದ ಅಸಲಿಯತ್ತು ? :  
 ಇದೀಗ ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕರ್ ಪಿಐಬಿ, ತನ್ನ ಟ್ವಿಟ್ಟರ್ ನಲ್ಲಿ ಸಾಮಾಜಿ ಮಾಧ್ಯಮದಲ್ಲಿ ಹರಿದಾಡುವ ವಿಡಿಯೋ ಬಗ್ಗೆ ಮಾಹಿತಿ ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯಕ್ಕೆ ದೂರವಾದದ್ದು ಎಂದು ಅದು ಹೇಳಿದೆ. ಇಂತಹ ನಕಲಿ ಸಂದೇಶಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ. ತನ್ನ ಟ್ವೀಟ್‌ನಲ್ಲಿ ನೋಟಿನ ಚಿತ್ರವನ್ನು ಸಹ ಪಿಐಬಿ ಹಂಚಿಕೊಂಡಿದೆ.  ಹಸಿರು ಪಟ್ಟಿ ಆರ್‌ಬಿಐ ಗವರ್ನರ್ ಸಹಿ ಬಳಿ  ಹಾದು ಹೋಗಿದ್ದರೂ, ಅಥವಾ ಗಾಂಧೀಜಿ ಚಿತ್ರದ ಬಳಿ ಹಾದು  ಹೋಗಿದ್ದರೂ ಆ ನೋಟುಗಳು ಅಸಲಿ ಎಂದು ಪಿಐಬಿ ಹೇಳಿದೆ. 

ಇದನ್ನೂ ಓದಿ : Gold Price Today : ಗಗನ ಮುಖಿಯಾದ ಚಿನ್ನ, ಬೆಳ್ಳಿ .! ಖರೀದಿಸುವ ಮೊದಲು ತಿಳಿದುಕೊಳ್ಳಿ ಇಂದಿನ ಬೆಲೆ

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, 500 ರೂ. ನೋಟು ಮಹಾತ್ಮ ಗಾಂಧಿಯವರ ಚಿತ್ರ ಮತ್ತು ಆರ್‌ಬಿಐ ಗವರ್ನರ್ ಸಹಿಯನ್ನು ಹೊಂದಿದೆ. ನೋಟಿನ ಹಿಂಬದಿಯಲ್ಲಿ ಕೆಂಪು ಕೋಟೆಯ ಚಿತ್ರವಿದೆ. ನೋಟಿನ ಬಣ್ಣ  ಸ್ಟೋನ್ ಗ್ರೇ ಬಣ್ಣದ್ದಾಗಿದ್ದು, ವಿಭಿನ್ನ ವಿನ್ಯಾಸ ಮತ್ತು  ಜೋಮೆಟ್ರೀ  ಮಾದರಿಯನ್ನು ಹೊಂದಿದೆ.

ನಕಲಿ 500 ನೋಟು ಗುರುತಿಸುವುದು ಹೇಗೆ? :
RBI ಪ್ರಕಾರ, 500 ರೂ. ನೋಟು ಕೆಲವು ಸ್ಥಿರ  ವೈಶಿಷ್ಟ್ಯಗಳನ್ನು   ಹೊಂದಿದೆ. ನಿಮ್ಮಲ್ಲಿರುವ  500 ರೂಪಾಯಿ ನೋಟಿನಲ್ಲಿ ಈ ವೈಶಿಷ್ಟ್ಯಗಳ ಪೈಕಿ ಒಂದು ವೈಶಿಷ್ಟ್ಯ ಇಲ್ಲದೆ ಹೋದರೂ ಅದು ನಕಲಿ ನೋಟು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು.   

 ಇದನ್ನೂ ಓದಿ : SBI: ಕೋಟ್ಯಾಂತರ ಎಸ್‌ಬಿಐ ಗ್ರಾಹಕರಿಗೆ ಬಿಗ್ ಶಾಕ್, ಇಂದಿನಿಂದ ಈ ಕೆಲಸಕ್ಕೆ ಶುಲ್ಕ ಹೆಚ್ಚಳ

1. ನೋಟಿನ ಮೇಲೆ 500ರ್ ನಂಬರ್ ಬರೆದಿರಬೇಕು. 
2. ಲೆಟೆಂಟ್ ಇಮೇಜ್ ಮೇಲೆ 500 ಸಂಖ್ಯೆಯನ್ನು ಬರೆಯಬೇಕು.
3.ನೋಟಿನ ಮೇಲೆ ದೇವನಾಗರಿಯಲ್ಲಿ 500 ಎಂದು ಬರೆಯಬೇಕು. 
4.ನೋಟಿನ ಮಧ್ಯದಲ್ಲಿ ಮಹಾತ್ಮ ಗಾಂಧಿ ಚಿತ್ರ ಇರಬೇಕು. 
5.ಸೂಕ್ಷ್ಮ ಅಕ್ಷರಗಳಲ್ಲಿ ಭಾರತ ಮತ್ತು ‘India’ ಎಂದು ಬರೆದಿರಬೇಕು 
6.RBI ಲಾಂಛನವು ರಾಜ್ಯಪಾಲರ ಸಹಿ ಮತ್ತು ಮಹಾತ್ಮ ಗಾಂಧಿಯವರ ಭಾವಚಿತ್ರದ ಬಲಭಾಗದಲ್ಲಿರಬೇಕು. 
7.ಮಹಾತ್ಮ ಗಾಂಧಿ ಚಿತ್ರ ಮತ್ತು 500 ರ ವಾಟರ್‌ಮಾರ್ಕ್ ಇರಬೇಕು. 
8.ಮೇಲಿನ ಎಡ ಮತ್ತು ಕೆಳಗಿನ ಬಲಭಾಗದಲ್ಲಿರುವ ನಂಬರ್ ಪ್ಯಾನೆಲ್ ಕೂಡಾ ಗಮನಿಸಿ.  
 9. ಕೆಳಗೆ ಬಲಭಾಗದಲ್ಲಿ ಬಣ್ಣ ಬದಲಾಯಿಸುವ ಶಾಯಿಯಲ್ಲಿ ಅಂದರೆ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗಿವ ಶಾಯಿಯಲ್ಲಿ 500  ಎಂದು ಬರೆದಿರಬೇಕು 
ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರಬೇಕು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News