Good News: ಬ್ಯಾಂಕ್ ಗ್ರಾಹಕರಿಗೊಂದು ಸಂತಸದ ಸುದ್ದಿ

SBI IMPS Charge: ದೇಶದ ಸಾರ್ವಜನಿಕ ವಲಯದ ಬ್ಯಾಂಕ್ ಅತಿದೊಡ್ಡ SBI ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಈಗ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡಿದ 5 ಲಕ್ಷ ರೂಪಾಯಿವರೆಗಿನ ತಕ್ಷಣದ ಪಾವತಿ ಸೇವೆ (IMPS) ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕವನ್ನು ವಿಧಿಸಲಾಗುವುದಿಲ್ಲ.

Written by - Nitin Tabib | Last Updated : Jan 4, 2022, 08:15 PM IST
  • ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ SBI,
  • 5 ಲಕ್ಷ ರೂ.ವರೆಗಿನ IMPS ವಹಿವಾಟು ಶುಲ್ಕಮುಕ್ತ.
  • ಆನ್ಲೈನ್, YONO ಬಳಕೆದಾರರು ಮಾತ್ರ ಈ ಲಾಭ ಪಡೆಯಬಹುದು.
Good News: ಬ್ಯಾಂಕ್ ಗ್ರಾಹಕರಿಗೊಂದು ಸಂತಸದ ಸುದ್ದಿ title=
SBI IMPS Charge (File Photo)

ನವದೆಹಲಿ: SBI IMPS Charge -  ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ (State Bank Of India) ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಈಗ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡಿದ 5 ಲಕ್ಷ ರೂಪಾಯಿವರೆಗಿನ ತಕ್ಷಣದ ಪಾವತಿ ಸೇವೆ (IMPS) ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಂಗಳವಾರ ಈ ನಿಬಂಧನೆಯು YONO ಅಪ್ಲಿಕೇಶನ್‌ನ ಬಳಕೆದಾರರಿಗೆ ಅನ್ವಯಿಸುತ್ತದೆ ಎಂದು ಹೇಳಿದೆ. ನೀವು ಬ್ಯಾಂಕ್ ಶಾಖೆಗೆ ಹೋಗಿ IMPS ಮಾಡಿಸಿಕೊಂಡರೆ, ನಂತರ ನೀವು GST ಜೊತೆಗೆ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಸೂಚನೆಗಳು ಫೆಬ್ರವರಿ 1, 2022 ರಿಂದ ಅನ್ವಯವಾಗುತ್ತವೆ ಎಂದು ಎಸ್‌ಬಿಐ ಹೇಳಿದೆ.

ಕೆಲವು ತಿಂಗಳ ಹಿಂದೆಯಷ್ಟೇ ಐಎಂಪಿಎಸ್ ವಹಿವಾಟಿನ ಗರಿಷ್ಠ ಮಿತಿ 2 ಲಕ್ಷ ರೂ.ಗಳಾಗಿದ್ದು, ಇದೀಗ ಅದನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದುವರೆಗೆ ಎಸ್‌ಬಿಐ 2 ಲಕ್ಷ ರೂ.ವರೆಗಿನ ಐಎಂಪಿಎಸ್ ವಹಿವಾಟುಗಳಿಗೆ ಮಾತ್ರ ಸೇವಾ ಶುಲ್ಕ ಪಡೆಯುತ್ತಿರಲಿಲ್ಲ.

ಇದನ್ನೂ ಓದಿ-PM Kisan Yojana: ಪಿಎಂ ಕಿಸಾನ್‌ ಫಲಾನುಭವಿಗಳಿಗೆ ಕೈಗೆಟುಕುವ ದರದಲ್ಲಿ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ

ಡಿಜಿಟಲ್ ಬ್ಯಾಂಕಿಂಗ್ ಗೆ ಉತ್ತೇಜನ
ಗ್ರಾಹಕರಲ್ಲಿ ಡಿಜಿಟಲ್ ಬ್ಯಾಂಕಿಂಗ್ (Digital Banking) ಸೇವೆಯನ್ನು ಉತ್ತೇಜಿಸುವ ಸಲುವಾಗಿ, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ (YONO ಅಪ್ಲಿಕೇಶನ್ ಸೇರಿದಂತೆ) ಮೂಲಕ IMPS ವಹಿವಾಟುಗಳಿಗೆ ಸೇವಾ ಶುಲ್ಕವನ್ನು ಅನ್ವಯಿಸದಿರಲು ನಿರ್ಧರಿಸಲಾಗಿದೆ ಎಂದು SBI ತಿಳಿಸಿದೆ. ಇದೇ ವೇಳೆ, ಬ್ಯಾಂಕ್ ಶಾಖೆಗಳಿಂದ ಐಎಂಪಿಎಸ್ ವಹಿವಾಟುಗಳಿಗೆ 2 ಲಕ್ಷದಿಂದ 5 ಲಕ್ಷದವರೆಗೆ ಹೊಸ ಸ್ಲ್ಯಾಬ್ ರಚಿಸಲಾಗಿದೆ. ಈ ಸ್ಲ್ಯಾಬ್ ಅಡಿಯಲ್ಲಿ ಬರುವ ಮೊತ್ತದ ಮೇಲಿನ ಸೇವಾ ಶುಲ್ಕ ರೂ.20 ಆಗಿರಲಿದೆ ಮತ್ತು ಅದರೊಂದಿಗೆ GST ಸಹ ಪಾವತಿಸಬೇಕು.

ಇದನ್ನೂ ಓದಿ-Arecanut Price today: ಇಂದಿನ ರಾಶಿ ಅಡಿಕೆ ಬೆಲೆ ಎಷ್ಟಿದೆ ಎಂದು ತಿಳಿಯಿರಿ

ಪ್ರಸ್ತುತ ಬ್ಯಾಂಕ್ ಶಾಖೆಗಳಿಂದ ಮಾಡಲಾಗುವ ರೂ.1,000 ವರೆಗಿನ IMPS ವಹಿವಾಟುಗಳು ಮಾತ್ರ ಸೇವಾ ಶುಲ್ಕದಿಂದ ಮುಕ್ತವಾಗಿವೆ. 1,001 ರೂ.10,000 ವರೆಗಿನ ವಹಿವಾಟುಗಳು ರೂ.2 + ಜಿಎಸ್‌ಟಿಯನ್ನು ಪಾವತಿಸಬೇಕು. ಇನ್ನೊಂದೆಡೆ, ರೂ.4 + ಜಿಎಸ್‌ಟಿ ರೂ.10,001 ವರೆಗಿನ ವಹಿವಾಟುಗಳಿಗೆ ರೂ 1 ಲಕ್ಷದವರೆಗಿನ ಮೊತ್ತಕ್ಕೆ ಅನ್ವಯಿಸುತ್ತದೆ. 1 ಲಕ್ಷದಿಂದ 2 ಲಕ್ಷದವರೆಗಿನ ವಹಿವಾಟುಗಳಿಗೆ ಸೇವಾ ಶುಲ್ಕ 12 + ಜಿಎಸ್‌ಟಿ ಆಗಿದೆ.

ಇದನ್ನೂ ಓದಿ-Saving Account ಮೇಲೆ ಆಕರ್ಷಕ ಬಡ್ಡಿ ನೀಡುತ್ತಿವೆ ಈ ಬ್ಯಾಂಕುಗಳು, ತಕ್ಷಣ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News