Budget 2022 : NPS ಚಂದಾದಾರರಿಗೆ ಸಿಹಿ ಸುದ್ದಿ, ತೆರಿಗೆ ವಿನಾಯಿತಿ ಜೊತೆ ಸಿಗಲಿದೆ ಭಾರೀ ಪ್ರಯೋಜನ

 Budget 2022 Updates: ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸ್ಯಾಲರೀಡ್ ಕ್ಲಾಸ್ ಗೆ ಸಂಬಂಧಿಸಿದಂತೆ, ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ.  

Written by - Ranjitha R K | Last Updated : Feb 1, 2022, 01:15 PM IST
  • ಸರ್ಕಾರಿ ನೌಕರರಿಗೆ NPS ತೆರಿಗೆ ವಿನಾಯಿತಿ ಹೆಚ್ಚಿಸಲಾಗಿದೆ
  • ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡುವ ಪ್ರಸ್ತಾಪ
  • ಸರ್ಕಾರಿ ನೌಕರರ ಎನ್‌ಪಿಎಸ್ ಶೇ.10ರಿಂದ ಶೇ.14ಕ್ಕೆ ಏರಿಕೆ
 Budget 2022 : NPS ಚಂದಾದಾರರಿಗೆ ಸಿಹಿ ಸುದ್ದಿ, ತೆರಿಗೆ ವಿನಾಯಿತಿ ಜೊತೆ ಸಿಗಲಿದೆ ಭಾರೀ ಪ್ರಯೋಜನ   title=
ಸರ್ಕಾರಿ ನೌಕರರಿಗೆ NPS ತೆರಿಗೆ ವಿನಾಯಿತಿ ಹೆಚ್ಚಳ (photo zee)

ನವದೆಹಲಿ : Budget 2022 Updates: ಈ ಬಾರಿಯ ಬಜೆಟ್ ನಲ್ಲಿ (Budget 2022) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಸ್ಯಾಲರೀಡ್ ಕ್ಲಾಸ್ ಗೆ ಸಂಬಂಧಿಸಿದಂತೆ, ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಈಗ ತೆರಿಗೆದಾರರು  2 ವರ್ಷಗಳ ಹಿಂದಿನ IT return ಅನ್ನು  ಸಲ್ಲಿಸಬಹುದು ಎಂದು ಹೇಳಿದ್ದಾರೆ. ಅಲ್ಲದೆ,  ಈಗ NPS ಮೇಲೆ 10% ಬದಲಿಗೆ 14%ದಷ್ಟು   ಕೊಡುಗೆ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. 

ಸರ್ಕಾರಿ ನೌಕರರಿಗೆ NPS ತೆರಿಗೆ ವಿನಾಯಿತಿಯಲ್ಲಿ ಹೆಚ್ಚಳ : 
ಈಗ ಎನ್‌ಪಿಎಸ್‌ನಲ್ಲಿ (NPS) ಶೇ.10ರ ಬದಲು ಶೇ.14ರಷ್ಟು ಕೊಡುಗೆ ನೀಡಲಾಗುವುದು ಎಂದು ಹಣಕಾಸು ಸಚಿವರು (Niramala Sitharaman) ತಿಳಿಸಿದ್ದಾರೆ. ಅಂದರೆ ಸರ್ಕಾರಿ ನೌಕರರಿಗೆ ಎನ್ ಪಿಎಸ್ ಯೋಜನೆಯಲ್ಲಿ ತೆರಿಗೆ ವಿನಾಯಿತಿ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ಹೊಸ ತೆರಿಗೆ ಸುಧಾರಣೆ ತರುವ ಯೋಜನೆಯನ್ನು ಹಣಕಾಸು ಸಚಿವರು ಪ್ರಕಟಿಸಿದ್ದಾರೆ. ನೌಕರರು ಪಿಂಚಣಿ (Pension) ಮೇಲೆಯೂ  ತೆರಿಗೆ ವಿನಾಯಿತಿ ಪಡೆಯಲಿದ್ದಾರೆ. ಈಗ ಎನ್‌ಪಿಎಸ್‌ನಲ್ಲಿ ಕೇಂದ್ರ ಮತ್ತು ರಾಜ್ಯದ ಕೊಡುಗೆ 14% ರಷ್ಟು ಆಗಿರುತ್ತದೆ.

ಇದನ್ನೂ ಓದಿ : Budget 2022: RBI ನಿಂದ ಶೀಘ್ರದಲ್ಲಿ Blockchain ಆಧಾರಿತ ಡಿಜಿಟಲ್ ಕರೆನ್ಸಿ

ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡುವ ಪ್ರಸ್ತಾಪ :
ಬಜೆಟ್ ಭಾಷಣದ ವೇಳೆ ಹಣಕಾಸು ಸಚಿವರು ಕಾರ್ಪೊರೇಟ್ ತೆರಿಗೆಯನ್ನು (Corporate Tax) ಶೇ.18ರಿಂದ ಶೇ.15ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಸರ್ಚಾರ್ಜ್ ಶೇ.12ರಿಂದ ಶೇ.7ಕ್ಕೆ ಇಳಿಕೆಯಾಗಲಿದೆ. ಸಹಕಾರಿ ಸಂಸ್ಥೆಗಳಿಗೂ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.  

ಇದನ್ನೂ ಓದಿ : Budget 2022 : ಕೃಷಿಕರಿಗೆ ಸಿಕ್ಕಿತು ಬರಪೂರ ಕೊಡುಗೆ, ಕೃಷಿ ಕ್ಷೇತ್ರಕ್ಕೆ ಮಹತ್ವದ ಘೋಷಣೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News