ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ 2024 ಈ ದಿನದಂದು ಪ್ರಕಟ !

Karnataka SSLC Supplementary Result 2024 : ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದವರಿಗೆ ಜೂನ್ 14 ರಿಂದ ಜೂನ್ 21, 2024 ರವರೆಗೆ ಕರ್ನಾಟಕ ಬೋರ್ಡ್ 10 ನೇ ತರಗತಿಯ ಪೂರಕ ಪರೀಕ್ಷೆಗಳನ್ನು ನಡೆಸಲಾಯಿತು.

Written by - Chetana Devarmani | Last Updated : Jul 5, 2024, 11:17 AM IST
    • ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ
    • SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ಸಿದ್ಧ
    • ಕರ್ನಾಟಕ ಬೋರ್ಡ್ 10 ನೇ ತರಗತಿಯ ಪೂರಕ ಪರೀಕ್ಷೆ
ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ 2024 ಈ ದಿನದಂದು ಪ್ರಕಟ !  title=

ಬೆಂಗಳೂರು: ಕರ್ನಾಟಕ ಬೋರ್ಡ್ 10 ನೇ ತರಗತಿಯ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ಸಿದ್ಧವಾಗಿದೆ. ಫಲಿತಾಂಶವನ್ನು ಈ ವಾರದೊಳಗೆ ಪ್ರಕಟಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಮೊದಲ ಪ್ರಯತ್ನದಲ್ಲಿ SSLC ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಎಲ್ಲಾ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಅಧಿಕೃತ ಪೋರ್ಟಲ್ www.kseeb.karnataka.gov.in ಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ಪೂರಕ ಪರೀಕ್ಷೆಯ ಫಲಿತಾಂಶಗಳನ್ನು ಪ್ರವೇಶಿಸಬಹುದಾಗಿದೆ.

ಇದನ್ನೂ ಓದಿ : ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್‌ ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ 

ಈ ಹಿಂದೆ ಮಂಡಳಿಯ ಅಧಿಕಾರಿಗಳು ಮೇ 09 ರಂದು ಕರ್ನಾಟಕ 10 ನೇ ತರಗತಿಯ ವಾರ್ಷಿಕ ಫಲಿತಾಂಶಗಳನ್ನು ಪ್ರಕಟಿಸಿದರು. ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದವರಿಗೆ ಜೂನ್ 14 ರಿಂದ ಜೂನ್ 21, 2024 ರವರೆಗೆ ಕರ್ನಾಟಕ ಬೋರ್ಡ್ 10 ನೇ ತರಗತಿಯ ಪೂರಕ ಪರೀಕ್ಷೆಗಳನ್ನು ನಡೆಸಲಾಯಿತು.

ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ ಪರಿಶೀಲಿಸುವ ಲಿಂಕ್: 

ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶಗಳನ್ನು ಆನ್‌ಲೈನ್ ಸ್ಕೋರ್‌ಕಾರ್ಡ್ ರೂಪದಲ್ಲಿ ವಿದ್ಯಾರ್ಥಿಗಳು ಪರಿಶೀಲಿಸಬಹುದು. ಅಧಿಕೃತ ವೆಬ್‌ಸೈಟ್‌ಗಳಾದ www.karresults.nic.in ಮತ್ತು www.kseab.karnataka.gov.in ನಲ್ಲಿ ಫಲಿತಾಂಶ ಪ್ರಕಟವಾಗುತ್ತದೆ.  

ಹಂತ 1: www.karresults.nic.in ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ (KSEAB) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಮುಖಪುಟದಲ್ಲಿ, "ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶ" ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಭರ್ತಿ ಮಾಡಿ.

ಹಂತ 4: "Submit" ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 5: ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣುತ್ತದೆ. ಪೂರೈಕೆ ಫಲಿತಾಂಶದಲ್ಲಿ ನಮೂದಿಸಲಾದ ಎಲ್ಲಾ ವಿವರಗಳನ್ನು ಪರಿಶೀಲಿಸಿ.

ಹಂತ 6: ಕರ್ನಾಟಕ SSLC ಪೂರಕ ಪರೀಕ್ಷೆ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತ ಪ್ರಿಂಟ್‌ಔಟ್ ಅನ್ನು ಸಹ ತೆಗೆದುಕೊಳ್ಳಿ. ವಿದ್ಯಾರ್ಥಿಯ ಹೆಸರು

ಇದನ್ನೂ ಓದಿ : Apple Peel Benefits: ಸೇಬು ಹಣ್ಣಿನ ಸಿಪ್ಪೆಯಲ್ಲಿದೆ ಈ ಕಾಯಿಲೆಗೆ ಮದ್ದು.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News