Gold Hallmarking ನಿಯಮದ ಬಳಿಕ ಮನೆಯಲ್ಲಿಟ್ಟ ಚಿನ್ನ ಏನಾಗಲಿದೆ, ಹಾಲ್ಮಾರ್ಕಿಂಗ್ ಮಾಡಿಸಬೇಕೆ? ಬೇಡವೇ?

GOLD HALLMARKING NEW GUIDELINES: ಚಿನ್ನಾಭರಣಗಳಿಗೆ ಸಂಬಂಧಿಸಿದಂತೆ ಬುಧವಾರ ಗೋಲ್ಡ್ ಹಾಲ್ಮಾರ್ಕಿಂಗ್ ನಿಯಮ ಜಾರಿಗೆ ಬಂದಿದೆ. ಅಂದರೆ, ಇನ್ಮುಂದೆ ಚಿನ್ನಾಭರಣಗಳ ಮೇಲೆ ಹಾಲ್ಮಾರ್ಕಿಂಗ್ ಕಡ್ಡಾಯವಾಗಿದೆ.

Written by - Nitin Tabib | Last Updated : Jun 20, 2021, 11:32 PM IST
  • ಕಳೆದ ಬುಧವಾರಗಿಂದ ಗೋಲ್ಡ್ ಹಾಲ್ಮಾರ್ಕಿಂಗ್ ನಿಯಮ ಜಾರಿಗೆ ಬಂದಿದೆ.
  • ಈಗಾಗಲೇ ಮನೆಯಲ್ಲಿರುವ ಚಿನ್ನ ಏನಾಗಲಿದೆ.
  • ಅದನ್ನು ಹಾಲ್ಮಾರ್ಕಿಂಗ್ ಮಾಡಿಸುವುದು ಅನಿವಾರ್ಯವೇ?
Gold Hallmarking ನಿಯಮದ ಬಳಿಕ ಮನೆಯಲ್ಲಿಟ್ಟ ಚಿನ್ನ ಏನಾಗಲಿದೆ, ಹಾಲ್ಮಾರ್ಕಿಂಗ್ ಮಾಡಿಸಬೇಕೆ? ಬೇಡವೇ? title=
Gold Hallmarking New Guidelines(File Photo)

ನವದೆಹಲಿ: Gold Hallmarking New Guidelines - ಚಿನ್ನದ ಆಭರಣಗಳಿಗೆ ಸಂಬಂಧಿಸಿದಂತೆ ಚಿನ್ನದ ಹಾಲ್ಮಾರ್ಕಿಂಗ್ ನಿಯಮಗಳು ಜಾರಿಗೆ ಬಂದಿವೆ. ನಿಯಮಗಳ ಪ್ರಕಾರ, ಎಲ್ಲಾ ಚಿನ್ನದ ವಸ್ತುಗಳ ಮೇಲೆ ಹಾಲ್ಮಾರ್ಕಿಂಗ್ ಕಡ್ಡಾಯವಾಗಿದೆ. ಹೀಗಿರುವಾಗ ಮನೆಗಳಲ್ಲಿ ಇರಿಸಲಾಗಿರುವ ಚಿನ್ನ ಅಥವಾ ಚಿನ್ನಾಭರಣಗಳಿಗೆ (Home Jewellery) ಏನಾಗಬಹುದು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಅದಕ್ಕೂ ಹಾಲ್ಮಾರ್ಕಿಂಗ್ ಮಾಡಬೇಕೇ? ಮನೆಯಲ್ಲಿ ಇಟ್ಟುಕೊಂಡಿರುವ ಚಿನ್ನದ ಹಾಲ್ಮಾರ್ಕಿಂಗ್ ಮಾಡದಿದ್ದರೆ, ಅದಕ್ಕೆ ಯಾವುದೇ ಮೌಲ್ಯವಿರುವುದಿಲ್ಲವೆ? ಇತ್ಯಾದಿ ಪ್ರಶ್ನೆಗಳು ಇದೀಗ ಜನರನ್ನು ಕಾಡುತ್ತಿವೆ. ಹಾಗಾದರೆ ಬನ್ನಿ ಇಂತಹುದೇ ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡೋಣ.

ಈಗಾಗಲೇ ಮನೆಗಳಲ್ಲಿರುವ ಚಿನ್ನ ಏನಾಗಲಿದೆ?
ನಮ್ಮ ದೇಶದಲ್ಲಿ ಜನರು ಚಿನ್ನಾಭರಣ ಪ್ರಿಯರಗಿದ್ದಾರೆ. ಮದುವೆಯ ಆಭರಣವೆ ಆಗಿರಲಿ ಅಥವಾ ಹೂಡಿಕೆಯೇ ಆಗಲಿ. ಜನರು ಚಿನ್ನಾಭರಣಗಳನ್ನು ಸಂಗ್ರಹಿಸುತ್ತಾರೆ. ಹಲವರ ಬಳಿ, ಹಲವಾರು ಪೀಡಿಗಳಿಂದ ಬಂದ ಚಿನ್ನಾಭರಣ ಹಾಗೂ ಚಿನ್ನದ ಕಲಾಕೃತಿಗಳಿವೆ. ಹೀಗಿರುವಾಗ ಆಕಸ್ಮಿಕವಾಗಿ ಜಾರಿಗೆ ಬಂದ ಈ ಹಾಲ್ಮಾರ್ಕಿಂಗ್ ನಿಯಮದಿಂದ (Gold Hallmarking Rules) ಅವುಗಳ ಮೌಲ್ಯ ಶೂನ್ಯವಾಗುವುದಿಲ್ಲ ತಾನೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸರ್ಕಾರ, ಗ್ರಾಹಕರ ಬಳಿ ಇರುವ ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕಿಂಗ್ ಇರಲಿ ಅಥವಾ ಇಲ್ಲದೆ ಇರಲಿ, ಆಭರಣ ವ್ಯಾಪಾರಿಗಳು ಗ್ರಾಹಕರ ಬಳಿಯಿಂದ ಚಿನ್ನ ಖರೀದಿಸ ಬಹುದು ಎಂದು ಹೇಳಿದೆ. ಅಂದರೆ, ನಿಮ್ಮ ಮನೆಯಲ್ಲಿರುವ ಚಿನ್ನದ ಮೇಲೆ ಹಾಲ್ಮಾರ್ಕಿಂಗ್ ನಿಯಮದ ಯಾವುದೇ ಪ್ರಭಾವ ಬೀರುವುದಿಲ್ಲ ಎಂದರ್ಥ.

ಮನೆಯಲ್ಲಿರುವ ಚಿನ್ನವನ್ನು ಮಾರಬಹುದೇ?
ಒಂದು ವೇಳೆ ನಮ್ಮ ಬಳಿ ಮನೆಯಲ್ಲಿ ಚಿನ್ನದ ಆಭರಣ, ಬಿಸ್ಕತ್ತು ಅಥವಾ ಇಟ್ಟಿಗೆ ಇದ್ದರೆ ಅದನ್ನು ನಾವು ಮಾರಾಟ ಮಾಡಬಹುದೇ ಅಥವಾ ಅದಕ್ಕೂ ಕೂಡ ಹಾಲ್ಮಾರ್ಕಿಂಗ್ ನಿಯಮ ಅನ್ವಯಿಸಲಿದೆಯೇ? ಎಂಬ ಪ್ರಶ್ನೆ ನಿಮ್ಮ ಮನದಲ್ಲೂ ಇದ್ದರೆ, ಗೋಲ್ಡ್ ಹಾಲ್ಮಾರ್ಕಿಂಗ್ ನಿಯಮ ಕೇವಲ ಆಭರಣ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದು ನಿಮಗೆ ತಿಳಿದಿರಲಿ. ಹಾಲ್ಮಾರ್ಕಿಂಗ್ ಇಲ್ಲದೆ ಇರುವ ಚಿನ್ನವನ್ನು ಅವರು ಗ್ರಾಹಕರಿಗೆ ಮಾರುವಂತಿಲ್ಲ. ಒಂದು ವೇಳೆ ಗ್ರಾಹಕರ ಬಳಿ ಮೊದಲೇ ಹಾಲ್ಮಾರ್ಕಿಂಗ್ ಇಲ್ಲದ ಚಿನ್ನ ಇದ್ದರೆ, ಅವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಮತ್ತು ಅವರು ಈ ಮೊದಲಿನ ರೀತಿಯ ಅದನ್ನು ಮಾರಬಹುದಾಗಿದೆ. ಅಂದರೆ, ಯಾವುದೇ ಓರ್ವ ಗ್ರಾಹಕ ಚಿನ್ನದ ನಾಣ್ಯ ಇತ್ಯಾದಿಗಳನ್ನು ವ್ಯಾಪಾರಿಗಳ ಬಳಿ ಮಾರಾಟಕ್ಕೆ ತೆಗೆದುಕೊಂಡು ಹೋದರೆ, ಅದಕ್ಕೆ ಅವರು ಹಾಲ್ಮಾರ್ಕಿಂಗ್ ಮಾಡಿಸುವ ಅವಶ್ಯಕತೆ ಇಲ್ಲ ಹಾಗೂ ಅದನ್ನು ಬದಲಾಯಿಸುವ ಅವಶ್ಯಕತೆ ಕೂಡ ಇಲ್ಲ.

ಇದನ್ನೂ ಓದಿ-Happy Father's Day 2021: ನಿಮ್ಮ ಮಗುವಿನ ಭವಿಷ್ಯ ಬದಲಾಯಿಸಲು ಇಲ್ಲಿವೆ 5 Money Mantra

ಮನೆಯಲ್ಲಿರುವ ಚಿನ್ನದ ಬೆಲೆ ಕುಸಿಯಲ್ಲಿದೆಯೇ?
ಗ್ರಾಹಕರು ತಮ್ಮ ಬಳಿ ಇರುವ ಚಿನ್ನವನ್ನು ಅದರ ಪರಿಶುದ್ಧತೆಯ ಆಧಾರದ ಮೇಲೆ ಮಾರುಕಟ್ಟೆಯ ಬೆಲೆಗೆ ಮಾರಾಟ ಮಾಡಬಹುದು. ಗೋಲ್ಡ್ ಹಾಲ್ಮಾರ್ಕಿಂಗ್ ನಿಯಮದಿಂದ  ಅದರ ಬೆಲೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಇದಲ್ಲದೆ ಹೊಸ ಆಭೂಷಣಗಳನ್ನು (Gold Jewellery) ತಯಾರಿಸಲು ಅವುಗಳನ್ನು ಕರಗಿಸಿ ಮತ್ತೆ ಆಭೂಷಣಗಳನ್ನಾಗಿ ತಯಾರಿಸಿದಾಗ ಅವುಗಳ ಹಾಲ್ಮಾರ್ಕಿಂಗ್ ಕೂಡ ಮಾಡಿಸಬಹುದು. ಒಂದು ವೇಳೆ ಯಾವುದೇ ಓರ್ವ ಗ್ರಾಹಕನಿಂದ ಚಿನ್ನಾಭರಣ ಪಡೆದು ಅದನ್ನು ಎಕ್ಸ್ಚೇಂಜ್ ಮಾಡಿಕೊಡಲು ನಿರಾಕರಿಸುವ ವ್ಯಾಪಾರಿಗಳ ಮೇಲೆ ಕ್ರಮ ಕೂಡ ಜರುಗಿಸುವ ಅವಕಾಶ ಕೂಡ ಇದೆ. 

ಇದನ್ನೂ ಓದಿ-LIC Policy: LICಯ ಈ ಪಾಲಸಿಯಲ್ಲಿ ನಿತ್ಯ ರೂ.30 ಹೂಡಿಕೆ ಮಾಡಿ ಲಕ್ಷಾಧಿಪತಿಯಾಗಬಹುದು

ಗೋಲ್ಡ್ ಲೋನ್ ಮೇಲೆ ಹಾಲ್ಮಾರ್ಕಿಂಗ್ ಪ್ರಭಾವ (Gold Loan)
ಹಲವು ಜನರು ತಮ್ಮ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ಚಿನ್ನವನ್ನು ಅಡವಿಟ್ಟು ಸಾಲ ಪಡೆಯುತ್ತಾರೆ. ಆದರೆ, ಚಿನ್ನ ಅಡವಿಟ್ಟು ಸಾಲಪಡೆಯಲು ಹಾಲ್ಮಾರ್ಕಿಂಗ್ ಅನಿವಾರ್ಯವಲ್ಲ. ಹೀಗಿರುವಾಗ ಹಾಲ್ಮಾರ್ಕಿಂಗ್ ನಿಯಮ ಗೋಲ್ಡ್ ಲೋನ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂಬುದು ಇದರರ್ಥ. ಆದರೆ, ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುವ ಮುನ್ನ ಗ್ರಾಹಕರು ಅದರ ಪರಿಶುದ್ಧತೆಯನ್ನು ಪರಿಶೀಲಿಸಿಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಇದರಿಂದ ಗ್ರಾಹಕರಿಗೂ ಕೂಡ ತಮ್ಮ ಬಳಿ ಇರುವ ಚಿನ್ನದ ಮಾರುಕಟ್ಟೆ ಬೆಲೆ ತಿಳಿಯಲಿದೆ.  ಇದಾದ ಬಳಿಕ ಮಾತ್ರ ನೀವು ಚಿನ್ನವನ್ನು ಅಡವಿಟ್ಟು ಸಾಲ ಪಡೆಯಬಹುದು.

ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಡಬಲ್ ಧಮಾಕಾ! DA ಬಳಿಕ ಇದೀಗ TAಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News