ಹೊಸ ವರ್ಷಕ್ಕೆ ನಿಮ್ಮ ಮಗುವಿಗೆ LICಯ ಈ ವಿಶೇಷ ಪಾಲಿಸಿಯನ್ನು ಉಡುಗೊರೆಯಾಗಿ ನೀಡಿ!

ನಿಮ್ಮ ಮಗುವಿಗೆ ಉತ್ತಮ ಭವಿಷ್ಯ ರೂಪಿಸಲು ಬಯಸಿದರೆ ನೀವು LIC ಯ ಸ್ಕೀಮ್ ಹೊಸ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್ (LIC)ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ. 

Written by - Puttaraj K Alur | Last Updated : Jan 5, 2022, 10:36 PM IST
  • ಎಲ್ಐಸಿಯ ಈ ಹೊಸ ಪಾಲಿಸಿಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಿರಿ
  • ಕೇವಲ 150 ರೂಪಾಯಿ ಉಳಿಸಿ ಮಗುವನ್ನು ಲಕ್ಷಾಧಿಪತಿಯನ್ನಾಗಿ ಮಾಡಿ
  • ಸಣ್ಣ ಉಳಿತಾಯದೊಂದಿಗೆ ನಿಮ್ಮ ಮಗು ಮಿಲಿಯನೇರ್ ಆಗುವ ಯೋಜನೆ
ಹೊಸ ವರ್ಷಕ್ಕೆ ನಿಮ್ಮ ಮಗುವಿಗೆ LICಯ ಈ ವಿಶೇಷ ಪಾಲಿಸಿಯನ್ನು ಉಡುಗೊರೆಯಾಗಿ ನೀಡಿ!  title=
ಎಲ್ಐಸಿಯ ನ್ಯೂ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್

ನವದೆಹಲಿ: 2022ರ ಹೊಸ ವರ್ಷ ಶುರುವಾಗಿದೆ. ನೀವೂ ನಿಮ್ಮ ಮಗುವಿಗೆ ಕೆಲವು ವಿಭಿನ್ನ ಉಡುಗೊರೆಗಳನ್ನು ನೀಡಲು ಪ್ಲಾನ್ ಮಾಡಿರಬಹುದು. ಪ್ರಸ್ತುತ ಉಳಿತಾಯ ಮತ್ತು ಹೂಡಿಕೆಯತ್ತ(Money Back Plan)ಜನರ ಆಸಕ್ತಿ ಹೆಚ್ಚಾಗಿದೆ. ಮಗು ಜನಿಸಿದ ಕೂಡಲೇ ಅನೇಕ ಪೋಷಕರು ಅದರ ಭವಿಷ್ಯಕ್ಕಾಗಿ ವಿವಿಧ ಹಣಕಾಸಿನ ಯೋಜನೆ(New Children's Money Back Plan)ಗಳಲ್ಲಿ ಹೂಡಿಕೆ ಮಾಡುತ್ತಾರೆ. ನೀವು ನಿಮ್ಮ ಗಳಿಕೆಯ ಒಂದಷ್ಟು ಭಾಗವನ್ನು ಉಳಿಸಿದರೆ ಸಾಕು ಮಗುವಿನ ಭವಿಷ್ಯವೇ ಬದಲಾಗಿ ಹೋಗುತ್ತದೆ.   

ಹೌದು, LIC ನಿಮಗಾಗಿ ಒಂದು ಉತ್ತಮ ಯೋಜನೆಯನ್ನು ತಂದಿದೆ. ಅದುವೇ ‘ಹೊಸ ಮಕ್ಕಳ ಮನಿ ಬ್ಯಾಕ್ ಯೋಜನೆ’. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗುವಿನ ಭವಿಷ್ಯವನ್ನು ನೀವು ಸುರಕ್ಷಿತವಾಗಿರಿಸಬಹುದು. ಈ ಯೋಜನೆಯಲ್ಲಿ ಮಾಡಿದ ಹೂಡಿಕೆಯು ನಿಮ್ಮ ಮಗುವಿಗೆ ಉತ್ತಮ ಹೊಸ ವರ್ಷದ ಕೊಡುಗೆಯಾಗಲಿದೆ.  

ಇದನ್ನೂ ಓದಿ: PAN card:ಪ್ಯಾನ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಮಾಹಿತಿ! ಈ ತಪ್ಪಿಗೆ ಬೀಳುತ್ತೆ 10 ಸಾವಿರ ರೂ ದಂಡ

ಹೊಸ ಮಕ್ಕಳ ಮನಿ ಬ್ಯಾಕ್ ಯೋಜನೆ (New Children Money Back Plan)

ನಿಮ್ಮ ಮಗುವಿಗೆ ಉತ್ತಮ ಭವಿಷ್ಯ ರೂಪಿಸಲು ಬಯಸಿದರೆ ನೀವು LICಯ (LIC Child Plan 2021) ಸ್ಕೀಮ್ ಹೊಸ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್ (LIC)ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ. ಈ ಸಣ್ಣ ಉಳಿತಾಯದಿಂದ ನಿಮ್ಮ ಮಗು ಮುಂದಿನ ದಿನಗಳಲ್ಲಿ ಮಿಲಿಯನೇರ್ ಆಗುತ್ತದೆ. ಇದಕ್ಕಾಗಿ ನೀವು ಪ್ರತಿದಿನ ಕೇವಲ 150 ರೂ.ಗಳನ್ನು ಉಳಿಸಬೇಕಾಗುತ್ತದೆ.

ಏನಿದು ಹೊಸ ಯೋಜನೆ..?

ಜೀವ ವಿಮಾ ನಿಗಮದ ಹೊಸ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್ ಪಾಲಿಸಿ(New Children Money Back Plan, LIC)ಯನ್ನು 25 ವರ್ಷಗಳವರೆಗೆ ಮಾಡಲಾಗುತ್ತದೆ. ಅಲ್ಲದೆ ನೀವು ಮುಕ್ತಾಯದ ಮೊತ್ತವನ್ನು ಕಂತುಗಳಲ್ಲಿ ಪಡೆಯುತ್ತೀರಿ. ನಿಮ್ಮ ಮಗುವಿಗೆ 18 ವರ್ಷ ತುಂಬಿದಾಗ ಇದನ್ನು ಮೊದಲ ಬಾರಿಗೆ ಪಾವತಿಸಲಾಗುತ್ತದೆ. ಮಗುವಿಗೆ 20 ವರ್ಷವಾದಾಗ 2ನೇ ಬಾರಿ ಮತ್ತು 22 ವರ್ಷ ವಯಸ್ಸಿನವನಾಗಿದ್ದಾಗ 3ನೇ ಬಾರಿ ಹಣ ಪಾವತಿಸಲಾಗುತ್ತದೆ.

ಹಣದ ಮೊತ್ತ ಮತ್ತು ಬೋನಸ್

ಹೊಸ ಮಕ್ಕಳ ಮನಿ ಬ್ಯಾಕ್ ಪ್ಲಾನ್(Money Back Plan)ಅಡಿ ಜೀವ ವಿಮಾದಾರರು ವಿಮಾ ಮೊತ್ತದ ಶೇ.20-20 ರಷ್ಟು ಮನಿ ಬ್ಯಾಕ್ ತೆರಿಗೆಯಾಗಿ ಪಡೆಯುತ್ತಾರೆ. ಇದರೊಂದಿಗೆ ಮಗುವಿಗೆ 25 ವರ್ಷ ತುಂಬಿದಾಗ ಸಂಪೂರ್ಣ ಮೊತ್ತವನ್ನು ಅವನಿಗೆ ಹಿಂತಿರುಗಿಸಲಾಗುತ್ತದೆ. ಉಳಿದ ಶೇ.40ರಷ್ಟು ಮೊತ್ತದೊಂದಿಗೆ ಬೋನಸ್ ಸಹ ನೀಡಲಾಗುತ್ತದೆ. ಈ ರೀತಿ ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಮಗು ವಯಸ್ಕನಾದ ಕೂಡಲೇ ಮಿಲಿಯನೇರ್ ಆಗುತ್ತದೆ.

ಇದನ್ನೂ ಓದಿ: Aadhaar Card:ಆಧಾರ್‌ನ ಹಲವು ನಿಯಮಗಳಲ್ಲಿ ಬದಲಾವಣೆ.! ಇಲ್ಲಿದೆ ಸಂಪೂರ್ಣ ಮಾಹಿತಿ

ಕೇವಲ 150 ರೂ. ಉಳಿತಾಯ ಮಾಡಿ

ಮಗುವಿನ ಭವಿಷ್ಯಕ್ಕಾಗಿ ಆರಂಭಿಸಲಾದ ಈ ವಿಮೆಯ ಕಂತು ವಾರ್ಷಿಕ 55,000 ರೂ. ಆಗುತ್ತದೆ. 365 ದಿನಗಳ ಪ್ರಕಾರ 25 ವರ್ಷಗಳಲ್ಲಿ ಒಟ್ಟು 14 ಲಕ್ಷ ರೂ. ಠೇವಣಿ ಇಡಬೇಕು. ಅದೇ ರೀತಿ ನೀವು ಮುಕ್ತಾಯದ ಮೇಲೆ ಒಟ್ಟು 19 ಲಕ್ಷ ರೂ.ಗಳನ್ನು ಪಡೆಯುತ್ತೀರಿ. ಆದರೆ ಈ ಅವಧಿಯಲ್ಲಿ ವಿಮಾದಾರರು ಸಾವನ್ನಪ್ಪದಿದ್ದರೆ ಮಾತ್ರ ಈ ನಿಯಮ ಅನ್ವಯಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ. ನೀವು ಹಣವನ್ನು ಹಿಂಪಡೆಯಲು ಬಯಸದಿದ್ದರೆ ಪಾಲಿಸಿಯ ಮುಕ್ತಾಯದ ಮೇಲಿನ ಬಡ್ಡಿಯೊಂದಿಗೆ ನೀವು ಪೂರ್ಣ ಮೊತ್ತವನ್ನು ಪಡೆಯುತ್ತೀರಿ.

ಈ ಯೋಜನೆಯ ವಿಶೇಷತೆ ಏನು?

1) ಪಾಲಿಸಿಯನ್ನು ತೆಗೆದುಕೊಳ್ಳುವ ವಯಸ್ಸಿನ ಮಿತಿಯು ಶೂನ್ಯದಿಂದ 12 ವರ್ಷಗಳವರೆಗೆ ಇರುತ್ತದೆ.

2) ಶೇ.60ರಷ್ಟು ಹಣವು ಕಂತುಗಳಲ್ಲಿ ಮತ್ತು ಶೇ.40ರಷ್ಟು ಬೋನಸ್‌ನೊಂದಿಗೆ ಮುಕ್ತಾಯದ ಸಮಯದಲ್ಲಿ ಲಭ್ಯವಾಗುತ್ತದೆ.

3) ಇದರಡಿ ತೆಗೆದುಕೊಳ್ಳಬಹುದಾದ ಕನಿಷ್ಠ ವಿಮೆಯು 1 ಲಕ್ಷ ರೂ. ಮತ್ತು ಗರಿಷ್ಠ ಮಿತಿ ಅನಿಶ್ಚಿತವಾಗಿರುತ್ತದೆ.

4) ಕಂತುಗಳ ಪಾವತಿಯನ್ನು ತೆಗೆದುಕೊಳ್ಳದಿದ್ದರೆ ನಂತರ ಬಡ್ಡಿಯೊಂದಿಗೆ ಒಂದು ದೊಡ್ಡ ಮೊತ್ತವನ್ನು ನೀಡಲಾಗುತ್ತದೆ.

ಪಾಲಿಸಿಯನ್ನು ತೆಗೆದುಕೊಳ್ಳಲು ಈ ದಾಖಲೆಗಳು ಅವಶ್ಯ

1) ಈ ಪಾಲಿಸಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಪೋಷಕರ ವಿಳಾಸ ಪುರಾವೆ ಅಗತ್ಯವಿದೆ.

2) ವಿಮಾದಾರರ ವೈದ್ಯಕೀಯ ಅಗತ್ಯ ದಾಖಲೆಗಳು

3) ಪಾಲಿಸಿಯನ್ನು ತೆಗೆದುಕೊಳ್ಳಲು ಯಾವುದೇ LIC ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಏಜೆಂಟ್‌ನಿಂದ ಫಾರ್ಮ್ ಅನ್ನು ಭರ್ತಿ ಮಾಡಬೇಕು.

4) ಈ ಅವಧಿಯಲ್ಲಿ ವಿಮಾದಾರನು ಮರಣಹೊಂದಿದರೆ ವಿಮಾ ಪ್ರೀಮಿಯಂನ ಶೇ.105ರಷ್ಟು ಹಣವನ್ನು ಪಾವತಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News