Aadhaar Update : NRIsಗೂ ಕೂಡಾ ಸುಲಭವಾಗಿ ಮಾಡಿಸಬಹುದು Aadhaar Card, 6 ತಿಂಗಳು ಕಾಯುವ ಅಗತ್ಯವಿಲ್ಲ

ಇಲ್ಲಿಯವರೆಗೆ ಅನಿವಾಸಿ ಭಾರತೀಯರು ಆಧಾರ್ ಕಾರ್ಡ್ ಮಾಡಿಸಬೇಕಾದರೆ 182 ದಿನಗಳು ಅಥವಾ 6 ತಿಂಗಳುಗಳ ಕಾಲ ಕಾಯಬೇಕಿತ್ತು. ಆದರೆ UIDAI ಈಗ ಈ ಷರತ್ತನ್ನು ಸಡಿಲಿಸಿದೆ. 

Written by - Ranjitha R K | Last Updated : Aug 27, 2021, 04:03 PM IST
  • ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ ಪಡೆಯುವುದು ಸುಲಭವಾಗಿದೆ
  • ಆಧಾರ್‌ಗಾಗಿ ಅರ್ಜಿ ಸಲ್ಲಿಸಲು 6 ತಿಂಗಳು ಕಾಯುವ ಅಗತ್ಯವಿಲ್ಲ
  • ಪಾಸ್ಪೋರ್ಟ್ ಮೂಲಕ ಆಧಾರ್ ಕಾರ್ಡ್ ಮಾಡಬಹುದು
Aadhaar  Update : NRIsಗೂ ಕೂಡಾ ಸುಲಭವಾಗಿ ಮಾಡಿಸಬಹುದು Aadhaar Card, 6 ತಿಂಗಳು ಕಾಯುವ ಅಗತ್ಯವಿಲ್ಲ  title=
Aadhaar Card For NRIs (file photo)

ನವದೆಹಲಿ : Aadhaar Card For NRIs: ಭಾರತೀಯ ನಾಗರಿಕರ ಜೊತೆಗೆ ಅನಿವಾಸಿ ಭಾರತೀಯರಿಗೂ ಈಗ ಆಧಾರ್ ಕಾರ್ಡ್ (Aadhaar card) ಮಾಡಿಸುವುದು ಸುಲಭವಾಗಿದೆ. ಯುಐಡಿಎಐ ಈಗ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ ಮಾಡುವ ನಿಯಮಗಳನ್ನು ಸರಳಗೊಳಿಸಿದೆ. ಆಧಾರ್ ಕಾರ್ಡ್ ಪಡೆಯಲು ಅನಿವಾಸಿ ಭಾರತೀಯರು ಇನ್ನು ಮುಂದೆ ದೀರ್ಘ ಸ್ಮಯದರೆಗೆ ಕಾಯಬೇಕಿಲ್ಲ. 

ಅನಿವಾಸಿ ಭಾರತೀಯರ ಆಧಾರ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ : 
ಇಲ್ಲಿಯವರೆಗೆ ಅನಿವಾಸಿ ಭಾರತೀಯರು ಆಧಾರ್ ಕಾರ್ಡ್ (Aadhaar Card For NRIs) ಮಾಡಿಸಬೇಕಾದರೆ 182 ದಿನಗಳು ಅಥವಾ 6 ತಿಂಗಳುಗಳ ಕಾಲ ಕಾಯಬೇಕಿತ್ತು. ಆದರೆ UIDAI ಈಗ ಈ ಷರತ್ತನ್ನು ಸಡಿಲಿಸಿದೆ. ಭಾರತೀಯ ಪಾಸ್‌ಪೋರ್ಟ್ ಮೂಲಕ ಅನಿವಾಸಿ ಭಾರತೀಯರು, ಭಾರತಕ್ಕೆ ಹಿಂದಿರುಗಿದಾಗ ಆಧಾರ್‌ಗಾಗಿ ಅರ್ಜಿ ಸಲ್ಲಿಸಬಹುದು. ಟ್ವೀಟ್ (Tweet) ಮಾಡುವ ಮೂಲಕ ಯುಐಡಿಎಐ ಈ ಮಾಹಿತಿಯನ್ನು ನೀಡಿದೆ. ಮಾನ್ಯ ಭಾರತೀಯ ಪಾಸ್‌ಪೋರ್ಟ್‌ (Passport) ಹೊಂದಿರುವ ಅನಿವಾಸಿ ಭಾರತೀಯರು, ಭಾರತಕ್ಕೆ ಬಂದ ನಂತರ ಆಧಾರ್‌ಗಾಗಿ ಅರ್ಜಿ ಸಲ್ಲಿಸಬಹುದು ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಇದನ್ನೂ ಓದಿ : Post Office Schemes : ಅತ್ಯುತ್ತಮ ಬಡ್ಡಿ ನೀಡುವ ಟಾಪ್ 5 Post Office ಯೋಜನೆಗಳಿವು

ಮೇ 2020 ರಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಅನಿವಾಸಿ ಭಾರತೀಯರು, ಕಾಯುವ ಅವಧಿಯಿಲ್ಲದೆ ಭಾರತಕ್ಕೆ ಬಂದ ನಂತರ ಆಧಾರ್ ಕಾರ್ಡ್ (Aadhaar Card) ಪಡೆಯುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಪ್ರಸ್ತಾವನೆಯನ್ನು ಬಜೆಟ್ ಮಂಡನೆಯ ಸಮಯದಲ್ಲಿ ನೀಡಲಾಗಿತ್ತು. 

NRI ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ?
1: ನಿಮ್ಮ ಮಾನ್ಯ ಪಾಸ್‌ಪೋರ್ಟ್‌ನೊಂದಿಗೆ ಯಾವುದೇ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ
2: ಆಧಾರ್ ದಾಖಲಾತಿ ಅಧಿಕಾರಿ ನಿಮಗೆ ದಾಖಲಾತಿ ಫಾರ್ಮ್ ನೀಡುತ್ತಾರೆ, ಅದರಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ
3: ನಿಮ್ಮ ಇಮೇಲ್ ಐಡಿಯನ್ನು ಫಾರ್ಮ್ ನಲ್ಲಿ  ನೀಡುವುದು ಕಡ್ಡಾಯವಾಗಿದೆ
4: NRI ಎನ್ ರೋಲ್ ಮೆಂಟ್  ಡಿಕ್ಲರೇಶನ್ ಸ್ವಲ್ಪ ವಿಭಿನ್ನವಾಗಿದೆ.  ಅದನ್ನು ಸರಿಯಾಗಿ ಓದಿ ಮತ್ತು ನಿಮ್ಮ ದಾಖಲಾತಿ ನಮೂನೆಗೆ ಸಹಿ ಮಾಡಿ
5: ನಿಮ್ಮ ಎನ್ ರೋಲ್ ಮೆಂಟ್  NRI ಆಗಿಯೇ ಇಡುವಂತೆ ಆಪರೇಟರ್ ಗೆ ಹೇಳಿ  
6: ಇದಕ್ಕಾಗಿ ನೀವು ಪಾಸ್‌ಪೋರ್ಟ್ ಅನ್ನು ತೋರಿಸಿ, ನಿಮ್ಮ ಗುರುತನ್ನು ಸಾಬೀತುಪಡಿಸಬಹುದು
7: ನೀವು ನಿಮ್ಮ ಪಾಸ್ಪೋರ್ಟ್ ಅನ್ನು ವಿಳಾಸದ ಪುರಾವೆಯಾಗಿ ಮತ್ತು ಹುಟ್ಟಿದ ದಿನಾಂಕದ ಪುರಾವೆಯಾಗಿ ಆಯ್ಕೆ ಮಾಡಬಹುದು ಅಥವಾ ಯಾವುದೇ ಇತರ ಮಾನ್ಯ ದಾಖಲೆಯನ್ನು ಒದಗಿಸಬಹುದು
8: ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
9: ನೀವು ಪಾಸ್ಪೋರ್ಟ್ ಗಾತ್ರದ ಫೋಟೋವನ್ನು (Passport size photo) ನೀಡಬೇಕಾಗುತ್ತದೆ. ನಿಮ್ಮ ಫೋಟೋವನ್ನು ಸ್ಥಳದಲ್ಲೇ ತೆಗೆದುಕೊಂಡು ಅದನ್ನು ಮುದ್ರಿಸಲಾಗುತ್ತದೆ 
10: ಅರ್ಜಿಯ ಸಲ್ಲಿಕೆಗೆ ಅವಕಾಶ ನೀಡುವ ಮೊದಲು ಎಲ್ಲಾ ಮಾಹಿತಿಯನ್ನು ಸ್ಕ್ರೀನ್ ಮೇಲೆ (ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯಲ್ಲಿ) ಪರಿಶೀಲಿಸಿ
11: 
4 ಡಿಜಿಟಲ್ ಕೀ ಎನ್ರೋಲ್ ಮೆಂಟ್ ID, ದಿನಾಂಕ ಮತ್ತು ಸಮಯ ಸ್ಟ್ಯಾಂಪ್ ಹೊಂದಿರುವ ಏಕ್ ನಾಲೆಜ್ ಸ್ಲಿಪ್, ಎನ್ರೋಲ್ ಮೆಂಟ್ ಸ್ಲಿಪ್ 1 ಅನ್ನು ಪಡೆದುಕೊಳ್ಳಿ. 
12: ನಿಮ್ಮ ಆಧಾರ್ ಸ್ಟೇಟಸ್ ಅನ್ನು  https://resident.uidai.gov.in/check-aadhaar ನಲ್ಲಿ ಚೆಕ್ ಮಾಡಿಕೊಳ್ಳಿ 
13: ಆಧಾರ್ ಕಾರ್ಡ್ ಜನರೇಟ್ ಮಾಡಲು ಮತ್ತು ಕಳುಹಿಸಲು 90 ದಿನಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಕಾಯಿರಿ

ಇದನ್ನೂ ಓದಿ : Employee Pension Scheme: ಕನಿಷ್ಠ ಪಿಂಚಣಿ ರೂ.9000ಕ್ಕೆ ಏರಿಕೆ! ಸೆಪ್ಟೆಂಬರ್ 6ಕ್ಕೆ EPFO ಮಂಡಳಿ ಕೈಗೊಳ್ಳುವುದೇ ಈ ನಿರ್ಧಾರ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News