ಆಧಾರ್ ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾದೀತು ದಂಡ

ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಲು ಸರ್ಕಾರ ಸೆಪ್ಟೆಂಬರ್ 30ರವರೆಗೆ ಗಡುವು ನೀಡಿದೆ. ಈ  ದಿನಾಂಕದ ಮೊದಲು  ಮೊದಲು ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಬೇಕು.

Written by - Ranjitha R K | Last Updated : Aug 17, 2021, 03:36 PM IST
  • ಸೆಪ್ಟೆಂಬರ್ 30 ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯ.
  • 30 ಸೆಪ್ಟೆಂಬರ್ ನಂತರ 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ
  • ಸಂದೇಶ ಕಳುಹಿಸುವ ಮೂಲಕವೂ ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಬಹುದು
ಆಧಾರ್ ಗೆ ಸಂಬಂಧಿಸಿದ ಈ ಕೆಲಸವನ್ನು ತಕ್ಷಣ ಮಾಡಿ ಮುಗಿಸಿ, ಇಲ್ಲವಾದರೆ ತೆರಬೇಕಾದೀತು ದಂಡ title=
ಸೆಪ್ಟೆಂಬರ್ 30 ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯ. (file photo)

ನವದೆಹಲಿ : ಸೆಪ್ಟೆಂಬರ್ 30 ರ ಒಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ (Pan Aadhaar link) ಮಾಡುವುದು ಕಡ್ಡಾಯವಾಗಿದೆ. ಇಲ್ಲಿಯವರೆಗೆ  ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಿರದಿದ್ದರೆ, ಸೆಪ್ಟೆಂಬರ್ 30 ರ ಮೊದಲು ಈ ಕೆಲಸವನ್ನು ಮಾಡಿ ಮುಗಿಸಿ.  ಇಲ್ಲವಾದರೆ, 1000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗಬಹುದು. ಸೆಕ್ಷನ್ 234H ಅಡಿಯಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಮಾರ್ಚ್ 23 ರಂದು ಲೋಕಸಭೆಯಲ್ಲಿ ಅಂಗೀಕರಿಸಿದ ಹಣಕಾಸು ಮಸೂದೆ 2021 ರ ಅಡಿಯಲ್ಲಿ, ಸರ್ಕಾರ ಇದನ್ನು ಅಂಗೀಕರಿಸಿದೆ. 

ಸರ್ಕಾರ ನಿಗದಿ ಮಾಡಿರುವ ಗಡುವು : 
ಪ್ಯಾನ್ ಅನ್ನು ಆಧಾರ್ ಜೊತೆಗೆ ಲಿಂಕ್ (Pan Aadhaar link) ಮಾಡಲು ಸರ್ಕಾರ ಸೆಪ್ಟೆಂಬರ್ 30ರವರೆಗೆ ಗಡುವು ನೀಡಿದೆ. ಈ  ದಿನಾಂಕದ ಮೊದಲು  ಮೊದಲು ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಬೇಕು. ಇಲ್ಲವಾದರೆ, 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ಪ್ಯಾನ್ (PAN Card) ನಿಷ್ಪ್ರಯೋಜಕವಾಗುತ್ತದೆ ಎನ್ನುವುದು ಕೂಡಾ ನೆನಪಿರಲಿ. ಪ್ಯಾನ್ ಜೊತೆಗೆ ಆಧಾರ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆ ಬಹಳ ಸುಲಭವಾಗಿದೆ. 

ಇದನ್ನೂ ಓದಿ :  LIC's Superhit Policy: ಕೇವಲ 233 ರೂ. ಹೂಡಿಕೆ ಮಾಡಿ 17 ಲಕ್ಷ ಪಡೆಯಿರಿ

ಮನೆಯಲ್ಲಿ ಕುಳಿತು ಪಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ತಿಳಿಯಿರಿ : 
1. ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆ ಲಿಂಕ್ ಮಾಡಿದ್ದರೆ, ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು 
2. ಮೊದಲಿಗೆ ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ www.incometaxindiaefiling.gov.in ನ ಹೊಸ ವೆಬ್‌ಸೈಟ್ https://www.incometax.gov.in/iec/foportalಗೆ ಹೋಗಿ. 
3. ಇಲ್ಲಿ ಕೆಳಭಾಗದಲ್ಲಿರುವ'Link Aadhaar' ಆಯ್ಕೆಯನ್ನು ಕ್ಲಿಕ್ ಮಾಡಿ
4. ನಿಮ್ಮ ಸ್ಟೇಟಸ್ ವೀಕ್ಷಿಸಲು 'Click here' ಮೇಲೆ ಕ್ಲಿಕ್ ಮಾಡಿ.
5. ಇಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ.
6. ನಿಮ್ಮ ಪ್ಯಾನ್ ಕಾರ್ಡ್ ಈಗಾಗಲೇ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿದ್ದರೆ, your PAN is linked to Aadhaar Number ಎಂಬ ಮೆಸೇಜ್ ಕಾಣಿಸುತ್ತದೆ. 
7. ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್  ಆಗಿರದಿದ್ದರೆ https://www.incometaxindiaefiling.gov.in/home. ಈ  ಲಿಂಕ್ ಅನ್ನು ಕ್ಲಿಕ್ ಮಾಡಿ
8. ಈಗ Link Aadhaar ಮೇಲೆ ಕ್ಲಿಕ್ ಮಾಡಿ.
9.  ನಿಮ್ಮ ವಿವರಗಳನ್ನು ಇಲ್ಲಿ ಭರ್ತಿ ಮಾಡಿ.
10. ಇದರ ನಂತರ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲಾಗುತ್ತದೆ.

ಇದನ್ನೂ ಓದಿ :  Income Tax Savings Tips : 10 ಲಕ್ಷದ ಮೇಲೆ ಸಂಬಳ ಪಡೆಯುತ್ತೀರಾ ಹಾಗಿದ್ರೆ ನೀವು Tax ಕಟ್ಟಬೇಕಿಲ್ಲ : ಅದಕ್ಕೆ ಈ ರೀತಿಯಾಗಿ ಪ್ಲಾನ್ ಮಾಡಿ

ಮೆಸೇಜ್ ಮಾಡುವ ಮೂಲಕವೂ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು :
ನಿಮ್ಮ ಬಳಿ ಸ್ಮಾರ್ಟ್ ಫೋನ್ (Smartphone) ಅಥವಾ ಲ್ಯಾಪ್ ಟಾಪ್ ಇಲ್ಲದಿದ್ದರೆ, ನೀವು ಎಸ್ ಎಂಎಸ್ ಕಳುಹಿಸುವ ಮೂಲಕ ಪ್ಯಾನ್ ಮತ್ತು ಆಧಾರ್ ಕಾರ್ಡ್ (Aadhaar card)  ಅನ್ನು ಕೂಡ ಲಿಂಕ್ ಮಾಡಬಹುದು. SMS ಸೇವೆಯನ್ನು ಬಳಸಲು, ನಿಮ್ಮ ನೋಂದಾಯಿತ ಸಂಖ್ಯೆಯಿಂದ UIDPAN <12-ಅಂಕಿಯ ಆಧಾರ್> <10-ಅಂಕಿಯ ಪ್ಯಾನ್> ನಂಬರ್ ಟೈಪ್ ಮಾಡಿ, 567678 ಅಥವಾ 561561 ಗೆ SMS ಕಳುಹಿಸಬೇಕು. ಇಷ್ಟು ಮಾಡಿದ ನಂತರ  ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಬಗ್ಗೆ ಮೆಸೇಜ್  ಬರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News