Jeevan Jyoti Bima Yojana : ಜನರಿಗಾಗಿ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಲೇ ಇದೆ. ಈ ಯೋಜನೆಗಳ ಮೂಲಕ ಜನರಿಗೆ ವಿವಿಧ ಪ್ರಯೋಜನಗಳನ್ನು ಕೂಡಾ ನೀಡಲಾಗುತ್ತದೆ. ಇವುಗಳಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಕೂಡಾ ಮುಖ್ಯವಾದದ್ದು. ಈ ಯೋಜನೆಯ ಮೂಲಕ ಜನರಿಗೆ ಹಲವು ಸವಲತ್ತುಗಳನ್ನು ನೀಡಲಾಗಿದೆ. ಅಲ್ಲದೆ, ಈ ಯೋಜನೆಗೆ ಬ್ಯಾಂಕ್‌ನಿಂದಲೇ ನೇರ ಪ್ರೀಮಿಯಂ ಪಾವತಿಸಬಹುದು.
ಏನಿದು ಯೋಜನೆ? :
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ 18 ರಿಂದ 50 ವರ್ಷ ವಯಸ್ಸಿನ ಜನರಿಗೆ ಲಭ್ಯವಿರುವ ವಿಮಾ ಯೋಜನೆಯಾಗಿದೆ. ಈ ಯೋಜನೆಯ ಮೂಲಕ, ವಿಮಾದಾರರ ಮರಣದ ಸಂದರ್ಭದಲ್ಲಿ 2 ಲಕ್ಷ ರೂಪಾಯಿಗಳ ರಿಸ್ಕ್ ಕವರೇಜ್ ಲಭ್ಯವಿರುತ್ತದೆ. ಒಬ್ಬ ವ್ಯಕ್ತಿಯು ಪ್ರತಿ ವರ್ಷ436 ರೂ. ವಾರ್ಷಿಕ ಪ್ರೀಮಿಯಂ ಪಾವತಿಸುವ ಮೂಲಕ ಯೋಜನೆಯನ್ನು ಪ್ರಾರಂಭಿಸಬಹುದು.
ಇದನ್ನೂ ಓದಿ : Tax Saving Tips : ಆದಾಯ ತೆರಿಗೆ ಉಳಿಸಲು ಉತ್ತಮ ಅವಕಾಶ,
ಆಟೋ -ಡೆಬಿಟ್ :
ಈ ಮೊತ್ತವನ್ನು ಪ್ರತಿ ವರ್ಷ ಮೇ 31 ಅಥವಾ ಅದಕ್ಕೂ ಮೊದಲು ಗ್ರಾಹಕರ ಖಾತೆಯಿಂದ ಡೆಬಿಟ್ ಮಾಡಲಾಗುತ್ತದೆ. ವಿಮೆಯ ಅವಧಿಯು ಪ್ರತಿ ವರ್ಷ ಜೂನ್ 1 ರಿಂದ ಮೇ 31 ರವರೆಗೆ ಇರುತ್ತದೆ. ಜನವರಿ 11 2023 ರವರೆಗೆ ಒಟ್ಟು 14.96 ಕೋಟಿ ಜನರನ್ನು ಈ ಯೋಜನೆಗೆ ನೋಂದಾಯಿಸಲಾಗಿದೆ. ಇಲ್ಲಿವರೆಗೆ 6,39,032 ಕ್ಲೈಮ್‌ಗಳನ್ನು ಪಾವತಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಪ್ರೀಮಿಯಂ ಆಟೋ ಡೆಬಿಟ್ ಆಗುತ್ತದೆ.
KYC :
ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಪ್ರಾಥಮಿಕ KYC ಆಗಿರುತ್ತದೆ. ಈ ಯೋಜನೆಯನ್ನು ಜೀವ ವಿಮಾ ನಿಗಮ ಮತ್ತು ಇತರ ಎಲ್ಲಾ ಜೀವ ವಿಮಾ ಕಂಪನಿಗಳ ಮೂಲಕ ನೀಡಲಾಗುತ್ತಿದೆ. ಅಗತ್ಯ ಷರತ್ತುಗಳೊಂದಿಗೆ ಮಾತ್ರ ಯೋಜನೆಯನ್ನು ಪಡೆಯಬಹುದು.
ಇದನ್ನೂ ಓದಿ : Holi Special Trains 2023: ಹೋಳಿ ಹಬ್ಬಕ್ಕೂ ಮುನ್ನ ಯಾತ್ರಿಗಳಿಗೆ ಸಂತಸದ ಸುದ್ದಿ ಪ್ರಕಟಿಸಿದ ಭಾರತೀಯ ರೇಲ್ವೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.