Bharat Rice:ಇಂದಿನಿಂದ ಕೇವಲ 29 ರೂಪಾಯಿಗೆ ಅಕ್ಕಿ !ಕೇಂದ್ರ ಸರ್ಕಾರದ ಮಹತ್ವದ ಭಾರತ್ ರೈಸ್ ಯೋಜನೆಗೆ ಚಾಲನೆ

Bharat Rice : ಭಾರತ್ ಅಕ್ಕಿ ಯೋಜನೆಗೆ ಇಂದು ಸಂಜೆ ಚಾಲನೆ‌ ಸಿಗಲಿದೆ. ಇದಕ್ಕಾಗಿ ಗೋಡಾನ್ ನಿಂದ ಅಕ್ಕಿ ಪ್ಯಾಕೇಟ್ ಗಳನ್ನು ಲೋಡ್ ಮಾಡಲಾಗುತ್ತಿದೆ. 100 ಗಾಡಿಯಲ್ಲಿ ಅಕ್ಕಿ ಲೋಡ್ ಮಾಡಲಾಗುತ್ತಿದೆ.

Written by - Ranjitha R K | Last Updated : Feb 6, 2024, 01:56 PM IST
  • ಭಾರತ್ ಅಕ್ಕಿ ಯೋಜನೆಗೆ ಇಂದು ಸಂಜೆ ಚಾಲನೆ‌
  • 5-10 ಕೆಜಿ ಬ್ಯಾಗ್ ಗಳಲ್ಲಿ ಮಾರಾಟ
  • ಪ್ರತಿ ಕೆಜಿಗೆ 29 ರೂ.ನಂತೆ 'ಭಾರತ್ ರೈಸ್'
Bharat Rice:ಇಂದಿನಿಂದ ಕೇವಲ 29 ರೂಪಾಯಿಗೆ ಅಕ್ಕಿ !ಕೇಂದ್ರ ಸರ್ಕಾರದ ಮಹತ್ವದ  ಭಾರತ್ ರೈಸ್ ಯೋಜನೆಗೆ ಚಾಲನೆ  title=

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ಪರಿಹಾರ ನೀಡಲು ಕೇಂದ್ರ ಸ್ರಕರಾ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆಹಾರ ಧಾನ್ಯಗಳನ್ನು ಕಡಿಮೆ ಬೆಲೆಯಲ್ಲಿ ಜನ ಸಾಮಾನ್ಯರಿಗೆ ಒದಗಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ್ ದಾಲ್, ಭಾರತ್ ಗೋಧಿ ಹಿಟ್ಟಿನ ಬಳಿಕ ಇದೀಗ ಭಾರತ್ ಅಕ್ಕಿ ಮಾರಾಟಕ್ಕೆ ಸರ್ಕಾರ ಮುಂದಾಗಿದೆ. ಈ ಯೋಜನೆ ಅಡಿಯಲ್ಲಿ ಕೇವಲ 29 ರೂಪಾಯಿಗೆ ಜನ ಸಾಮಾನ್ಯರಿಗೆ ಅಕ್ಕಿ ಮಾರಾಟ ಮಾಡಲಾಗುವುದು.  ಇಂದಿನಿಂದಲೇ ದೇಶಾದ್ಯಂತ ಭಾರತ್ ಅಕ್ಕಿಯ (Bharat Rice) ಮಾರಾಟಕ್ಕೆ ಚಾಲನೆ ಸಿಗಲಿದೆ.  

5-10 ಕೆಜಿ ಬ್ಯಾಗ್ ಗಳಲ್ಲಿ ಮಾರಾಟ :
ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಮಳಿಗೆಗಳು ಮತ್ತು ಇ-ಕಾಮರ್ಸ್ ತಾಣಗಳ ಮೂಲಕ ಅಕ್ಕಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಅಡಿಯಲ್ಲಿ ಪ್ರತಿ ಕೆಜಿಗೆ 29 ರೂ.ನಂತೆ 'ಭಾರತ್ ರೈಸ್' (Bharat Rice) ಮಾರಾಟ ಮಾಡಲಾಗುವುದು. ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಕೆಜಿ ಹಾಗೂ 10 ಕೆಜಿ ಪ್ಯಾಕೆಟ್  ನಲ್ಲಿ Bharat Rice ಅನ್ನು ಮಾರಾಟ ಮಾಡಲಾಗುತ್ತಿದೆ.  

ಇದನ್ನೂ ಓದಿ :PPF: ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಪಿ‌ಪಿ‌ಎಫ್ ಖಾತೆ ತೆರೆಯಬಹುದು? ಮಕ್ಕಳ ಖಾತೆಯಲ್ಲಿ ಪೋಷಕರಿಗೆ ಸಿಗುತ್ತಾ ಟಾಕ್ಸ್ ಪ್ರಯೋಜನ?

ಇಂದು ಸಂಜೆ ಚಾಲನೆ :
ಭಾರತ್ ಅಕ್ಕಿ ಯೋಜನೆಗೆ ಇಂದು ಸಂಜೆ ಚಾಲನೆ‌ ಸಿಗಲಿದೆ. ಇದಕ್ಕಾಗಿ ಗೋಡಾನ್ ನಿಂದ ಅಕ್ಕಿ ಪ್ಯಾಕೇಟ್ ಗಳನ್ನು ಲೋಡ್ ಮಾಡಲಾಗುತ್ತಿದೆ. 100 ಗಾಡಿಯಲ್ಲಿ ಅಕ್ಕಿ ಲೋಡ್ ಮಾಡಲಾಗುತ್ತಿದೆ.ಪ್ರತಿ ಗಾಡಿಯಲ್ಲಿ ಸಾವಿರ ಕೆಜಿ ಅಕ್ಕಿ ಲೋಡ್ ಮಾಡಲಾಗುತ್ತಿದೆ. 

ಹಣದುಬ್ಬರಕ್ಕೆ ಕಡಿವಾಣ ಹಾಕಲು ಈಗಾಗಲೇ 'ಭಾರತ್ ಅಟ್ಟ' ಅಂದರೆ ಗೋಧಿ ಹಿಟ್ಟನ್ನು ಕೆ.ಜಿಗೆ 27.50 ರೂ. ಯಂತೆ, 'ಭಾರತ್ ದಾಲ್' ಅನ್ನು ಕೆ.ಜಿಗೆ 60 ರೂ. ಯಂತೆ ಮಾರಾಟ ಮಾಡಲಾಗುತ್ತಿದೆ.ಇನ್ನು ಭಾರತ್ ರೈಸ್ ಯೋಜನೆ ಅಡಿಯಲ್ಲಿ ಹೊಸ ದರದ ಅಕ್ಕಿ ದಾಸ್ತಾನು ಬಗ್ಗೆ ಮಾಹಿತಿ ನೀಡುವಂತೆ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳು ಮತ್ತು ಆಹಾರ ಸಂಸ್ಕರಣೆದಾರರಿಗೆ ಈಗಾಗಲೇ ತಿಳಿಸಲಾಗಿದೆ. 

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ಡಬಲ್ ಜಾಕ್ ಪಾಟ್: ಡಿಎ ಜೊತೆಗೆ ಕೈ ಸೇರಲಿದೆ 18 ತಿಂಗಳ ಡಿಎ ಅರಿಯರ್ಸ್ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News