Railway Passengers Special Rights : ರೈಲಿನಲ್ಲಿ ಪ್ರಯಾಣಿಸುವಾಗ, ರೈಲ್ವೇ ತನ್ನ ಪ್ರಯಾಣಿಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತದೆ. ರೈಲ್ವೆ ಒದಗಿಸುವ ಸೌಲಭ್ಯಗಳ ಬಗ್ಗೆ ಅನೇಕರಿಗೆ ಮಾಹಿತಿಯೇ ಇರುವುದಿಲ್ಲ. ರೈಲು ಟಿಕೆಟ್ ಖರೀದಿಸುವ ಮೂಲಕ, ಪ್ರಯಾಣಿಕರು ಟಿಕೆಟ್ ಜೊತೆಗೆ ಅನೇಕ ಹಕ್ಕುಗಳನ್ನು ಕೂಡಾ ಪಡೆಯುತ್ತಾರೆ. ಅದು ಕೂಡಾ ಸಂಪೂರ್ಣವಾಗಿ ಉಚಿತವಾಗಿ. ಇದು ಉಚಿತ ಬೆಡ್‌ರೋಲ್‌ಗಳಿಂದ ಹಿಡಿದು ರೈಲಿನಲ್ಲಿ ಉಚಿತ ಆಹಾರದವರೆಗಿನ ಹಕ್ಕುಗಳನ್ನು ಒಳಗೊಂಡಿದೆ. ರೈಲ್ವೇ ಈ ಎಲ್ಲಾ ಸೌಲಭ್ಯಗಳನ್ನು ಪ್ರಯಾಣಿಕರಿಗೆ ಯಾವಾಗ ಮತ್ತು ಹೇಗೆ ಒದಗಿಸುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
ಉಚಿತ ಬೆಡ್ ರೋಲ್ :
ಭಾರತೀಯ ರೈಲ್ವೇ ತನ್ನ ಎಲ್ಲಾ AC1, AC2, AC3 ಕೋಚ್‌ಗಳಲ್ಲಿ ತನ್ನ ಪ್ರಯಾಣಿಕರಿಗೆ ಒಂದು ಹೊದಿಕೆ, ಒಂದು ದಿಂಬು, ಎರಡು ಬೆಡ್‌ಶೀಟ್‌ಗಳು ಮತ್ತು ಒಂದು ಕೈ ಟವೆಲ್ ಅನ್ನು ಒದಗಿಸುತ್ತದೆ. ಆದರೆ, ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ
ಇದಕ್ಕಾಗಿ 25 ರೂ. ನೀಡಬೇಕಾಗುತ್ತದೆ. ಇದಲ್ಲದೆ, ಕೆಲವು ರೈಲುಗಳಲ್ಲಿ, ಪ್ರಯಾಣಿಕರು ಸ್ಲೀಪರ್ ಕ್ಲಾಸ್‌ನಲ್ಲಿ ಕೂಡಾ ಬೆಡ್‌ರೋಲ್‌ಗಳನ್ನು ಪಡೆಯಬಹುದು. ರೈಲು ಪ್ರಯಾಣದ ಸಮಯದಲ್ಲಿ ನಿಮಗೆ ಬೆಡ್‌ರೋಲ್ ಸಿಗದೇ ಹೋದರೆ ಆ ಬಗ್ಗೆ ದೂರು ನೀಡಬಹುದು ಮಾತ್ರವಲ್ಲ ರಿಫಂಡ್ ಕೂಡಾ ಪಡೆಯಬಹುದು.
ಇದನ್ನೂ ಓದಿ : ವೈಯಕ್ತಿಕ ಸಾಲ ತೆಗೆದುಕೊಳ್ಳುವ ಬದಲು ಇಲ್ಲಿಂದ ಹಣ ಪಡೆದುಕೊಳ್ಳಿ, ಹೊರೆ ಕಮ್ಮಿಯಾಗುತ್ತೆ!
ಉಚಿತ ವೈದ್ಯಕೀಯ ಸಹಾಯ :
ರೈಲಿನಲ್ಲಿ ಪ್ರಯಾಣಿಸುವಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ನಿಮಗೆ ರೈಲ್ವೇಯು ಉಚಿತವಾಗಿ ಪ್ರಥಮ ಚಿಕಿತ್ಸೆ ನೀಡುತ್ತದೆ. ಸ್ಥಿತಿ ಗಂಭೀರವಾಗಿದ್ದರೆ, ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತದೆ. ಇದಕ್ಕಾಗಿ ನೀವು ಫ್ರಂಟ್ ಲೈನ್ ನೌಕರರು, ಟಿಕೆಟ್ ಕಲೆಕ್ಟರ್‌ಗಳು, ರೈಲು ಅಧೀಕ್ಷಕರನ್ನು ಸಂಪರ್ಕಿಸಬಹುದು. ಅಗತ್ಯವಿದ್ದರೆ, ಭಾರತೀಯ ರೈಲ್ವೇಯು ಮುಂದಿನ ರೈಲು ನಿಲುಗಡೆಯಲ್ಲಿ ನಿಮಗೆ ವೈದ್ಯಕೀಯ ಚಿಕಿತ್ಸೆಯನ್ನು ಸಮಂಜಸವಾದ ಶುಲ್ಕದಲ್ಲಿ ವ್ಯವಸ್ಥೆ ಮಾಡುತ್ತದೆ.
ಉಚಿತ ಆಹಾರ :
ನೀವು ರಾಜಧಾನಿ, ದುರಂತೋ ಮತ್ತು ಶತಾಬ್ದಿಯಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದು, ನಿಮ್ಮ ರೈಲು 2 ಗಂಟೆಗಳಿಗಿಂತ ಹೆಚ್ಚು ತಡವಾಗಿದ್ದರೆ, ರೈಲ್ವೆ ನಿಮಗೆ ಉಚಿತ ಆಹಾರವನ್ನು ನೀಡುತ್ತದೆ. ಇದಲ್ಲದೆ, ನಿಮ್ಮ ರೈಲು ತಡವಾಗಿದ್ದು, ನಿಮಗೆ ತಿನ್ನುವುದಕ್ಕೆ ಆಹಾರದ ಅಗತ್ಯವಿದೆ ಎಂದಾದರೆ ರೈಲಿನಲ್ಲಿ ಆರ್ ಇ -ಕ್ಯಾಟರಿಂಗ್ ಸರ್ವಿಸ್ ಮೂಲಕ ಆಹಾರವನ್ನು ಆರ್ಡರ್ ಮಾಡಬಹುದು.
ಇದನ್ನೂ ಓದಿ : ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಬದಲಾವಣೆಗಳು ! ಈಗ ಸಿಗುವುದು ಹೆಚ್ಚಿನ ಪ್ರಯೋಜನಗಳು !
ನಿಮ್ಮ ಸಾಮಾನು ಸರಂಜಾಮುಗಳನ್ನು ಒಂದು ತಿಂಗಳು ನಿಲ್ದಾಣದಲ್ಲಿ ಇರಿಸಬಹುದು :
ದೇಶದ ಎಲ್ಲಾ ಪ್ರಮುಖ ರೈಲು ನಿಲ್ದಾಣಗಳಲ್ಲಿ ಕ್ಲೋಕ್‌ರೂಮ್‌ಗಳು ಮತ್ತು ಲಾಕರ್ ರೂಮ್‌ಗಳು ಇರುತ್ತವೆ. ಈ ಲಾಕರ್ ಕೊಠಡಿಗಳು ಮತ್ತು ಕ್ಲೋಕ್‌ರೂಮ್‌ಗಳಲ್ಲಿ ನಿಮ್ಮ ವಸ್ತುಗಳನ್ನು ನೀವು ಗರಿಷ್ಠ 1 ತಿಂಗಳವರೆಗೆ ಇರಿಸಬಹುದು. ಆದರೆ ಇದಕ್ಕೆ ಸ್ವಲ್ಪ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಫ್ರೀ ವೈಟಿಂಗ್ ಹಾಲ್ :
ಯಾವುದೇ ನಿಲ್ದಾಣದಲ್ಲಿ ಇಳಿದ ನಂತರ, ಮುಂದಿನ ರೈಲನ್ನು ಹಿಡಿಯಲು ನೀವು ನಿಲ್ದಾಣದಲ್ಲಿ ಸ್ವಲ್ಪ ಸಮಯ ಕಾಯಬೇಕಾದರೆ ಅಥವಾ ಬೇರೆ ಯಾವುದಾದರೂ ಕೆಲಸದ ನಿಮಿತ್ತ ನಿಲ್ದಾಣದಲ್ಲಿ ಉಳಿಯಬೇಕಾದರೆ, ಎಸಿ ಅಥವಾ ನಾನ್ ಎಸಿ ವೇಟಿಂಗ್ ಹಾಲ್‌ನಲ್ಲಿ ಆರಾಮವಾಗಿ ಕಾಯಬಹುದು. ಇದಕ್ಕಾಗಿ ನೀವು ನಿಮ್ಮ ರೈಲು ಟಿಕೆಟ್ ತೋರಿಸಬೇಕು.
ಇದನ್ನೂ ಓದಿ : ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ ! 2024 ರ ಆರಂಭದಲ್ಲಿಯೇ ಆಗುವುದು ವೇತನದಲ್ಲಿ ಹೆಚ್ಚಳ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.