Budget 2023: ಬಡವರಿಗೆ ಸಿಗಲಿದೆ ಉಚಿತ ಸಿಲಿಂಡರ್! ಉಜ್ವಲಾ ಯೋಜನೆಯ ಬಜೆಟ್ ಹೆಚ್ಚಳಕ್ಕೆ ಸರ್ಕಾರದ ಚಿಂತನೆ

Union Budget 2023: ಉಜ್ವಲಾ ಯೋಜನೆಯ ಅಡಿ ಕೇಂದ್ರ ಸರ್ಕಾರ ಬಡವರಿಗೆ ಉಚಿತ ಸಿಲಿಂಡರ್ ನೀಡುತ್ತದೆ. ಈ ಬಾರಿಯ ಬಜೆಟ್ ನಲ್ಲಿಯೂ ಕೂಡ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದುವರೆಸುವ ಸಾಧ್ಯತೆ ಇದೆ. ಇದಲ್ಲದೆ ಸಿಲಿಂಡರ್ ಮೇಲಿನ ಸಬ್ಸಿಡಿ ಕೂಡ ಹೆಚ್ಚಿಸುವ ಸಾಧ್ಯತೆ ಇದೆ.  

Written by - Nitin Tabib | Last Updated : Jan 30, 2023, 01:06 PM IST
  • ಹಣಕಾಸು ಸಚಿವಾಲಯವು ಈ ಯೋಜನೆಯನ್ನು ಇನ್ನೂ ಒಂದು ಆರ್ಥಿಕ ವರ್ಷಕ್ಕೆ ವಿಸ್ತರಿಸಬಹುದು.
  • ಈ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ LPG ಗ್ಯಾಸ್ ಸಂಪರ್ಕಗಳನ್ನು ನೀಡಲಾಗುತ್ತದೆ.
  • ಇದಕ್ಕಾಗಿ ಅವರಿಗೆ 1,600 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ.
Budget 2023: ಬಡವರಿಗೆ ಸಿಗಲಿದೆ ಉಚಿತ ಸಿಲಿಂಡರ್! ಉಜ್ವಲಾ ಯೋಜನೆಯ ಬಜೆಟ್ ಹೆಚ್ಚಳಕ್ಕೆ ಸರ್ಕಾರದ ಚಿಂತನೆ title=
ಬಜೆಟ್ 2023

Ujjwala Yojana Update: ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1000 ರೂ.ಗೂ ಅಧಿಕವಾಗಿದೆ. ಹೀಗಿರುವಾಗ ಈ ಬಾರಿಯ ಬಜೆಟ್ ನಲ್ಲಿ ಅಡುಗೆ ಮನೆ ಖರ್ಚು ಕಡಿಮೆ ಆಗಬಹುದೆಂಬ ನಿರೀಕ್ಷೆಯಲ್ಲಿ ಮಹಿಳೆಯರಿದ್ದಾರೆ. ಇದಕ್ಕಾಗಿ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಈ ಯೋಜನೆಗಾಗಿ ಸರ್ಕಾರವು ಸುಮಾರು 5812 ಕೋಟಿಗಳ ಬಜೆಟ್ ಅನ್ನು ಮೀಸಲಿರಿಸಿದೆ. ಇದಲ್ಲದೆ, ಈ ಯೋಜನೆಯಡಿಯಲ್ಲಿ ವರ್ಷದ 12 ಸಿಲಿಂಡರ್‌ಗಳ ಮೇಲೆ 200 ರೂ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರ ಈ ಅನುದಾನವನ್ನು ಇನ್ನಷ್ಟು ಮುಂದುವರಿಸುವ ನಿರೀಕ್ಷೆ ಇದೆ.

ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ
ಉಜ್ವಲ ಯೋಜನೆಯಡಿ ಲಭ್ಯವಿರುವ 12 ಗ್ಯಾಸ್ ಸಿಲಿಂಡರ್‌ಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಸಬ್ಸಿಡಿ ಅಡಿಯಲ್ಲಿ ಜನರಿಗೆ ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ 200 ರೂ. ನೀಡಲಾಗುತ್ತಿದೆ. ಆದರೆ ಇದೀಗ  ಸರ್ಕಾರ ಅದನ್ನು ಮುಂದಿನ ಹಣಕಾಸು ವರ್ಷಕ್ಕೂ ವಿಸ್ತರಿಸಬಹುದು ಎಂದು ಮೂಲಗಳು ವರದಿ ಮಾಡಿವೆ. ಮಾಧ್ಯಮ ವರದಿಗಳ ಪ್ರಕಾರ, ಶೇ.100 ರಷ್ಟು ಜನರನ್ನು ತಲುಪಲು ಸರ್ಕಾರವು ಈ ಯೋಜನೆಯನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಬಹುದು ಎನ್ನಲಾಗಿದೆ.

ಇದನ್ನೂ ಓದಿ-ಕೇವಲ 30,000ಕ್ಕೆ ಮನೆಗೆ ತನ್ನಿ ಈ ಜಬರ್ದಸ್ತ್ ಹೊಂಡಾ ಬೈಕ್ !

9 ಕೋಟಿ ಫಲಾನುಭವಿಗಳು ಇದರ ಪ್ರಯೋಜನ
ಕಳೆದ ಕೆಲ ವರ್ಷಗಳಲ್ಲಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಅಪಾರ ಹೆಚ್ಚಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇ 2021 ರಲ್ಲಿ 200 ರೂಪಾಯಿಗಳ ಸಬ್ಸಿಡಿಯನ್ನು ಘೋಷಿಸಿದ್ದರು. ಇದರಿಂದ ಬಡವರ ಹೊರೆ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಈ ಯೋಜನೆಯು ಆರ್ಥಿಕ ವರ್ಷದಲ್ಲಿ ಕೇವಲ 12 ಸಿಲಿಂಡರ್‌ಗಳಿಗೆ ಮಾತ್ರ ಎಂಬುದನ್ನು ನೆನಪಿನಲ್ಲಿಡಿ. ಈ ಯೋಜನೆಯಿಂದ 9 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ಈ ಯೋಜನೆಗಾಗಿ 5812 ಕೋಟಿ ರೂ.ಮೀಸಲಿರಿಸಿದೆ.

ಇದನ್ನೂ ಓದಿ-Budget 2023: ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಪಾವತಿದಾರರಿಗೆ ಸಿಗಲಿದೆ ಭಾರಿ ಸಂತಸದ ಸುದ್ದಿ!

ಏನಿದು ಉಜ್ವಲ ಯೋಜನೆ
ಹಣಕಾಸು ಸಚಿವಾಲಯವು ಈ ಯೋಜನೆಯನ್ನು ಇನ್ನೂ ಒಂದು ಆರ್ಥಿಕ ವರ್ಷಕ್ಕೆ ವಿಸ್ತರಿಸಬಹುದು. ಈ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ LPG ಗ್ಯಾಸ್ ಸಂಪರ್ಕಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಅವರಿಗೆ 1,600 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಇದಲ್ಲದೇ ಉಚಿತ ರೀಫಿಲ್ ಮತ್ತು ಸ್ಟೌ ನೀಡುವ ಅವಕಾಶವಿದೆ. ಸರ್ಕಾರವು 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿದೆ ಮತ್ತು 10 ಆಗಸ್ಟ್ 2021 ರಂದು ಉಜ್ವಲ 2.0 ಅನ್ನು ಜಾರಿಗೆ ತಂದಿತು. ಇದರ ಅಡಿಯಲ್ಲಿ, ವಂಚಿತ ಕುಟುಂಬಗಳಿಗೂ ಗ್ಯಾಸ್ ಸಿಲಿಂಡರ್ಗಳನ್ನು ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News