Budget 2023: ಆದಾಯ ತೆರಿಗೆಯಲ್ಲಿ ಸಿಗಲಿದೆಯಾ 5 ಲಕ್ಷ ರಿಯಾಯಿತಿ?

Income tax exemption: ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆ ವಿವಿಧ ಸಂಘಟನೆಗಳು ಈಗಾಗಲೇ ತಮ್ಮ ಸಲಹೆಗಳು ಮತ್ತು ಬೇಡಿಕೆಗಳನ್ನು ನೀಡಲು ಪ್ರಾರಂಭಿಸಿವೆ. ಟಿಪಿಎಫ್‌ನಿಂದ ಅಂತಹ ಒಂದು ಬೇಡಿಕೆ ಬಂದಿದೆ. 

Written by - Chetana Devarmani | Last Updated : Jan 12, 2023, 06:09 PM IST
  • ಫೆ 1 ರಂದು ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
  • ಆದಾಯ ತೆರಿಗೆಯಲ್ಲಿ ಸಿಗಲಿದೆಯಾ 5 ಲಕ್ಷ ರಿಯಾಯಿತಿ?
  • ಆದಾಯ ತೆರಿಗೆಯಲ್ಲಿ ₹ 5 ಲಕ್ಷ ರಿಯಾಯಿತಿ ನೀಡಬೇಕು ಎಂಬ ಬೇಡಿಕೆ!
Budget 2023: ಆದಾಯ ತೆರಿಗೆಯಲ್ಲಿ ಸಿಗಲಿದೆಯಾ 5 ಲಕ್ಷ ರಿಯಾಯಿತಿ?  title=

Income tax exemption: ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನೆಲೆ ವಿವಿಧ ಸಂಘಟನೆಗಳು ಈಗಾಗಲೇ ತಮ್ಮ ಸಲಹೆಗಳು ಮತ್ತು ಬೇಡಿಕೆಗಳನ್ನು ನೀಡಲು ಪ್ರಾರಂಭಿಸಿವೆ. ಟಿಪಿಎಫ್‌ನಿಂದ ಅಂತಹ ಒಂದು ಬೇಡಿಕೆ ಬಂದಿದೆ. ಆದಾಯ ತೆರಿಗೆಯಲ್ಲಿ ₹ 5 ಲಕ್ಷ ರಿಯಾಯಿತಿ ನೀಡಬೇಕು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಇದಲ್ಲದೇ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಸಹ 1 ಲಕ್ಷ ರೂ.ಗೆ ಹೆಚ್ಚಿಸಬೇಕು. ಪಿಪಿಎಫ್‌ನಲ್ಲಿನ ಗರಿಷ್ಠ ಹೂಡಿಕೆ ಮಿತಿಯನ್ನೂ 3 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಬಂದಿದೆ. 7000 ಕ್ಕೂ ಹೆಚ್ಚು ಇಂಜಿನಿಯರ್‌ಗಳು, ವೈದ್ಯರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳು ತೇರಾಪಂಥ್ ಪ್ರೊಫೆಷನಲ್ ಫೋರಮ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. 

ಇದನ್ನೂ ಓದಿ : Big News: ತಿಂಗಳಿಗೆ 87,500 ಗಳಿಸುತ್ತಿದ್ದರೂ ಕೂಡ ನೀವು ಶೂನ್ಯ ಆದಾಯ ತೆರಿಗೆ ಪಾವತಿಸಬಹುದು !

ಸ್ಟ್ಯಾಂಡರ್ಡ್ ಡಿಡಕ್ಷನ್ 1 ಲಕ್ಷಕ್ಕೆ ಏರಿಕೆ!

ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 1 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಟಿಪಿಎಫ್ ಒತ್ತಾಯಿಸಿದೆ. ಬಜೆಟ್‌ನಲ್ಲಿ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಂಡರೆ, ನೀವು ತೆರಿಗೆ ವಿನಾಯಿತಿ ಪಡೆಯಬಹುದು. ಪ್ರಮಾಣಿತ ಕಡಿತವು ನಿಮ್ಮ ಸಂಬಳದಿಂದ ನೇರವಾಗಿ ಕಡಿತಗೊಳಿಸಲಾದ ಮೊತ್ತವಾಗಿದೆ. ಅಂದರೆ, ನಿಮ್ಮ ವಾರ್ಷಿಕ ಆದಾಯ 10 ಲಕ್ಷ ರೂಪಾಯಿಯಾಗಿದ್ದರೆ, ಈಗಿರುವ ನಿಯಮಗಳ ಪ್ರಕಾರ ಸರ್ಕಾರವು ನಿಮ್ಮ ಆದಾಯವನ್ನು 9 ಲಕ್ಷದ 50 ಸಾವಿರ ರೂಪಾಯಿ ಎಂದು ಪರಿಗಣಿಸುತ್ತದೆ. ಮತ್ತೊಂದೆಡೆ, ಈ ಕಡಿತವನ್ನು 1 ಲಕ್ಷಕ್ಕೆ ಹೆಚ್ಚಿಸಿದರೆ, ಹೊಸ ನಿಯಮಗಳ ಪ್ರಕಾರ ಆದಾಯ ತೆರಿಗೆ ಇಲಾಖೆಯು 10 ಲಕ್ಷ ರೂಪಾಯಿಗಳ ಆದಾಯವನ್ನು 9 ಲಕ್ಷ ರೂಪಾಯಿ ಎಂದು ಪರಿಗಣಿಸುತ್ತದೆ.

PPF ನಲ್ಲಿ ಹೆಚ್ಚು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ

ಇಲ್ಲಿಯವರೆಗೆ ಪಿಪಿಎಫ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ, ಪಿಪಿಎಫ್ ನಲ್ಲಿ ಗರಿಷ್ಠ ಹೂಡಿಕೆ ಮಿತಿಯನ್ನು ಹೆಚ್ಚಿಸಬೇಕು ಎಂದು ಟಿಪಿಎಫ್ ಈಗ ಆಗ್ರಹಿಸಿದೆ. ಪ್ರಸ್ತುತ ಒಂದು ಹಣಕಾಸು ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಕೇವಲ 1 ಲಕ್ಷ 50 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬಹುದು. 3 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಟಿಪಿಎಫ್ ಆಗ್ರಹಿಸಿದೆ. PPF ನಲ್ಲಿ ಯಾವುದೇ ಮೊತ್ತವನ್ನು ಹೂಡಿಕೆ ಮಾಡಿದರೂ, ಆದಾಯ ತೆರಿಗೆ ಇಲಾಖೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ವಿನಾಯಿತಿ ನೀಡಲಾಗುತ್ತದೆ. ಈ ರೀತಿಯಾಗಿ, ಈ ಬಜೆಟ್‌ನಲ್ಲಿ ಹೂಡಿಕೆಯ ಮೊತ್ತವನ್ನು 3 ಲಕ್ಷಕ್ಕೆ ಹೆಚ್ಚಿಸಿದರೆ, ತೆರಿಗೆದಾರರು ಸಂತೋಷಪಡುತ್ತಾರೆ. ಏಕೆಂದರೆ ಈ ಯೋಜನೆಯಲ್ಲಿ ಹೂಡಿಕೆಯ ಮೇಲೆ ಸಂಪೂರ್ಣ ಮೊತ್ತವು ತೆರಿಗೆ ಮುಕ್ತವಾಗುತ್ತದೆ.

ಇದನ್ನೂ ಓದಿ : Income Tax ಪಾವತಿದಾರರಿಗೆ ಗುಡ್‌ ನ್ಯೂಸ್‌! ಮೂಲ ತೆರಿಗೆ ಮಿತಿಯಲ್ಲಿ ಭಾರೀ ಬದಲಾವಣೆ!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News