ATM Facts : ATM ಪಿನ್ ಬರಿ 4 ನಂಬರ್ ಏಕಿರುತ್ತದೆ? ಅಸಲಿ ಕಾರಣ ಕೇಳಿದರೆ ಬೆಚ್ಚಿ ಬೀಳ್ತಿರಾ!

ಜನ ತಮ್ಮ ಬಳಿ ಇರುವ ಕಾರ್ಡ್ ಅನ್ನು ಬಳಲಿಸಿ, ಪಿನ್ ಹಾಕಿ ತಮಗೆ ಬೇಕಾದಷ್ಟು ಹಣ ಹಿಂಪಡೆಯುತ್ತಾರೆ. ಆದ್ರೆ, ಇಲ್ಲಿ ಹಾಕುವ ಪಿನ್ ನಂಬರ್ ಏಕೆ ಬರಿ ನಾಲ್ಕು ಸಂಖ್ಯೆ ಇರುತ್ತದೆ. ಅದಕ್ಕೆ ಉತ್ತರ ಉಡುಕುವ ಪ್ರಯತ್ನ ಇಲ್ಲಿದೆ ನೋಡಿ..

Written by - Zee Kannada News Desk | Last Updated : May 28, 2022, 08:22 AM IST
  • ಪಿನ್‌ನಿಂದ ಮಾತ್ರ ನಿಮ್ಮ ಹಣ ಸುರಕ್ಷಿತ
  • ಇದು ಮೊದಲು 6 ಅಂಕಿಗಳ ಪಿನ್ ಇತ್ತು
  • 6 ಅಂಕಿಯ ಪಿನ್ ಹೆಚ್ಚು ಸುರಕ್ಷಿತ
ATM Facts : ATM ಪಿನ್ ಬರಿ 4 ನಂಬರ್ ಏಕಿರುತ್ತದೆ? ಅಸಲಿ ಕಾರಣ ಕೇಳಿದರೆ ಬೆಚ್ಚಿ ಬೀಳ್ತಿರಾ! title=

ATM Pin Interesting Fact : ಇಂದಿನ ಡಿಜಿಟಲ್ ವಹಿವಾಟಿನ ಯುಗದಲ್ಲಿ ಎಲ್ಲವೂ ತುಂಬಾ ಸುಲಭವಾಗಿದೆ. ಜನ ನಗದು ಇಲ್ಲದೆ ಎಲ್ಲಿ ಬೇಕಾದರೂ ಪ್ರಯಾಣಿಸಬಹುದು. ಹಣದ ಅವಶ್ಯಕತೆಗೆ ಎಲ್ಲೆಂದರಲ್ಲಿ ಎಟಿಎಂ ಯಂತ್ರಗಳನ್ನು ಅಳವಡಿಸಲಾಗಿದೆ. ಜನ ತಮ್ಮ ಬಳಿ ಇರುವ ಕಾರ್ಡ್ ಅನ್ನು ಬಳಲಿಸಿ, ಪಿನ್ ಹಾಕಿ ತಮಗೆ ಬೇಕಾದಷ್ಟು ಹಣ ಹಿಂಪಡೆಯುತ್ತಾರೆ. ಆದ್ರೆ, ಇಲ್ಲಿ ಹಾಕುವ ಪಿನ್ ನಂಬರ್ ಏಕೆ ಬರಿ ನಾಲ್ಕು ಸಂಖ್ಯೆ ಇರುತ್ತದೆ. ಅದಕ್ಕೆ ಉತ್ತರ ಉಡುಕುವ ಪ್ರಯತ್ನ ಇಲ್ಲಿದೆ ನೋಡಿ..

ಪಿನ್‌ನಿಂದ ಮಾತ್ರ ನಿಮ್ಮ ಹಣ ಸುರಕ್ಷಿತ

ಎಟಿಎಂನಿಂದ ಹಣವನ್ನು ಹಿಂಪಡೆಯುವ ಈ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ. ಯಾವುದೇ ಬ್ಯಾಂಕಿನ ಎಟಿಎಂನಿಂದ ಯಾರು ಬೇಕಾದರೂ ಹಣ ಹಿಂಪಡೆಯಬಹುದು. ಇದರ ಸುರಕ್ಷಿತೆಯ ರಕ್ಷಕ ಅದರ ನಾಲ್ಕು ಸಂಖ್ಯೆಯ ಪಿನ್ ನಂಬರ್. ನಿಮ್ಮ ಹಣವನ್ನು ಸುರಕ್ಷಿತಗೊಳಿಸುವ ಏಕೈಕ ಭದ್ರತಾ ಸಾಧನವೆಂದರೆ ಪಿನ್ ನಂಬರ್. ಸಾಮಾನ್ಯವಾಗಿ ಈ ಪಿನ್ 4 ನಂಬರ್ ಒಳಗೊಂಡಿದೆ. ಆದರೆ ಈ ಪಿನ್ ಕೇವಲ 4 ಅಂಕಿಗಳೆ ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

ಇದನ್ನೂ ಓದಿ : PM Kisan : ರೈತರೆ ಗಮನಿಸಿ, ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್!

ಇದು ಮೊದಲು 6 ಅಂಕಿಗಳ ಪಿನ್ ಇತ್ತು

ಎಟಿಎಂ ಯಂತ್ರ ತಯಾರಕರು ಕೋಡಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಿದಾಗ, ಇದು 6 ಸಂಖ್ಯೆಗಳನ್ನು ಒಳಗೊಂಡಿತ್ತು. ಅನಾನುಕೂಲತೆ ಅಂದರೆ ಎಟಿಎಂ ಬಳಕೆ ಕಡಿಮೆಯಾಗಲು ಪ್ರಾರಂಭಿಸಿತು. ಇದನ್ನು ಅರಿತು 4 ಅಂಕಿಗಳ ನಂಬರ್ ಜಾರಿ ಮಾಡಿದರು. 

6 ಅಂಕಿಯ ಪಿನ್ ಹೆಚ್ಚು ಸುರಕ್ಷಿತ

ಈ ಪ್ರಯೋಗದ ನಂತರ, ಎಟಿಎಂನ ಪಿನ್ ಅನ್ನು 4 ಸಂಖ್ಯೆಗೆ ಇಳಿಸಲಾಯಿತು. ಆದರೆ ಇನ್ನೊಂದು ಸತ್ಯವೆಂದರೆ 4 ಅಂಕಿಗಳ ಎಟಿಎಂ ಪಿನ್‌ಗಿಂತ 6 ಅಂಕಿಗಳ ಪಿನ್ ಹೆಚ್ಚು ಸುರಕ್ಷಿತವಾಗಿದೆ. 4-ಅಂಕಿಯ ಪಿನ್ 0000 ರಿಂದ 9999 ವರೆಗೆ ಇರುತ್ತದೆ ಎಂದು ಗಮನಿಸಬೇಕಾದ ಅಂಶವಾಗಿದೆ. ಇದರೊಂದಿಗೆ, 10000 ವಿವಿಧ ಪಿನ್ ಸಂಖ್ಯೆಗಳನ್ನು ಇರಿಸಬಹುದು, ಇದರಲ್ಲಿ 20 ಪ್ರತಿಶತ ಪಿನ್‌ಗಳನ್ನು ಹ್ಯಾಕ್ ಮಾಡಬಹುದು. ಇದು ಕಷ್ಟಕರವಾದ ಕೆಲಸವಾದರೂ. ಆದರೆ 4 ಅಂಕಿಗಳ PIN 6 ಅಂಕಿಗಳ PIN ಗಿಂತ ಸ್ವಲ್ಪ ಕಡಿಮೆ ಸುರಕ್ಷಿತವಾಗಿದೆ. ಇಂದಿಗೂ ಅನೇಕ ದೇಶಗಳು ಕೇವಲ 6 ಅಂಕಿಗಳ ಎಟಿಎಂ ಪಿನ್ ಅನ್ನು ಬಳಸುತ್ತಿವೆ.

ಎಟಿಎಂಗೆ ಸಂಬಂಧಿಸಿದ ವಿಶೇಷ ವಿಷಯಗಳು

ಈ ಯಂತ್ರವನ್ನು ಸ್ಕಾಟಿಷ್ ವಿಜ್ಞಾನಿ ಕಂಡುಹಿಡಿದಿದ್ದಾರೆ ಎಂಬುದು ಗಮನಾರ್ಹವಾಗಿದೆ, ಅವರ ಹೆಸರು ಜಾನ್ ಆಡ್ರಿಯನ್ ಶೆಫರ್ಡ್-ಬ್ಯಾರನ್. ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ ಈ ಸ್ಕಾಟಿಷ್ ವಿಜ್ಞಾನಿ ಶೆಫರ್ಡ್ ಬ್ಯಾರನ್ ಭಾರತದಲ್ಲಿಯೇ ಶಿಲ್ಲಾಂಗ್ ನಗರದಲ್ಲಿ ಜನಿಸಿದ್ದಾರೆ. ಅವರು 1969 ರಲ್ಲಿ ಎಟಿಎಂ ಯಂತ್ರವನ್ನು ತಯಾರಿಸಿದರು.

ಇದನ್ನೂ ಓದಿ : ನೀವು ಆಧಾರ್ ಕಾರ್ಡ್ ಮೂಲಕ ಹಣ ಗಳಿಸಬಹುದು! ಹೇಗೆ ಇಲ್ಲಿದೆ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News