New Wage Code: ಇನ್ನು ಸಿಗಲಿದೆ 300 ದಿನಗಳ Earned Leave! ಮೂರು ದಿನಗಳ ವಾರದ ರಜೆ ?

New Wage Code:ಹೊಸ ವೇಜ್ ಕೋಡ್ ಏಪ್ರಿಲ್ 1 ರಿಂದ ಜಾರಿಗೆ ಬರಬೇಕಾಗಿತ್ತು. ಆದರೆ, ರಾಜ್ಯ ಸರಕಾರಗಳ ಪೂರ್ವ ತಯಾರಿಯ ಕೊರತೆಯ ಕಾರಣ ಇದರ ಅನುಷ್ಠಾನವನ್ನು ಮುಂದೂಡಲಾಗಿತ್ತು.  ನಂತರ ಇದು ಜುಲೈನಲ್ಲಿ ಅನುಷ್ಠಾನಗೊಳ್ಳಬಹುದು ಎಂಬ ನಿರೀಕ್ಷೆ ಇತ್ತು.

Written by - Ranjitha R K | Last Updated : Jun 24, 2021, 09:15 AM IST
  • ಕಾರಣಾಂತರಗಳಿಂದ ಹೊಸ ವೇಜ್ ಕೋಡ್ ಅನುಷ್ಠಾನ ವಿಳಂಬವಾಗುತ್ತಿದೆ
  • ಅಕ್ಟೋಬರ್ ಗಿಂತ ಮೊದಲು ಹೊಸ ವೇಜ್ ಕೋಡ್ ಜಾರಿಗೆ ಬರುವ ಸಾಧ್ಯತೆ ಇಲ್ಲ
  • ಹೊಸ ವೇಜ್ ಕೋಡ್ ನಲ್ಲಿ ಏನೆಲ್ಲಾ ಸೌಲಭ್ಯಗಳು ಕಾರ್ಮಿಕರಿಗೆ ಸಿಗಲಿದೆ..?
New Wage Code: ಇನ್ನು ಸಿಗಲಿದೆ 300 ದಿನಗಳ Earned Leave! ಮೂರು ದಿನಗಳ ವಾರದ ರಜೆ ? title=
ಹೊಸ ವೇಜ್ ಕೋಡ್ ಅನುಷ್ಠಾನ ವಿಳಂಬವಾಗುತ್ತಿದೆ (photo zee news)

ನವದೆಹಲಿ : ಹೊಸ ವೇಜ್ ಕೋಡ್ (New wage code) ಕುರಿತಂತೆ ಈಗ ಮೀಡಿಯಾಗಳಲ್ಲಿ ತುಂಬಾ ವರದಿಗಳು ಬರುತ್ತಿವೆ. ಹೊಸ ವೇಜ್ ಕೋಡ್ ಏಪ್ರಿಲ್ 1 ರಿಂದ ಜಾರಿಗೆ ಬರಬೇಕಾಗಿತ್ತು. ಆದರೆ, ರಾಜ್ಯ ಸರಕಾರಗಳ ಪೂರ್ವ ತಯಾರಿಯ ಕೊರತೆಯ ಕಾರಣ ಇದರಅನುಷ್ಠಾನವನ್ನು ಮುಂದೂಡಲಾಗಿತ್ತು.  ನಂತರ ಇದು ಜುಲೈನಲ್ಲಿ ಅನುಷ್ಠಾನಗೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಇದೀಗ ಝೀ ನ್ಯೂಸ್ ಗೆ ಸಿಕ್ಕ ಸುದ್ದಿಯ ಪ್ರಕಾರ ಹೊಸ ವೇಜ್ ಕೋಡ್ ಅಕ್ಟೋಬರ್ ಗಿಂತ ಮೊದಲು ಅನುಷ್ಠಾನಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ. ಯಾಕೆಂದರೆ, ರಾಜ್ಯಗಳು ಇಲ್ಲಿಯ ತನಕ ಇದರ ಡ್ರಾಫ್ಟ್ ರೂಲ್ (Draft rule) ಕೂಡಾ ಸಿದ್ದ ಪಡಿಸಿಲ್ಲ. 

ಹೊಸ ವೇಜ್ ಕೋಡ್ ನಲ್ಲಿ ಏನೇನಿದೆ..?
ಕಚೇರಿಯಲ್ಲಿ ಕೆಲಸ ಮಾಡುವ ವೇತನ ವರ್ಗದ ನೌಕರರು ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಶ್ರಮಿಕರಿಗೆಅನುಕೂಲವಾಗುವ ಹಲವು ಪ್ರಸ್ತಾವಗಳು ಹೊಸ ವೇಜ್ ಕೋಡ್ (New wage code)ನಲ್ಲಿದೆ.  ಹೊಸ ವೇಜ್ ಕೋಡ್ ಜಾರಿಗೆ ಬಂದರೆ ವೇತನ (Salary), ರಜೆ, ಕೆಲಸದ ಗಂಟೆ ಇತ್ಯಾದಿ ಬದಲಾಗಲಿದೆ.  ಹೊಸ ವೇಜ್ ಕೋಡ್ ಜಾರಿಗೆ ಬಂದರೆ ನಿಮ್ಮ ಜೀವನ ಬದಲಾಗಲಿದೆ. ಅಂಥಹ ಪ್ರಸ್ತಾವನೆಗಳು ಅದರಲ್ಲಿವೆ. ಅದನ್ನು ನೋಡೋಣ

ಇದನ್ನೂ ಓದಿ : EPFO: 6 ಕೋಟಿ ಇಪಿಎಫ್‌ಒ ಚಂದಾದಾರರಿಗೆ ಮಹತ್ವದ ಮಾಹಿತಿ! ಪಿಂಚಣಿ, ಪಿಎಫ್ ಖಾತೆಗಳು ಪ್ರತ್ಯೇಕವಾಗಬಹುದು, ಕಾರಣವೇನು ಗೊತ್ತೇ?

1. ವೇತನದ ಸ್ವರೂಪ ಬದಲಾಗಲಿದೆ.
ಹೊಸ ವೇಜ್ ಕೋಡ್ ಜಾರಿಗೆ ಬಂದ ಮೇಲೆ ಟೇಕ್ ಹೋಂ ಸಾಲರಿ (take home salary) ಕಡಿಮೆಯಾಗಬಹುದು.  ಹೊಸ ವೇಜ್ ಕೋಡ್ ಬಂದ ಮೇಲೆ ಬೇಸಿಕ್ ಸಾಲರಿ ಒಟ್ಟು ಸಾಲರಿಯ ಶೇ. 50 ರಷ್ಟಿರಬೇಕು. ಕಂಪನಿಗಳು ದುಡ್ಡು ಉಳಿಸುವ ದೃಷ್ಟಿಯಿಂದ ಅತ್ಯಂತ ಕಡಿಮೆ ಬೇಸಿಕ್ ಸಾಲರಿ (Basic Salary) ನೀಡುತ್ತಿವೆ. ಜೊತೆಗೆ ಭತ್ಯೆ ಹೆಚ್ಚಿಗೆ ನೀಡುತ್ತವೆ.

2. ಪಿಎಫ್, ಗ್ರಾಜ್ಯುಟಿ ಹೆಚ್ಚಾಗಲಿದೆ.
ಬೇಸಿಕ್ ವೇತನ ಹೆಚ್ಚಾದಾಗ ನೌಕರರ ಪಿಎಫ್ (PF) ಹೆಚ್ಚು ಕಟ್ ಆಗಲಿದೆ. ಅಂದರೆ ಅವರ ಭವಿಷ್ಯ ಹೆಚ್ಚು ಸುರಕ್ಷಿತವಾಗಲಿದೆ.  ಪಿಎಫ್ ಜೊತೆಗೆ ಗ್ರ್ಯಾಜುವಿಟಿ ಕಟ್ ಆಗುವ ಪ್ರಮಾಣ ಕೂಡಾ ಹೆಚ್ಚಾಗಲಿದೆ.  ಹೊಸ ವೇಜ್ ಕೋಡ್ ಬಂದಾಗ ನಿಮ್ಮ ಟೇಕ್ ಹೋಂ ಸಾಲರಿ ಕಡಿಮೆಯಾಗಬಹುದು. ಆದರೆ, ರಿಟಾಯರ್ ಮೆಂಟ್ ಲಾಭ ಅಧಿಕವಾಗಲಿದೆ. ಅಸಂಘಟಿತ ವರ್ಗದ ಕಾರ್ಮಿಕರಿಗೂ ಈ ವೇಜ್ ಕೋಡ್ ಅನ್ವಯವಾಗಲಿದೆ. 

ಇದನ್ನೂ ಓದಿ : ಉದ್ಯೋಗ ಕಳೆದುಕೊಂಡಿದ್ದೀರಾ ? ಹಾಗಿದ್ದರೆ ESIC ಯೋಜನೆ ಮೂಲಕ ಸಿಗಲಿದೆ ನಿರುದ್ಯೋಗ ಭತ್ಯೆ

3. ವರ್ಷದ ರಜೆ ಹೆಚ್ಚಾಗಲಿದೆ. 
ಇದೇ ವೇಳೆ,  ನೌಕರರ ಗಳಿಕೆಯ ರಜೆ (Earned Leave) ಹೆಚ್ಚಾಗಲಿದೆ. 300 ಇಎಲ್ ಸಿಗುವ ಸಾಧ್ಯತೆ ಇದೆ. ಈ ಸಂಬಂಧ ಕಾರ್ಮಿಕ ಸಚಿವಾಲಯ, ಲೇಬರ್ ಯೂನಿಯನ್ (Labour union) ಹಾಗೂ ಉದ್ಯೋಗ ಜಗತ್ತಿನ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ.  ಇದರಲ್ಲಿ ಕಾರ್ಮಿಕ ಗಳಿಕೆಯ ರಜೆ 240ರ ಬದಲು 300 ದಿನಗಳಿಗೆ ಹೆಚ್ಚಿಸುವ ಬೇಡಿಕೆ ಮಂಡಿಸಲಾಗಿತ್ತು. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ  ಆಗಿಲ್ಲ. 

4. ಕೆಲಸದ  ಅವಧಿ ಹೆಚ್ಚಾಗಲಿದೆ, ವೀಕ್ಲಿ ಆಫ್ ಕೂಡಾ ಹೆಚ್ಚಾಗಲಿದೆ.
ಹೊಸ ವೇಜ್ ಕೋಡ್ ಪ್ರಕಾರ ಕೆಲಸದ ಅವಧಿ 12 ಗಂಟೆಗೆ ಏರಲಿದೆ.  ಅಂದರೆ ವಾರಕ್ಕೆ 48 ಗಂಟೆ ಮಾತ್ರ ಕೆಲಸ ಇರುತ್ತದೆ. ವಾರಕ್ಕೆ ಮೂರು ದಿನ ರಜೆ ಸಿಗಲಿದೆ. ಕೆಲವು ಕಾರ್ಮಿಕ ಸಂಘಟನೆಗಳು ಈ ಬಗ್ಗೆ ವಿರೋಧ ವ್ಯಕ್ತ ಪಡಿಸಿವೆ. ಆದರೂ, ವಾರಕ್ಕೆ ನಾಲ್ಕು ದಿನಗಳ ಕೆಲಸದ ಪ್ರಸ್ತಾವವನ್ನು ಸರ್ಕಾರ ಮಂಡಿಸಿದೆ. ಆದರೆ ಈ ಬಗ್ಗೆ ಕಂಪನಿಗಳು ಮತ್ತು ಕಾರ್ಮಿಕ ಸಂಘಟನೆಗಳ ನಡುವೆ ಸಹಮತ ವ್ಯಕ್ತವಾಗಿಲ್ಲ.

ಇದನ್ನೂ ಓದಿ : ATM ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಎಸ್‌ಬಿಐ ಎಚ್ಚರಿಕೆ! ನಿಮ್ಮ ಕಾರ್ಡ್ ಕಳೆದುಹೋದರೆ ತಕ್ಷಣ ಈ ಕೆಲಸ ಮಾಡಿ

5. ಕನಿಷ್ಠ ವೇತನ ಅನ್ವಯವಾಗಲಿದೆ. 
ಮೊದಲ ಸಲ ದೇಶದ  ಎಲ್ಲಾ ಕಾರ್ಮಿಕರಿಗೂ ಕನಿಷ್ಠ ವೇತನ ಸಿಗಲಿದೆ.  ಪ್ರವಾಸಿ ಕಾರ್ಮಿಕರಿಗೂ ಕೂಡಾ ಹೊಸ ಯೋಜನೆ ಜಾರಿಗೆ ಬರಲಿದೆ.  ಎಲ್ಲಾ ಕಾರ್ಮಿಕರ ಸಾಮಾಜಿಕ ಸುರಕ್ಷೆಗಾಗಿ ಪ್ರಾವಿಡೆಂಟ್ ಫಂಡ್ (PF) ಜಾರಿಗೆ ಬರಲಿದೆ. ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರದ ಎಲ್ಲಾ ಕಾರ್ಮಿಕರಿಗೂ ಇಎಸ್ಐ ಸಿಗಲಿದೆ.  ಎಲ್ಲಾ ಕೆಲಸ ವ್ಯವಹಾರಗಳಲ್ಲಿಮಹಿಳೆಯರು ಪಾಲ್ಗೊಳ್ಳಬಹುದಾಗಿದೆ. ಅವರಿಗೆ ನೈಟ್ ಶಿಫ್ಟ್ (Night shift) ಮಾಡಲು ಅನುಮತಿ ನೀಡಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News