SBI ಡೆಬಿಟ್ ಕಾರ್ಡ್ ನಲ್ಲೂ ಸಿಗಲಿದೆ EMI ಸೌಲಭ್ಯ, ಲಾಭ ಪಡೆಯಲು ಏನು ಮಾಡಬೇಕು ತಿಳಿದಿರಲಿ

ಇಎಂಐ ಸೌಲಭ್ಯವು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಎಲ್ಲರ ಬಳಿ ಕ್ರೆಡಿಟ್ ಕಾರ್ಡ್ ಇರುವುದಿಲ್ಲ. ಆದರೆ ಇದೀಗ ದೇಶದ ಅತಿದೊಡ್ಡ ಬ್ಯಾಂಕ್ SBI ಡೆಬಿಟ್ ಕಾರ್ಡ್‌ನಲ್ಲೂ EMI ಸೌಲಭ್ಯ ಸಿಗುತ್ತಿದೆ.   

Written by - Ranjitha R K | Last Updated : May 25, 2021, 11:27 AM IST
  • ಎಸ್‌ಬಿಐ ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಆಫರ್
  • ಯಾರಿಗೆ ಸಿಗಲಿದೆ ಡೆಬಿಟ್ ಕಾರ್ಡ್ ಇಎಂಐ ಸೌಲಭ್ಯ ತಿಳಿಯಿರಿ
  • ನಿಮ್ಮ ಕಾರ್ಡಿನಲ್ಲಿಯೂ ಇಎಂಐ ಸೌಲಭ್ಯವಿದೆಯೇ ಚೆಕ್ ಮಾಡಿಕೊಳ್ಳಿ
SBI ಡೆಬಿಟ್ ಕಾರ್ಡ್ ನಲ್ಲೂ ಸಿಗಲಿದೆ EMI ಸೌಲಭ್ಯ, ಲಾಭ ಪಡೆಯಲು ಏನು ಮಾಡಬೇಕು ತಿಳಿದಿರಲಿ title=
ಎಸ್‌ಬಿಐ ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಆಫರ್ (photo Zee news)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ಎಲ್ಲಾ ಖರೀದಿ ಮೇಲೂ ಇಎಂಐ ಸೌಲಭ್ಯ ಲಭ್ಯವಿರುತ್ತದೆ. ಶಾಪಿಂಗ್ ಮಾಡಿ ನಂತರ ಅದನ್ನು ಇಎಂಐ (EMI) ಆಗಿ ಪರಿವರ್ತಿಸುವ ಅವಕಾಶವಿರುತ್ತದೆ. ಹೀಗೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ದೊಡ್ಡ ಮೊತ್ತದ ಖರೀದಿ ನಡೆಸಿದರೆ ಆ ಪೂರ್ತಿ ಹಣವನ್ನು ಒಮ್ಮೆಲೇ ಪಾವತಿಸಬೇಕಾಗಿರುವುದಿಲ್ಲ. ಕೆಲವೊಮ್ಮೆ ಈ ಹಣದ ಬಡ್ಡಿಯನ್ನು ಕೂಡಾ ಪಾವತಿಸಬೇಕಾಗಿರುವುದಿಲ್ಲ. ಆದರೆ ಇಎಂಐ ಸೌಲಭ್ಯವು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಎಲ್ಲರ ಬಳಿ ಕ್ರೆಡಿಟ್ ಕಾರ್ಡ್ ಇರುವುದಿಲ್ಲ.  ಇದೀಗ ದೇಶದ ಅತಿದೊಡ್ಡ ಬ್ಯಾಂಕ್ SBI ಡೆಬಿಟ್ ಕಾರ್ಡ್‌ನಲ್ಲೂ EMI ಸೌಲಭ್ಯ ಸಿಗುತ್ತಿದೆ. 

ಎಸ್‌ಬಿಐ ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಆಫರ್ : 
ಎಸ್‌ಬಿಐ (SBI) ಡೆಬಿಟ್ ಕಾರ್ಡ್‌ನಿಂದ ಟಿವಿ, ಫ್ರಿಜ್, ಎಸಿ ಮುಂತಾದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರೆ ಅಥವಾ ಆನ್‌ಲೈನ್ ಶಾಪಿಂಗ್ ಮಾಡಿದರೆ, ಅದನ್ನು ಇಎಂಐ ಆಗಿ ಪರಿವರ್ತಿಸಬಹುದು. ಮಳಿಗೆಗಳಲ್ಲಿ ಖೀದಿ ನಡೆಸಿದರೆ,  POS ಯಂತ್ರದ ಮೂಲಕ ಹಣ ಪಾವತಿಸಿ, ಆ ಮೊತ್ತವನ್ನು EMIಗೆ ಬದಲಾಯಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಒಮ್ಮೆಗೇ ಖಾತೆಯಿಂದ ದೊಡ್ಡ ಮೊತ್ತ ಕಡಿತವಾಗುವುದಿಲ್ಲ.  ಖರೀದಿ ನಂತರ ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ  ಇಎಂಐ ಸಂಖ್ಯೆಯನ್ನು ಕೂಡಾ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ ಎಷ್ಟು ಕಂತುಗಳಲ್ಲಿ ಈ ಹಣವನ್ನು ಸಂದಾಯ ಮಾಡಬಹುದು ಎನ್ನುವುದನ್ನು ಆಯ್ಕೆ ಮಾಡುವ ಅವಕಾಶವೂ ಇದೆ.  ಇನ್ನು Amazon , ಫ್ಲಿಪ್‌ಕಾರ್ಟ್‌ನಿಂದ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಿದರೆ, ಎಸ್‌ಬಿಐ ಡೆಬಿಟ್ ಕಾರ್ಡ್‌ನೊಂದಿಗೆ (SBI Debit Card) ಪಾವತಿಸುವ ಮೂಲಕ ನಂತರ ಅದನ್ನು ಇಎಂಐಗೆ ಪರಿವರ್ತಿಸಬಹುದು.

ಇದನ್ನೂ ಓದಿ : Petrol-Diesel Prices : ವಾಹನ ಸವಾರರೆ ಗಮನಿಸಿ :  ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ!

ಈ ಎಸ್‌ಬಿಐ ಕೊಡುಗೆ ಯಾರಿಗಾಗಿ?
ಎಸ್‌ಬಿಐ ಪ್ರಕಾರ, ಈ ಸೌಲಭ್ಯವು Pre approved ಆಧಾರಿತವಾಗಿದೆ. ಅಂದರೆ, ಆಯ್ದ ಗ್ರಾಹಕರು ಮಾತ್ರ ಡೆಬಿಟ್ ಕಾರ್ಡ್‌ ಇಎಂಐ ಲಾಭವನ್ನು ಪಡೆಯಬಹುದು. ಎಲ್ಲಾ ಗ್ರಾಹಕರಿಗೂ ಈ ಸೌಲಭ್ಯ ಸಿಗುವುದಿಲ್ಲ. ಹಾಗಾಗಿ ಶಾಪಿಂಗ್ ಮಾಡುವ ಮೊದಲು ನಿಮ್ಮ ಕಾರ್ಡ್ ನಲ್ಲಿ ಈ ಸೌಲಭ್ಯ ಇದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. 

ಕಾರ್ಡ್‌ನಲ್ಲಿ ಇಎಂಐ ಸೌಲಭ್ಯವಿದೆಯೇ ಇಲ್ಲವೇ ತಿಳಿಯುವುದು ಹೇಗೆ ?
ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಸೌಲಭ್ಯವಿದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಲು,  DCEMI  ಎಂದು ಟೈಪ್ ಮಾಡಿ , ನಿಮ್ಮ ನೋಂದಾಯಿತ ಮೊಬೈಲ್ ಫೋನ್‌ನಿಂದ  567676 ನಂಬರಿಗೆ SMS ಕಳುಹಿಸಿ. ಆಗ ನಿಮ್ಮ ಕಾರ್ಡಿನಲ್ಲಿ ಇಎಂಐ ಸೌಲಭ್ಯ ಇದೆಯೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ. ಅ

ಇದನ್ನೂ ಓದಿ : Income Tax: ನೀವು ಮಾಡುವ ಈ ವೆಚ್ಚದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತದೆ, ಅಪ್ಪಿ-ತಪ್ಪಿಯೂ ಮರೆಮಾಚಬೇಡಿ

ಎಸ್‌ಬಿಐ ಡೆಬಿಟ್ ಕಾರ್ಡ್ ಇಎಂಐನ ಪ್ರಯೋಜನಗಳು :
ನಿಮ್ಮ ಎಸ್‌ಬಿಐ ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಸೌಲಭ್ಯವಿದ್ದರೆ, ನೀವು 1 ಲಕ್ಷ ರೂಪಾಯಿಗಳವರೆಗೆ ಶಾಪಿಂಗ್ ಮಾಡಬಹುದು. ನಂತರ ಅದನ್ನು ಪಾವತಿಸಲು ನಿಮ್ಮ ಅನುಕೂಲಕ್ಕೆ ತಕ್ಕಂತೆ, , 6, 9, 12 ಮತ್ತು 18 ತಿಂಗಳ ಇಎಂಐ ಆಯ್ಕೆಯನ್ನು ಪಡೆಯಬಹುದು. ಗ್ರಾಹಕರು ಇದಕ್ಕೆ ಪ್ರೊಸೆಸಿಂಗ್ ಚಾರ್ಜ್ ಪಾವತಿಸಬೇಕಾಗಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News