ಬೆಂಗಳೂರು: ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆ(Electricity Bill)ಯಿಂದ ಬಸವಳಿದಿರುವ ಬೆಂಗಳೂರಿಗರಿಗೆ ಬೆಸ್ಕಾಂ ಕೂಡ ಶಾಕ್ ನೀಡಲು ಮುಂದಾಗಿದೆ. ಬೇಸಿಗೆಗೂ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ತಾಗುವ ಮುನ್ಸೂಚನೆ ಸಿಕ್ಕಿದೆ. ಪ್ರತಿ ಯುನಿಟ್ಗೆ 1.50 ರೂಪಾಯಿ ಹೆಚ್ಚಳಕ್ಕೆ ಬೆಸ್ಕಾಂ ಅಧಿಕಾರಿಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC)ಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕೈಸುಡುತ್ತಿವೆ ಅಗತ್ಯ ವಸ್ತುಗಳು
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿ ಹೋಗಿದ್ದು, ಈ ಮಧ್ಯೆ ದಿಢೀರ್ ವಿದ್ಯುತ್ ದರ(Electricity Rates) ಕೂಡ ಹೆಚ್ಚಳ ಮಾಡಿದರೆ ಪರಿಸ್ಥಿತಿ ಹೇಗೆ ಎಂಬ ಚಿಂತೆ ಕಾಡುತ್ತಿದೆ. ಏಕೆಂದರೆ ವಿದ್ಯುತ್ ದರ ಏರಿಕೆಯಾದರೆ ಅದು ಪರೋಕ್ಷವಾಗಿ ಅಗತ್ಯ ವಸ್ತುಗಳ ದರ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ. ಹೀಗಾಗಿ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೂ ದೊಡ್ಡ ತಲೆನೋವು ಶುರುವಾಗಿದೆ.
ಇದನ್ನೂ ಓದಿ: TVS Jupiter 110: ದುಬಾರಿಯಾಗಲಿದೆ TVS ನ ಜನಪ್ರಿಯ ಸ್ಕೂಟರ್
ಬೆಲೆ ಹೆಚ್ಚಳಕ್ಕೆ ನಷ್ಟದ ನೆಪ
ಬೆಸ್ಕಾಂ ಮಾತ್ರವಲ್ಲದೆ ಮೆಸ್ಕಾಂ, ಚೆಸ್ಕಾಂ ಅಧಿಕಾರಿಗಳು ಕೂಡ ನಷ್ಟದ ನೆಪ ಹೇಳಿ ದರ ಹೆಚ್ಚಳ(Electricity Tariff) ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಕಳೆದ ಬಾರಿ ಪ್ರತಿ ಯುನಿಟ್ಗೆ 1 ರೂ. 39 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ 30 ಪೈಸೆ ಮಾತ್ರ ದರ ಪರಿಷ್ಕರಣೆ ಮಾಡಲಾಗಿತ್ತು. ಸದ್ಯ ಈಗ KERC ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ? ಅನ್ನೋ ಪ್ರಶ್ನೆ ಮೂಡಿದೆ. ಒಂದು ವೇಳೆ ಬೆಸ್ಕಾಂ ಪ್ರಸ್ತಾವನೆಗೆ KERC ಒಪ್ಪಿಗೆ ಕೊಟ್ಟರೆ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ. ಹಾಗಾದರೆ ಯಾವ ಯಾವ ವರ್ಷದಲ್ಲಿ ಎಷ್ಟೆಷ್ಟು ಬೆಲೆ ಏರಿಕೆ ಮಾಡಲಾಗಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಯಾವ ವರ್ಷ ಎಷ್ಟೆಷ್ಟು ದರ ಪರಿಷ್ಕರಣೆ?
ವರ್ಷ ದರ ಏರಿಕೆ (ಯುನಿಟ್ಗೆ)
2009 34 ಪೈಸೆ
2010 30 ಪೈಸೆ
2011 28 ಪೈಸೆ
2012 13 ಪೈಸೆ
2013 13 ಪೈಸೆ
2017 48 ಪೈಸೆ
2019 35 ಪೈಸೆ
2020 30 ಪೈಸೆ
ಇದನ್ನೂ ಓದಿ: ಈ ಐದು ರೂಪಾಯಿ ಬದಲಿಸಲಿದೆ ಅದೃಷ್ಟ, ಒಂದು ನಾಣ್ಯದ ಬದಲಿಗೆ ಸಿಗಲಿದೆ 10 ಲಕ್ಷ ರೂಪಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ