Electricity Bill Reduce - ನಿಮ್ಮ ಮನೆಯ ವಿದ್ಯುತ್ ಬಿಲ್ ಕೂಡ ಜಾಸ್ತಿ ಬರುತ್ತಿದ್ದು, ಅದರಿಂದ ನಿಮ್ಮ ಮಾಸಿಕ ಬಜೆಟ್ ಗೆ ಹೊಡೆತ ಬೀಳುತ್ತಿದ್ದರೆ, ಅದು ನಿಶ್ಚಿತವಾಗಿಯೂ ಕೂಡ ಒಂದು ಕಾಳಜಿಯ ವಿಷಯವಾಗಿದೆ. ಹಲವು ಜನರು ತಮ್ಮ ಮನೆಯಲ್ಲಿ ತಾವು ಬಳಕೆ ಮಾಡುವ ವಿದ್ಯುತ್ ಗಿಂತ ಜಾಸ್ತಿ ವಿದ್ಯುತ್ ಬಿಲ್ ಅನ್ನು ಪಾವತಿಸುತ್ತಾರೆ. ಇದಕ್ಕೆ ಕಾರಣ ಎಂದರೆ ಅವರು ಬಳಕೆ ಮಾಡುವ ಕೆಲ ಉಪಕರಣಗಳಾಗಿವೆ. ಸಾಮಾನ್ಯವಾಗಿ ಕೆಲ ಉಪಕರಣಗಳ ಬಳಕೆಯಿಂದ ವಿದ್ಯುತ್ ಬಿಲ್ ಕಡಿಮೆ ಬರುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ, ಬಿಲ್ ಕೈಗೆ ಸೇರಿದಾಗ ಎಷ್ಟು ವಿದ್ಯುತ್ ಬಳಕೆಯಾಗಿದೆ ಎಂಬುದು ಅರ್ಥವಾಗುತ್ತದೆ. ಈ ಹೆಚ್ಚಿನ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿಕೊಳ್ಳಲು ಇಂದು ನಾವು ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಅರ್ಧದಷ್ಟು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ಓದಿ-BSNL Bumper Offer: ಏರ್ಟೆಲ್-ಜಿಯೋ ಬೆವರಿಳಿಸಿದ ಬಿಎಸ್ಎನ್ಎಲ್ ನಿಂದ ಗ್ರಾಹಕರಿಗೆ ಅದ್ಭುದ ಕೊಡುಗೆ
ಏರ್ ಕಂಡಿಷನರ್ ಬಳಕೆಯನ್ನು ನಿಲ್ಲಿಸಿ
ನೀವು ಹವಾನಿಯಂತ್ರಣ ಯಂತ್ರಗಳನ್ನು ಬಳಸುತ್ತಿದ್ದರೆ, ಅದನ್ನು ತಕ್ಷಣವೇ ನಿಲ್ಲಿಸಿ. ಏಕೆಂದರೆ ಬೇಸಿಗೆಯ ಬೇಗೆ ಸಾಕಷ್ಟು ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸಾಮಾನ್ಯ ಫ್ಯಾನ್ ಅಥವಾ ಕೂಲರ್ನೊಂದಿಗೆ ಕಾಲ ಕಳೆಯಬಹುದು. ಹವಾನಿಯಂತ್ರಣವನ್ನು ಅಗತ್ಯವಿದ್ದಾಗ ಮಾತ್ರ ಬಳಸಿ, ಈ ಉಪಾಯವನ್ನು ಅನುಸರಿಸುವ ಮೂಲಕ ನೀವು ನಿಮ್ಮ ಸಾಕಷ್ಟು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ಓದಿ-Cooking oil price : ಸಾಮಾನ್ಯ ಜನರಿಗೆ ಸಿಹಿ ಸುದ್ದಿ : ಅಡುಗೆ ಎಣ್ಣೆ ಬೆಲೆಯಲ್ಲಿ ₹12 ಇಳಿಕೆ!
ಗೀಸರ್ ಬಳಸಬೇಡಿ
ಚಳಿಗಾಲ ಬರಲು ಇನ್ನೂ ಸ್ವಲ್ಪ ಸಾಕಷ್ಟು ಸಮಯಾವಕಾಶ ಇದೆ, ಆದ್ದರಿಂದ ಈಗಿನಿಂದಲೇ ಗೀಸರ್ ಬಳಸುತ್ತಿದ್ದರೆ ಅದನ್ನು ನಿಲ್ಲಿಸಿ. ಗೀಸರ್ ಒಂದು ಗೃಹೋಪಯೋಗಿ ಉಪಕರಣಗಳಲ್ಲಿ ಒಂದಾಗಿದೆ, ಇದು ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಹೆಚ್ಚಿಸುತ್ತದೆ. ನೀವು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಬಯಸುತ್ತಿದ್ದರೆ, ಅಗತ್ಯವಿಲ್ಲದಿದ್ದಾಗ ಅದನ್ನು ಬಳಸಬೇಡಿ. ಗೀಸರ್ ಬಳಕೆಯನ್ನು ನಿಯಂತ್ರಿಸುವುದರಿಂದ ನೀವು ವಿದ್ಯುತ್ ಬಿಲ್ ಅನ್ನು ಕಡಿತಗೊಳಿಸಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.