Driving License New Rules: ಇನ್ನು ಡ್ರೈವಿಂಗ್ ಲೈಸೆನ್ಸ್ ಮಾಡಿಸಲು RTOಗೆ ಅಲೆಯಬೇಕಿಲ್ಲ, ಸರ್ಕಾರ ಬದಲಾಯಿಸಿದೆ ನಿಯಮ

Driving License New Rules 2022 : ಚಾಲನಾ ಪರವಾನಗಿ ಮಾಡುವ ನಿಯಮಗಳನ್ನು ಕೇಂದ್ರ ಸರ್ಕಾರವು ಬದಲಾಯಿಸಿದೆ. ಹೊಸ ನಿಯಮಗಳ ಅನುಷ್ಠಾನದ ನಂತರ, ಸಾಮಾನ್ಯ ಜನರಿಗೆ ಹಚ್ಚಿನ ಪ್ರಯೋಜನವಾಗಲಿದೆ.  ಇದಾದ ಮೇಲೆ   driving ಲೈಸೆನ್ಸ್ ಗಾಗಿ  RTOಗೆ ಅಲೆದಾಡುವ ಅಗತ್ಯವಿರುವುದಿಲ್ಲ.

Written by - Ranjitha R K | Last Updated : May 10, 2022, 09:56 AM IST
  • ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ.
  • ಹೊಸ ನಿಯಮಗಳು ಜುಲೈ ಒಂದರಿಂದ ಅನ್ವಯ
  • ಪ್ರಮಾಣಪತ್ರದ ಆಧಾರದ ಮೇಲೆ ಡಿಎಲ್
 Driving License New Rules: ಇನ್ನು ಡ್ರೈವಿಂಗ್ ಲೈಸೆನ್ಸ್ ಮಾಡಿಸಲು  RTOಗೆ ಅಲೆಯಬೇಕಿಲ್ಲ,  ಸರ್ಕಾರ ಬದಲಾಯಿಸಿದೆ ನಿಯಮ  title=
Driving License New Rules 2022 (file photo)

ಬೆಂಗಳೂರು : Driving License New Rules 2022 : ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ಅಥವಾ ರಿನ್ಯೂ ಮಾಡಿಸುವ ಬಗ್ಗೆ ಯೋಜಿಸುತ್ತಿದ್ದರೆ, ಈ ಸುದ್ದಿಯನ್ನುತಪ್ಪದೇ  ಓದಿ .  ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಹೊಸ ನಿಯಮಗಳ ಅನುಷ್ಠಾನದ ನಂತರ, ಡ್ರೈವಿಂಗ್ ಲೈಸೆನ್ಸ್ ಪಡೆಯಲು  ಪ್ರಾದೇಶಿಕ ಸಾರಿಗೆ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ರೂಪಿಸಿರುವ ಚಾಲನಾ ಪರವಾನಗಿಯ ಹೊಸ ನಿಯಮಗಳು ಮೊದಲಿಗಿಂತ ಹೆಚ್ಚು ಸುಲಭವಾಗಿದೆ.

ಹೊಸ ನಿಯಮಗಳು ಜುಲೈ ಒಂದರಿಂದ ಅನ್ವಯ : 
ಡ್ರೈವಿಂಗ್ ಲೈಸೆನ್ಸ್ ಮಾಡುವ ತಿದ್ದುಪಡಿ ನಿಯಮದ ಪ್ರಕಾರ, RTO ಗೆ ಭೇಟಿ ನೀಡಿ ಯಾವುದೇ ರೀತಿಯ ಡ್ರೈವಿಂಗ್ ಟೆಸ್ಟ್ ನೀಡಬೇಕಾಗಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜುಲೈ 1, 2022 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮಗಳು ಜಾರಿಯಾದ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆಯಲು ವೇಟಿಂಗ್ ಲಿಸ್ಟ್ ನಲ್ಲಿ ಕಾಯುತ್ತಿರುವ ಕೋಟ್ಯಂತರ ಜನರಿಗೆ ನೆಮ್ಮದಿ ಸಿಗಲಿದೆ.

ಇದನ್ನೂ ಓದಿ : Gold Price Today: ಏರಿಕೆ ಕಂಡ ಚಿನ್ನದ ಬೆಲೆ, ಖರೀದಿ ಮುನ್ನ ಇಂದಿನ ಬೆಲೆ ತಿಳಿದುಕೊಳ್ಳಿ

ಪ್ರಮಾಣಪತ್ರದ ಆಧಾರದ ಮೇಲೆ ಡಿಎಲ್  : 
ಚಾಲನಾ ಪರವಾನಗಿ ಪಡೆಯಲು,  RTOನಲ್ಲಿ ಟೆಸ್ಟ್ ತೆಗೆದುಕೊಳ್ಳಲು ಕಾಯಬೇಕಾಗಿಲ್ಲ. ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಡಿಎಲ್‌ಗಾಗಿ ನೋಂದಾಯಿಸಿಕೊಳ್ಳಬಹುದು. ಇಲ್ಲಿಂದ ತರಬೇತಿ ಪಡೆದ ನಂತರ ಅಲ್ಲಿಂದಲೇ ಟೆಸ್ಟ್ ಪಾಸ್ ಮಾಡಬೇಕು. ಟೆಸ್ಟ್ ನಲ್ಲಿ ಪಾಸ್ ಆದವರಿಗೆ  driving ಸ್ಕೂಲ್ ಪ್ರಮಾಣಪತ್ರವನ್ನು ನೀಡುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ ನಿಮ್ಮ DL ಮಾಡಲಾಗುತ್ತದೆ. 

ಥಿಯರಿ ಮತ್ತು ಪ್ರಾಕ್ಟಿಕಲ್ ಎರಡೂ ಟೆಸ್ಟ್ ಅಗತ್ಯ :
ಚಾಲನಾ ಪರವಾನಗಿ ಪಠ್ಯಕ್ರಮವನ್ನು ಸಚಿವಾಲಯವು ಸಿದ್ಧಪಡಿಸಿದೆ. ಇದನ್ನು ಥಿಯರಿ ಮತ್ತು ಪ್ರಾಕ್ಟಿಕಲ್  ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಲೈಟ್ ಮೋಟಾರ್ ವೆಹಿಕಲ್ ಕೋರ್ಸ್‌ನ ಅವಧಿಯು ನಾಲ್ಕು ವಾರಗಳು. ಇದು 29 ಗಂಟೆಗಳ ಕಾಲ ಇರುತ್ತದೆ. ರಸ್ತೆಗಳು, ಹೆದ್ದಾರಿಗಳು, ನಗರದ ರಸ್ತೆಗಳು, ಹಳ್ಳಿಯ ರಸ್ತೆಗಳು,ರಿವರ್ಸಿಂಗ್  ಮತ್ತು ಪಾರ್ಕಿಂಗ್ ಇತ್ಯಾದಿಗಳನ್ನು ಪ್ರಾಕ್ಟಿಕಲ್ ಆಗಿ ಕಲಿಯಲು 21 ಗಂಟೆಗಳ ಕಾಲ ನೀಡಬೇಕಾಗುತ್ತದೆ. ಉಳಿದ 8 ಗಂಟೆಗಳ ಕಾಲ ಥಿಯರಿ ಕಲಿಸಲಾಗುತ್ತದೆ.

ಇದನ್ನೂ ಓದಿ : Petrol Diesel Price may 10th :ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್ ಡಿಸೇಲ್ ಬೆಲೆ ಎಷ್ಟಿದೆ ಗೊತ್ತಾ ?

ತರಬೇತಿ ಕೇಂದ್ರಗಳಿಗೆ ಮಾರ್ಗಸೂಚಿಗಳು :
ತರಬೇತಿ ಕೇಂದ್ರಗಳಿಗೆ ರಸ್ತೆ ಮತ್ತು ಸಾರಿಗೆ ಸಚಿವಾಲಯವು ಕೆಲವು ಮಾರ್ಗಸೂಚಿಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಿದೆ. 

1. ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು  ಕನಿಷ್ಠ ಒಂದು ಎಕರೆ ಭೂಮಿ ಹೊಂದಿರಬೇಕು. ಭಾರೀ ಪ್ರಯಾಣಿಕ/ಸರಕು ವಾಹನಗಳು ಅಥವಾ ಟ್ರೇಲರ್‌ಗಳಿಗಾಗಿ ತರಬೇತಿ ಕೇಂದ್ರದ ಬಳಿ ಎರಡು ಎಕರೆ ಭೂಮಿಯನ್ನು ಹೊಂದಿರುವುದು ಅವಶ್ಯಕ.
2. ತರಬೇತುದಾರರು ಕನಿಷ್ಠ 12 ನೇ ತರಗತಿ ತೇರ್ಗಡೆ ಹೊಂದಿರಬೇಕು. ಅಲ್ಲದೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು.
3. ಡ್ರೈವಿಂಗ್ ಸೆಂಟರ್‌ಗಳ ಪಠ್ಯಕ್ರಮವನ್ನು ಥಿಯರಿ ಮತ್ತು ಪ್ರಾಕ್ಟಿಕಲ್ ಎಂದು 2 ಭಾಗಗಳಾಗಿ ವಿಂಗಡಿಸಲಾಗಿದೆ.
4. ತರಬೇತಿ ಕೇಂದ್ರದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಹೊಂದಿರುವುದು ಅವಶ್ಯಕ.
5. ಕೋರ್ಸ್‌ನ ಅವಧಿಯು ಮಧ್ಯಮ ಮತ್ತು ಭಾರೀ ವಾಹನಗಳ ಮೋಟಾರು ವಾಹನಗಳಿಗೆ 6 ವಾರಗಳಲ್ಲಿ 38 ಗಂಟೆಗಳು. 8 ಗಂಟೆಗಳ ಥಿಯರಿ ತರಗತಿ ಮತ್ತು ಉಳಿದ 31 ಗಂಟೆಗಳ ಪ್ರಾಯೋಗಿಕ ತರಗತಿ ಇರುತ್ತದೆ.

 

ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News