ಬೆಂಗಳೂರು : ಒಬ್ಬರ ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವ ಗಡುವು ಮುಕ್ತಾಯವಾಗಿದೆ. ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಿಸಲು ಸರ್ಕಾರ ಜೂನ್ 30, 2023 ರ್ ಗಡುವನ್ನು ನಿಗದಿ ಮಾಡಿತ್ತು. ಸರ್ಕಾರವು ಈ ಗಡುವನ್ನು ಈ ಹಿಂದೆ ಹಲವು ಬಾರಿ ವಿಸ್ತರಿಸಿತ್ತು. ಒಂದು ವೇಳೆ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಿರದಿದ್ದರೆ ಪ್ಯಾನ್ ನಿಷ್ಕ್ರಿಯಗೊಂಡಿರುತ್ತದೆ.
PAN ನಿಷ್ಕ್ರಿಯಗೊಂಡಿದ್ದರೆ ಏನು ಮಾಡುವುದು ? :
PAN ನಿಷ್ಕ್ರಿಯಗೊಂಡರೆ, ಕೆಲವು ಸೇವೆಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಇದಲ್ಲದೆ, ನೀವು ಇನ್ನೂ ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸದಿದ್ದರೆ, ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡದ ಹೊರತು ಈ ಕೆಲಸ ಮಾಡುವುದು ಕೂಡಾ ಸಾಧ್ಯವಾಗುವುದಿಲ್ಲ. ಆದರೆ 1,000 ರೂಪಾಯಿ ಶುಲ್ಕವನ್ನು ಪಾವತಿಸಿ ನಿಗದಿತ ಪ್ರಾಧಿಕಾರಕ್ಕೆ ತಿಳಿಸಿದ ನಂತರ 30 ದಿನಗಳಲ್ಲಿ ಪ್ಯಾನ್ ಅನ್ನು ಮತ್ತೆ ಕಾರ್ಯಗತಗೊಳಿಸಬಹುದು ಎನ್ನುವ ಮಾಹಿತಿಯನ್ನುಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಇದನ್ನೂ ಓದಿ : ಟೊಮೇಟೊ ಬೆಲೆ ಮುಗಿಲು ಮುಟ್ಟಲು ಇದೇ ಕಾರಣ! ಮತ್ತೆ ದರ ಇಳಿಕೆ ಯಾವಾಗ ?
ಪ್ಯಾನ್-ಆಧಾರ್ ಲಿಂಕ್: ನಿಷ್ಕ್ರಿಯವಾಗಿರುವ ಪ್ಯಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸುವುದು ಹೇಗೆ? :
ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಿದ್ದರೆ, ಅದನ್ನು ಸಕ್ರಿಯಗೊಳಿಸಲು ನೀವು ಸರಳವಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ಮಾರ್ಚ್ನಲ್ಲಿ ಹೊರಡಿಸಿರುವ CBDT ಸುತ್ತೋಲೆಯ ಪ್ರಕಾರ 1000 ರೂಪಾಯಿ ಶುಲ್ಕವನ್ನು ಪಾವತಿಸಿದ ನಂತರ, 30 ದಿನಗಳಲ್ಲಿ ಪ್ಯಾನ್ ಅನ್ನು ಪುನಃ ಸಕ್ರಿಯಗೊಳಿಸಬಹುದು ಎಂದು ಹೇಳಿದೆ. ಉದಾಹರಣೆಗೆ, ಜುಲೈ 10 ರಂದು ಆಧಾರ್ನೊಂದಿಗೆ PAN ಅನ್ನು ಲಿಂಕ್ ಮಾಡುವಂತೆ ಪ್ರಾಧಿಕಾರಕ್ಕೆ ವಿನಂತಿಯನ್ನು ಸಲ್ಲಿಸಿದರೆ, PAN ಆಗಸ್ಟ್ 9 ರಂದು ಅಥವಾ ಅದಕ್ಕೂ ಮೊದಲು ಸಕ್ರಿಯವಾಗುತ್ತದೆ. ಆದರೆ ನೆನಪಿರಲಿ ನಿಷ್ಕ್ರಿಯಗೊಂಡಿರುವ ಪ್ಯಾನ್ ಮತ್ತೆ ಸಕ್ರಿಯಗೊಳ್ಳುವವರೆಗೆ ಅದನ್ನು ಎಲ್ಲಿಯೂ ಬಳಸುವಂತಿಲ್ಲ. ಒಂದು ವೇಳೆ ನಿಷ್ಕ್ರಿಯ ಪ್ಯಾನ್ ಬಳಸಿದರೆ ಕಾನೂನಿನ ಅಡಿಯಲ್ಲಿ ಎದುರಾಗುವ ಎಲ್ಲಾ ಪರಿಣಾಮಗಳಿಗೆ ಜವಾಬ್ದಾರರಾಗಿರುತ್ತಾರೆ.
ಇದು ಅನೇಕ ಪರಿಣಾಮಗಳನ್ನು ಉಂಟುಮಾಡಬಹುದು:-
- ನಿಷ್ಕ್ರಿಯವಾಗಿರುವ PAN ಅನ್ನು ಬಳಸಿಕೊಂಡು ವ್ಯಕ್ತಿಯು ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ
- ಬಾಕಿಯಿರುವ ರಿಟರ್ನ್ಗಳನ್ನು ಪ್ರೋಸೆಸ್ ಮಾಡುವುದು ಸಾಧ್ಯವಿಲ್ಲ.
- ಕಾರ್ಯನಿರ್ವಹಿಸದ PANಗೆ ಬಾಕಿಯಿರುವ ಮರುಪಾವತಿಗಳು ಲಭ್ಯವಿರುವುದಿಲ್ಲ -
ಒಮ್ಮೆ PAN ನಿಷ್ಕ್ರಿಯಗೊಳಿಸಿದರೆ, ದೋಷಯುಕ್ತ ರಿಟರ್ನ್ಗಳಂತಹ ಬಾಕಿ ಉಳಿದಿರುವ ಚಟುವಟಿಕೆಗಳನ್ನು ಪೂರ್ಣಗೊಳಿಸಲಾಗುವುದಿಲ್ಲ
- ಇದರ ಪರಿಣಾಮ ಹೆಚ್ಚಿನ ದರದಲ್ಲಿ ತೆರಿಗೆ ಕಡಿತವಾಗುತ್ತದೆ.
ಇದನ್ನೂ ಓದಿ : Google ನಲ್ಲಿ ಸರ್ಚ್ ನಲ್ಲಿ ಏಕೆ ಟ್ರೆಂಡ್ ಆಗುತ್ತಿದೆ ವಸುಂಧರ ಒಸ್ವಾಲ್ ಹೆಸರು? ಇಲ್ಲಿದೆ ಕಾರಣ
ಏತನ್ಮಧ್ಯೆ, ಜೂನ್ 30 ರವರೆಗೆ ಶುಲ್ಕವನ್ನು ಪಾವತಿಸಿದ ಪ್ರಕರಣಗಳನ್ನು ಔಪಚಾರಿಕವಾಗಿ ಪರಿಗಣಿಸುವುದಾಗಿ ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ. ಆಧಾರ್-ಪ್ಯಾನ್ ಲಿಂಕ್ಗೆ ಶುಲ್ಕ ಪಾವತಿಸಿದ ನಂತರ ಪ್ಯಾನ್ ಹೊಂದಿರುವವರು ಚಲನ್ ಡೌನ್ಲೋಡ್ ಮಾಡಲು ತೊಂದರೆ ಎದುರಿಸುತ್ತಿರುವ ನಿದರ್ಶನಗಳು ಗಮನಕ್ಕೆ ಬಂದಿವೆ ಎಂದು ಇಲಾಖೆ ಹೇಳಿದೆ.
"ಈ ನಿಟ್ಟಿನಲ್ಲಿ, ಲಾಗ್ ಇನ್ ಆದ ನಂತರ ಪೋರ್ಟಲ್ನ 'ಇ-ಪೇ ಟ್ಯಾಕ್ಸ್ ' ಟ್ಯಾಬ್ನಲ್ಲಿ ಚಲನ್ ಪಾವತಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಪಾವತಿ ಯಶಸ್ವಿಯಾಗಿದ್ದರೆ PAN ಹೊಂದಿರುವವರ PAN ಸಂಖ್ಯೆ ಆಧಾರ್ನೊಂದಿಗೆ ಲಿಂಕ್ ಮಾಡುವುದನ್ನು ಮುಂದುವರಿಸಬಹುದು," ಎಂದು ಇಲಾಖೆ ಹೇಳಿದೆ. "ಪಾವತಿ ಮತ್ತು ಲಿಂಕ್ ಮಾಡಲು ಅನುಮೋದನೆಯನ್ನು ಸ್ವೀಕರಿಸಿದ್ದರೂ ಜೂನ್ 30 ರವರೆಗೆ ಲಿಂಕ್ ಮಾಡದ ಸಂದರ್ಭಗಳಲ್ಲಿ, ಅಂತಹ ಪ್ರಕರಣಗಳನ್ನು ಇಲಾಖೆಯು ಸರಿಯಾಗಿ ಪರಿಗಣಿಸುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ ಬಹುತೇಕ ಫಿಕ್ಸ್!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.