Today's Latest Gold Price: ಕಳೆದ ಸುಮಾರು ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರ ಇಳಿಕೆಯಾಗುತ್ತಿದೆ. ಚಿನ್ನದ ದರ ಮತ್ತೊಮ್ಮೆ ಹಿಂದಿನ ದಾಖಲೆ ಮಟ್ಟಕ್ಕಿಂತ ಕೆಳಗೆ ತಲುಪಿದೆ. ನೀವು ಕೂಡ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಈ ಸಮಯದ ಸದುಪಯೋಗಪಡಿಸಿಕೊಳ್ಳಬಹುದು. ಏಕೆಂದರೆ ಈ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ ಕಾಣಲಿದ್ದು, ಪ್ರತಿ 10 ಗ್ರಾಂಗೆ 65,000 ರೂ.ಗಳ ಮಟ್ಟ ತಲುಪುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಬೆಳ್ಳಿ ಬೆಲೆಯೂ ಕೂಡ ಏರಿಕೆಯಾಗುವ ನಿರೀಕ್ಷೆ ಇದೆ.
ರೂ.55,000 ಕ್ಕಿಂತ ಕೆಳಗೆ ಜಾರಿದ ಚಿನ್ನದ ಬೆಲೆ
ದಾಖಲೆಯ 58,500 ರೂ.ಗೆ ತಲುಪಿದ ನಂತರ, ಚಿನ್ನವು ಪ್ರಸ್ತುತ ಪ್ರತಿ 10 ಗ್ರಾಂ.ಗೆ ರೂ.55,000 ಕ್ಕಿಂತ ಕಡಿಮೆ ದರದಲ್ಲಿ ತನ್ನ ವಹಿವಾಟನ್ನು ಮುಂದುವರೆಸಿದೆ. ಇದೇ ರೀತಿ ಪ್ರತಿ ಕೆ.ಜಿ ಬೆಳ್ಳಿಯೂ ಕೂಡ 71,000 ರೂ.ಗೆ ಏರಿದ ನಂತರ, 61,000 ರೂ.ಗಳಿಗೆ ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತದ ನಡುವೆ, ಚಿನ್ನ ಮತ್ತು ಬೆಳ್ಳಿ ಎರಡೂ ಕುಸಿತವನ್ನು ಕಾಣುತ್ತಿವೆ. ಗುರುವಾರದ ವಹಿವಾಟಿನ ವೇಳೆ ಎಂಸಿಎಕ್ಸ್ ಮತ್ತು ಸರಾಫ್ ಮಾರುಕಟ್ಟೆಗಳೆರಲ್ಲಿಯೂ ಕೂಡ ಎರಡೂ ಲೋಹಗಳ ದರ ಇಳಿಕೆಯನ್ನು ಗಮನಿಸಲಾಗುತ್ತಿದೆ. .
MCX ನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ
ಗುರುವಾರ ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಚಿನ್ನ ಮತ್ತು ಬೆಳ್ಳಿ ದರಗಳು ಕುಸಿತವನ್ನು ಕಂಡಿವೆ. ಕೊನೆಯ ಕೆಲ ದಿನಗಳಲ್ಲಿ 58,000 ರೂ. ಗಡಿ ದಾಟಿದ್ದ ಚಿನ್ನ, ಗುರುವಾರ 65 ರೂ.ನಷ್ಟು ಕುಸಿತ ಕಂಡು 10 ಗ್ರಾಂಗೆ 54846 ರೂ.ಗೆ ತಲುಪಿದೆ. ಇನ್ನೊಂದೆಡೆ ಕೆಲ ದಿನಗಳ ಹಿಂದೆ ರೂ. 71,000 ದಾಟಿದ್ದ ಬೆಳ್ಳಿಯ ಬೆಲೆ, ಇಂದು ಅಂದರೆ ಗುರುವಾರ ರೂ.212ರಷ್ಟು ಕುಸಿದು ಪ್ರತಿ ಕೆಜಿಗೆ 61605 ರೂ. ತಲುಪಿದೆ ಬುಧವಾರದಂದು ಚಿನ್ನದ ಬೆಲೆ 54911 ರೂ ಮತ್ತು ಬೆಳ್ಳಿ ಪ್ರತಿ ಕೆಜಿಗೆ 61817 ರೂ.ಗೆ ಮಾರಾಟವಾಗುತ್ತಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-7th CPC: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಹಬ್ಬದ ಉಡುಗೊರೆ ಪ್ರಕಟಿಸಿದ ಮೋದಿ ಸರ್ಕಾರ!
ಸರಾಫ್ ಮಾರುಕಟ್ಟೆಯಲ್ಲಿಯೂ ಮುಂದುವರೆದ ದರ ಕುಸಿತ
ಗುರುವಾರ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ದರದಲ್ಲಿ ಕುಸಿತ ಕಂಡುಬಂದಿದೆ. ಬೆಳ್ಳಿ ಚಿನ್ನಕ್ಕಿಂತ ಹೆಚ್ಚು ಇಳಿಕೆ ಕಂಡಿದೆ. ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ (https://ibjarates.com) ಬಿಡುಗಡೆ ಮಾಡಿದ ಬೆಲೆಗಳ ಪ್ರಕಾರ, 24-ಕ್ಯಾರೆಟ್ ಚಿನ್ನವು 10 ಗ್ರಾಂಗೆ 124 ರೂ.ನಷ್ಟು ಕುಸಿದು 55121 ರೂ.ಗೆ ತಲುಪಿದೆ. ಇದೇ ವೇಳೆ ಬೆಳ್ಳಿಯು ಸುಮಾರು 400 ರೂಪಾಯಿಗಳಷ್ಟು ಕುಸಿದು ಪ್ರತಿ ಕೆಜಿಗೆ 61,497 ರೂಪಾಯಿಗಳಿಗೆ ತಲುಪಿದೆ.
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರ ಮೇಲೆ ಹಣದ ಸುರಿಮಳೆ, ತುಟ್ಟಿಭತ್ಯೆ ಶೇ.45ಕ್ಕೆ ಏರಿಕೆ!
ಪ್ರಸ್ತುತ, ಕುಸಿತದ ನಂತರ, ಚಿನ್ನದ ಬೆಲೆಯು ಆಗಸ್ಟ್ 2020 ರ ಮಟ್ಟಕ್ಕಿಂತ ಕಡಿಮೆಯಾಗಿದೆ. ಎರಡೂವರೆ ವರ್ಷಗಳ ಹಿಂದೆ ಚಿನ್ನ 56,200 ರೂ.ಗಳ ವರೆಗೆ ಏರಿಕೆ ಕಂಡು ದಾಖಲೆ ಬರೆದಿತ್ತು. ಬುಧವಾರದಂದು ಪ್ರತಿ 10 ಗ್ರಾಂ ಚಿನ್ನ 55245 ರೂ.ಗೆ ಮತ್ತು ಬೆಳ್ಳಿ ಕೆಜಿಗೆ 61883 ರೂ.ಆಗಿತ್ತು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.