ಡಿಸೆಂಬರ್ 31 ರ ಮೊದಲು ಈ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳಿ, ಇಲ್ಲವಾದರೆ ತಪ್ಪಿದ್ದಲ್ಲ ನಷ್ಟ

ನಿಗದಿತ ದಿನಾಂಕದೊಳಗೆ ನೀವು ಈ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ, ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ. ನೀವು ಇನ್ನೂ ಆದಾಯ ತೆರಿಗೆ ರಿಟರ್ನ್   ಸಲ್ಲಿಸದಿದ್ದರೆ, ಡಿಸೆಂಬರ್ 31 ರೊಳಗೆ ಆ ಕೆಲಸವನ್ನು ಮಾಡಿ ಮುಗಿಸಿಕೊಳ್ಳಿ.

Written by - Ranjitha R K | Last Updated : Dec 24, 2021, 10:01 AM IST
  • ಈ ತಿಂಗಳು ಮಾಡಬೇಕಾದ 4 ಪ್ರಮುಖ ಕೆಲಸಗಳು
  • ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯ
  • ಆಡಿಟ್ ವರದಿ ಸಲ್ಲಿಸುವುದು ಕೂಡಾ ಕಡ್ಡಾಯ
ಡಿಸೆಂಬರ್ 31 ರ ಮೊದಲು ಈ ಎಲ್ಲಾ ಕೆಲಸಗಳನ್ನು  ಮಾಡಿ ಮುಗಿಸಿಕೊಳ್ಳಿ, ಇಲ್ಲವಾದರೆ ತಪ್ಪಿದ್ದಲ್ಲ ನಷ್ಟ  title=
ಈ ತಿಂಗಳು ಮಾಡಬೇಕಾದ 4 ಪ್ರಮುಖ ಕೆಲಸಗಳು (file photo)

ನವದೆಹಲಿ :  2021 ರ ಕೊನೆಯ ತಿಂಗಳು ಅಂದರೆ ಡಿಸೆಂಬರ್ ನಡೆಯುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ, ಕೆಲವೊಂದು  ಪ್ರಮುಖ ಕಾರ್ಯಗಳನ್ನು ಮಾಡಿ ಮುಗಿಸಬೇಕು. ನಿಗದಿತ ದಿನಾಂಕದೊಳಗೆ ನೀವು ಈ ಕೆಲಸಗಳನ್ನು ಪೂರ್ಣಗೊಳಿಸದಿದ್ದರೆ, ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ. ನೀವು ಇನ್ನೂ ಆದಾಯ ತೆರಿಗೆ ರಿಟರ್ನ್   (ITR) ಸಲ್ಲಿಸದಿದ್ದರೆ, ಡಿಸೆಂಬರ್ 31 ರೊಳಗೆ ಆ ಕೆಲಸವನ್ನು ಮಾಡಿ ಮುಗಿಸಿಕೊಳ್ಳಿ. ಇನ್ನು ಇಪಿಎಫ್‌ಒ (EPFO) ಪಿಎಫ್ ಖಾತೆದಾರರಿಗೆ ನಾಮಿನಿಯನ್ನು ಸೇರಿಸಲು ಈ ತಿಂಗಳ ಅಂತ್ಯದವರೆಗೆ ಕಾಲಾವಕಾಶ ನೀಡಲಾಗಿದೆ. 

ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ :
2020-21 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ. ತೆರಿಗೆ ತಜ್ಞರ ಪ್ರಕಾರ, ಗಡುವಿನ ಮೊದಲು ಐಟಿಆರ್ ಅನ್ನು ಸಲ್ಲಿಸುವುದರಿಂದ ದಂಡದಿಂದ ತಪ್ಪಿಸಿಕೊಲ್ಲುವ್ದು ಮಾತ್ರವಲ್ಲೇ, ಇನ್ನೂ ಅನೇಕ ಪ್ರಯೋಜನಗಳಿವೆ. ನಿಗದಿತ ದಿನಾಂಕದ ಮೊದಲು ITR ಅನ್ನು ಸಲ್ಲಿಸದಿದ್ದರೆ, ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ.  

ಇದನ್ನೂ ಓದಿ : New Pension System: ಪ್ರತಿ ತಿಂಗಳು 50 ಸಾವಿರ ರೂಪಾಯಿ ಪಿಂಚಣಿ ಸಿಗಬೇಕೆಂದರೆ ಈ ಸಣ್ಣ ಕೆಲಸ ಮಾಡಿ

ಪಿಎಫ್ ಖಾತೆದಾರರಿಗೆ ನಾಮಿನಿ ಅಗತ್ಯವಿದೆ :
ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಎಲ್ಲಾ ಪಿಎಫ್ ಖಾತೆದಾರರಿಗೆ ನಾಮಿನಿಯನ್ನು ಸೇರಿಸಲು ಕೇಳಿದೆ.  31ನೇ ಡಿಸೆಂಬರ್ 2021 ಅನ್ನು ನಾಮಿನಿಗಳನ್ನು ಸೇರಿಸಲು ಕೊನೆಯ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ.  ಡಿಸೆಂಬರ್ 31 ರೊಳಗೆ ನಿಮ್ಮ ಪಿಎಫ್ ಖಾತೆಗೆ ನಾಮಿನಿಯನ್ನು ಸೇರಿಸದಿದ್ದರೆ, ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. EPFO ನ ಸೈಟ್‌ಗೆ ಭೇಟಿ ನೀಡುವ ಮೂಲಕ, ನೀವು ಈ ಕೆಲಸವನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಮಾಡಬಹುದು.  

 ಆಡಿಟ್ ರಿಪೋರ್ಟ್ ಫೈಲ್ ಮಾಡಿ : 
ಈ ತಿಂಗಳ ಅಂತ್ಯದೊಳಗೆ ಆಡಿಟ್ ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ವಾರ್ಷಿಕ ಆದಾಯ 10 ಕೋಟಿ ರೂ.ಗಿಂತ ಹೆಚ್ಚಿರುವ ಉದ್ಯಮಿಗಳು ಆದಾಯ ತೆರಿಗೆ ರಿಟರ್ನ್ ಜೊತೆಗೆ ಆಡಿಟ್ ವರದಿಯನ್ನು ಸಲ್ಲಿಸಬೇಕು. ಆರ್ಕಿಟೆಕ್ಟ್‌ಗಳು, ಎಂಜಿನಿಯರ್‌ಗಳು, ವೈದ್ಯರು, ಚಲನಚಿತ್ರ ನಟರು, ವಕೀಲರು, ತಂತ್ರಜ್ಞರಂತಹ ವೃತ್ತಿಪರರು 50 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಲೆಕ್ಕಪರಿಶೋಧನಾ ವರದಿಯನ್ನು ಮಾತ್ರ ನೀಡಬೇಕು. 2020-21 ರ ಆರ್ಥಿಕ ವರ್ಷಕ್ಕೆ ಆಡಿಟ್ ಸಲ್ಲಿಸಲು  ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ.  

ಇದನ್ನೂ ಓದಿ : ಹೊಸ ವರ್ಷದಲ್ಲಿ ಹೊಸ ಲುಕ್ ನೊಂದಿಗೆ ಮಾರುಕಟ್ಟೆಗೆ ಬರುತ್ತಿದೆ Yezdi

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ :
ಬ್ಯಾಂಕ್ ಆಫ್ ಬರೋಡಾ (Bank of Baroda) ಹಬ್ಬದಸೀಸನ್ ನಲ್ಲಿ ಗೃಹ ಸಾಲದ ಬಡ್ಡಿ ದರವನ್ನು 6.50% ಕ್ಕೆ ಇಳಿಸಿದೆ. ಅಂದರೆ, ಈಗ  ಅಗ್ಗದ ದರದಲ್ಲಿ ಗೃಹ ಸಾಲವನ್ನು (Home loan) ತೆಗೆದುಕೊಳ್ಳಬಹುದು. ಹೊಸ ಸಾಲದ ಹೊರತಾಗಿ, ಹೊಸ ಬಡ್ಡಿದರದ ಪ್ರಯೋಜನವು ಇತರ ಬ್ಯಾಂಕ್‌ನಿಂದ ವರ್ಗಾಯಿಸಲಾದ ಗೃಹ ಸಾಲದ ಮೇಲೆಯೂ ಲಭ್ಯವಿರುತ್ತದೆ. ಆದರೆ ಈ ಕೊಡುಗೆಯ ಲಾಭವನ್ನು ಡಿಸೆಂಬರ್ 31 ರವರೆಗೆ ಪಡೆಯಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News