ನವದೆಹಲಿ: ಮಾರುತಿ ಆಲ್ಟೊ ದೇಶದಲ್ಲಿಯೇ ಅತಿಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ವಾಹನದ ಕಾಂಪ್ಯಾಕ್ಟ್ ಗಾತ್ರ, ಉತ್ತಮ ಮೈಲೇಜ್ ಮತ್ತು ಕೈಗೆಟುಕುವ ಬೆಲೆಯು ಜನರಿಗೆ ಉತ್ತಮ ಆಯ್ಕೆಯಾಗಿದೆ. ಇದು ಮಾರುತಿ ಆಲ್ಟೊ 800 ಮತ್ತು ಆಲ್ಟೊ K10 ಎಂಬ 2 ರೂಪಾಂತರಗಳಲ್ಲಿ ಬರುತ್ತದೆ. ವಿಶೇಷವೆಂದರೆ ಕಂಪನಿಯು ಆಲ್ಟೊ 800 ಅನ್ನು CNG ಕಿಟ್‌ನೊಂದಿಗೆ ಮಾರಾಟ ಮಾಡುತ್ತದೆ. ಆಲ್ಟೊ CNG ಪ್ರತಿ ಲೀಟರ್‍ಗೆ 35 ಕಿಮೀ ಕ್ರಮಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ನೀವು ಸಹ ಈ CNG ವಾಹನ ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ಸುವರ್ಣಾವಕಾಶ. ಕೇವಲ 50 ಸಾವಿರ ರೂ. ಮುಂಗಡ ಪಾವತಿಸಿ ಕಾರನ್ನು ಮನೆಗೆ ಕೊಂಡೊಯ್ಯಬಹುದು. ಈ ಹಬ್ಬಕ್ಕೆ ನಿಮ್ಮ ಬಜೆಟ್‍ಗೆ ತಕ್ಕಂತೆ ಕಾರು ಖರೀದಿಸಬಹುದಾಗಿದೆ.
ಇದನ್ನೂ ಓದಿ: Apple iPhone 13 ಮೇಲೆ ಭಾರೀ ರಿಯಾಯಿತಿ! ಚಾನ್ಸ್ ಮಿಸ್ ಮಾಡಿಕೊಳ್ಳಬೇಡಿ
ಮನೆಗೆ ತನ್ನಿಮಾರುತಿ ಆಲ್ಟೊ CNG ಕಾರು
ಮಾರುತಿ ಆಲ್ಟೊ 800ನ CNG ಆವೃತ್ತಿಯು ಕೇವಲ ಒಂದು ರೂಪಾಂತರದ ಎಲ್‌ಎಕ್ಸ್‌ಐನಲ್ಲಿ ಬರುತ್ತದೆ. ಇದರ ಬೆಲೆ 5.03 ಲಕ್ಷ ರೂ. (ಎಕ್ಸ್ ಶೋ ರೂಂ) ಇದೆ. ಆನ್‌ರೋಡ್ ಬೆಲೆ ಸುಮಾರು 5.55 ಲಕ್ಷ ರೂ. ವೆಚ್ಚವಾಗಲಿದೆ. ಕೇವಲ 50 ಸಾವಿರ ರೂ. ಡೌನ್ ಪೇಮೆಂಟ್ ಕಟ್ಟಿ ಶೇ.10ರ ಬ್ಯಾಂಕ್ ಬಡ್ಡಿ ದರದಲ್ಲಿ 5 ವರ್ಷಗಳ ಸಾಲದ ಅವಧಿ ಮಾಡಿಕೊಂಡು ಹಣ ಪಾವತಿಸಿದರೆ ಸಾಕು ಕಾರು ನಿಮ್ಮದಾಗುತ್ತದೆ.
ನೀವು 50 ಸಾವಿರ ರೂ.ಗಳ ಡೌನ್ ಪೇಮೆಂಟ್ ಪಾವತಿಸಿದರೆ, ಪ್ರತಿ ತಿಂಗಳು ಸುಮಾರು 10,600 ರೂ. ಇಎಂಐ ಪಾವತಿಸಬೇಕಾಗುತ್ತದೆ. ಒಟ್ಟು 5 ವರ್ಷಗಳ ಅವಧಿಯಲ್ಲಿ ನೀವು 1,37,173 ರೂ.ವನ್ನು ಹೆಚ್ಚುವರಿಯಾಗಿ(ಬಡ್ಡಿ) ಪಾವತಿಸುವಿರಿ.
ಇದನ್ನೂ ಓದಿ: ವಿವಾಹಿತರಿಗೆ ಪ್ರತಿ ತಿಂಗಳು ಸಿಗುವುದು 10000 ರೂ. ಪಿಂಚಣಿ!
ಎಂಜಿನ್ ಮತ್ತು ಮೈಲೇಜ್
ಮಾರುತಿಯ ಈ ಹ್ಯಾಚ್‌ಬ್ಯಾಕ್ ಕಾರು 0.8-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ (48PS ಮತ್ತು 69Nm ತಯಾರಿಸುತ್ತದೆ). ಇದಕ್ಕೆ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೀಡಲಾಗಿದೆ. CNGನಲ್ಲಿ ರನ್ ಮಾಡಿದಾಗ ಔಟ್‌ಪುಟ್ 41PS ಮತ್ತು 60Nmಗೆ ಇಳಿಯುತ್ತದೆ. ಕಂಪನಿಯ ಪ್ರಕಾರ ಇದರ ಮೈಲೇಜ್ ಪೆಟ್ರೋಲ್‌ಗೆ 22.05kmpl ಮತ್ತು CNGಗೆ 31.59km/kg ಇರುತ್ತದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ