Income Tax Return Filing Online: ಮತ್ತೆ ವಿಸ್ತರಣೆಯಾದ ITR ಸಲ್ಲಿಕೆಯ ಗಡುವು

Income Tax Return Filing Online:ಐಟಿಆರ್ ಸಲ್ಲಿಸುವ ದಿನಾಂಕವನ್ನು ಸರ್ಕಾರ ವಿಸ್ತರಿಸಿದೆ.

Written by - Nitin Tabib | Last Updated : Dec 30, 2020, 07:19 PM IST
  • ITR ಸಲ್ಲಿಕೆಯ ಗಡುವು ವಿಸ್ತರಣೆ.
  • ಜನವರಿ 10, 2021ರವರೆಗೆ ಗಡುವು ವಿಸ್ತರಿಸಿದ ಆದಾಯ ತೆರಿಗೆ ಇಲಾಖೆ.
  • ಈ ಮೊದಲು ಡಿಸೆಂಬರ್ 31, 2020 ITR ದಾಖಲಿಸಲು ಕೊನೆಯ ದಿನಾಂಕ ಎಂದು ಹೇಳಲಾಗಿತ್ತು.
Income Tax Return Filing Online: ಮತ್ತೆ ವಿಸ್ತರಣೆಯಾದ ITR ಸಲ್ಲಿಕೆಯ ಗಡುವು title=
Income Tax Return Filing Online (File Image)

ನವದೆಹಲಿ:Income Tax Return Filing Online - ITR ಸಲ್ಲಿಕೆಯ ದಿನಾಂಕವನ್ನು ಸರ್ಕಾರ ಜನವರಿ 10 ರವರೆಗೆ ವಿಸ್ತರಿಸಿದೆ. ವೈಯಕ್ತಿಕ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಈ ಮೊದಲು ಡಿಸೆಂಬರ್ 31, 2020 ಕೊನೆಯ ದಿನಾಂಕ ಎನ್ನಲಾಗಿತ್ತು. ಆದರೆ, ಇದೀಗ ಅದನ್ನು ಪುನಃ 10 ದಿನಗಳವರೆಗೆ ವಿಸ್ತರಿಸಲಾಗಿದೆ.

ಇದನ್ನು ಓದಿ- ಚಿಟಿಕೆ ಹೊಡೆಯೋದ್ರಲ್ಲಿ ITR ಫೈಲ್ ಮಾಡಿ, IT ವಿಭಾಗದ 'Jhatpat Processing' ಬಿಡುಗಡೆ

ಯಾವುದೇ ರೀತಿಯಿಂದಾಗುವ ತೊಂದರೆಯಿಂದ ದೂರವಿರಲು ಕೊನೆಯ ನಿಮಿಷದವರೆಗೆ ಕಾಯದೆ ರಿಟರ್ನ್ ಸಲ್ಲಿಸಲು ತೆರಿಗೆ ಪಾವತಿದಾರರಲ್ಲಿ ಆದಾಯ ತೆರಿಗೆ ಇಲಾಖೆ ಕೋರಿದೆ.

ಇದನ್ನು ಓದಿ- ನೀವು ಇನ್ನೂ ಐಟಿ ರಿಟರ್ನ್ಸ ಸಲ್ಲಿಸಿಲ್ಲವೇ? ಹಾಗಿದ್ದಲ್ಲಿ ಇಲ್ಲಿದೆ ಮಹತ್ವದ ಮಾಹಿತಿ

ಯಾವುದೇವಿಳಂಬ  ಶುಲ್ಕವಿಲ್ಲದೆ 2018-19ರ ಹಣಕಾಸು ವರ್ಷದ (ಮೌಲ್ಯಮಾಪನ ವರ್ಷ 2019-20) ಕೊನೆಯ ದಿನಾಂಕದವರೆಗೆ 5.65 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಕಳೆದ ವರ್ಷ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಆಗಸ್ಟ್ 31, 2019 ರವರೆಗೆ ವಿಸ್ತರಿಸಲಾಗಿತ್ತು.

ಇದನ್ನು ಓದಿ-Income tax return ಸಲ್ಲಿಸುವಲ್ಲಿ ತಪ್ಪಾಗಿದ್ದರೆ ಅದನ್ನು ಕೇವಲ 5 ನಿಮಿಷಗಳಲ್ಲಿ ಸರಿಪಡಿಸಿ

ಈ ಕುರಿತು ಟ್ವೀಟ್ ಮಾಡಿರುವ ಆದಾಯ ತೆರಿಗೆ ಇಲಾಖೆ, "ಆರ್ಥಿಕ ವರ್ಷ 2020-21ಕ್ಕಾಗಿ ಡಿಸೆಂಬರ್ 29ರವರೆಗೆ 4.54 ಕೋಟಿಗೂ ಅಧಿಕ ಆದಾಯ ತೆರಿಗೆ ರಿಟರ್ನ್(Income Tax Return) ಅನ್ನು ಈಗಾಗಲೇ ಸಂಗ್ರಹಿಸಲಾಗಿದೆ" ಎಂದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News