ಈ ಬ್ಯಾಂಕ್ ಗಳಲ್ಲಿ ಅಕೌಂಟ್ ಇದ್ದರೆ ತಕ್ಷಣ ಈ ಕೆಲಸ ಮಾಡಿ, ತಪ್ಪಿದರೆ ಎದುರಾದೀತು ಸಮಸ್ಯೆ

ನಿಮ್ಮ ಖಾತೆಯು ಈ 8 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿದ್ದರೆ, ಈ ಕೆಲಸವನ್ನು ತಕ್ಷಣವೇ ಮಾಡಿ ಮುಗಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಮುಂದಿನ ವಾರ ಮೂರು ದಿನ ಮಾತ್ರ ಬ್ಯಾಂಕ್ ಕೆಲಸ ನಡೆಯುತ್ತದೆ. ಹಾಗಾಗಿ ಆದಷ್ಟು ಬೇಗ ಬ್ಯಾಂಕ್ ಗೆ ಹೋಗಿ  ಹೊಸ ಚೆಕ್‌ ಬುಕ್‌ಗಾಗಿ ಅರ್ಜಿ ಸಲ್ಲಿಸಿ.

Written by - Ranjitha R K | Last Updated : Mar 26, 2021, 03:27 PM IST
  • ಈ ಎಂಟು ಬ್ಯಾಂಕ್ ಗಳಲ್ಲಿ ನಿಮ್ಮ ಅಕೌಂಟ್ ಇದೆಯಾ
  • ತಪ್ಪದೇ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಿ
  • ಯಾವ ಬ್ಯಾಂಕ್ ಯಾವ ಬ್ಯಾಂಕ್ ನೊಂದಿಗೆ ವಿಲೀನವಾಗಿದೆ ತಿಳಿಯಿರಿ
ಈ ಬ್ಯಾಂಕ್ ಗಳಲ್ಲಿ ಅಕೌಂಟ್ ಇದ್ದರೆ ತಕ್ಷಣ ಈ ಕೆಲಸ ಮಾಡಿ, ತಪ್ಪಿದರೆ ಎದುರಾದೀತು ಸಮಸ್ಯೆ  title=
ಯಾವ ಬ್ಯಾಂಕ್ ಯಾವ ಬ್ಯಾಂಕ್ ನೊಂದಿಗೆ ವಿಲೀನವಾಗಿದೆ ತಿಳಿಯಿರಿ (file photo)

ನವದೆಹಲಿ : ಬೇರೆ ಬ್ಯಾಂಕುಗಳೊಂದಿಗೆ ವಿಲೀನಗೊಂಡ 8 ಬ್ಯಾಂಕುಗಳಲ್ಲಿ ನಿಮ್ಮ ಅಕೌಂಟ್ (Account) ಇದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ.  ಏಪ್ರಿಲ್ 1, 2021ದಿಂದ ಈ ಎಂಟು ಬ್ಯಾಂಕುಗಳ (Bank) ಗ್ರಾಹಕರ ಹಳೆಯ ಚೆಕ್ ಪುಸ್ತಕಗಳು, ಪಾಸ್‌ಬುಕ್‌ಗಳು ಮತ್ತು ಐಎಫ್‌ಎಸ್‌ಸಿ (IFSC) ಕೋಡ್‌ಗಳು ಅಮಾನ್ಯವಾಗುತ್ತವೆ. ಇದಾದ ನಂತರ ಹಣ ತೆಗೆಯುವುದು, ಜಮೆ ಮಾಡುವುದು ಸೇರಿದಂತೆ ಯಾವುದೇ ರೀತಿಯ  ವಹಿವಾಟು ಮಾಡುವುದು ಕಷ್ಟವಾಗಬಹುದು.

ಬ್ಯಾಂಕಿಗೆ ಹೋಗಿ ಹೊಸ ಚೆಕ್‌ಬುಕ್‌ಗಾಗಿ ಅರ್ಜಿ ಸಲ್ಲಿಸಿ:
ನಿಮ್ಮ ಖಾತೆಯು ಈ 8 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿದ್ದರೆ, ಈ ಕೆಲಸವನ್ನು ತಕ್ಷಣವೇ ಮಾಡಿ ಮುಗಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಮುಂದಿನ ವಾರ ಮೂರು ದಿನ ಮಾತ್ರ ಬ್ಯಾಂಕ್ (Bank) ಕೆಲಸ ನಡೆಯುತ್ತದೆ. ಹಾಗಾಗಿ ಆದಷ್ಟು ಬೇಗ ಬ್ಯಾಂಕ್ ಗೆ ಹೋಗಿ  ಹೊಸ ಚೆಕ್‌ ಬುಕ್‌ಗಾಗಿ (Cheque Book) ಅರ್ಜಿ ಸಲ್ಲಿಸಿ.  ಒಂದು ಸಲ ನೀವು ಚೆಕ್ ಬುಕ್ ಗೆ ಅರ್ಜಿ ಸಲ್ಲಿಸಿದರೆ ನಿಮಗೆ ಚೆಕ್ ಬುಕ್‌ ಸಿಗಲು 8ರಿಂದ  10 ದಿನಗಳು ಬೇಕಾಗುತ್ತದೆ.   

ಇದನ್ನೂ ಓದಿ : EPFO : ಲಕ್ಷಾಂತರ ಪಿಂಚಣಿದಾರರಿಗೆ ಸಿಗಲಿದೆ ಈ ಪ್ರಯೋಜನ

ಯಾವ ಬ್ಯಾಂಕ್ ಗಳು ಯಾವ ಬ್ಯಾಂಕ್ ನೊಂದಿಗೆ ವಿಲೀನವಾಗಿವೆ : 

1. ದೇನಾ ಬ್ಯಾಂಕ್ (Dena Bank) ಮತ್ತು ವಿಜಯ ಬ್ಯಾಂಕ್ (Vijaya Bank) ಅನ್ನು ಬ್ಯಾಂಕ್ ಆಫ್ ಬರೋಡಾ (Bank of Baroda) ಜೊತೆ ವಿಲೀನಗೊಳಿಸಲಾಗಿದೆ.  
2. ಓರಿಯಂಟಲ್ ಬ್ಯಾಂಕ್  ಆಫ್ ಕಾಮರ್ಸ್ (Oriental Bank of Commerce) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು (UBI)   ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಜೊತೆ  ವಿಲೀನ ಮಾಡಲಾಗಿದೆ.  
3. ಸಿಂಡಿಕೇಟ್ ಬ್ಯಾಂಕ್  (Syndicate Bank) ಕೆನರಾ ಬ್ಯಾಂಕ್‌ನೊಂದಿಗೆ ವಿಲೀನವಾಗಿದೆ.
4. ಆಂಧ್ರ ಬ್ಯಾಂಕ್ Andhra Bank) ಮತ್ತು ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿವೆ.
5. ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್‌ನಲ್ಲಿ (Indian Bank) ವಿಲೀನಗೊಳಿಸಲಾಗಿದೆ. 

ಈ ಬ್ಯಾಂಕುಗಳ ಗ್ರಾಹಕರು ಏಪ್ರಿಲ್ 1 ರಿಂದ ಹೊಸ ಚೆಕ್ ಬುಕ್ ತೆಗೆದುಕೊಳ್ಳಬೇಕಾಗುತ್ತದೆ. ಆದರೂ ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್ ಗ್ರಾಹಕರಿಗೆ ಈ ವಿಷಯದಲ್ಲಿ ಸ್ವಲ್ಪ ದಿನಗಳ ರಿಯಾಯಿತಿ ಇದೆ. ಸಿಂಡಿಕೇಟ್ ಬ್ಯಾಂಕಿನ ಅಸ್ತಿತ್ವದಲ್ಲಿರುವ ಚೆಕ್ ಬುಕ್ ಗಳು   ಜೂನ್ ೩೦ರವರೆಗೆ ಮಾನ್ಯವಾಗಿರುತ್ತವೆ. ನಂತರ ಅವರೂ ಕೂಡ  ಹೊಸ ಚೆಕ್ ಬುಕ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.  

ಇದನ್ನೂ ಓದಿ : LIC HFL: ಗೃಹ ಸಾಲ ಪಡೆದವರಿಗೆ ಭರ್ಜರಿ ಸಿಹಿ ಸುದ್ದಿ: LIC ಹೌಸಿಂಗ್ ಫೈನಾನ್ಸ್ 6 EMI ಮನ್ನಾ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News