Cryptocurrencyಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಬದಲಾಗಲಿದೆಯೇ Income Tax Act? ಸರ್ಕಾರ ನಡೆಸುತ್ತಿರುವ ಚಿಂತನೆ ಏನು?

Cryptocurrencies Under Tax Net In India  - ಹೊಸ ಕಾನೂನು ಜಾರಿಯಾದ ಬಳಿಕ ಏನನ್ನು ಮಾಡಲು ಸಾಧ್ಯ ಎಂಬುದನ್ನು ಗಮನಿಸಲಾಗುವುದು ಎಂದು ಸರ್ಕಾರದ ಕಾರ್ಯದರ್ಶಿಗಳು ಹೇಳಿದ್ದಾರೆ. 

Written by - Nitin Tabib | Last Updated : Nov 19, 2021, 08:45 PM IST
  • ಕ್ರಿಪ್ಟೋಕರೆನ್ಸಿಗಳನ್ನು ನಿವ್ವಳ ತೆರಿಗೆ ಅಡಿಯಲ್ಲಿ ತರಲು ಆದಾಯ ತೆರಿಗೆ ಕಾನೂನುಗಳಲ್ಲಿ ಬದಲಾವಣೆಗಳನ್ನು ತರಲು ಸರ್ಕಾರ ಪರಿಗಣಿಸುತ್ತಿದೆ.
  • ಈ ಕೆಲವು ಬದಲಾವಣೆಗಳು ಮುಂದಿನ ವರ್ಷದ ಬಜೆಟ್‌ನ ಭಾಗವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ.
  • ಅಂತರಾಷ್ಟ್ರೀಯ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಮೊದಲ ಬಾರಿಗೆ $3 ಟ್ರಿಲಿಯನ್ ಬೆಂಚ್ ಮಾರ್ಕ್ ಅನ್ನು ತಲುಪಿದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
Cryptocurrencyಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಬದಲಾಗಲಿದೆಯೇ Income Tax Act? ಸರ್ಕಾರ ನಡೆಸುತ್ತಿರುವ ಚಿಂತನೆ ಏನು? title=
Cryptocurrencies Under Tax Net In India (File Photo)

Cryptocurrencies Under Tax Net In India - ಕ್ರಿಪ್ಟೋಕರೆನ್ಸಿಗಳನ್ನು  ನಿವ್ವಳ ತೆರಿಗೆ ಅಡಿಯಲ್ಲಿ ತರಲು ಆದಾಯ ತೆರಿಗೆ ಕಾನೂನುಗಳಲ್ಲಿ ಬದಲಾವಣೆಗಳನ್ನು ತರಲು ಸರ್ಕಾರ ಪರಿಗಣಿಸುತ್ತಿದೆ. ಈ ಕೆಲವು ಬದಲಾವಣೆಗಳು ಮುಂದಿನ ವರ್ಷದ ಬಜೆಟ್‌ನ ಭಾಗವಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ.  ಪಿಟಿಐನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಆದಾಯ ತೆರಿಗೆಯ ಸಂದರ್ಭದಲ್ಲಿ, ಕೆಲವರು ಈಗಾಗಲೇ ಕ್ರಿಪ್ಟೋಕರೆನ್ಸಿಗಳಿಂದ (Cryptocurrencies) ಬರುವ ಆದಾಯದ ಮೇಲೆ ಬಂಡವಾಳ ಲಾಭದ ತೆರಿಗೆಯನ್ನು ಪಾವತಿಸುತ್ತಿದ್ದಾರೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗೆ ಸಂಬಂಧಿಸಿದಂತೆ, ಇತರ ಸೇವೆಗಳಂತೆ ಇದಕ್ಕೂ ದರ ಅನ್ವಯಿಸುತ್ತದೆ ಎಂದು ಕಾನೂನು ಬಹಳ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. 

ಈಗಾಗಲೇ ಜನರು ತೆರಿಗೆ ಪಾವತಿಸುತ್ತಿದ್ದಾರೆ
ಈ ಕುರಿತು ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿರುವ ಬಜಾಜ್ ಜನರು ಈಗಾಗಲೇ ಇದಕ್ಕೆ ತೆರಿಗೆ ಪಾವತಿಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ ಹಾಗೂ ಶೀಘ್ರದಲ್ಲಿಯೇ ಇದಕ್ಕೆ ಸಂಬಂಧಿಸಿದಂತೆ ನಾವು ನಿರ್ಧಾರವನ್ನು ತೆಗೆದುಕೊಳ್ಳುವೆವು ಎಂದಿದ್ದಾರೆ. ಆದರೆ, ನಿಶ್ಚಿತವಾಗಿಯೂ ಇತ್ತೀಚಿನ ದಿನಗಳಲ್ಲಿ ಇದರ ಬಳಕೆ ಹೆಚ್ಚಾಗಿರುವ ಕಾರಣ ಕಾನೂನಿನ ಸ್ಥಿತಿಯಲ್ಲಿ ಕೆಲವು ಬದಲಾವಣೆಗಳನ್ನು ತರಬಹುದೇ ಅಥವಾ ಬೇಡವೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ. (income tax law to bring cryptocurrencies under tax net). ಆದರೆ ಇದು ಸಂಪೂರ್ಣ ಬಜೆಟ್ ಚತುವತಿಕೆಯಾಗಿದ್ದು, ನಾವು ಈಗಾಗಲೇ ಮುಂದಿನ ಬಜೆಟ್ ಮಂಡನೆಗೆ ಹತ್ತಿರವಾಗಿರುವ ಹಿನ್ನಲೆ ಏನಾಗುತ್ತದೆ ಎಂಬುದನ್ನು  ಕಾದುನೋಡಬೇಕಾಗಿದೆ ಎಂದು ಬಜಾಜ್ ಹೇಳಿದ್ದಾರೆ. 

ಇದನ್ನೂ ಓದಿ-Payment Through Aadhaar Number: UPI Address ಅಥವಾ ಸ್ಮಾರ್ಟ್ ಫೋನ್ ಇಲ್ಲವೇ? ಹೀಗೆ Aadhaar Number ಬಳಸಿ ಹಣ ಪಾವತಿ ಮಾಡಿ

ಹಣ ಗಳಿಸಿದರೆ ತೆರಿಗೆ ಕಟ್ಟಬೇಕು
ಕ್ರಿಪ್ಟೋ ಟ್ರೇಡಿಂಗ್‌ಗಾಗಿ ಮೂಲದಲ್ಲಿ ತೆರಿಗೆ ಸಂಗ್ರಹ (ಟಿಸಿಎಸ್) ಅನ್ನು ಪರಿಚಯಿಸಬಹುದೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,  ನಾವು ಹೊಸ ಕಾನೂನನ್ನು ತಂದರೆ, ನಾವು ಏನನ್ನು ಮಾಡಲು ಸಾಧ್ಯ ಎಂಬುದನ್ನು ಗಮನಿಸಲಿದ್ದೇವೆ ಎಂದು ಕಾರ್ಯದರ್ಶಿ ಹೇಳಿದ್ದಾರೆ. ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು 'ಹೌದು, ನೀವು ಹಣ ಗಳಿಸಿದರೆ ನೀವು ತೆರಿಗೆ ಪಾವತಿಸಬೇಕಾಗುತ್ತದೆ. ನಾವು ಈಗಾಗಲೇ ಕೆಲವು ತೆರಿಗೆಗಳನ್ನು ಹೊಂದಿದ್ದೇವೆ, ಕೆಲವರು ಅದನ್ನು ಆಸ್ತಿ ಎಂದು ಪರಿಗಣಿಸಿದ್ದಾರೆ ಮತ್ತು ಅದರ ಮೇಲೆ ಬಂಡವಾಳ ಲಾಭದ ತೆರಿಗೆಯನ್ನು ಪಾವತಿಸುತಿದ್ದಾರೆ" ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-ಯಾವಾಗ ರೈತರ ಖಾತೆಗೆ ಕ್ರೆಡಿಟ್ ಆಗಲಿದೆ ಪಿಎಂ ಕಿಸಾನ್ 10ನೇ ಕಂತಿಕನ ಹಣ? ಇಲ್ಲಿದೆ ಮಾಹಿತಿ

ಮೊದಲ ಬಾರಿಗೆ $3 ಟ್ರಿಲಿಯನ್ ಮಾರ್ಕ್ ನಲ್ಲಿ
ಅಂತರಾಷ್ಟ್ರೀಯ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯು ಮೊದಲ ಬಾರಿಗೆ $3 ಟ್ರಿಲಿಯನ್ ಬೆಂಚ್ ಮಾರ್ಕ್ ಅನ್ನು ತಲುಪಿದೆ. ಬಿಟ್‌ಕಾಯಿನ್ ಮತ್ತು ಎಥೆರಿಯಮ್ ಮೌಲ್ಯವು ಸಾರ್ವಕಾಲಿಕ ಎತ್ತರವನ್ನು ತಲುಪಿವೆ. ಬಿಟ್‌ಕಾಯಿನ್ ಮತ್ತು ಈಥರ್ ನವೆಂಬರ್ 9 ರಂದು $68,641.57 ಮತ್ತು $4,857.25 ನಲ್ಲಿ ಹೊಸ ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿವೆ. ಈ ವರ್ಷದ ಅಂತ್ಯದ ವೇಳೆಗೆ ಬಿಟ್‌ಕಾಯಿನ್ $100,000 ಮಾರ್ಕ್ ಅನ್ನು ಮುಟ್ಟಬಹುದು. ಬಿಟ್‌ಕಾಯಿನ್‌ನ ಮಾರುಕಟ್ಟೆ ಬಂಡವಾಳೀಕರಣವು ಅಂತರರಾಷ್ಟ್ರೀಯ ಮಟ್ಟದಲ್ಲಿ 2.5 ಟ್ರಿಲಿಯನ್ ಡಾಲರ್‌ಗಳನ್ನು ದಾಟಿದೆ, ಅದರಲ್ಲೂ ವಿಶೇಷವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅದರ ಬಳಕೆ ಹೆಚ್ಚಾಗಿರುವ ಹಿನ್ನೆಲೆ ಇದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. 

ಇದನ್ನೂ ಓದಿ-Business Idea: ಸ್ವಂತ ವ್ಯಾಪಾರ ಆರಂಭಿಸಿ, ಸಂಪಾದಿಸಿ 15 ಲಕ್ಷಗಳವರೆಗೆ ಆದಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News